Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಇದೊಂದು ಸಂಗತಿ ಮಾತ್ರ ಲೆಕ್ಕಾಚಾರವೇ ಇಲ್ಲದಂತಹುದು!

ಸಾವಿಗೆ logic ಇರುವುದಿಲ್ಲ. ಕೆಲವರು ಅಷ್ಟು ಒಳ್ಳೆಯವರಿರುತ್ತಾರೆ. ಯಾಕೆ ಇದ್ದಕ್ಕಿದ್ದ ಹಾಗೆ ಸಾಯುತ್ತಾರೆ? ನನ್ನ ಸ್ನೇಹಿತ, ಪರ್ತಕರ್ತ ಪ್ರಕಾಶ್‌ನ ಆ ಮೂರು ವರ್ಷದ ಕಂದ ಯಾಕೆ ತೀರಿಕೊಂಡಿತು? ಹಾಗೆ ತುಂಬ ಉದಾಹರಣೆಗಳನ್ನು ಕೊಡಬಲ್ಲೆ. ಕೆಲವರು ಖಾಯಿಲೆ ಕಸಾಲೆ ತಂದುಕೊಂಡು ಸಾಯುತ್ತಾರೆ. ಅವರನ್ನು ಬಿಟ್ಟುಬಿಡಿ. ಯಾಕೋ ಕಾಣೆ, ಈ ಇತ್ತೀಚೆಗೆ ನನ್ನ ಅನೇಕ ಸ್ನೇಹಿತರು, ಪರಿಚಿತರು ಸತ್ತು ಹೋದರು. ಆ ಪೈಕಿ ಕೆಲವರು ತುಂಬ ಚಿಕ್ಕವರು. ಇಂತಿಷ್ಟನೇ ವಯಸ್ಸಿಗೆ ಸಾಯಬೇಕು ಅಂತ ಕರಾರು ಎಲ್ಲಿದೆ? “ನಿಮಗೆ ಹೇಗೆ ಸಾಯಬೇಕು ಅಂತ ಅನ್ನಿಸುತ್ತೆ?" ಎಂದು ಯಾರನ್ನೂ, ಯಾರೂ ಕೇಳಬಾರದು. ನಮಗೇ ಒಳಗೊಳಗೇ ಹಾಗೆಲ್ಲ ಅನ್ನಿಸಬಹುದು". ಹಠಾತ್ತನೆ ಸಾಯಬೇಕು, ಸಾಯ್ತಿದೀನಿ ಅಂತ ಗೊತ್ತೇ ಆಗಬಾರದು, ನಿದ್ದೇಲಿ ಸಾಯಬೇಕು, ಸರಿಯಾಗಿ ನೂರು ವರ್ಷ ತುಂಬಿದ ದಿನ ಸಿಗಲಿ Gate pass" ಎಂದು ತಲೆಗೊಬ್ಬರಂತೆ ಮಾತಾಡುತ್ತೇವೆ. ಇಚ್ಛೆ ಪೂರೈಸಲಿಕ್ಕೆ ನಮಗೆ ಅದ್ಯಾವ ದೇವರಿದ್ದಾರೆ, ನೆಂಟನಂಥವರು?

ಮೊನ್ನೆ ನಮ್ಮ ಲೋಕಿ ಅಪ್‌ಸೆಟ್ ಆಗಿದ್ದ. ರಾತ್ರಿ ಮಲಗಿದ್ದ ಅವರ ಹೆಣ್ಣು ಕೊಟ್ಟ ಮಾವ ತೀರ ಅನಿರೀಕ್ಷಿತವಾಗಿ ಸತ್ತು ಹೋದ ಸುದ್ದಿ ಬಂದಿತ್ತು. “ಬಾಸ್, ಅವರಿಗೆ ಡಯಾಬಿಟಿಸ್ ಬಿಟ್ಟು ಬೇರೆ ಏನೂ ಖಾಯಿಲೆಯಿರಲಿಲ್ಲ" ಅಂದ ಲೋಕಿ. ಅದಾದ ಕೆಲವೇ ದಿನಕ್ಕೆ ಅವನ ಖಾಸಾ ತಂಗಿಯ ಮಗು ತೀರಿಕೊಂಡಿತು. ಅದಕ್ಕೆ ಜನ್ಮತಃ ಏನೋ ಖಾಯಿಲೆ. “ನೀವು ಅದೆಲ್ಲಿಗೆ ಹೋದರೂ ಕೊಡೋದು ಇಷ್ಟೇ ಟ್ರೀಟ್‌ಮೆಂಟು. ಬದುಕಿದಷ್ಟು ದಿನ ಬದುಕಿರುತ್ತೆ" ಅಂದಿದ್ದರು ಡಾಕ್ಟರು. ಹುಟ್ಟಾ ಖಾಯಿಲೆ ಇತ್ತು ನಿಜ, ಆದರೆ ಹೊಟ್ಟೆಯಲ್ಲಿ ಹುಟ್ಟಿದ ಮಗು ಕಣ್ಮುಚ್ಚಿದರೆ ನೋವು ಆಗೇ ಆಗುತ್ತದಲ್ಲವಾ? At least ತಾಯಿಗೆ? ಆಕೆಯೊಬ್ಬಾಕೆಯೇ ಏಕೆ, ಮಗುವಿನ ಸೋದರಮಾವ ಲೋಕಿ ಕೂಡ ಮಂಕಾಗಿಬಿಟ್ಟಿದ್ದ.

