Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಒಂದು ಮೋಸ ನಾವೂ ಮಾಡಿರ‍್ತೇವೆ: ಅಲ್ವಾ?

ಅದು dependantನ ಕುರಿತಾದ ಸಂಗತಿ.

ಅಸಲಿಗೆ ಯಾವುದಕ್ಕೂ, ಯಾರ ಮೇಲೂ depend ಆಗಬಾರದು ಅಂತಲೇ ಎಲ್ಲರೂ ಅಂದುಕೊಳ್ಳುತ್ತೇವೆ. ಅದು ಸಾಧ್ಯವಾಗುತ್ತಾ? Not easy. ಕೆಲವರನ್ನು ಅಪರೂಪಕ್ಕೆ ನೋಡಿದ್ದೇನೆ. ವೆರಿ ವೆರಿ ಇಂಡಿಪೆಂಡೆಂಟ್. ಅವರ ಉಡುಪು ಅವರೇ ಒಗೆದುಕೊಳ್ಳುತ್ತಾರೆ ಎಂಬುದರಿಂದ ಹಿಡಿದು, ಸತ್ತ ಮೇಲೆ ತಮ್ಮನ್ನು ಎಲ್ಲಿ ಹುಗಿಯಬೇಕು ಎಂಬುದನ್ನೂ ತಾವೇ ನಿರ್ಧರಿಸುವವರಿರುತ್ತಾರೆ-ಎಂಬುದರ ತನಕ! ಅಂಥವರನ್ನು ನೋಡಿದ್ದೇನೆ. ಅವರಿಗೆ ಅದು ಗೊತ್ತಾಗುತ್ತದೋ ಇಲ್ಲವೋ? ಕಾಣೆ. ನಾನು ತುಂಬ ಅಬ್ಸರ್ವ್ ಮಾಡುತ್ತಿರುತ್ತೇನೆ ಅವರನ್ನ. ಆ ಥರದ ಜನ ಇದ್ದೇ ಇರುತ್ತಾರೆ. ಬರೀ ಶುಚಿಯ ಹುಚ್ಚರು ಅಂತ ಅಲ್ಲ. ನಾನಾ ವೆರೈಟಿಯ ಹುಚ್ಚರಿರುತ್ತಾರೆ. ನನ್ನ ಪಾಲಿಗೆ ಅವರೆಲ್ಲರೂ ಅಬ್ಸರ್ವೇಷನ್‌ಗೆ ಅರ್ಹರೇ. ನಾನು ತಕ್ಷಣ react ಮಾಡಲ್ಲ. ಅಬ್ಸರ್ವ್ ಮಾಡ್ತಿದಾನೆ ಅಂತ ಅವರಿಗೆ ಗೊತ್ತು ಮಾಡಿಕೊಡುವುದೂ ಇಲ್ಲ. ಬರಹಗಾರನಾಗಿ, ಒಬ್ಬ ಪತ್ರಕರ್ತನಾಗಿ ನಾನದನ್ನು ಮಾಡಲೇ ಬೇಕು! “ಸರ್, ನಂಗೆ ನಿಮ್ಮ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ನಿಜಕ್ಕೂ ಭಯವಾಗುತ್ತೆ. ನಿಮ್ಮ ನೆನಪಿನ ಶಕ್ತಿ ದೊಡ್ಡದು. ಇದೆಲ್ಲ ಬರೆದು ಬಿಡ್ತೀರೇನೋ ಅಂತ ಭಯ" ಅಂದವರು ಸಾಕಷ್ಟಿದ್ದಾರೆ. ಈಗಲೂ ಅನ್ನುತ್ತಿರುತ್ತಾರೆ. I never do that. ಏನೋ ನಂಬಿಕೆಯಿಟ್ಟುಕೊಂಡು ಕೆಲವರೆಲ್ಲ ತಮ್ಮ ವ್ಯಕ್ತಿಗತ ಸಂಗತಿಗಳನ್ನು ಹೇಳಿಕೊಂಡಿರುತ್ತಾರೆ. ಅವರಿಗೆ ಮೋಸ ಮಾಡಬಾರದು. ಅದನ್ನ ಮಾಡಿಬಿಟ್ಟರೆ I become unprofessional.

