Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನಿಮಗೆ ಒಂದು ಅಂಥ ಚಿಕ್ಕ ಅನುಭವ ಆಗೇ ಆಗಿರುತ್ತೆ!

ಉತ್ತರ ಕರ್ನಾಟಕದ ಒಂದು ಗಾದೆ ಇದೆ.

“ಆಸತ್ತು ಬ್ಯಾಸತ್ತು ಅಕ್ಕನ ಮನೀಗೆ ಹೋದ್ರೆ, ಅಕ್ಕನ ಗಂಡ ಬಂದು ತೆಕ್ಕೆ ಬಡಕೊಂಡ್ನಂತೆ" ಅಂತ. ಬದುಕು ಒಮ್ಮೊಮ್ಮೆ ಹಾಗನ್ನಿಸೋ ಥರಾ ಮಾಡುತ್ತೆ. ‘ಬಾಣಲೆಯಿಂದ ಬೆಂಕಿಗೆ ಬಿದ್ರು’ ಅನ್ನೋ ಮಾತೂ ಸರಿ ಹೋಗುತ್ತೆ. ನೋಡಿ, ನಂದೇ ಒಂದು ಅನುಭವ ಇದೆ. ಮೊದಲು ಚಿಕ್ಕ ನೌಕರಿಯಲ್ಲಿದ್ದೆ. I was not a proved a writer. ಆದ್ರೆ I was a good teacher. ಅದ್ಭುತವಾಗಿ ಕಾಲೇಜಿನಲ್ಲಿ ಪಾಠ ಮಾಡ್ತಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಕಳೆದುಕೊಂಡೆನಾ? ಅವರು ತೆಗೆದು ಹಾಕಿದ್ರಾ? ಹೇಳೋದು ಕಷ್ಟ. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಅಲ್ಲೀ ಮಟ್ಟಿಗೆ ನಿಜಕ್ಕೂ ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ‘ಪತ್ರಿಕೆ’ ಮಾಡಿದ್ದಕ್ಕಿಂತ ಲಗ್ನ ಪತ್ರಿಕೆ ಪ್ರಿಂಟ್ ಮಾಡಿದ್ದೇ ಜಾಸ್ತಿ ಆಯಿತು. ‘ಪತ್ರಿಕೆ’ ಕಡೆ ಗಮನ ಎಲ್ಲಿ? ಸಾಲದೆಂಬಂತೆ, ಕುಡಿತ. ಇಷ್ಟಾದ್ರೂ things were doing well. ಕೊತ್ತಂಬರಿ-ಕರಿಬೇವಿಗೆ ಕೊರತೆ ಇರಲಿಲ್ಲ. ಪ್ರೆಸ್ಸಿನ ಸಾಲವನ್ನೂ ತೀರಿಸ್ತಿದ್ದೆ. ಸ್ವಂತ ಮನೆಯಿತ್ತು. ಸ್ವಂತ ಜಾಗದಲ್ಲಿ ಪ್ರೆಸ್ ಹಾಕಿದ್ದೆ. ಅಮ್ಮ ಇದ್ದಳು. ಹೆಂಡತಿಗೆ ನೌಕರಿ. ಆದ್ರೆ ತಲೇಲಿ ಹೊಸ ಹುಳು ಬಿಟ್ಟುಕೊಂಡ್ನಲ್ಲ? ಬಳ್ಳಾರಿಯಲ್ಲಿ ಎಷ್ಟು ಮಾಡಿದರೂ ಇಷ್ಟೇ. ‘ನನ್ನಂಥ’ವು ಬೆಂಗಳೂರಲ್ಲಿರಬೇಕು. ಅಲ್ಲಿ ಬರವಣಿಗೆಗೆ, ಬೆಳೆಯೋದಕ್ಕೆ ತುಂಬ ಅವಕಾಶವಿದೆ. ಅಲ್ಲಿಗೇ ಹೋಗಿ ರಾಜ್ಯ ಮಟ್ಟದಲ್ಲಿ ಬೆಳೆಯೋಣ ಅನ್ನಿಸಲಾರಂಭಿಸಿತ್ತು. ಬಳ್ಳಾರಿ ಅನ್ನೋದು ಬಾಣಲೆ. ನಂಗೆ ವಿವೇಕವಿರಲಿಲ್ಲ.

