Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಗೆಲುವಿನ ತುದಿ ಮುಟ್ಟಿದ ಗೆಳೆಯನ ಕುರಿತು

ಅದೆಲ್ಲದರ ನಡುವೆಯೂ ಮನಸ್ಸು ನಿರುಮ್ಮಳವಾಗಿದೆ. ಗೆಳೆಯನಾದ ಉದಯ ಮಾತನಾಡುವ ಯತ್ನ ಮಾಡುತ್ತಿದ್ದಾನೆ. ಆಯುರ್ವೇದ ಕೆಲಸ ಮಾಡುತ್ತಿರುವಂತಿದೆ. ತುಂಬ ಹಿಂದೆ ಪರಿಚಯದ ಹುಡುಗಿಯೊಬ್ಬಾಕೆ ನನಗೊಂದು ಮಾತು ಹೇಳಿದ್ದಳು. ಇಲ್ಲಿಂದ ಕಾರವಾರಕ್ಕೆ ಹೋದರೆ, ಕಾರವಾರಕ್ಕಿಂತ ಕೊಂಚ ಮುಂಚೇನೇ ‘ಅಳಗಾ’ ಎಂಬ ಊರು ಸಿಗುತ್ತದಂತೆ. ಅದು ಹಳ್ಳಿ. ಅಲ್ಲಿರೋದು ಅಲೋಪಥಿ ಆಸ್ಪತ್ರೆಯಲ್ಲ. ಅಲ್ಲಿರುವವರು ನಾಟಿ ವೈದ್ಯರೂ ಅಲ್ಲ. Not ಆಯುರ್ವೇದ. ಒಂದಿಬ್ಬರು ಮೂರು ಜನ ಜರ್ಮನ್ (?) ಮಹಿಳೆಯರಿದ್ದಾರಂತೆ. Stroke ಆದ ಮೇಲೆ ಆದಷ್ಟೂ ಬೇಗನೆ ಅಲ್ಲಿಗೆ ಕೊಂಡೊಯ್ದರೆ ಅವರು ಖಾಯಿಲೆಯ ತೀವ್ರತೆ ನೋಡಿ, ಒಂದು ಇಂಜೆಕ್ಷನ್ ಕೊಡುತ್ತಾರಂತೆ. ಅಷ್ಟೇ ಚಿಕಿತ್ಸೆ: ಅಡ್ಮಿಷನ್ನು, ಮಸಾಜು ಇತ್ಯಾದಿಗಳಿಲ್ಲ. ಪಥ್ಯ ಇದೆಯಾ? ನನಗೆ ಗೊತ್ತಿಲ್ಲ.

ಕೊಡೋದು ಒಂದೇ ಇಂಜೆಕ್ಷನ್ನು. ಆನಂತರ ಹಿಂತಿರುಗಬಹುದು. ಇತ್ತೀಚೆಗೆ ನನ್ನ ಪರಿಚಯದವನ ಬಗ್ಗೆ ಅದನ್ನೇ ಹೇಳಿದರು. ಅಳಗಾದಲ್ಲಿ ಇಂಜೆಕ್ಷನ್ ಕೊಡಿಸಿಕೊಂಡು ಬಂದ ನಂತರ ರೋಗಿ ತುಂಬ ಚೆನ್ನಾಗಿ ಆಗಿದ್ದಾನೆ ಅಂದರು. ಆ ಮಾತು ನಾನು ಉದಯನ ಪತ್ನಿ ಗಾಯತ್ರಿಗೆ ತಲುಪಿಸಿದ್ದೇನೆ. ಪಾಪ, ಗಾಯತ್ರಿಗೆ ನೂರೆಂಟು ಜಂಜಡ. ನಾನು ಮೊನ್ನೆ ಹೋಗಿ ನೋಡಿ ಬರೋಣ ಅಂದುಕೊಂಡಿದ್ದೆ. ಮೈಸೂರಿನ ಮಿತ್ರನೊಬ್ಬ “ನಾನೂ ಬರ‍್ತಿದೀನಿ. ಒಟ್ಟಿಗೆ ಹೋಗೋಣ" ಅಂದ. ಆತ ಬರಲಿಲ್ಲ. ನನಗೆ ಕಾದಿದ್ದಷ್ಟೆ ಬಂತು.

