Ravi Belagere
Welcome to my website
ಮೋಸ ಮಾಡಿರ‍್ತೇವೆ : ಅಲ್ವಾ? ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ?ಅದನ್ನೂ ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ನಿಮಗಾಗಿ ಕಾಯುತ್ತಿದೆ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಈ ಮನಸ್ಥಿತಿಯಲ್ಲಿ ಹಬ್ಬ ಮಾಡಲಾರೆ

ನೆಮ್ಮದಿ ಇಲ್ಲದ ಮನಸು ಹೊತ್ತು ಏನನ್ನು ಮಾಡಲು ಹೊರಟರೂ ಅದು ಹಾಳು. ಕಣ್ಣೆದುರಿಗೆ ವಿಪರೀತ ಕೆಲಸ ಬಿದ್ದಿದೆ. ನಾನು ಕೆಲಸಕ್ಕೆ ಹೆದರುವವನಲ್ಲ. ಆ ವಿಚಾರದಲ್ಲಿ ಕಳ್ಳ ಬೀಳುವವನೂ ಅಲ್ಲ. ಅವನು ಉದಯ, ಇಡೀ ‘ಓ ಮನಸೇ...’ ಸಂಚಿಕೆ ಮುಗಿಸಿ, “ನೀನು ಬರೆಯೋದಷ್ಟೆ ಬಾಕಿ" ಅಂತ ಹೇಳಿ ಹೋಗಿದ್ದಾನೆ. ಅದು ಕಷ್ಟದ ಕೆಲಸವಲ್ಲ. ನನ್ನ ಮಟ್ಟಿಗೆ ಬರೀ ಮುಕ್ಕಾಲು ರಾತ್ರಿಯ ಕೆಲಸ. ಬೆಳಗಿನ ಜಾವದ ಹೊತ್ತಿಗೆ ಮುಗಿಸಿ ಎದ್ದು ಬಿಡಬಲ್ಲೆ. ಆದರೆ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ.

Not only that. ಪುಸ್ತಕಗಳ ಕೆಲಸ ಚೂರೇ ಚೂರು ಉಳಿದುಕೊಂಡಿದೆ. ಎಲ್ಲವೂ final touches ಕೊಟ್ಟರೆ ಮುಗಿದು ಹೋಗುತ್ತವೆ. But I am lost. ನನಗೆ ಕೈ ನಿಲುಕಿನಲ್ಲೇ ಇರುವ ಕೆಲವು ಪುಸ್ತಕಗಳನ್ನು ಓದಿದರೆ ಮನಸ್ಸು ಸರಿ ಹೋಗುತ್ತದೆ. ಆದರೆ book rack ತನಕ ಹೋಗಿ ಹಿಂತಿರುಗಿ ಬಿಡುತ್ತಿದ್ದೇನೆ. ಪುಸ್ತಕ ಮುಟ್ಟಲಿಕ್ಕೂ ಮನಸಿಲ್ಲ. ಆಫೀಸಿನ ಹುಡುಗರೊಂದಿಗೆ ಸದಾ ತಮಾಷೆಯಾಗಿ ಮಾತಾಡುತ್ತಾ ಓಡಾಡುವವನು ನಾನು. ಆದರೆ ಛೇಂಬರ್ ದಾಟಿ ಅವರಲ್ಲಿಗೆ ಹೋಗಿ ದಿನಗಳೇ ಆದವು. ಕೆಲವರನ್ನಂತೂ ಕಣ್ಣಾರೆ ನೋಡಿಯೂ ಇಲ್ಲ. ನನ್ನ ಡಾಕ್ಟರು ಬಂದು ಬಿ.ಪಿ. ಅಳೆದು ನೋಡಿದರು. ಸಕ್ಕರೆ ಪರೀಕ್ಷೆ ಮಾಡಿಸಿದರು. ಅವೆರಡೂ ಹಿಡಿತದಲ್ಲಿವೆ. “Are you missing your drink?" ಅಂದರು. “Not at all" ಅಂದೆ. ಚಟಗಳನ್ನಾಗಲೀ, ಮನುಷ್ಯರನ್ನಾಗಲೀ ಬಿಟ್ಟ ಮೇಲೆ ಅವುಗಳ ನೆನಪು ಕೂಡ ನನಗೆ ಆಗುವುದಿಲ್ಲ. I am very hard a nut to track.

