Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಮುಟ್ಟುವುದೋ ಬಿಡುವುದೋ ನೀವೇ ಹೇಳಿ?

ಮುಟ್ಟು!

ಉಹುಂ, ಮುಟ್ಟಬೇಡ...! ಹೆಣ್ಣು ಮಕ್ಕಳು ತಿಂಗಳಿಗೊಮ್ಮೆ ಮುಟ್ಟಾಗುತ್ತಾರೆ. ಅದು ನಿಸರ್ಗ ನಿಯಮ. ‘It is the cry of the womb’ ಅನ್ನೋದುಂಟು. ಅಂದರೆ, ಗರ್ಭ ಧರಿಸಲು ಸಿದ್ಧವಾಗಿದ್ದ ಮೊಟ್ಟೆ (egg) ವಿಫಲಗೊಂಡದ್ದಕ್ಕಾಗಿ ಆ ಮೊಟ್ಟೆ ಅಥವಾ ಗರ್ಭಕೋಶವು ದುಃಖಿಸಿ ಅಳುವುದೇ ಮುಟ್ಟು ಎಂಬ ಅರ್ಥ ನೀಡುತ್ತಾರೆ.

ಕಾಲು-ಬೆನ್ನು-ಮೀನ ಖಂಡಗಳಲ್ಲಿ ಸೆಳೆತ, ನೋವು ಶುರುವಾಗುತ್ತವೆ. ಚಿಕ್ಕ ಸಿಡಿಮಿಡಿ. Mood swings. ಕೆಲವು ಸಲ ವಿಪರೀತ ಅಳು. ಅತಿರೇಕದ ಭಾವುಕತೆ. ಇವೆಲ್ಲವೂ ಮುಟ್ಟಿನ ಲಕ್ಷಣಗಳು ಮತ್ತು ಪರಿಣಾಮಗಳು. ಅನೇಕ ಸಲ ಆಕೆ ಮುಟ್ಟಾಗಿದ್ದಾಳೆ ಎಂಬುದೇ ಗೊತ್ತಾಗದೆ ನಾಲ್ಕು ದಿನಗಳು ತಮ್ಮ ಪಾಡಿಗೆ ತಾವು ಸರಿದು ಹೋಗುತ್ತವೆ. ಹೆಣ್ಣುಮಗಳೊಬ್ಬಳು ಬೆನ್ನು ನೋವು ಅಥವಾ ಹೊಟ್ಟೆ ನೋವು ಅಂದ ತಕ್ಷಣ ಸಮಸ್ಯೆ ಏನು ಎಂಬುದು ಗೊತ್ತಾಗಿ ಬಿಡುತ್ತದೆ. ಮೂರನೆಯ ರಾತ್ರಿ ಸರಿದು ಬೆಳಗಾದರೆ, ಅದೇ ಹೆಣ್ಣು ನಿರಾಳ-ನಿರಾಳ. ಇಷ್ಟು ಬಿಟ್ಟರೆ ಮತ್ತೇನಿಲ್ಲ: ಮುಟ್ಟಿಗೆ ಸಂಬಂಧಿಸಿದ್ದು.

ಈ ಮುಟ್ಟಿನ ಸಂಗತಿ ಇವತ್ತು ಫೇಸ್‌ಬುಕ್‌ನಲ್ಲಿ ವಿಪರೀತವಾಗಿ ಚರ್ಚೆಯಾಗುತ್ತಿದೆ. ಮುಟ್ಟಾದವರನ್ನು ದೇವಾಲಯದೊಳಕ್ಕೆ ಬಿಡೋದಾ, ನಿಷೇಧಿಸೋದಾ ಎಂಬ ಪ್ರಶ್ನೆ. ಹಿಂದೂ ಧರ್ಮದಲ್ಲಿ ಅದು ನಿಷಿದ್ಧ. ಹೆಂಗಸಿಗೆ ಪೂರ್ತಿ rest ಸಿಗಲಿ ಅಂತ ಆ ಮೂರು ದಿನ ಆಕೆಯನ್ನು ಮೂಲೆಗೆ ಕೂಡಿಸುವ ಸಂಪ್ರದಾಯವಿದೆ. ಅದೇ ಸರಿ ಎಂಬುದು ಒಂದು ವಾದ. ಅವರಲ್ಲಿ ಒಂದು negative energy ಹೊರ ಹೊಮ್ಮುತ್ತಿರುತ್ತದೆ. ಆಗ ದೇವಾಲಯಕ್ಕೆ ಅವರು ಬರಬಾರದು. ದೇವಾಲಯದಲ್ಲಿ positive energy ಸರಿದಾಡುತ್ತಿರುತ್ತದೆ. ಮುಟ್ಟಾದವರು ಬಂದರೆ ಅದು ನಾಶವಾಗುತ್ತದೆ ಎಂಬ ವಾದ. ತಮಾಷೆಯೆಂದರೆ, ಹೀಗೆಲ್ಲ ವಾದಿಸುತ್ತಿರುವವರು ಬಲ ಪಂಥೀಯ ಗಂಡಸರು. ಸಾರಾಸಗಟಾಗಿ ಹೆಂಗಸರು ಇದನ್ನು ವಿರೋಧಿಸುತ್ತಾರೆ. Bleeding period ಬಗ್ಗೆ ವಿಶ್ವದಾದ್ಯಂತ ವಿಡಿಯೋಗಳಾಗಿವೆ. ಅದೇನೇ ಆದರೂ ಕರ್ಮದ ಹಿಂದುತ್ವವಾದಿಗಳು ಅದನ್ನು ಒಪ್ಪುವುದಿಲ್ಲ.