ಇದೆಲ್ಲದರ ಮಧ್ಯೆ ಎಲ್ಲಿಗಾದರೂ ಹೋಗಿ ಬರೋಣ ಅಂತ ಜೀವ ತುಯ್ದಾಡುತ್ತಿದೆ. ನನ್ನ ಜೊಯಿಡಾಕ್ಕೆ ಹೋಗಿ ಭರ್ತಿ ಎರಡು ವರ್ಷಗಳಾದವು. ಹವೆ ಹಿತವಾಗಿದೆ. ಬಂದು ಹೋಗಿ ಅಂತ ನರಸಿಂಹ ಫೋನು ಮಾಡುತ್ತಲೇ ಇದ್ದಾನೆ. ನನ್ನ ಹೊಸ ಇನೋವಾ ಗಾಡಿ ಬಂದಿದೆ. ಎಂದಿನಂತೆ, ನನ್ನ ಸಾರಥಿ ರಾಜು, ಗೊಣಗುತ್ತಿದ್ದಾನೆ. ‘ಇಲ್ಲೇ ಎಂ.ಜಿ. ರೋಡಿಗೆ ಹೋಗಿ ಬರೋಣ ಕಣೋ’ ಅಂದರೆ “ಅಣ್ಣಾ, ಈ ಪಿತೃಪಕ್ಷ ಕಳೀಲಿ. ಪಕ್ಷ ಇರುವಾಗ ನಾನು ಹೊಸ ಗಾಡಿ ಮುಟ್ಟಲ್ಲ" ಅಂದ. ಇವೆಲ್ಲ ಎಲ್ಲಿಂದ ಹುಟ್ಟಿಕೊಳ್ತವೋ ಕಾಣೆ. ಸಾಲದೆಂಬಂತೆ ರಸ್ತೆಗಳು ಕುಲಗೆಟ್ಟು ಹೋಗಿವೆ. ಅದೇನು ಸುಡುಗಾಡು ಟಾರ್ ಹಾಕುತ್ತಾರೋ, ಕಾಂಟ್ರಾಕ್ಟರುಗಳು. ಸರಿಯಾಗಿ ವಯಸ್ಸಿನಲ್ಲಿರೋ ಇಬ್ಬರು ಹುಡುಗರು ಮೂತ್ರ ಮಾಡಿದರೂ ಸಾಕು, ರಸ್ತೆ ಕಿತ್ತುಕೊಂಡು ಹೋಗುತ್ತದೆ. ಕೆಟ್ಟ ರಸ್ತೇಲಿ ಹೋಗುವುದಕ್ಕಿಂತ ಎಲ್ಲಿಗೂ ಹೋಗದಿರೋದೇ ಚೆಂದ.

ಮೊನ್ನೆ ಬಂದ ಸಂತಸದ ಸುದ್ದಿಯೆಂದರೆ, ನನ್ನ ಪರಮಾಪ್ತ ಮಿತ್ರ ಜಯಂತ್ ಶೆಟ್ಟಿಯವರು ಬಡ್ತಿ ಪಡೆದು ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದಾರೆ. ಕೇವಲ ಸಬ್ ಇನ್ಸ್‌ಪೆಕ್ಟರ್ ಆಗಿ ನೌಕರಿ ಸೇರಿದವರು, ತುಂಬ ಯಶಸ್ವಿಯಾಗಿ ಅನೇಕ ಸಾಧನೆಗಳನ್ನು ಮಾಡಿ ಈಗ ಎಸ್.ಪಿ. ಆಗಿದ್ದಾರೆ. ನಾನು ಮತ್ತು ಜಯಂತ್ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೇ ಮಾಸ್ಟರ್ ಡಿಗ್ರಿ ತೆಗೆದುಕೊಂಡವರು. ಆ ದಿನಗಳಲ್ಲಿ ಜಯಂತ್ ಕ್ರಿಕೆಟ್ ಚೆನ್ನಾಗಿ ಆಡುತ್ತಿದ್ದರು. ಅವರ ತಂದೆ-ಸೋದರರು ಸೇರಿ ಹುಬ್ಬಳ್ಳಿಯಲ್ಲಿ ಹೊಟೇಲು ನಡೆಸುತ್ತಿದ್ದರು. ಜಯಂತ್‌ರ ಪತ್ನಿ ನನ್ನ ಪಾಲಿಗೆ ಸೋದರಿ. ಎರಡೂ ಹೆಣ್ಣು ಮಕ್ಕಳಿಗೆ ನಾನು ರವಿಯಂಕಲ್. ಅವರಲ್ಲೊಬ್ಬಳು ಈಗ ಪತ್ರಕರ್ತೆ. ಚೇತನಾ ಓದಿದೆಡೆಯಲ್ಲೇ ಅವಳೂ ಓದಿದಳು: ಚೆನ್ನೈನಲ್ಲಿ.

ಹೆಚ್ಚೇನಿಲ್ಲ. ಜಯಂತ್ ಇಷ್ಟರಲ್ಲೇ ರಿಟೈರ್ ಆಗುತ್ತಾರೆ. ನಂತರ ಒಮ್ಮೆ ನಾವು ಸೇರಬೇಕು. ನಿರಾತಂಕವಾಗಿ ಎರಡು ದಿನ ಹರಟಬೇಕು. ಅಷ್ಟೇ ಅಲ್ಲವಾ? ಗೆಳೆತನ ಮಾಗಿದಾಗ ಇನ್ನೆಂಥವು ಆದಾವು. ಗೆಳೆಯನ ಪುರೋಭಿವೃದ್ಧಿ ಕಂಡು ಬೀಗುತ್ತಿದ್ದೇನೆ. I am happy.

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 05 October, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books