Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅವರು ಬರೆದ ಆ ಕೃತಿಯ ಹೆಸರು ತಂತ್ರಯೋನಿ!

ಆತ ಪಾರಂಗತ.

ಆತನನ್ನು ನೀವು ಒಪ್ತೀರೋ ಬಿಡ್ತೀರೋ-ಅದು ನನಗೆ ಸಂಬಂಧವಿಲ್ಲದ ಮಾತು. ಆದರೆ ಎಂದಿಗೂ ನೀವು ಆತನನ್ನು ignore ಮಾಡಲಾರಿರಿ. ಆತನ ಬಗ್ಗೆ ನಾನು ತುಂಬ ತಲೆ ಕೆಡಿಸಿಕೊಂಡಿದ್ದೆ. ಅನತಿ ದೂರದಲ್ಲಿ ನಿಂತು ಆತನನ್ನು ಒಂದೆರಡು ನಿಮಿಷಗಳ ಮಟ್ಟಿಗೆ ನೋಡಿ ಬಿಟ್ಟರೆ ಸಾಕು.
ನಾನು ಧನ್ಯ. ಹಾಗಂತ ಅಂದುಕೊಂಡು ಬಳ್ಳಾರಿಯಿಂದ ಪುಣೆಗೆ ಹೋಗಿದ್ದವನು ನಾನು.

“ರವೀ, ಆತ ಬೇರೆ ಬೇರೆ ಸಂಗತಿಗಳ ಬಗ್ಗೆ ತುಂಬ ಬರೆದಿದ್ದಾನೆ. ಆದರೆ ನಮಗೆ ಬೇಕಿರುವುದು ತುಂಬ ಮುಖ್ಯವಾದ ಒಂದು ಪುಸ್ತಕ. It is about ತಂತ್ರ. ನೀನು ಇನ್ನೂ ಓದಿಲ್ಲವಾದರೆ ತಕ್ಷಣ ಓದು. ಆತನನ್ನು ಬಿಟ್ಟರೆ ‘ತಂತ್ರ’ದ ಬಗ್ಗೆ ಇನ್ನೊಬ್ಬನೇ ಒಬ್ಬ ಕೂಡ ಹಾಗೆ ಬರೆದಿಲ್ಲ. He is a master..." ಅಂದವರು ಸತ್ಯಕಾಮ. ಅವರು ಮಾತನಾಡುತ್ತಿದ್ದುದು ‘ತಂತ್ರ’ದ ಬಗ್ಗೆ.

