Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ತಮ್ಮದೊಂದು ಶೈಲಿಯೂ ರೂಢಿಸಿಕೊಳ್ಳದ ತಿರುಬೋಕಿಗಳು

ಅದ್ಭುತವಾಗಿ ತುಪ್ಪ ಹಾಕಿ ಮಾಡಿದಂಥ ಲಡ್ಡೂ ತಿಂದ ಹಾಗೆ ತಿನ್ನುತ್ತಿದ್ದೇನೆ: ಆ ಪುಸ್ತಕವನ್ನು. ಸಿಕ್ಕಾಪಟ್ಟೆ ಕೆಲಸವಿದ್ದುದರಿಂದ, ಬರೆಯಬೇಕಾದುದರಿಂದ ಈ ಮಧ್ಯೆ ಬೇರೆ ಏನನ್ನೂ ಓದಲು ಆಗಿರಲಿಲ್ಲ. ಈಗಲೂ ನಾನು ಕತೆ-ಕಾದಂಬರಿ ಓದಲ್ಲ. ಮೊದಲೆಲ್ಲ ವಿಪರೀತವಾಗಿ ಓದುತ್ತಿದ್ದೆ. ಸುಮಾರು ಒಂದು ವರ್ಷದಿಂದ ಏನನ್ನೂ ಓದಿರಲಿಲ್ಲ. ಆ ಬಗ್ಗೆ ಬೇಸರವಿತ್ತು. ಮೊನ್ನೆ ನನ್ನ ಅಭಿರುಚಿಗೆ ಬೇಕೇ ಬೇಕು ಎಂಬಂತಿದ್ದ ಒಂದು ಹೊಸ ಪುಸ್ತಕ ಸಿಕ್ಕಿತು. ಸುಮಾರು ನಾಲ್ಕು ನೂರು ಪುಟಗಳನ್ನು ಒಂದೂವರೆ ರಾತ್ರಿಯಲ್ಲಿ ಓದಿ ನಿಟ್ಟುಸಿರಾದೆ.

ನೀವು ನನ್ನ ಬರಹಗಳನ್ನು ಸಾಕಷ್ಟು ಕಾಲ ಓದಿದ್ದೀರಿ. ಮೊದಲು ಕ್ರೈಂ ಕುರಿತು ಬರೆಯುತ್ತಿದ್ದೆ. ಅದನ್ನು ಈಗ ನಮ್ಮ ಹುಡುಗರು ಬರೆಯುತ್ತಾರೆ. ನಾನು ಬರೆಯುತ್ತಿದ್ದ ಕಾಲದಲ್ಲಿ “ರವಿ ಬೆಳಗೆರೆ ಕ್ರೈಂನ ವಿಜೃಂಭಿಸಿ ಬರೀತಾನೆ ಕಣ್ರೀ..." ಅನ್ನುತ್ತಿದ್ದರು. ಅವರ ಸಂಗತಿ ಗೊತ್ತಿಲ್ಲ: ಆದರೆ ನಾನು ಮಾತ್ರ ನನ್ನ ಶೈಲಿಯಲ್ಲಿ ನನ್ನ ಪಾಡಿಗೆ ನಾನೆಂಬಂತೆ ಬರೆಯುತ್ತಿದ್ದೆ. ಓದಲಿಕ್ಕೆ ಕುತೂಹಲಕಾರಿ ಅನ್ನಿಸಿದರೂ, ಕ್ರೈಂಗೆ ಸಂಬಂಧಿಸಿದವರೊಂದಿಗೆ ಭೇಟಿ, ಮಾತು, ಓಡಾಟ-ಇತ್ಯಾದಿಗಳು ತೀರ disgusting ಅನ್ನಿಸಿ ಬಿಡುತ್ತವೆ. ಯಾವೊನಿಗೆ ಬೇಕು ಈ ರಗಳೆ ಅನ್ನಿಸುತ್ತದೆ. ಒಬ್ಬ ರೋಹಿತ್‌ನ ಹೊರತಾಗಿ ನಾನು ಉಳಿದ ಯಾರೊಂದಿಗೂ minimum ಸಂಬಂಧವನ್ನೂ ಇಟ್ಟುಕೊಂಡಿಲ್ಲ: ರೋಹಿತ್ ನನ್ನ ದೃಷ್ಟಿಯಲ್ಲಿ ತುಂಬ ಕಿರಿಯ. ಅಸಲಿಗೆ ಅವನನ್ನು ನಾನು ಅನೇಕ ವರ್ಷ ನೋಡಿರಲಿಲ್ಲ. ಭೇಟಿಯಾಗಿರಲಿಲ್ಲ. ಆದ ತಕ್ಷಣ ಅವನು “ನನ್ನ ನೆನಪಿಲ್ವಾ ಸರ್?" ಅಂದ. ನಾನು “ಸಂಯುಕ್ತ ಕರ್ನಾಟಕ"ದಲ್ಲಿದ್ದಾಗ ಆ ಕಂಪೋಂಡಿನಲ್ಲೇ ಅವನ ಹತ್ತಿರದ ಬಂಧುವಿನ ಕ್ಯಾಂಟೀನ್ ಇತ್ತು. ಈ ರೋಹಿತ್ ಆಗ ಚಿಕ್ಕವನು. ಅಲ್ಲಿರುತ್ತಿದ್ದ. ಈಗ ನೋಡಿದರೆ ಈ ಪರಿಯ ಆಳು. ಎದ್ದು ನಿಂತರೆ ತೆಂಗಿನಮರ!

“ಅದಕ್ಕೇ ಅಲ್ವಾ ಸರ್, ಪೊಲೀಸರು ಹಾಗೆ ಹೆಸರಿಟ್ಟಿರೋದು?" ಅಂದ.

ಅವನನ್ನು ಭೂಗತ ಜಗತ್ತು ಕರೆಯೋದು-‘ಒಂಟೆ’. ಈ ಹುಡುಗ ಬಹುಶಃ ಇಂಜಿನೀರಿಂಗ್ drop out. ಬರೆಯಲಿಕ್ಕೆ ಏನೂ ಇರದಿದ್ದರೂ ಆಗೊಮ್ಮೆ ಈಗೊಮ್ಮೆ ನಾವು ಮಾತನಾಡುತ್ತಿರುತ್ತೇವೆ. ಅವನು ಆಫೀಸಿಗೂ ಬಂದಿರುತ್ತಾನೆ.

ಒಂದು ಮಾತು ನಿಜ: ಶಿವಾಜಿನಗರದ ದೈತ್ಯ ಪೈಲ್ವಾನ ಕೋಳಿ ಫಯಾಜ್‌ನಿಂದ ಆರಂಭವಾದದ್ದು ನನ್ನ ಬರಹ. ಅದೆಷ್ಟು ಬರೆದೆ! ಬಾಂಬೆ ಅಂಡರ್‌ವರ್ಲ್ಡ್ ಕುರಿತೂ ಬರೆದದ್ದಾಯಿತು. ಅಲ್ಲಿನ ರೌಡಿಗಳು ನನಗೆ ಹೆಚ್ಚಾಗಿ ಪರಿಚಿತರಲ್ಲ. ಆದರೆ first hand information ನೀಡಬಲ್ಲ ಗೆಳೆಯರಿದ್ದಾರೆ. ಆ ಪೈಕಿ ಒಬ್ಬ ಗೆಳೆಯ ಜ್ಯೋತಿರ್ಮಯ್ ಡೇ, ಅನ್ಯಾಯವಾಗಿ ಕೊಲೆಯಾಗಿ ಹೋದ: ಇದೇ ಛೋಟ ರಾಜನ್‌ನಿಂದಾಗಿ. ನಾನು ಭೂಗತರನ್ನು ಅರಸಿಕೊಂಡು ಆಫ್ರಿಕಾಕ್ಕೂ ಹೋದೆ. ಒಂದೇ ಮಾತಲ್ಲಿ ಹೇಳುವುದಾದರೆ, ಬರೆಯಲು ಉಳಿದವರಿಗೆ ಏನೆಂದರೆ ಏನೂ ಇಲ್ಲ ಎಂಬಂತೆ ಗುಡಿಸಿ, ಸಾರಿಸಿ ಕೈ ತೊಳೆದುಕೊಂಡು ಬಿಟ್ಟೆ. ಅದಾಗೋ ತನಕ ಈ ತಿರುಬೋಕಿಗಳ ಆಕ್ರಂದನ ಮುಗಿಯಲಿಲ್ಲ.

