Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅದು ಕಿರುಚಿತ್ರವೆಂಬ ಮರೀಚಿಕೆಯ ಬೇಟೆ!

ಆತನ ಹೆಸರು ವರುಣ್ ಪೃಥಿ.

ಪೃಥಿ ಅಂದರೇನೋ? ಮಹಾಭಾರತದಲ್ಲಿ ಪೃಥಿಯ ಪಾತ್ರವಿದೆ. ಕುಂತಿಯನ್ನು ಪೃಥೆ ಅನ್ನುತ್ತಾರೆ. ಪೃಥಾ ಅನ್ನುತ್ತಾರೆ. ಅರ್ಥವಿಷ್ಟೆ: ಆಕೆ ದೊಡ್ಡದಾದ ಅಂಡು ಉಳ್ಳವಳು. ನನಗೆ ಅವನ ಹೆಸರಿನಲ್ಲಿ ಏನೂ ಸಮಸ್ಯೆ ಇಲ್ಲ. ವರುಣ್ ಅನ್ನೋದು ತುಂಬ ಸಲ ಕಿವಿಗೆ ಬೀಳುವ ಸಾಮಾನ್ಯ ಹೆಸರು. ಆದರೆ ಪೃಥಿ ಅಂತ ಯಾಕೆ ಸೇರಿಸಲಾಗಿದೆಯೋ? ವಿವರಣೆ ಇಲ್ಲ. ನೋಡಲಿಕ್ಕೆ ಆತ ಅಂಥ ಅಪರ ಸುಂದರನೇನಲ್ಲ. ಇನ್ನೂ ಸ್ಪಷ್ಟವಾಗಿ ಹೇಳೋಣವೆಂದುಕೊಂಡರೆ, ಆತ ಸುಂದರನಲ್ಲವೇ ಅಲ್ಲ. ತೆಳ್ಳಗಿದ್ದಾನೆ, ಎತ್ತರಕ್ಕೆ. ಆತ ಕೆಲವು short films ಮಾಡುತ್ತಿರುತ್ತಾನೆ. ಅವು ಇಂಟರ್‌ನೆಟ್‌ನಲ್ಲಿ ಸಿಗುತ್ತವೆ. ಕೆಲ ವನ್ನು ನೋಡಿದ್ದೇನೆ. “My choice" ಅಂತ ಒಂದು short film ಬಂತಲ್ಲ? ಅದಕ್ಕೆ reaction ಎಂಬಂತೆ ವರುಣ್ ಒಂದು short film ಮಾಡಿದ. ಅದು ಚೆನ್ನಾಗಿತ್ತು. ಅದರಲ್ಲೊಂದು sense ಇತ್ತು. ಆನಂತರ ಆತ ರೇಪ್ ಬಗ್ಗೆ ಒಂದು short movie ಮಾಡಿದ. ಅದೂ ಚೆನ್ನಾಗಿತ್ತು. ಆದರೆ ನಾನು ಎರಡೆರಡು ಸಲ ನೋಡುವಂತೆ ಮಾಡಿದ್ದು ಅದೇ ವರುಣ್‌ನ ತಲಬ್ ಗಾರ್ ಎಂಬ ಸಿನೆಮಾ. ಇನ್ನೊಮ್ಮೆ ನೋಡೋಣ ಅಂದುಕೊಂಡು ತಡಕಾಡಿದರೆ, ಅಷ್ಟರಲ್ಲೇ ಅದನ್ನಾತ ತೆಗೆದು ಹಾಕಿದ್ದಾನೆ.

ಇನ್ನೊಂದು ಮಾತು: ತೆಲುಗಿನಲ್ಲಿ ಶಬರೀಷ್ ಕಂದಿರೀಗುಲ ಎಂಬ ಹುಡುಗ ಕೆಲವು short films ಮಾಡಿದ್ದಾನೆ. ಅದರಲ್ಲಿ ಮೊಟ್ಟಮೊದಲನೆಯದಂತೂ superb. ಕೆಲವು ಕೋರ್ಸ್‌ಗಳಿಗೆ ಕೇವಲ ಪರೀಕ್ಷೆ ಬರೆಯುವುದಲ್ಲದೆ, ಒಂದು ಮೌಖಿಕ ಪರೀಕ್ಷೆಯೂ ಇರುತ್ತದೆ. ಅದಕ್ಕೆ ‘ವೈವಾ’ ಅನ್ನುತ್ತಾರೆ. ಏನೇನೂ ಬುದ್ಧಿ ಇಲ್ಲದ ಒಂದಷ್ಟು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕರೆದು ಕರೆದು ‘ವೈವಾ’ಗೆ ಒಳಪಡಿಸುವ subject ಅದು. ಸುಮ್ಮನೆ ನೋಡಿ: ಬಿದ್ದೂ ಬಿದ್ದೂ ನಗುತ್ತೀರಿ.

