Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನಿಮ್ಮ ಒಂದು ಗುಡ್ಲಕ್ ಬೆನ್ನಿಗಿರಲಿ!

ಇವತ್ತಿನ ಮಟ್ಟಿಗೆ ಒಂದು ಅನಿವಾರ್ಯವಾಗಿದೆ. Fortunately, ಕೀನ್ಯಾದ ಮಸಾಯ್ ಮಾರಾದಲ್ಲಿ ಆ ಸೀಝನ್ ಮುಗಿದಿಲ್ಲ. ಅವುಗಳನ್ನು wildbeest ಅನ್ನುತ್ತಾರೆ. ಇತ್ತ ದನವೂ ಅಲ್ಲ. ಅತ್ತ ಹೋತವೂ ಅಲ್ಲ ಎಂಬಂತಿರುವ ಪ್ರಾಣಿ ಅದು. ಕೀನ್ಯಾ ದೇಶದ ಹೆಗಲ ಮೇಲೆ ಕೈ ಇಟ್ಟಂತೆ ಅಲ್ಲಿ ಸೆರೆಂಗಟಿ ಹುಲ್ಲುಗಾವಲಿದೆ. ಚೆನ್ನಾಗಿ ಮೇಯ್ದು ಅಲ್ಲಿನ್ನು ಹುಲ್ಲು ಖಾಲಿಯಾಗಿದೆ ಅಂತ ಖಾತರಿಯಾಗುತ್ತಿದ್ದಂತೆಯೇ ಈ wildbeestಗಳು ಕೀನ್ಯಾದ ಕಡೆಗೆ ಹೊರಡುತ್ತದೆ. ಅವೇನೂ ಕಡಿಮೆ ಲೆಕ್ಕದಲ್ಲಿ ಹೊರಡುವುದಿಲ್ಲ. ಒಂದೂವರೆಯಿಂದ ಎರಡು ಲಕ್ಷ ದನಗಳು ಮಾರಾ ನದಿಯನ್ನು ದಾಟಲಾರಂಭಿಸುತ್ತವೆ. ಅವುಗಳಿಗೆ ಮಾರಾ ನದಿಯನ್ನು ದಾಟುವ ಸಂಭ್ರಮ ಮಿಶ್ರಿತ ಭಯ. ನದಿಯಲ್ಲಿ ಅವು ಕಾಲಿಡಲೇ ಬೇಕು. ಇಟ್ಟ ತಕ್ಷಣ ಸದ್ದಿಲ್ಲದೆ ಈಜಿಕೊಂಡು ಬರುವ ಮೊಸಳೆ ಅವುಗಳ ಪೈಕಿ ಒಂದನ್ನು ಆಯ್ದು ಅದರ ಕಾಲಿಗೆ ಲಬಕ್ಕನೆ ಬಾಯಿ ಹಾಕುತ್ತವೆ. ಅಕಸ್ಮಾತ್ ಮೊಸಳೆ ಮೈಮರೆತು ಮತ್ತೇನೋ ಮಾಡಿಕೊಂಡಿದೆ ಅಂತ ಇಟ್ಟುಕೊಳ್ಳಿ. ಛಂಗನೆ ಬಂದು ಬಾಯ್ತೆರೆಯುವುದು ಹಿಪ್ಪೊಪೊಟಾಮಸ್!

ಈ ಎರಡೂ ಹಿಡಿಯಲಿಲ್ಲವಾ? ಆ ದನದಂತಹ ವೈಲ್ಡ್‌ಬೀಸ್ಟ್ ಸರಸರನೆ ಈಜಿ ದಡ ಸೇರಿ ಬಿಡುತ್ತದೆ. ನದಿಯ ಆಚೆಗಿರುವುದೇ ಮಸಾಯ್ ಹುಲ್ಲುಗಾವಲು. ಪ್ರಾಣ ಭಯದಿಂದಂತೂ ಪಾರಾದ ಸಂತಸ ಆ ಮೃಗಕ್ಕೆ. ಆದರೆ ನಾಲ್ಕು ಹೆಜ್ಜೆ ಹಾಕುತ್ತಿದ್ದಂತೆಯೇ, ಸಿಂಹಗಳ ಒಂದು ಸಮೃದ್ಧ ಫ್ಯಾಮಿಲಿ ಊಟಕ್ಕೆ ರೆಡಿ! ಕೀನ್ಯಾದ ಮಸಾಯ್ ಹುಲ್ಲುಗಾವಲಿನ ವೈಶಿಷ್ಟ್ಯವೆಂದರೆ, ಅಲ್ಲಿ ಐದೂ big cats ಇವೆ. ಸಿಂಹ, ಹುಲಿ, ಚಿರತೆ, ಚೀತಾ ಇತ್ಯಾದಿ. ಅವು ಬಾಯಿ ಹಾಕಿದವೆಂದರೆ ಫಿನಿಷ್. ಇಂತಹ ದೈತ್ಯ ಪ್ರಾಣಿಗಳು ಹಿಡಿದು, ಕೊಂದು, ಕೇವಲ ಅವುಗಳ ರಕ್ತ ಹೀರಿ ಹೊರಟು ಹೋಗುತ್ತವೆ. ಅವು ಊಟಕ್ಕೆ ಬರುವುದು ಕೆಲವು ಗಂಟೆಗಳ ನಂತರ. ಅಲ್ಲಿಯ ತನಕ ಕಳೇಬರಕ್ಕೆ ಬಾಯಿ ಹಾಕಲು ರಣಹದ್ದು, ಹೈನಾ, ನರಿ ಮುಂತಾದವುಗಳಿಗೆ ಸಂಪೂರ್ಣ ಅವಕಾಶ. ಸಾಮಾನ್ಯವಾಗಿ ಹುಲಿಗಳು ಒಬ್ಬಂಟಿಯಾಗಿ ಬೇಟೆಯಾಡಿ, ತಾವಷ್ಟೆ ಊಟ ಮುಗಿಸಿ ಸುಮ್ಮನಾಗುತ್ತವೆ. ಚಿರತೆಗಳಾದರೂ ಅಷ್ಟೆ. ಅವು ಕಳೇಬರದ ಸಮೇತ ಮರ ಹತ್ತಿ ಬಿಡುತ್ತವೆ. ಇವುಗಳಿಗಿಂತ ಭಿನ್ನ ಅಂದರೆ ಸಿಂಹಗಳು! ಬೇಟೆಯಾಡೋದು ಸಿಂಹಿಣಿ. ಆಕೆಯ ಗಂಡ ನಿಧಾನವಾಗಿ ಊಟಕ್ಕೆ ಬರುತ್ತಾನೆ. ನಂತರ ಮರಿ ಸಿಂಹಗಳು ಬರುತ್ತವೆ. ಅದು ಇಡೀ ಸಿಂಹ ಸಂಸಾರದ family package!