ಆರಂಭದ ದಿನಗಳಲ್ಲಿ ಬೆಂಗಳೂರಿನ organised ವೇಶ್ಯಾವಾಟಿಕೆಗಳ ಬಗ್ಗೆ ಬರೆದೆ. ಅದಕ್ಕೂ ಈ ತಿರುಬೋಕಿಗಳದೇ ಆಕ್ರಂದನ! ಅದೂ ಅಷ್ಟೆ, ಒಂದು ತುದಿಯಿಂದ ಇನ್ನೊಂದು ತುದಿಯ ತನಕ, ಘರ್‌ವಾಲಿಗಳ ಬಗ್ಗೆ ಬರೆದೆ. ನನಗೆ ಗತಿ ಇರದ, ಅನಿವಾರ್ಯ ಕಾರಣಗಳಿಗಾಗಿ ಆ ವೃತ್ತಿಗೆ ಇಳಿಯುವ, ಮೆಜೆಸ್ಟಿಕ್‌ನ ಕತ್ತಲಿನಲ್ಲಿ ಹಸಿದು ನಿಂತ ವೇಶ್ಯೆಯರ ಬಗ್ಗೆ ಸಿಟ್ಟಿಲ್ಲ. ಅನುಕಂಪವಿದೆ. ಅವರನ್ನಿಟ್ಟುಕೊಂಡು ಕಸುಬು ಮಾಡುವವರನ್ನು ಕಂಡರೆ ರೇಗುತ್ತದೆ. ಅಂಥ ಕುಖ್ಯಾತ ಘರ್‌ವಾಲಿಗಳ ಕುರಿತು ಬರೆದು, ಅಲ್ಲೂ ಈ ತಿರುಬೋಕಿಗಳಿಗೆ ‘ಬೋಟಿ’ ಹೆಕ್ಕಲು ಏನೂ ಇರದಂತೆ ಮಾಡಿದೆ.

ಮುಂದೆ ‘ಹಿಮಾಲಯನ್ ಬ್ಲಂಡರ್’ ಬರೆದೆ. ಇವರೇನಾದರೂ ಆರತಿ ಎತ್ತಿ ಕೊಂಡಾಡಿದರಾ? ‘ಅವನೊಬ್ಬನಿದ್ದ ಗೋಡ್ಸೆ’ ಬರೆದೆ. ಇವರು ನನಗಾಗಿ ಕಹಳೆ ಊದಿದರಾ? ದೈವ ಸೈನಿಕರ ಕುರಿತು ‘ಮುಸ್ಲಿಂ’ ಬರೆದೆ. ಇವರು ಕೊಂಡಾಡಿದರಾ? ‘ರಾಜ್ ರಹಸ್ಯ’ ಬರೆದೆ. ತಿರುಬೋಕಿಗಳು ಕೈ ಕೈ ಹಿಸುಕಿಕೊಂಡರು. ನಿಮಗೊಂದು ಮಾತು ಹೇಳಲಾ? ನಾನು ಬರವಣಿಗೆ ವಿಷಯಕ್ಕೆ ಬಂದರೆ, wonderful stylist. ‘ಹೇಳಿ ಹೋಗು ಕಾರಣ’ ‘ನೀ ಹೀಂಗ ನೋಡಬ್ಯಾಡ ನನ್ನ’ ‘ಮಾಟಗಾತಿ’ ‘ಸರ್ಪಸಂಬಂಧ’-ಇವೆಲ್ಲ ಏನು? ಅತಿಶಯೋಕ್ತಿಗಳಾ? stupid fellows. ಅವರಿಗೆ ಬರವಣಿಗೆ ಗೊತ್ತಿಲ್ಲ. ಸ್ವಂತ ಶೈಲಿ ರೂಢಿಸಿಕೊಂಡಿಲ್ಲ. ಛಲಕ್ಕೆ ಬಿದ್ದು, ಸಾವಿರಾರು ಪುಟ source material ಓದಿಲ್ಲ. ಬರೀ ಒಣ ಪ್ರಲಾಪ, ಧಾರಾಳವಾದ ಸ್ವಕುಚ ಮರ್ದನ!

ಇದೆಲ್ಲ ಹೊಸತಲ್ಲ. ‘ಪತ್ರಿಕೆ’ಯ ಮೊದಲ ಹುಟ್ಟುಹಬ್ಬದಂದೇ ಮಧ್ಯಾಹ್ನ ಸಾಹಿತ್ಯ ಪರಿಷತ್ತಿನ ಸಭೆಯೊಂದರಲ್ಲಿ ಬಿ.ವಿ. ವೈಕುಂಠರಾಜು “ಬೆಳಗೆರೆ ರೌಡಿಗಳನ್ನು ವಿಜೃಂಭಿಸಿ project ಮಾಡ್ತಾನೆ" ಎಂದು ಭಾಷಣ ಮಾಡಿದರು. ಪಕ್ಕದಲ್ಲೇ ಕುಳಿತಿದ್ದೆ. “ನೀವು ಹೆಗಡೆ, ದೇವೆಗೌಡ ಮುಂತಾದವರ ಬಾಟಮ್ ನೆಕ್ಕೋದನ್ನ ನಿಲ್ಲಿಸಿ" ಅಂದೆ.

ಜನ ಚಪ್ಪಾಳೆಯಾದರು.

ಕೆಲವು ಸಲ ಒರಟಾಗಬೇಕಾಗುತ್ತದಲ್ಲವೆ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 December, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books