ಕ್ಷಮಿಸಿ, ಮಾತಿನ ಓಘದಲ್ಲಿ ಅಂದಂತೆಯೇ ಈ ಹಿಂದಿನ ಪ್ಯಾರಾಗಳಲ್ಲಿ ‘ಲೋಕಿ’ ಅಂತ ಬರೆದೆ. ಅದು ನನ್ನ ಹಿರಿಯ ವರದಿಗಾರ ಲೋಕೇಶ್ ಕೊಪ್ಪದ್. ಅವನ ಬಂಧು ವರ್ಗದಲ್ಲಿ ಹೀಗೆ ಎರಡು ಸಾವುಗಳಾದವು. ಅಷ್ಟಾದರೂ ಅವನು ಕೆಲಸ ತಪ್ಪಿಸಲಿಲ್ಲ. ಅದು ಮೆಚ್ಚುವ ಸಂಗತಿ. ಆದರೆ ಮೊನ್ನೆ ಮಾತಿಗೆ ಸಿಕ್ಕವನು, “ಯಾಕೋ ನನ್ನ ಟೈಮೇ ಸರಿಯಿಲ್ಲ ಬಾಸ್..." ಅಂದ. ನೋಡಿದರೆ ಲೋಕಿಯ ಅದೇ ತಂಗಿಯ ಗಂಡ, ಅಂದರೆ ಮಗುವನ್ನು ಕಳೆದುಕೊಂಡ ತಂಗಿಯ ಗಂಡ, ಗೆಳೆಯರು ಬಂದರು ಊರಿಗೆ ಅಂತ ಸಂಭ್ರಮಗೊಂಡು ಮಧ್ಯಾಹ್ನವೇ ಹೊನ್ನಾಳಿ ಸಮೀಪದ ಹೊಳೆದಂಡೆಗೆ ಹೋಗಿದ್ದಾನೆ. ನಮ್ಮ ಸೀಮೆಗಳಲ್ಲಿ ಹೀಗೆ ಹೊಳೆದಂಡೆಯ ಮೋಜುಗಳು ಇದ್ದೇ ಇರುತ್ತವೆ. ಹಾಗೆ ಹೋದವನು ಹೊಳೆಗೆ ಇಳಿದಿದ್ದಾನೆ. ಒಂದು ಕ್ಷಣದಲ್ಲಿ ಏನಾಯಿತೋ ಗೊತ್ತಿಲ್ಲ: ಆತ ಸೆಳವಿಗೆ ಸಿಕ್ಕು ಕೊಚ್ಚಿ ಹೋಗಿದ್ದಾನೆ. ತಕ್ಷಣ ಲೋಕಿ ಅಲ್ಲಿಗೆ ಓಡಿದ. ಕೆಲವೇ ದಿನಗಳ ಹಿಂದೆ ಮಗುವನ್ನು ಕಳೆದು ಕೊಂಡ ತಂಗಿ, ಈಗ ಗಂಡನನ್ನು ಕಳೆದುಕೊಂಡರೆ ಆಕೆಯ ಪರಿಸ್ಥಿತಿ ಏನಾಗಿರಬೇಕು? ರಾತ್ರಿ ಹತ್ತರ ಸುಮಾರಿಗೆ ಫೋನು ಮಾಡಿದ ಲೋಕಿ, “ನನ್ನ ತಂಗೀಗೆ ಕೊಡ್ತೀನಿ. ಸ್ವಲ್ಪ ಸಮಾಧಾನ ಹೇಳಿ ಸರ್" ಅಂದ. ನನ್ನ ಹುಡುಗರು ಹೀಗೆ ಮಾಡುತ್ತಿರುತ್ತಾರೆ. ಅವರ ಪಾಲಿಗೆ ನಾನು ಹಿರಿಯಣ್ಣ, ಬಾಸ್, ಸ್ನೇಹಿತ- ಎಲ್ಲವೂ ಆಗಿರುತ್ತೇನೆ. “ಫೋನ್ ಕೊಡು" ಅಂದೆ. ಆಗ ಕೇಳಿದ್ದು ಮಾತ್ರ ಕರುಳು ಕಿತ್ತು ಬರುವಂಥ ಆರ್ತನಾದ. ‘ಅಣ್ಣಾ’ ಅಂದಾಕೆ ತೀರ ವಿದ್ರಾವಕವಾಗಿ ಅತ್ತಳು. “ಮೊನ್ನೆ ಮೊನ್ನೆ ಮಗನ್ನ ಕಳಕೊಂಡೆ... ಇವಾಗ ಈತನೇ ಹೋಗಿಬಿಟ್ಟ ಅಣ್ಣಾ... ಇನ್ನೂ ನಮಗೆ body ಸಿಕ್ಕಿಲ್ಲಾ..." ಅಂದಳು. ಫಕ್ಕನೆ ನನ್ನ ಕಣ್ಣಲ್ಲಿ ನೀರಾಡಿದವು. ಆಕೆ ಚಿಕ್ಕವಯಸ್ಸಿನ ಹೆಣ್ಣು ಮಗಳು. ದುರಂತಗಳು ಈ ಪರಿ ಸರದಿ ಹಚ್ಚಿ ನಡೆದು ಹೋದರೆ ಗತಿಯೇನು? ನಾನಾದರೂ ಏನಂತ ಸಮಾಧಾನ ಹೇಳಲಿ? ಕಲ್ಲಿನಂತೆ ಕುಳಿತುಬಿಟ್ಟೆ. ಇವತ್ತು ಲೋಕಿ ಬಂದ. ಬಾರದೆ ಇದ್ದಿದ್ದರೆ ನಾನೇ ಕೆಲಸ ನಿಭಾಯಿಸುತ್ತಿದ್ದೆ: ಆ ಮಾತು ಬೇರೆ. ಅವನಿಗೆ ಸಮಾಧಾನ ಹೇಳೋಣವೆಂದರೆ ಏನಂತ ಹೇಳಲಿ? ಅದರ ನಡುವೆಯೂ ಬಂದು ಕೆಲಸ ಮಾಡುತ್ತಿದ್ದಾನಲ್ಲ?

ಇವತ್ತು ಇನ್ನೊಂದು ಸುದ್ದಿ ಬಂತು. ನಿಮಗೆ ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್ ನೆನಪಿರಬಹುದು. ಅವನು ಹೆಚ್ಚಾಗಿ ಟ್ಯಾಕ್ಸಿ ಡ್ರೈವರುಗಳನ್ನೇ ಮರಾ ಮೋಸದಲ್ಲಿ ಕೊಲ್ಲುತ್ತಿದ್ದ. ಸಿಕ್ಕುಬಿದ್ದು ಶಿಕ್ಷೆ ಅನುಭವಿಸಿ, ಅದು ಮುಗಿದ ನಂತರ ವಕೀಲಿಕೆ ಆರಂಭಿಸಿದ್ದ. ತಕ್ಕಮಟ್ಟಿಗೆ ಚೆನ್ನಾಗಿಯೂ ಇದ್ದ. ನಮ್ಮ ಹುಡುಗರು “ಸರ್, ಡ್ರೈವರುಗಳನ್ನ ಕೊಂದ ಸೀರಿಯಲ್ ಕಿಲ್ಲರ್ ಈಗ ಸ್ವಂತ ಕಾರಿಟ್ಟುಕೊಂಡಿದ್ದಾನೆ" ಅಂದರು. ನನ್ನ ಸ್ಮೃತಿಯಲ್ಲಿ ಅವನು ಅದೆಂದೋ ಮರೆಯಾಗಿದ್ದ. ಮಧ್ಯಾಹ್ನ ಬಂದ ಸುದ್ದಿ ಗೊತ್ತೆ? ಯಾವುದೋ ಕೇಸಿಗೆ ಅಂತ ಶ್ರೀರಂಗಪಟ್ಟಣಕ್ಕೆ ತನ್ನದೇ ಕಾರಲ್ಲಿ ಬಂದವನು ದಾರಿಯಲ್ಲಿ ಅಪಘಾತವಾಗಿ ಸತ್ತೇ ಹೋದನಂತೆ. ಸರಿ, ಅವನಿಗಾಗಿ ಕಣ್ಣೀರಿಡುವವರಾದರೂ ಯಾರಿದ್ದಾರೆ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 June, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books