Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಭಟ್ಟರೋ ವಿಶ್ವೇಶ್ವರ ಭಟ್ಟರೋ ಎಂಬ ಡರ್ಟಿ ಮೆಲೊಡಿ!

Non mischief.

ನಾನು ಸೆಪ್ಟಂಬರ್ ಐದಕ್ಕೆ ಬನ್ನಿ: ಪುಸ್ತಕ ಬಿಡುಗಡೆಗೆ ಅಂತ ಕಳೆದ ವಾರ ಬರೆದಿದ್ದೆ. ಅದು ಕೊಂಚ ಬದಲಾಗಿದೆ. ನಿಮಗೆ ಗೊತ್ತಿರುವಂತೆ ‘ಹಾಯ್ ಬೆಂಗಳೂರ್!’ ಹುಟ್ಟಿದ್ದು ಸೆಪ್ಟಂಬರ್ 25ರಂದು. Normally, ಅವತ್ತು ಅದರ birthday function ಮಾಡೋದು ವಾಡಿಕೆ. ಕೆಲವು ಸಲ ನನ್ನದೇ ಕಾರಣಗಳಿಗಾಗಿ (ಇತ್ತೀಚೆಗಿನ ವರ್ಷಗಳಲ್ಲಿ) ಸಭೆ ಸಮಾರಂಭ ಮಾಡುತ್ತಿರಲಿಲ್ಲ. ಓದುಗರು ಇವತ್ತಿಗೂ ಬೇಸರಿಸಿಕೊಂಡು ಗದರುತ್ತಾರೆ. “ಇದೇನು, ನೀವು ಫಂಕ್ಷನ್ ಮಾಡೋದೇ ಇಲ್ವಾ?" ಅಂತ ಮೊನ್ನೆ ಮೊನ್ನೆ ಓದುಗರೊಬ್ಬರು ಕೇಳಿದರು. “ರವಿ ಬೆಳಗೆರೆಗೆ ಏನೋ ಆಗಿದೆ. ವಿಪರೀತ ಖಾಯಿಲೆ ಇರಬೇಕು. ಹಾಗಾಗಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ!" ಅಂತ ಮಾತಾಡಿದವರೂ ಇದ್ದಾರೆ.

ಅಂಥದ್ದೇನೂ ಧಾಡಿಯಾಗಿಲ್ಲ ನನಗೆ. I am good. ಈ ಸಲ ಬರ್ತ್‌ಡೇ ಮಾಡೋಣ. ಸೆಪ್ಟಂಬರ್ 25 ಎಲ್ಲರಿಗೂ working day. ಹಾಗಾಗಿ ಸೆ. 27ಕ್ಕೆ ಮಾಡೋಣ ಅಂತ ನಿರ್ಧರಿಸಿದ್ದೇನೆ. ಅವತ್ತು ಭಾನುವಾರ. ಸಂಜೆ ಐದೂವರೆಗೆ ಸೇರೋಣ. ಎಂದಿನಂತೆ, ರವೀಂದ್ರ ಕಲಾಕ್ಷೇತ್ರದಲ್ಲಿ. ನಿಮಗೋಸ್ಕರ ಕಾಯುತ್ತೇನೆ. ಬಿಡುಗಡೆಗೆ ಪುಸ್ತಕ ಸಿದ್ಧವಿದೆ. ನಾನು ಕಾಯುತ್ತೇನೆ. ನೀವು ನೆಪ ಹೇಳಬೇಡಿ, ಪ್ಲೀಸ್, ಬನ್ನಿ.

ನನ್ನ ಮೊಬೈಲ್‌ಗೆ ಯಾರೋ ಒಂದು ವಾಟ್ಸ್ ಆಪ್ ಸಂದೇಶ ಕಳಿಸಿದ್ದಾರೆ. ಕೊಂಚ ತಡವಾಗಿ ನೋಡಿಕೊಂಡೆ. ಮೊನ್ನೆ ತೆರೆದು ನೋಡಿದರೆ, ಅದೊಂದು voice message. ಅದರಲ್ಲೊಂದು ಹಾಡು. ಮೊದಲು ಕನ್ನಡ ಪತ್ರಿಕೋದ್ಯಮಕ್ಕೆ ಅವರು ಮಾಡಿದ ಉಪಕಾರ, ತಂದ ಬದಲಾವಣೆ, ಉಂಟು ಮಾಡಿದ ಸಂಚಲನ ಇತ್ಯಾದಿ ಇತ್ಯಾದಿ ವಿವರಣೆ. ಆನಂತರ ಶುರುವಾಗೋದು ಹಾಡು! ಅದೊಂದು ಐಟಂ ಸಾಂಗ್‌ನಂತಿದೆ. “ಭಟ್ಟರೋ ವಿಶ್ವೇಶ್ವರ ಭಟ್ಟರು" ಅಂತ ಶುರುವಾಗುತ್ತದೆ. ಅದು ಬೇಕೆಂತಲೇ ಸೃಷ್ಟಿ ಮಾಡಿ, ಹಾಡು ಬರೆದು, ರೆಕಾರ್ಡ್ ಮಾಡಿರುವ ಗೇಲಿಯಾ ಅನ್ನಿಸುತ್ತದೆ. ಉಪೇಂದ್ರನ ಸಿನೆಮಾದ “ಮಾರಿ ಕಣ್ಣು ಹೋರಿ ಮ್ಯಾಗೆ..." ಹಾಡು ನೆನಪಾಗುತ್ತದೆ. My God! ಅಂಥದ್ದನ್ನೂ ಯಾರಾದರೂ ನನ್ನ ಬಗ್ಗೆ ಮಾಡಿದ್ದಾದರೆ, ನನ್ನ ಹೆಸರಿನಲ್ಲದು ಸರ್ಕ್ಯುಲೇಟ್ ಆಗಿದ್ದೇ ಆದರೆ ಇರೋ ಕೆಲಸವೆಲ್ಲ ಬಿಟ್ಟು ಅವರನ್ನು ಹುಡುಕಿಕೊಂಡು ಹೋಗಿ ಕೊಲೆ ಮಾಡುತ್ತಿದ್ದೆ. ತೀರ ಆ ಮಟ್ಟದ cheap song. ಅದರ ಕಡೆ ಭಾಗದಲ್ಲಿ ವಿಶ್ವೇಶ್ವರ ಭಟ್ಟರು ಇಷ್ಟರಲ್ಲೇ ತಮ್ಮ thrill ಎಬ್ಬಿಸುವ productನೊಂದಿಗೆ ಬರಲಿದ್ದಾರೆ ಎಂಬ clue ಕೊಟ್ಟಿರುವಂತಿದೆ.

