Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅವರಿಬ್ಬರೂ ಡಿವೋರ್ಸ್ ಪಡೆದರೇನಂತೆ?

ಈ ಹುಡುಗ ಸುದೀಪ್.

ಆತನ ಬಗ್ಗೆ ನನಗೊಂದು ಪ್ರೀತಿಯಿದೆ. ಸೌಜನ್ಯವಂತ ಮನುಷ್ಯ. ಆತನ ಸಾರ್ವಜನಿಕ ನಡಾವಳಿಯಲ್ಲಿ ದೋಷಗಳಿಲ್ಲ. ಎಂಥ ಪ್ರೊಡ್ಯೂಸರ್ ಆದರೂ, ಯಾವುದೇ ಭಾಷೆಯವರಾದರೂ ಕಣ್ಣು ಮುಚ್ಚಿಕೊಂಡು ಕೋಟ್ಯಂತರ ರುಪಾಯಿ ಹೂಡಬಹುದು. ಈ ದರ್ಶನ್, ದುನಿಯಾ ವಿಜಿ ಇತ್ಯಾದಿ ತರಲೆಗಳಿವೆಯಲ್ಲ? ನೀವು ಸುದೀಪ್‌ನನ್ನು ಇವರಿಗೆ ಹೋಲಿಸಲೇ ಬೇಡಿ. He is totally a different metal.

“ಬಿಟ್ಟೇ ಬಿಡಿ. ಸುದೀಪ್ ಬಗ್ಗೆ ಬರೆದು ಏನಾಗಬೇಕಿದೆ?" ಅಂದೆ. ಅಂದ ಮಾತ್ರಕ್ಕೆ, ಇದು ಪೂರ್ತಿಯಾಗಿ ಬಿಟ್ಟೇ ಬಿಡುವಂಥ ಸಂಗತಿಯೂ ಅಲ್ಲ. ಒಬ್ಬ ಪ್ರಖ್ಯಾತ, ಯಶಸ್ವೀ ನಟನ ನಿಜ ಬದುಕಿನ ಬಗ್ಗೆ ತಿಳಿದುಕೊಳ್ಳುವ ಇಚ್ಛೆ ಓದುಗರಿಗಿರುತ್ತದೆ. ಅದು ಅವರ ಹಕ್ಕೂ ಹೌದು.

ಮತ್ತೇನಿಲ್ಲ. ಸುದೀಪ್ ಮತ್ತು ಆತನ ಪತ್ನಿ ಪ್ರಿಯಾ ನಡುವೆ ಭಿನ್ನಾಭಿಪ್ರಾಯವಿದೆ. ಇವತ್ತಿನ ಮಾತಲ್ಲ, ಅವರ ಮನಸುಗಳು ದೂರವಾಗಿ ಹಲವು ವರ್ಷಗಳೇ ಆಗಿವೆ. ಸುದೀಪ್ ಆಕೆಗೆ ಚಿಕ್ಕ ತೊಂದರೆಯನ್ನೂ ಕೊಟ್ಟಿಲ್ಲ. ಆಕೆ ಪ್ರತ್ಯೇಕವಾಗಿ ಇದ್ದರು. ಬೇಕಾದ ಖರ್ಚು, ಯೋಗಕ್ಷೇಮ-ಎಲ್ಲವನ್ನೂ ನೋಡಿಕೊಂಡದ್ದು ಸುದೀಪ್. ಅಷ್ಟೇ ಚೆನ್ನಾಗಿ ಮಗುವನ್ನೂ ನೋಡಿಕೊಂಡಿದ್ದಾನೆ. ಸುದೀಪ್‌ಗೆ ಅನೇಕ ಚಿತ್ರನಟರಿಗಿದ್ದಂತೆ ಚಟಗಳಿಲ್ಲ. ಅಫೇರು-ಹಾಳುಮೂಳು ಯಾವುದೂ ಇಲ್ಲ. ಕಟ್ಟಿಕೊಂಡ ಪತ್ನಿಗೆ, ತಾನು ಭುವಿಗೆ ಕರೆತಂದ ಮಗುವಿಗೆ ಏನನ್ನೂ ಕಡಿಮೆ ಮಾಡಿದವನಲ್ಲ. ತನ್ನ ಸಭ್ಯತೆ ಬಿಟ್ಟುಕೊಟ್ಟವನಲ್ಲ. ಸುದೀಪ್ ಪತ್ನಿಯೂ ತುಂಬ ಗೌರವಸ್ಥ ಹೆಣ್ಣು ಮಗಳು. ಪರಸ್ಪರ ದೂರವಾದುದು ಬಿಟ್ಟರೆ ಅವರ ನಡುವೆ ಮತ್ತೆಂಥದ್ದೂ ಇಲ್ಲ.

