Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಘೋಸ್ಟ್ ರೈಟರ‍್ಸ್ ಎಂಬ ಭೂತ ಲೇಖಕರೇಕೆ? ಕೆಲಸದ

ಒತ್ತಡ ತುಂಬ ಜಾಸ್ತಿಯಾದಾಗ ನಾನು ಸಂಗೀತ ಕೇಳುತ್ತೇನೆ. ಮೊನ್ನೆ ಮನೆಗೆ ಹೋದಾಗ ಲಲಿತೆಯ ಮೊಬೈಲ್ ಎತ್ತಿಕೊಂಡು ನೋಡಿದೆ. ಅದರ ತುಂಬ ಇದ್ದದ್ದು games. “ಏನೇ ಇದೂ?" ಅಂದೆ. “ನಿಂಗೆ ಗೊತ್ತಿಲ್ಲ, ಟೆನ್ಷನ್ ಆದಾಗ, ಬೇಸರವಾದಾಗ ಇವುಗಳ ಪೈಕಿ ಒಂದನ್ನು ಆಡ್ತಾ ಕೂತರೆ ಕೊಂಚ ರಿಲ್ಯಾಕ್ಸ್ ಆದ ಹಾಗನ್ನಿಸುತ್ತೆ" ಅಂದಳು ಲಲಿತೆ. ಅದು ನನ್ನ ಅನುಭವಕ್ಕೆ ಹಿಂದೊಮ್ಮೆ ಬಂದಿತ್ತು. ನನ್ನ ವರದಿಗಾರನೊಬ್ಬ ತನ್ನ ಪತ್ನಿ ತೀರಿಕೊಂಡ ಮಾರನೆಯ ದಿನವೇ Facebookನಲ್ಲಿ ಕಾಣಿಸಿಕೊಂಡಿದ್ದ. He was correct. ಕುಡಿತಕ್ಕೆ ಬೀಳುವ ಬದಲು ಈ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಅಲೆಯೋದು ಒಳ್ಳೆಯದೇ. ಇವೆರಡನ್ನೂ ಅನುಭವಿಸಿ ಬಲ್ಲವನು ನಾನು. ಎರಡನ್ನೂ ಬಿಟ್ಟು, ಪುಸ್ತಕಗಳಿಗೆ ಗಂಟುಬೀಳುತ್ತೇನೆ. ನನಗೆ last resort ಅಂದರೆ ಬರವಣಿಗೆ. ಇದು ಸುಸ್ತಾಯಿತು ಅನ್ನುತ್ತಿದ್ದಂತೆಯೇ ಬೇರೆ ತರಹದ ಬರಹಕ್ಕೆ ತೊಡಗಿಕೊಳ್ಳುತ್ತೇನೆ. ಎಲ್ಲೋ ಒಂದು ಕಡೆ, ಸಾಯಂಕಾಲವಾಗುತ್ತಿದ್ದಂತೆಯೇ ಒಂದೆಡೆ ಸೇರುವ ಗೆಳೆಯರು, ಸಂಜೆಗತ್ತಲು ಕವಿಯುತ್ತಿದ್ದಂತೆಯೇ ಬಾರ್‌ನೆಡೆಗೆ ನಡೆಯುವುದು, ಆ ಮಂದ ಬೆಳಕಿನ ಅಡಿಯಲ್ಲಿ ಗ್ಲಾಸುಗಳ ಕಿಂಕಿಣಿ, ಧಾರಾಕಾರವಾದ ಕುಡಿತ... no! ಇದೆಲ್ಲ ನಾನ್ಸೆಸ್ಸ್ ಅನ್ನಿಸಿದೆ. I am with my books.