ಇದು ಇಂದು ನಿನ್ನೆಯ ಸಂಗತಿಯಲ್ಲ. ಪತ್ರಕರ್ತನ ವೃತ್ತಿಗೆ ಸಂಬಂಧಿಸುವುದಕ್ಕೆ ಮುಂಚಿನಿಂದಲೂ ನಾನು ಈ ಧರ್ಮ ರೂಢಿಸಿಕೊಂಡಿದ್ದೇನೆ. ಪಾಲಿಸುತ್ತ ಬಂದಿದ್ದೇನೆ. ನಿಜಕ್ಕೂ ಇದು ಕಷ್ಟದ ಸಂಗತಿಯಲ್ಲ. ನಂಬಬೇಕು ಎಂಬುದು ಒಂದು ಮಾತು. ನಂಬಿಕೆ ಉಳಿಸಿಕೊಳ್ಳಬೇಕು. ಅದು ಇನ್ನೊಂದು ಮಾತು. ನನ್ನ ಪತ್ರಿಕೆಗಳನ್ನು ಎಲ್ಲೋ ನೂರಿನ್ನೂರು ಜನ ಮಾತ್ರ ಓದುವುದಿಲ್ಲ. ಇವು ಲಕ್ಷಾಂತರ ಜನರಿಂದ ಓದಿಸಿಕೊಳ್ಳುವಂಥವು. ಅವರು ನನ್ನ ಮೇಲೆ ನಂಬಿಕೆ ಇಡದೆ ಹೋಗಿದ್ದಿದ್ದರೆ ನಾನು ಹೀಗೆ ಇಪ್ಪತ್ತೊಂದು ವರ್ಷ ಎರಡು ಪತ್ರಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತೆ? ಇಷ್ಟಾಗಿಯೂ ಕೆಲವು ತಪ್ಪುಗಳಾಗಿವೆ. ಆ ಬಗ್ಗೆ ಕ್ಷಮೆ ಕೇಳಿದ್ದೇನೆ. ಓದುಗರು ಕ್ಷಮಿಸಿದ್ದಾರೆ ಕೂಡ. ಏಕೆಂದರೆ, “ನಮ್ಮ ರವಿ ಕಳ್ಳನಲ್ಲ. ಅವನು ಸುಳ್ಳನಲ್ಲ" ಎಂಬ ನಂಬಿಕೆ ನನ್ನ ಓದುಗ ದೊರೆಗಳಿಗಿದೆ. ನನ್ನ ಪಾಲಿಗೆ ಈ ‘ನಂಬಿಕೆ’ ಎಂಬುದು ನಿತ್ಯದ ಅನ್ನ.

ಈ ಬಗ್ಗೆ ನೀವೇನಂತೀರಿ?