ಗಮನಿಸಿದರೆ, ಈ ತೆರನಾದ ಪ್ರಯೋಗಗಳನ್ನು ಮಾಡುವವರು ಚಲನಚಿತ್ರ ರಂಗದ ಹೇಮಾ ಹೇಮಿಗಳಲ್ಲ. ಕೆಲವರು ಆ ರಂಗದೊಂದಿಗೆ ಸಂಪರ್ಕ ಇಟ್ಟುಕೊಂಡವರೂ ಅಲ್ಲ. ಅವರಿಗೆ regular ಆದ ಒಂದು ಸಿನೆಮಾ ಮಾಡುವ ಆರ್ಥಿಕ ಚೈತನ್ಯವಿಲ್ಲ. ಗೆಳೆಯರಷ್ಟೆ ಸೇರಿಕೊಂಡು ಈ ತೆರನಾದ short films ಮಾಡುತ್ತಾರೆ. ಈಗ ಕೋಟ್ಯಂತರ ರುಪಾಯಿ ಸುರಿಯದೆ ಒಂದು ಸಿನೆಮಾ ಆಗುವುದಿಲ್ಲ. ಅದು ಬಿಡಿ: ನೂರು ಕೋಟಿ, ಇನ್ನೂರು ಕೋಟಿ ಸುರಿಯುವ ಜನ ಈಗ ಇದ್ದಾರೆ. ಅಷ್ಟೆಲ್ಲ ಹಣ ಎಲ್ಲಿಂದ ತರುತ್ತಾರೋ? ಅದು ಕುಬೇರನೇ ಬಲ್ಲ. ಹಿಂದಿಯಲ್ಲಿ ಅವರ ಸಂಖ್ಯೆ ಜಾಸ್ತಿ ಇದೆ. ಅವರು ನೂರಾರು ಕೋಟಿ ಹಾಕಿ ಸಿನೆಮಾ ಮಾಡಿ, ಅದರಿಂದ ಪೈಸೆಗೆ ಪೈಸೆ ಲಾಭ ತೆಗೆಯುತ್ತಾರೆ. ಮೊನ್ನೆ ಸಲ್ಮಾನ್ ಖಾನ್‌ನ ಹಾಕಿಕೊಂಡು ಅಂಥದೊಂದು ಸಿನೆಮಾ ಮಾಡಿದರು. ಅದು super hit.

ಅಂತಹುದೊಂದು ಸಿನೆಮಾ ಮಾಡಬಹುದು ಎಂಬ ಯೋಚನೆ ಕೂಡ ಮಾಡಲಾಗದವರು ಈ ವರುಣ್ ಪೃಥಿ ಹಾಗೂ ಶಬರೀಷ್ ಕಂದಿರೀಗುಲ ಮುಂತಾದವರು. ಈ ಸಿನೆಮಾಗಳನ್ನು ಸರ್ಕಾರ support ಮಾಡುವುದಿಲ್ಲ. ಇವಕ್ಕೆ ಸಬ್ಸಿಡಿಗಳಿಲ್ಲ. ಯಾರೂ ಅವಾರ್ಡ್ ಕೊಡುವುದಿಲ್ಲ. ಇವುಗಳಲ್ಲಿ ಘಟಾನುಘಟಿ ನಟ-ನಟಿಯರು ಪಾತ್ರ ಮಾಡುವುದಿಲ್ಲ. ಇವುಗಳನ್ನು ಥಿಯೇಟರುಗಳಲ್ಲಿ ಬಿಡುಗಡೆ ಮಾಡೋ ಸಾಧ್ಯತೆಯೂ ಇಲ್ಲ. ಅಸಲಿಗೆ ಇವನ್ನು ನೋಡೋದಾದರೂ ಹೇಗೆ? ಮತ್ತು ನೋಡೋದಾದರೂ ಎಲ್ಲಿ?

“ಇಲ್ಲೇ ಇದೆ ಸಾರ್, ತೋರಿಸಿ ಬಿಡ್ತೀನಿ" ಅಂದ ಹುಡುಗ ತನ್ನ ಕಿಸೆಯಿಂದ ಹೊರಕ್ಕೆ ತೆಗೆದದ್ದು ಒಂದು ಪುಟ್ಟ pen drive. ಅದನ್ನೇ lap topಗೆ ಹಾಕಿ ಅವನು ತೋರಿಸಿಯೂ ಬಿಟ್ಟ! ಒಂದು ಆಶಾಭಾವನೆ ಅವನಲ್ಲಿರಬಹುದು. “ನನ್ನ ಈ short ಪ್ರಯೋಗವನ್ನು ಯಾರೋ ಸಂಜಯ ಲೀಲಾ ಬನ್ಸಾಲಿ ತರಹದವರು ನೋಡಿದರೆ, ಅವರು ಇಷ್ಟಪಟ್ಟರೆ, ತನ್ನ ನಸೀಬು ಕಣ್ತೆರೆದು ಫೀಚರ್ ಫಿಲ್ಮ್ ಮಾಡುವಂತಹ ಅವಕಾಶವನ್ನು ಅವರು ನೀಡಬಹುದು ಎಂಬ ಆಸೆ. ಸಮಸ್ಯೆ ಎಂದರೆ ಮೂರು-ನಾಲ್ಕು ನಿಮಿಷಗಳ short filmಗಳ ಕುರಿತು ಯಾವ ಪತ್ರಿಕೆಯವರೂ ವಿಮರ್ಶೆ ಪ್ರಕಟಿಸುವುದಿಲ್ಲ. ವಾಹಿನಿಗಳವರು ಇವುಗಳನ್ನು ಎಡಗೈಯಿಂದ ಮುಟ್ಟಿ ನೋಡುವುದಿಲ್ಲ. ಅವರು ಇಂತಹ ಸಿನೆಮಾಗಳ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸುವುದು ದೂರದ ಮಾತು.

ಇದೆಲ್ಲ ಗೊತ್ತಿದ್ದೂ, ಯಾವ ಮರೀಚಿಕೆಯ ಬೆನ್ನು ಹತ್ತಿ ಈ ಯುವಕರು ಸವಾರಿ ಹೋಗುತ್ತಾರೆ? ನನಗೆ ಗೊತ್ತಿಲ್ಲ. ಅಂತೂ ಕೆಲವರಲ್ಲಿ ಈ ತೆರನಾದ ಹುಚ್ಚುಗಳು ಇದ್ದೇ ಇರುತ್ತವಲ್ಲವೆ? ನನಗದು ಸೋಜಿಗ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 July, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books