My God! ರಜನೀಶ್ ಅವರ ಬೇರೆ ಬೇರೆ ಪುಸ್ತಕಗಳು ನನ್ನಲ್ಲಿದ್ದವು. ಕೆಲವು ಈಗಲೂ ಇವೆ. ಅದಲ್ಲದೆ ನನ್ನ ಬಳಿ ಅವರ ಸಿ.ಡಿಗಳಿವೆ. ಸುಮಾರು ಐದು ಸಾವಿರ ತಾಸು ರಜನೀಶ್ ಮಾತನಾಡಿದ್ದಾರೆ. ಅದ್ಭುತವಾದ ಸಿ.ಡಿಗಳವು. ರಜನೀಶ್‌ಗೆ ಕಡಿಮೆ ವಯಸ್ಸೇನೂ ಆಗಿರಲಿಲ್ಲ. ಆದರೆ ಅವರು ಒಂದಾದ ಮೇಲೊಂದರಂತೆ ಪುಸ್ತಕಗಳನ್ನು ಬರೆದರು. ಅವರ ಕೆಪ್ಯಾಸಿಟಿ ಬಗ್ಗೆ ಈ ಕ್ಷಣಕ್ಕೂ ನನಗೆ ಅಚ್ಚರಿಯಿದೆ. ಅವರ ಮಾತು ಹಾಗಿರಲಿ. ಅವರ ಓದು? ಒಂದು ದಿನಕ್ಕೆ ಅವರು ಎರಡು ಸಾವಿರ ಪುಟ ಓದುತ್ತಿದ್ದರು. Great he was. ಹಾಗಂತ ಅವರು ಏನೋ ಗೊಡ್ಡು ಪುರಾಣ ಓದಲಿಲ್ಲ. ಗೊಡ್ಡು ಮಾತು ಆಡಲಿಲ್ಲ. ಅವರು ಲಹರಿಯಲ್ಲಿದ್ದಾಗ ಶಿಷ್ಯರೊಂದಿಗೆ ತುಂಬ ತಮಾಷೆಯ ಮಾತುಗಳನ್ನು ಆಡುತ್ತಿದ್ದರು. ಕೊಂಚ cheap ಅನ್ನಿಸುವಂತಹ ಮಾತಾಡುತ್ತಿದ್ದರು.But he was never cheap. ಅವರು ಕೇವಲ Fuck ಎಂಬ ನಾಲ್ಕು ಅಕ್ಷರದ ಪದವನ್ನಿಟ್ಟುಕೊಂಡು ಒಂದಷ್ಟು ನಿಮಿಷ ಮಾತಾಡಿದ್ದಾರೆ. ಕೇಳಿದ್ದೀರಾ? ಕೆಲಕಾಲ ಆ ಮಾತು ಮೊಬೈಲ್‌ನಿಂದ ಮೊಬೈಲ್‌ಗೆ forward ಆಗುತ್ತಿದ್ದವು. ಆ ಇಳಿವಯಸ್ಸಿನಲ್ಲಿ ರಜನೀಶ್ ಹೇಗೆ ಅಷ್ಟೆಲ್ಲ ಪುಸ್ತಕ ಬರೆದರು ಅಂತ ಅಚ್ಚರಿಯಲ್ಲಿದ್ದೆ. He dictated. ಚುರುಕಾದ ಗ್ರಾಹ್ಯವುಳ್ಳ ಒಬ್ಬ ಶಿಷ್ಯನನ್ನಿಟ್ಟುಕೊಂಡು ಆತನಿಗೆ dictate ಮಾಡುತ್ತಿದ್ದರು. ಅಥವಾ dictaphoneಗೆ dictate ಮಾಡುತ್ತಿದ್ದರು. ನನಗೆ ಈವತ್ತಿಗೂ ಎರಡೇ ಎರಡು ಸಾಲು dictate ಮಾಡಲಾಗುವುದಿಲ್ಲ. Not a good dictator!

