Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಬಂದು ಹೋದ ಮೇಲೆ ಗೊತ್ತಾದರೆ ಏನು ಉಪಯೋಗ?

ನೋಡಿ, ಹೀಗಾಗುತ್ತದೆ.

ಆತ ಬಂದಿದ್ದನಂತೆ. ನಿಮಗೂ ಗೊತ್ತಿರಬಹುದು, ಆತನ ಹೆಸರು ಬ್ರಹ್ಮಾನಂದಮ್! ತೆಲುಗು ಸಿನೆಮಾಗಳ ಪರಿಚಯ ಇದ್ದವರಿಗೆ ಸುಮ್ಮನೆ ಆತನ ಹೆಸರು ಕೇಳಿದರೆ ಸಾಕು: ನಗು ಬರುತ್ತದೆ. ಅಂಥ wonderful comedian ಆತ. ನಾನು ತೆಲುಗು ಸಿನೆಮಾಗಳಿರಲಿ ನಾನೇ ನಟಿಸಿದ ಸಿನೆಮಾಗಳನ್ನೂ ನೋಡಿಲ್ಲ. ಥಿಯೇಟರಿಗೆ ಹೋಗಿ ತಾಸುಗಟ್ಟಲೆ ಕುಳಿತು ಸಿನೆಮಾ ನೋಡುವ ಸಹನೆ ನನ್ನಲ್ಲಿ ಉಳಿದಿಲ್ಲ. ಬೇಕೆನ್ನಿಸಿದರೆ ನನ್ನ ಇಷ್ಟದ ಸಿನೆಮಾಗಳನ್ನು ಇಂಟರ್‌ನೆಟ್ ಬಳಸಿ, online ನೋಡುತ್ತೇನೆ. ಆದರೆ ಬ್ರಹ್ಮಾನಂದಮ್‌ನ ಮುಖ ನೋಡಿದರೆ ಸಾಕು: ಎಕ್ಸೈಟ್ ಆಗುತ್ತೇನೆ. ಆತನದು ಚೆಂದನೆಯ, ಸಹನೀಯ ಹಾಸ್ಯ. ಅದು ಅಪಹಾಸ್ಯವಲ್ಲ. ತುಂಬ ಹಿಂದೆ ನಾನು ಆಸ್ಪತ್ರೆಯಲ್ಲಿದ್ದಾಗ ಆತ ನಟಿಸಿದ ‘ಜಫ್ಫಾ’ ಎಂಬ ಸಿನೆಮಾ ನೋಡಿದ್ದೆ. ಆತನದು ನಿಜಕ್ಕೂ ಹಿಲೇರಿಯಸ್ ಹಾಸ್ಯ. ಆತನನ್ನು ನೋಡಿದ ಮೇಲೆ ಈ ಯಶವಂತ ಸರದೇಶ ಪಾಂಡೆ ತರಹದ ‘ನವಲೀಪಕ್ಕ’ ಬ್ರ್ಯಾಂಡ್‌ನ ಜೋಕರ್‌ಗಳನ್ನು ನೆನೆಸಿಕೊಳ್ಳಲಿಕ್ಕೂ ಅಸಹ್ಯ ಬರುತ್ತದೆ. ತೆಲುಗಿನಲ್ಲಿ ಹಾಸ್ಯ ನಟರದೇ ಒಂದು ಪ್ಲಟೂನ್ ಇದೆ. ಒಬ್ಬಿಬ್ಬರಲ್ಲ ಬಿಡಿ. ಆ ಪೈಕಿ ಅಗ್ರಗಣ್ಯ ಈ ಬ್ರಹ್ಮಾನಂದಮ್.