ಈಗಂತೂ ಅದ್ಯಾವ ದನ ಹೊಕ್ಕಿದೆಯೋ ಕಾಣೆ. ಭಯಂಕರ ಕೆಲಸ ಮಾಡುತ್ತಿದ್ದೇನೆ. ಅಭಿನೇತ್ರಿಯೊಬ್ಬಾಕೆಯ ಜೀವನ ಕಥನಕ್ಕಾಗಿ ದೇಹದ ನೆತ್ತರು-ಬೆವರು ಸೇರಿ ಹರಿಯುತ್ತಿದೆಯೇನೋ ಎಂಬಂತೆ ದುಡಿಯುತ್ತಿದ್ದೇನೆ. ಉಳಿದ ಪುಸ್ತಕಗಳು ಈ ಪರಿಯ ಮನೋ-ದೇಹದ ಕಷ್ಟ ಮತ್ತು ದುಡಿಮೆ demand ಮಾಡುವುದಿಲ್ಲ. This is a real too much ದುಡಿಮೆ. ಶ್ರದ್ಧೆ ಮತ್ತು ಶ್ರಮಗಳನ್ನು ತೊಡಗಿಸಿಕೊಳ್ಳಲೇ ಬೇಕು. ಇಲ್ಲದಿದ್ದರೆ, ಹತ್ತೇ ಹತ್ತು ನಿಮಿಷ act ಮಾಡಿ ಉಳಿದ ಇಡೀ ಸಿನೆಮಾ graphicsನಲ್ಲಿ ಮುಗಿಸಿ ಬಿಡುತ್ತೇನೆ ಅಂದುಕೊಂಡು ಹೊರಟು Robot ಸಿನೆಮಾದಲ್ಲಿ ನೆಲಕಚ್ಚಿದ ರಜಿನೀಕಾಂತ್ ಥರಾ ಆಗಿ ಬಿಡುತ್ತೇವೆ. ನನಗಂತೂ ಮೊದಲ ಅಕ್ಷರದಿಂದ ಕಟ್ಟಕಡೆಯ full stop ತನಕ ಇಡೀ ಕೆಲಸವನ್ನು ನಾನೇ ಮಾಡಬೇಕು ಎಂಬಂತಹ ಹಟಗಳಿವೆ. ನಂಗೆ Ghost writers ಎಂಬ ಭೂತನಾಥರು ಎಂದಿಗೂ ಇಲ್ಲ: ಇರುವುದಿಲ್ಲ. ನಾನು ಯಾವ ಬರಹವನ್ನೂ dictate ಮಾಡಿ ಬರೆಸುವುದಿಲ್ಲ. ಕೆಲವು ಸಲ ಈ ಅಹಂಕಾರವೇ ಸರಿಯಾಗಿ ಒದೆ ಕೊಡುತ್ತದೆ: ಆರೋಗ್ಯಕ್ಕೆ. ಆದರೂ, ಈ ತನಕ ಹೀಗೇ ಕೆಲಸ ಮಾಡುತ್ತ ಬಂದಿದ್ದೇನೆ. ಬದಲಾಯಿಸುವುದು ಏಕೆ?

ನನಗೆ ಸೆಪ್ಟಂಬರ್ 27ರ ಗಡುವಿನ count down ಶುರುವಾಗಿ ಬಿಟ್ಟಿದೆ. ಅದರಲ್ಲೂ ಕೇವಲ ಅರವತ್ತೆರಡು ದಿನಗಳು ಬಾಕಿ ಉಳಿದಿವೆ. ಸಮಾರಂಭಕ್ಕೆ ಯಾರನ್ನು ಅತಿಥಿಯನ್ನಾಗಿ ಕರೆಯಬೇಕು ಎಂಬುದೊಂದು ಜಿಜ್ಞಾಸೆ. ಉಳಿದೆಲ್ಲ ಸಿದ್ಧತೆಗಳನ್ನೂ ಒಂದೊಂದಾಗಿ ಮಾಡುತ್ತ ಬಂದಿದ್ದೇನೆ. ‘ಪತ್ರಿಕೆ’ಗೆ ಈಗ ಹೊಸ ಹುಡುಗರು ಬಂದಿದ್ದಾರೆ. ಉಪಸಂಪಾದಕರು ಮತ್ತು ವರದಿಗಾರರು. ಹಿಂದಿನಂತೆಯೇ ಅವರನ್ನು ಪಕ್ಕದಲ್ಲಿ ಕೂಡಿಸಿಕೊಂಡು, ಬಯ್ದು, ಬೆನ್ನು ತಟ್ಟಿ ಕೆಲಸ ಕಲಿಸಬೇಕು. ಆ ವಿಷಯದಲ್ಲಿ ನಾನು ಸಹನೆ ಕಳೆದುಕೊಳ್ಳುವುದಿಲ್ಲ.
ಸರಿ ಅಲ್ಲವಾ?
ಅಂದ್ಹಾಗೆ ಸೆಪ್ಟಂಬರ್ 27ಕ್ಕೆ ಬಿಡುಗಡೆಯಾಗಲಿರುವ ಪುಸ್ತಕಗಳು ಯಾವ್ಯಾವು ಅಂತ ಒಂದು ಸಾಲು ಬರೆಯಬೇಕು ಅಂದುಕೊಂಡೆ. ಮಿತ್ರ ಉದಯ ಮರಕಿಣಿ ಬೈದ. ‘ಇಷ್ಟು ಅವಸರ ಯಾಕೆ’ ಅಂದ.

ಅದೂ ಸರಿಯೇ ಅಲ್ಲವೆ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 04 August, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books