ಈಗ ಅವರು ಕಾನೂನುಬದ್ಧವಾಗಿ ಬೇರೆಯಾಗಲಿದ್ದಾರೆ. ಪರಸ್ಪರರು ಒಪ್ಪಿಗೆಯಿಂದಲೇ ಫ್ಯಾಮಿಲಿ ಕೋರ್ಟ್‌ನಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರರು ಒಪ್ಪಿ ಒಂದಾಗಬಹುದಂತೆ. ಬೇರೆಯಾದರೆ ತಪ್ಪೆ? ಸುದೀಪ್ ಪತ್ನಿ ಒಂದೇ ಒಂದು ತಕರಾರು ಮಾಡಿಲ್ಲ. ಅಪಸವ್ಯದ ಮಾತು ಆಡಿಲ್ಲ. ಸ್ವತಃ ಸುದೀಪ್ ತನಗೇನೋ ತೊಂದರೆಯಾಗಿದೆ ಅಂತ ಒಂದು ಮಾತು ಅಂದಿಲ್ಲ. ನನಗೆ ಸುದೀಪ್ ವರ್ಷಾಂತರಗಳ ಪರಿಚಯವಿರೋ ಜೀವಿ. ಆತನ ತಂದೆ ಪರಿಚಿತರು. ತಾಯಿ ಕೂಡ. In fact, ಸುದೀಪ್ ಮತ್ತು ಪ್ರಿಯಾ ಒಟ್ಟಿಗಿಲ್ಲ ಎಂಬ ಸಂಗತಿ ನನಗೆ ಖಂಡಿತವಾಗ್ಯೂ ಗೊತ್ತಿತ್ತು. ಅದು ಯಾವುದೇ ಕುಟುಂಬದಲ್ಲಿ ಆಗಬಹುದಾದಂಥ ಸಂಗತಿ. ಬೇರೆ ನಟ-ನಿರ್ದೇಶಕರು ಈ ತರಹದ ಸೌಜನ್ಯ ತೋರಗೊಟ್ಟಿದ್ದೇ ಆದರೆ ಅವರ ಬಗ್ಗೆ ಚಕಾರ ಶಬ್ದ ನಾವು ಬರೆಯುತ್ತಿರಲಿಲ್ಲ. ಈಗಲೂ ಪರಸ್ಪರರು ಒಪ್ಪಿ ದೂರವಾಗುತ್ತಿರುವ ಸಂದರ್ಭದಲ್ಲಿ ಚಕಾರವೆತ್ತುವಂಥದ್ದು ಏನೂ ಇಲ್ಲ.

ಉಳಿದೆಲ್ಲರಿಗಿಂತ ಹೆಚ್ಚಾಗಿ ಅನೇಕ ಪ್ರಕರಣಗಳನ್ನು ನೋಡಿದವರು ನಾವು. ಹೆಂಡತಿಯನ್ನು ಬಡಿದು, ರಾಮಾ-ರಕ್ತ ಮಾಡಿ, ಜೈಲಿನ ಹೆಬ್ಬಾಗಿಲಿಗೆ ಹೋದ ತಕ್ಷಣ ಭೂ ಚಕ್ರವಾಯು ಬಂದವನಂತೆ ಅಂಗಾತ ಬಿದ್ದವನು ದರ್ಶನ್. ಇನ್ನು ಅವನಾ? ಬ್ಲಾಕ್ ಗೊಬ್ರ ವಿಜಯ. ಅವನು ಸಿಂಪಲ್ಲಾಗಿ ಮಾಡಿಕೊಂಡ ಲವ್ ಸ್ಟೋರಿಗಳು ಒಂದೆರಡಲ್ಲ. ಹೆಂಡತಿ ಅತ್ತ ಇರಲಿ: ಅವನು ಶುಭಾ ಪೂಂಜಾಳನ್ನು ಕಾಡಿದ ವಿವರಗಳೇ, ಟೀವಿ ಧಾರಾವಾಹಿಯ ಸರುಕುಗಳು. ಓಂಪ್ರಕಾಶ್ ರಾವ್ ಎಂಬ ಮೂರ್ಖನಿಗೆ ತಾನು ಆದ ಮದುವೆಗಳದೇ count ಸಿಗುತ್ತಿಲ್ಲ. ಶ್ರುತಿ ಪರಿಸ್ಥಿತಿ ನಿಮಗೆ ಗೊತ್ತಿದೆ. ಶಶಿಕುಮಾರ್‌ನನ್ನು ಇಂಡಸ್ಟ್ರಿಯೇ ಮರೆತಿದೆ. ಕ್ಷುಲ್ಲಕ ಕಾರಣಕ್ಕೆ ಕುಡಿಯಲಾರಂಭಿಸಿ ಆ ಪರಿ ಶ್ರೀಮಂತ ರಘವೀರ್ ಅದರಲ್ಲೇ ನಾಶವಾಗಿ ಹೋದ.

ಇಂಥ ಕಥೆಗಳು ಅವೆಷ್ಟಿವೆಯೋ?

ಈಗ ತುಂಬ ರೆಸ್ಪೆಕ್ಟ್‌ಫುಲ್ ರೀತಿಯಲ್ಲಿ ಸುದೀಪ್ ಮತ್ತು ಪ್ರಿಯಾ ಡಿವೋರ್ಸ್ ಪಡೆಯಲಿದ್ದಾರೆ. ಪ್ರತ್ಯೇಕಗೊಂಡರೇನಂತೆ? ಅವರಿಬ್ಬರೂ ಚೆನ್ನಾಗಿರಲಿ. ಇನ್ನೇನಿದೆ?
-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 September, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books