ನಿಮ್ಮನ್ನು ಯಾರೋ ತುಂಬ ನಂಬಿರುತ್ತಾರೆ. ಅಥವಾ ನೀವು ಯಾರನ್ನೋ ನಂಬಿರುತ್ತೀರಿ. ನಿಮ್ಮ ನಂಬಿಕೆಗೆ ಮೋಸವಾದದ್ದನ್ನು ಹೇಳಿ ಅಂದರೆ ಸಾಕು ತಕ್ಷಣ ಪೆನ್ನು ಕೈಗೆತ್ತಿಕೊಳ್ಳುತ್ತೀರಿ. ಅದನ್ನೂ ಹೇಳಿ. I don't mind. ಆದರೆ ನೀವು ಇನ್ನೊಬ್ಬರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡದ್ದು ಇದೆಯಾ? May be big, may be small. ಅದನ್ನು ಹೇಳಿ. ಕೆಲವು ಸಲ ನಮಗದು ತೀವ್ರವಾಗಿ ಅನ್ನಿಸಿರುತ್ತದೆ. “ಛೆ, ಅವರ ನಂಬಿಕೆ ಉಳಿಸಿಕೊಳ್ಳಬೇಕಿತ್ತು" ಅಂತ. ಅವನು ಚೆನ್ನಾಗಿ ಓದಿ, ಯಶಸ್ವಿಯಾಗಲಿ ಅಂತ ನಿರ್ಧರಿಸಿ, ತುಂಬ ಕಷ್ಟಪಟ್ಟು ಅಪ್ಪ-ಅಮ್ಮ ಹಣ ಕಳಿಸಿರುತ್ತಾರೆ. ಅವರದು ಹಂಡ್ರೆಡ್ ಪರ್‌ಸೆಂಟ್ ನಂಬಿಕೆ. ನಾವು ನಮಗೂ ಗೊತ್ತಾಗದಂತೆ ಆ ತಂದೆ-ತಾಯಿಯನ್ನ ಮೋಸ ಮಾಡಿಬಿಟ್ಟಿರುತ್ತೇವೆ. ಸರಿಯಾಗಿ ಓದಿಲ್ಲ. ಸಿನೆಮಾ ಕ್ರೇಜು. ಸಿಗರೇಟು ಕಲಿತಿರುತ್ತೇವೆ. ಬಿಯರ್ ಅಭ್ಯಾಸವಾಗಿರುತ್ತದೆ. “ಪಾಸ್ ಆಗಿದೀನಿ" ಅಂತ ಸುಳ್ಳು ಹೇಳಿರುತ್ತೇವೆ. ಒಂದೆರಡು ಸಬ್ಜೆಕ್ಟ್ಸ್‌ಗಳ ಪರೀಕ್ಷೆಗೇ ಹೋಗಿರುವುದಿಲ್ಲ.

ಈ ತರಹದ ಕೆಲವು ಚಿಕ್ಕಪುಟ್ಟ ಮೋಸಗಳಿಂದ ಹಿಡಿದು ನಮಗೇ ಬೇಸರ ತರುವಂತಹ ವಂಚನೆಗಳನ್ನು ಮಾಡಿರುತ್ತೇವೆ. ಅದಕ್ಕೇ ಅಂದದ್ದು: ನೀವು ಎರಡನ್ನೂ ಬರೀರಿ. ನಿಮಗೆ ಆದ ಮೋಸ, ನೀವು ಮಾಡಿದ ಮೋಸ! ಬೇಡ ಅನ್ನಿಸಿದರೆ ಪತ್ರದಲ್ಲಿ ನಿಮ್ಮ ಹೆಸರೇ ಬೇಡ. ನೀವು ಯಾರ ಕುರಿತು ಬರೆಯುತ್ತೀರೋ, ಅವರ ಹೆಸರೂ ಬೇಡ. Just write. “ದಿಲ್ ನೆ ಫಿರ್ ಯಾದ್ ಕಿಯಾ" ಅಂಕಣ ಕಾಯುತ್ತಿದೆ. ಸುಮ್ನೆ ನಿಮ್ಮ ಕೈಲಿ ಏನೋ ಬರೆಸಬೇಕು ಅಂತ ನಾನು ಬಯಸುವುದಿಲ್ಲ. ಅದು ನಿಮ್ಮ ಅಭಿವ್ಯಕ್ತಿ ಅರಳುವ ಅಂಕಣವಾಗಲಿ ಎಂಬ ಆಸೆ ನನ್ನದು. ಇವತ್ತಿನಿಂದ ಹದಿನೈದು ದಿನದೊಳಗಾಗಿ ನಿಮ್ಮ ಪತ್ರ ನನ್ನ ಕೈ ಸೇರಲಿ.

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 10 August, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books