ಇವೆಲ್ಲವನ್ನೂ ನೋಡಬಹುದು. ನ್ಯಾಷನಲ್ ಜಿಯಾಗ್ರಫಿಯ ನೂರು ಎಪಿಸೋಡ್‌ಗಳು ನಿಮ್ಮ ಕಣ್ಣೆದುರಿಗೇ ನಡೆದು ಹೋಗುತ್ತವೆ. ನನಗೆ ಈ ಕಾಡುಗಳ ಹುಚ್ಚು ಅದೆಲ್ಲಿಂದ ಗಂಟು ಬಿತ್ತೋ, ಕಾಣೆ! ಅದೆಷ್ಟು ಸಲ ನನ್ನ ಜೊಯಿಡಾದ ಕಾಡುಗಳನ್ನು ನೋಡಿದ್ದೇನೇ? ಕಾಡುಗಳಲ್ಲಿ ಅಲೆಯುವುದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದಿಲ್ಲ. ಕರೆದರೆ ಹತ್ತೇ ನಿಮಿಷಗಳಲ್ಲಿ ರೆಡಿಯಾಗಿ ದಾಂಡೇಲಿಗೆ ಹೊರಟು ಬಿಡುತ್ತೇನೆ. ಈಗ ಅಂತಹುದೇ ಕರೆ ಮಸಾಯ್ ಮಾರಾ ಕಾಡುಗಳಿಂದ ಬಂದಿದೆ. I must go.

ಅಲ್ಲಿ ನನ್ನ ಪಾಲಿಗೆ ಹೊಸತು ಅಂತ ಏನೂ ಇಲ್ಲ. ಅದೆಲ್ಲವನ್ನೂ ಕೆಲವು ವರ್ಷಗಳ ಹಿಂದೆ, ಉಗಾಂಡಾಕ್ಕೆ ಹೋದಾಗ ನೋಡಿದ್ದೇನೆ. ಆದರೂ ನಾನು ಹೋಗಬೇಕು. ನನ್ನ ಕಿರಿಯ ಮಿತ್ರರಾದ ಸುರೇಶ್ ಮತ್ತು ಪ್ರಜ್ಞ ಅಲ್ಲೇ ನೈರೋಬಿಯಲ್ಲಿದ್ದಾರೆ. ಅಲ್ಲಿ ಉಗಾಂಡಾದಲ್ಲಿ ಪ್ರಕಾಶ್ ಮತ್ತು ರಮ್ಯಾ ಅಗ್ನಿಹೋತ್ರಿ ದಂಪತಿಗಳಿದ್ದಾರೆ. ಅವರಿಗಿಂತ ಒಳ್ಳೆಯ hostಗಳು ಬೇಕೆ? ಹೀಗೆ ಹುರುಪೆದ್ದು ಹೊರಟು, ಲಗೇಜ್ ರೆಡಿ ಮಾಡಿಕೊಂಡು, ವೀಸಾ ತರಿಸಿಕೊಂಡು, ಟಿಕೆಟ್ ಬುಕ್ ಮಾಡಿಸಿ, ಕಡೆಗೆ ಕೊನೇ ಹಂತದಲ್ಲಿ ಟ್ರಿಪ್ ರದ್ದು ಮಾಡಿದ್ದಾಗಿದೆ. ಮೊದಲು ಇಸ್ರೈಲ್‌ಗೆ ಹೊರಟೆ. ಆಮೇಲೆ ಜರ್ಮನಿಗೆ ಹೊರಟೆ. ಎರಡೂ tripಗಳು ರದ್ದಾದವು. ನೋಡಬೇಕು: ಕೀನ್ಯಾ ಹಾಗೂ ಉಗಾಂಡಾ ಯಾತ್ರೆಗೆ ಅದೇನು ಅಡ್ಡ ಬರಲಿದೆಯೋ? ನಿಮ್ಮ ಒಂದೇ ಒಂದು ಗುಡ್ಲಕ್ ನನ್ನ ಬೆನ್ನಿಗಿರಲಿ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 10 October, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books