ಸತ್ಯಕಾಮರ ಯಾವ ಮಾತನ್ನೂ ನಾನು neglect ಮಾಡಿದವನಲ್ಲ. ತಂತ್ರ ಶಾಸ್ತ್ರದ ಬಗ್ಗೆ ರಜನೀಶ್ ಬರೆದ ಪುಸ್ತಕ ತಂದಿಟ್ಟುಕೊಂಡು ಓದಿದೆ. ಸತ್ಯಕಾಮರು ಅಂದದ್ದು ನಿಜ. ಅದು ಅಮೂಲ್ಯ ಪುಸ್ತಕ. ‘ತಂತ್ರ’ ಎಂಬ ಶಬ್ದ ಕೇಳಿದರೆ ಸಾಕು: ತೋಚಿದ್ದನ್ನೆಲ್ಲ ನಮ್ಮ ಜನ ಮಾತಾಡುತ್ತಾರೆ. ಮಾಟ, ವಶೀಕರಣ, ಬಂಗಾರ, enormous ಆದ ರೀತಿಯಲ್ಲಿ ದುಡ್ಡು ಮಾಡೋದು, ವೈರಿಯ ಬರೀ ಕಾಲಿಗೆ ಮೆತ್ತಿದ್ದ ಮಣ್ಣು ಇಟ್ಟುಕೊಂಡು ಅವನನ್ನು ಕುಳಿತ ಜಾಗದಲ್ಲೇ ಕೊಂದು ಬಿಡುವಂತೆ ಮಾಡೋದು- ಇಂಥವೇ ‘ತಂತ್ರ’ದಲ್ಲಿ ಇವೆ ಅಂದು ಕೊಳ್ಳುತ್ತಾರೆ. “ಅದು ಶುದ್ಧ nonsen-se. ತಂತ್ರ ಅಂದರೆ ತುಂಬ ಸರಳವಾದ, ದಿನನಿತ್ಯ ನಾವು ಬಳಸುವ, ನೋಡುವ, ಕಲ್ಪಿಸಿಕೊಳ್ಳುವ ಇಂಜಿನೀರಿಂಗ್!" ಅಂದ ವರು ಸತ್ಯಕಾಮ. ‘ತಂತ್ರ’ ಅಂದರೆ ಇಂಜಿನೀರಿಂಗ್! ಅಷ್ಟೆ. ಹಾಗಂತ ಅವರು ಹೇಳಿದ ಮೇಲೆ ತಂತ್ರಜ್ಞ, ತಾಂತ್ರಿಕ ಎಂಬುದೆಲ್ಲ ಬೇರೆಯದೇ ಆದ ರೀತಿಯಲ್ಲಿ ಅರ್ಥವಾಗತೊಡಗಿತು ನನಗೆ. ಆತ ಬದುಕಿರಬೇಕಿತ್ತು. ಅದಕ್ಕಿಂತ ನಮ್ಮ ಸತ್ಯಕಾಮರು ಬದುಕಿರಬೇಕಾಗಿತ್ತು. ಈಗ ನನ್ನ ಗುರು ಭಗಿನಿ ವೀಣಾ ಇದ್ದಾಳೆ. ವೀಣಾ ಬನ್ನಂಜೆ. ಕೊಂಚವೂ ಬಿಂಕ ವಿಲ್ಲದೆ ‘ಅಣ್ಣಾ’ ಅನುತ್ತ ಬರುವ, ನಿರುಂಬಳವಾಗಿ ಮಾತನಾಡುವ ಹೆಣ್ಣು ಮಗಳು. ಈಗಂತೂ ಆಕೆ ಬೆಂಗಳೂರಿನಲ್ಲೇ ನೆಲೆಗೊಂಡಿದ್ದಾಳೆ. I respect her. ತುಂಬ ಸುದೀರ್ಘವಾಗಿ ಆಕೆಯೊಂದಿಗೆ ಮಾತ ನಾಡುವುದಿದೆ. ಇನ್ನೊಮ್ಮೆ ಸತ್ಯಕಾಮರನ್ನ, ಇನ್ನೊಮ್ಮೆ ರಜನೀಶ್‌ರನ್ನ ಓದುವುದಕ್ಕಿದೆ. ರಜನೀಶ್ ತೀರಿ ಕೊಂಡಾಗ ನನ್ನ ಪರಮ ಗುರು ಖುಷ್ವಂತ್ ಸಿಂಗ್ ಆಡಿದ ಮಾತು ಇವತ್ತಿಗೂ ನೆನಪಿದೆ. “He was one of the very few original thinkers of India" ಅಂದಿದ್ದರು. He was correct. ಇತ್ತೀಚೆಗೆ ಯಾಕೋ ತುಂಬ ಗಾಢ ವಾಗಿ ‘ತಂತ್ರ’ದ ಕುರಿತು ಯೋಚಿಸುತ್ತಿದ್ದೇನೆ. ಮಾತ ನಾಡುತ್ತಿದ್ದೇನೆ. ಅದನ್ನು ಅಭ್ಯಸಿಸುತ್ತಿದ್ದೇನೆ.

ಇದೆಲ್ಲದರ ನಡುವೆಯೇ ಅಲ್ಲಿ ಮಗನ ಮದುವೆ ಸಾಗಿದೆ. “ನೀನು ಬರಲೇ ಬೇಕು" ಅಂತ ಲಲಿತೆ ಅಪ್ಪಣೆ ಮಾಡುತ್ತಾಳೆ. ಹಾಗಾಗಿ ‘ಮೆಹಂದಿ ರಸಮ್’ಗೆ ಹೋದೆ. ಸಂಜೆ, ವರಪೂಜೆಯಿದೆ. ನಾಳೆ ಬೆಳಗಾದರೆ ಸಾಕು: ಮದುವೆಯ ಮುಹೂರ್ತ. ಯಾವುದನ್ನೂ ತಪ್ಪಿಸಿಕೊಳ್ಳುವಂತಿಲ್ಲ. ತುಂಬ involve ಆಗಲು ನನ್ನಿಂದ ಆಗದಿದ್ದರೂ, ಅವುಗಳ ನಡುವಿನ ತಿರುಳಿನ ಬಗ್ಗೆ ‘ಮಜಾ’ ತೆಗೆದುಕೊಳ್ಳುತ್ತಿದ್ದೇನೆ. ಸಾಕಲ್ಲ? ಅಂದ ಹಾಗೆ, ಸತ್ಯಕಾಮರ ಒಂದು ಕೃತಿಯ ಹೆಸರು ‘ತಂತ್ರಯೋನಿ!’ ಸಿಕ್ಕರೆ ಓದಿ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 15 June, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books