ಸರಿ, one fine day ನನ್ನ ಪ್ರಿಂಟಿಂಗ್ ಪ್ರೆಸ್ ಮಾರಿಬಿಟ್ಟೆ. ಅದರಲ್ಲಿ ನಷ್ಟವೇನಾಗಲಿಲ್ಲ. ಆದರೆ ಲಾಭವೂ ಆಗಲಿಲ್ಲ. ಬಾಕಿ ಬಿದ್ದಿದ್ದ ಸಾಲ ತೀರಿಸಿ, ಬೆಂಗಳೂರಿಗೆ ಬಂದುಬಿಟ್ಟೆ! ರಾಜ್ಯಮಟ್ಟದಲ್ಲಿ ಬೆಳೀಬೇಕಿತ್ತಲ್ಲವಾ? Of course, ಇಲ್ಲಿಗೆ ಬಂದು ಕಂಠಮಟ್ಟ ಕುಡಿದದ್ದೇ ಆಯ್ತು. ಎಲ್ಲಿ ರಾಜ್ಯಮಟ್ಟ? ಬಿಲೀವ್ ಮೀ, ಒಂದೇ ಸಲಕ್ಕೆ ಪಾತಾಳ ಕಾಣಿಸಿತ್ತು. ಇಲ್ಲಿ ಮನೆಯಲ್ಲಿ? ಊಟ ಎಲ್ಲಿ? ಬಟ್ಟೆ ಒಗೆಯೋರು ಯಾರು? ಮಳೆ ಬಂದರೆ ನೆರಳೆಲ್ಲಿ? ಮಾಡೋಕೆ ನೌಕರಿ ಎಲ್ಲಿ? ಹತ್ತಾರು ಪತ್ರಿಕೆಗಳಿದ್ದದ್ದು ನಿಜ. ಆದರೆ ಕರೆದು ನೌಕರಿ ಕೊಡೋರು ಯಾರು? ಬಳ್ಳಾರಿ ಎಂಬ ಚಿಕ್ಕ ಬಾವಿಯಲ್ಲಿ ನಾನು ವರ್ಲ್ಡ್ ಫೇಮಸ್ಸು. ಇಲ್ಲಿ ನಾನ್ಯಾವ ಪೋತಪ್ಪ ನಾಯಕ? ಬಂದಿಳಿದ ನಾಲ್ಕು ದಿನದಲ್ಲೇ ನನಗೆ ವಾಸ್ತವ ಗೊತ್ತಾಗಿ ಹೋಯಿತು. ರಾಜ್ಯ ಮಟ್ಟದಲ್ಲಿ ಬೆಳೆಯೋದು ಒತ್ತಟ್ಟಿಗಿರಲಿ ಬೆಳಗಾದರೆ ಕಾಫಿ ಎಲ್ಲಿ ಕುಡಿಯೋದು ಎಂಬ ಪರಿಸ್ಥಿತಿ. ಆಗಿನ್ನೂ ನಾನು ‘ರವಿ ಬೆಳಗೆರೆ’ ಅಲ್ಲ. ಅಸಲು ನಾಲ್ಕಾರು ಕವಿ ಪುಂಗವರ ಪರಿಚಯ ಇತ್ತೇ ಹೊರತು ನನಗೆ ಪತ್ರಿಕೋದ್ಯಮದಲ್ಲಿನ ಮಂದಿ ಗೊತ್ತೇ ಇರಲಿಲ್ಲ.

ಆಯ್ತು, ಇದು ಬರಕತ್ತಾಗುವ ಸಂಗತಿ ಅಲ್ಲ ಅನ್ನಿಸಿ ತಂದಿದ್ದ ಚೀಲ ಹೆಗಲಿಗೆ ಹಾಕಿಕೊಂಡು ವಾಪಸು ಬಳ್ಳಾರಿಗೆ ಹೋಗಿಬಿಟ್ಟೆ. ಅವತ್ತು ಲಲಿತೆಯನ್ನು ಅವಚಿಕೊಂಡು ಹಸುಗೂಸು ಅಳುವಂತೆ ಅತ್ತು ಬಿಟ್ಟೆ. ಅಲ್ಲೀಗ ನನ್ನ ‘ಬಳ್ಳಾರಿ ಪತ್ರಿಕೆ’ ಇಲ್ಲ. ಸ್ವಂತದ ಪ್ರಿಂಟಿಂಗ್ ಪ್ರೆಸ್ಸೂ ಇಲ್ಲ. “ಇವ್ನು ರವಿ ಬೆಂಗಳೂರಿಗೆ shift ಆದ್ನಂತೆ" ಎಂಬ ಸುದ್ದಿ ಆ ಚಿಕ್ಕ ಊರಿನಲ್ಲಿ ಹರಡಿತ್ತು. ಬೆಳಿಗ್ಗೆ ಎದ್ದು ಯಾರಾದರೂ ಕೇಳಿದರೆ ಅವರಿಗೇನು ಉತ್ತರ ಕೊಡಲಿ? ಏನು ನೆಪ ಹೇಳಲಿ? ಬಳ್ಳಾರಿಯಿಂದ ಪ್ರೆಸ್ ಮಾರಿಕೊಂಡು ಹೋದದ್ದಕ್ಕೆ ನೆಪ? ಹೋದವನೇ ಬೌನ್ಸ್ ಆದ ಚೆಕ್ಕಿನಂತೆ ವಾಪಸು ಬಂದದ್ದಕ್ಕೆ ನೆಪ? ಯಾವುದಕ್ಕೆ ಹೇಳಲಿ? ನನ್ನ ಪರಮ ಸಂಕಟದ ದಿನಗಳು ಅವು.

ಇದು ಎಲ್ಲರಿಗೂ casual ಆಗಿ ಆಗುವಂಥ ಅನುಭವವಲ್ಲ. ಕೆಲವರಷ್ಟೆ ನನ್ನಂತಹ ಗೂಬೆ ಗೋತ್ರದವರಿರುತ್ತಾರೆ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ತಲೆ ಬಗ್ಗಿಸಿಕೊಂಡು ಕುಳಿತು ಬರೆಯಿರಿ. ನಂಗೆ ಬೇಕು. ‘ದಿಲ್’ ಚಡಪಡಿಸುತ್ತಿದೆ. ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕಾಗಿ ದಯವಿಟ್ಟು ಬರೆದು ಕಳುಹಿಸಿ. ಪ್ಲೀಝ್! Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 November, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books