‘ಪತ್ರಿಕೆ’ಯ ಹುಟ್ಟುಹಬ್ಬದ ಸಮಾರಂಭ ಮಾಡಬೇಕು. ಆ ಹೊತ್ತಿಗೆ ಸುಮ್ಮನೆ ಒಂಚೂರು ಮೇಲುಸ್ತುವಾರಿ ಮಾಡಲಿಕ್ಕೆ ಬಂದು ಹೋಗು ಅಂತ ನಿವೇದಿತಾಳನ್ನು ಕರೆದಿದ್ದೆ. ಅವಳು ವಿಪರೀತ ದೂರದ ಗೂಡೂರಿನಲ್ಲಿ ಇದ್ದಾಳೆ. “ಸದ್ಯಕ್ಕೆ ಬರುವುದು ಬೇಡ. ಸಭೆ ರದ್ದು ಮಾಡಿದ್ದೇನೆ. ಮತ್ತೆ ಸಿದ್ಧತೆ ಮಾಡಿಕೊಂಡ ನಂತರ ತಿಳಿಸುತ್ತೇನೆ. ಯಾವುದಕ್ಕೂ ನನಗೆ ಮನಸಿಲ್ಲ" ಅಂದೆ. ಹೆಚ್ಚು ದಿನವಲ್ಲದಿದ್ದರೂ ಕೆಲವು ದಿನಗಳ ಮಟ್ಟಿಗೆ West Africaಕ್ಕೆ ಹೋಗಿ ಬರುವ ಇರಾದೆ ಇದೆ. ನಿಜ ಹೇಳೋದಾದರೆ ಇದು ‘ತಲೆ ತಪ್ಪಿಸಿಕೊಂಡು’ ಹೋಗುವಂಥ ಪ್ರಯಾಣ. ಹೋಗುವ ಮುನ್ನ ಉದಯನನ್ನೊಮ್ಮೆ ನೋಡಿ ಬರಬೇಕು. ಸುಮಾರು ಹತ್ತು ದಿನ ಅವನು ಐ.ಸಿ.ಯುನಲ್ಲಿ ಮಲಗಿದ್ದ. “ಇವತ್ತು ವಾರ್ಡ್‌ಗೆ shift ಮಾಡಿದ್ದಾರೆ ಕಣೋ" ಅಂತ ನನ್ನ ತಂಗಿ ಸರಸ್ವತಿ ಫೋನ್ ಮಾಡಿ ಹೇಳಿದ್ದಾಳೆ. ಕೊಂಚ ಜಾಸ್ತಿ ಹೊತ್ತು ಅವನನ್ನು ಮಾತನಾಡಿಸುತ್ತಾ ಕೂಡಬಹುದು.

ಉಳಿದೆಲ್ಲ ಅಪಾಯಿಂಟ್‌ಮೆಂಟ್‌ಗಳನ್ನು ರದ್ದು ಮಾಡಿದ್ದೇನೆ. ಕೆಲವು ಸಲ ಓದುಗ ಮಿತ್ರರು ಬಹಳ ದೂರದಿಂದ ಹುಡುಕಿಕೊಂಡು ಬರುತ್ತಿರುತ್ತಾರೆ. ಅವರಿಗೆ ಖರ್ಚು-ನಿರಾಸೆ ಆಗುವಂತೆ ಮಾಡಬಾರದು. ನನ್ನನ್ನು ನೋಡಲೆಂದೇ ಅಮೆರಿಕದ ಟೆಕ್ಸಾಸ್‌ನಿಂದ ಗೆಳತಿಯೊಬ್ಬಳು ಬರಲಿದ್ದಳು. ಅವಳಿಗೂ ಬರಬೇಡವೆಂದು ಹೇಳಿದೆ. ಅಮೆರಿಕದಲ್ಲಿ ನಡೆದ ‘ನಾವಿಕ’ ಸಮ್ಮೇಳನಕ್ಕೆ ಬರುತ್ತೀಯ ಅಂತ ಕೇಳಿದ್ದಳು. ಯಾಕೆ ಬರಲಿ? ನನ್ನನ್ನು ಅವರು ಕರೆದಿಲ್ಲ. ಕರೆಯದೆ ಇರುವ ಜಾಗಕ್ಕೆ ಹೋಗಬಾರದು. ಸರ್ಕಾರಿ ನೌಕರರ, ರಾಜಕಾರಣಿಗಳ ಕೈ ಕಾಲಿಗೆ ಅಡರಿ ಅವರ ಶಿಫಾರಸಿನ ಮೇಲೆ ಹೋಗುವುದು ನನ್ನ ಜಾಯಮಾನದಲ್ಲೇ ಇಲ್ಲ. ಅಲ್ಲಿ ಅನೇಕ ಗೆಳೆಯ-ಗೆಳತಿಯರಿದ್ದಾರೆ. ನನ್ನಲ್ಲಿ ಪ್ರವಾಸಗಳಿಗೇ ಅಂತ ತೆಗೆದಿಟ್ಟ ಹಣವಿದೆ. ಇಂದಲ್ಲ ನಾಳೆ ಹೋದರಾದೀತು. ಹೋಗಲಿಕ್ಕಾಗದೆ ಒದ್ದಾಡಲಿಕ್ಕೆ ಅದೇನು ಮಂಗಳ ಗ್ರಹವೇ?

ದಯವಿಟ್ಟು ಕ್ಷಮಿಸಿ, ಸಮಾರಂಭ ನಡೆಸಲಾಗದ್ದಕ್ಕೆ. ಯಾವುದೂ ಅಸಾಧ್ಯವಲ್ಲ. ಮನಸು ತಿಳಿಯಾಗಲಿ. ಭೇಟಿಯಾಗೋಣ.

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 September, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books