ತೆಲುಗು ಸಿನೆಮಾಕ್ಕೆ ಬೇಕು ಅಂತ ಒಬ್ಬ ಹೀರೋ ಬಳಿಗೆ ಹೋದರೆ “ಮೊದಲು ಬ್ರಹ್ಮಾನಂದಮ್ ಬಳಿ ಹೋಗಿ dates ತಗೊಳ್ಳಿ, ನಂತರ ನನ್ನಲ್ಲಿಗೆ ಬನ್ನಿ" ಅನ್ನುತ್ತಾನೆ. ಒಂದು ದಿನಕ್ಕೆ ಆತ ಹತ್ತು ಲಕ್ಷ ತಗೋತಾನೆ ಅಂತ ಸಾಕಷ್ಟು ಹಿಂದೆಯೇ ಅನ್ನುತ್ತಿದ್ದರು. ಈಗ ಅದಿನ್ನೆಷ್ಟಾಗಿದೆಯೋ? ಆತ ನಟಿಸುವುದೆಂದರೆ, ಅದು just ಒಂದು ಪ್ರತ್ಯೇಕ ದೃಶ್ಯ. Main ಸಿನೆಮಾಕ್ಕೂ ಆತನಿಗೂ ಅಷ್ಟಾಗಿ ಸಂಬಂಧವಿರುವುದಿಲ್ಲ. ಬೆಳಿಗ್ಗೆ ಬಂದು ತನ್ನದೇ script, ತನ್ನದೇ ಪುಟ್ಟ team ತನ್ನದೇ ಸಂಭಾಷಣೆ ಇತ್ಯಾದಿಗಳನ್ನಿಟ್ಟುಕೊಂಡು ಸರಾಗವಾಗಿ ಹೊರಟು ಬಿಡುತ್ತಾನೆ. ಸಿನೆಮಾದ ಮುಖ್ಯ ಕತೆಗೂ, ತಾನು ನಟಿಸಿದ ಆ ದೃಶ್ಯಕ್ಕೂ ಒಂದು link ಇಟ್ಟಿರುತ್ತಾನೆ. ಅಂಥ ಮೇಧಾವಿ ಆತ.
ಒಮ್ಮೆ ದಿನಪತ್ರಿಕೆ ತೆಗೆದವನಿಗೆ ಒಳಪುಟದಲ್ಲಿ, ವಾಸವಿ ಸಂಘದವರು ಕರೆದಿದ್ದರಿಂದ ಬ್ರಹ್ಮಾನಂದಮ್ ಬೆಂಗಳೂರಿಗೆ ಬಂದಿದ್ದರು ಎಂಬ ಸುದ್ದಿ ಕಣ್ಣಿಗೆ ಬಿದ್ದಿತ್ತು. ಹಾಗೆ ಆಂಧ್ರದಲ್ಲಿ ಬ್ರಹ್ಮಾನಂದಮ್ ಸಭೆಗಳಿಗೆ ಹೋಗೋದು ಕಷ್ಟ. ಆತನ ತಾಯಿ ತೀರಿಕೊಂಡಾಗ ಬ್ರಹ್ಮಾನಂದಮ್‌ಗೆ ಶವ ನೋಡಲಿಕ್ಕೂ ಸಾಧ್ಯವಾಗಲಿಲ್ಲ. ಆ ಪರಿ ಅಭಿಮಾನಿಗಳ ಹಾವಳಿ. ನಾನು ಈ ಬಗ್ಗೆ ಕೇಳಿದ್ದೆ. ಆದರೆ ಬೆಂಗಳೂರಿನಲ್ಲಿ ಅಂಥ ಸಮಸ್ಯೆಯಿಲ್ಲ. ಕಂಡು ಸುಮ್ಮನೆ ನಾಲ್ಕು ಮಾತು ಆಡಬಹುದಿತ್ತು. ಆ ಸಮಾರಂಭ ಮುಗಿದ ಮೇಲೆ ಸುದ್ದಿ ಓದಿದೆ. ಹಿಂದೊಮ್ಮೆ ಹೀಗೇ ಆಗಿತ್ತು: ನನ್ನ ಆರಾಧ್ಯದೈವದಂತಹ ಕವಿ ಗುಲ್ಜಾರ್ ಬೆಂಗಳೂರಿಗೆ ಬಂದಿದ್ದರು. ಬಂದು ಹೋದ ಮೇಲೆ ಚಡಪಡಿಸಿ ಏನುಪಯೋಗ?

ಅಲ್ಲವೆ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 20 July, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books