ಒಂಥರಾ, ಹೇಸಿಗೆ ಅನ್ನಿಸುತ್ತದೆ. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ ಅಂತ ಅದ್ಯಾರೋ ಆಚಾರ್ಯರನ್ನು ಹೆಸರಿಸುತ್ತೇವೆ. ಕೆಲಬಾರಿ ಡಿ.ವಿ.ಗುಂಡಪ್ಪನವರನ್ನು ಹಾಗನ್ನುತ್ತೇವೆ. ಅಷ್ಟು ಬಿಟ್ಟರೆ ಬೇರೆ ಯಾರನ್ನೂ (at least), ಬದುಕಿರುವಾಗಲೇ ಪಿತಾಮಹ, ಹಾಳು ಮೂಳು ಅನ್ನುವುದಿಲ್ಲ. ಈ ಭಟ್ಟ ಕನ್ನಡ ಪ್ರಭದಿಂದ ಹೊರ ಹಾಕಲ್ಪಟ್ಟಿದ್ದಾನೆ. ‘ವಿಶ್ವವಾಣಿ’ ಅಂತ ದಿನಪತ್ರಿಕೆ ಮಾಡುತ್ತಾನಂತೆ ಎಂಬ ರೂಮರ್ ಇತ್ತು. ಆ ಹೆಸರಿನಲ್ಲಿ ಈಗಾಗಲೇ ಅನೇಕ ದಶಕಗಳಿಂದ ಪಾಟೀಲ ಪುಟ್ಟಪ್ಪನವರು ಪತ್ರಿಕೆ ತರುತ್ತಿದ್ದಾರೆ. ಅದನ್ನು ಖರೀದಿಸಿದರಂತೆ ಎನ್ನುವ ಮಾತೂ ಕೇಳಿ ಬಂತು. ‘ಅದು ಸಾಧ್ಯವಿಲ್ಲ’ ಅಂತ ಪುಟ್ಟಪ್ಪನವರು ಅಂದರಂತೆ. ವಿಶ್ವನಿಗೆ ಈಗ ಅರ್ಜೆಂಟಾಗಿ ‘ಪತ್ರಿಕೆ’ ಆರಂಭಿಸುವ ‘ಖುಜಲಿ’ ಶುರುವಾಗಿದೆ. ವಿಶ್ವನೊಂದಿಗೇ ಹೊರ ಹಾಕಲ್ಪಟ್ಟಿರುವ ಭಡ್ತಿ-ಪಡ್ತಿಗಳ ಮುಖದಲ್ಲಿ ವಿಧವಾ ಛಾಯೆ ಇದೆ. ಅದಕ್ಕಾಗಿ ಈ ತರಹದ ಹಾಡು ಸೃಷ್ಟಿಯಾಗಿರಬಹುದು. ಇದೆಲ್ಲ ಎಂಥ ಹೇಸಿಗೆ? ವಿಶ್ವನಿಗೆ ಈ ಬಗ್ಗೆ ಬೇಸರ, ಅಸಹ್ಯ ಹುಟ್ಟಿಲ್ಲವೆ? ಕಾಣೆ. ಕೆಲವರಿಗೆ ಸ್ವಕುಚ ಮರ್ದನದ ಚಟವಿರುತ್ತದೆ. ಆದರೆ not such a cheap taste.

ಅವನ ಪತ್ರಿಕೆ ಬರೋದೇ ಆದರೆ, ಬರಲಿ. ಅದಕ್ಕೆ ಮುನ್ನುಡಿ ಹಾಕೋದು ಹೀಗಾ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 July, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books