ಇವರು ‘bleeding period’ನಲ್ಲಿ ಸ್ತ್ರೀಯನ್ನು ಮುಟ್ಟಬಾರದು ಅನ್ನುತ್ತಾರೆ. “ಹೆಣ್ಣು ಬಯಸಿದರೆ, ಅಭ್ಯಂತರವಿಲ್ಲವಾದರೆ ಆಕೆಯೊಂದಿಗೆ ಲೈಂಗಿಕ ಕ್ರಿಯೆಯೂ ನಡೆಸಬಹುದು" ಎನ್ನುತ್ತದೆ medical. ನಾವು ಕಾಲದಿಂದ ಕಾಲಕ್ಕೆ ಬದಲಾಗಬೇಕು. ಬ್ರಾಹ್ಮಣರ ಅನೇಕ ಕುಟುಂಬಗಳಲ್ಲಿ ಅಂತಹ ಬದಲಾವಣೆಗಳಾಗಿವೆ. ಕೆಲಸಕ್ಕೆ ಹೋಗೋ ಹೆಣ್ಣು ಮಕ್ಕಳಿದ್ದರಂತೂ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ. ಅಡುಗೆ ಮನೆಗೂ ಹೋಗಬಹುದು. “ಹೊಟ್ಟೆ ನೋವಾ? okay, take rest" ಅನ್ನುತ್ತಾರೆ. ಅಸಲು ಆ ಹುಡುಗಿ ಬಹಿಷ್ಠೆಯಾಗಿದ್ದಾಳೆ ಎಂಬುದು ಗೊತ್ತೇ ಆಗದೆ ಆ ಮೂರು ದಿನಗಳು ಸರಿದು ಹೋಗುತ್ತವೆ.

ಈ ತೆರನಾದ ಬದಲಾವಣೆ ಆಗಿರುವಾಗ ಅದನ್ನು ಸ್ವೀಕರಿಸಲು ಯಾಕೆ ಒಲ್ಲಿರಿ? ಅದರಲ್ಲೂ ಈ ಆರೆಸ್ಸೆಸ್‌ನ ಬ್ರಹ್ಮಚಾರಿ ಬಾಂಧವರು! ಅವರು ಕಠೋರ ಬ್ರಹ್ಮಚಾರಿಗಳಾದ್ದರಿಂದ ಅವರಿಗೆ ಮುಟ್ಟೂ ಗೊತ್ತಿಲ್ಲ: ಮುಟ್ಟ ಬೇಡವೆಂಬುದೂ ಗೊತ್ತಿಲ್ಲ. ಸುಮ್ಮನೆ ಜಗಳ ಕೆದರುತ್ತಾರೆ.

ಆರೋಗ್ಯಕರವಾದ ರೀತಿಯಲ್ಲಿ ಚರ್ಚೆ ನಡೆಯಬೇಕು. ಅದರಿಂದ ಪ್ರಯೋಜನವಿದೆ. ಆದರೆ ಹ್ಯಾಂವಕ್ಕೆ ಬಿದ್ದು ವಾದಕ್ಕೆ ನಿಂತರೆ ಅಂಥವರನ್ನು ತಿದ್ದುವುದು ಸಾಧ್ಯವೇ ಇಲ್ಲ. ಅಲ್ಲವೆ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 01 December, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books