Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಮನಸ್ಸು ರಿಪೇರಿಗೆ ಬಂದಾಗ ಅದನ್ನು ನಾವೇ ಸರಿಮಾಡಿಕೊಳ್ಳಬೇಕು!

ಒಲವೆಂಬ ಹೊತ್ತಿಗೆಯನ್ನು
ಓದುತ್ತ ನೀನು ಅದರ ಬೆಲೆ
ಎಷ್ಟೆಂದು ಕೇಳುತಿಹೆಯಾ? ಹುಚ್ಚ!
ಹಗಲಿರುಳು ದುಡಿದರೂ
ಹಲು ಜನುಮ ಕಳೆದರೂ
ತೆತ್ತಲಾರೆ ಬರೀ ಅಂಚೆ ವೆಚ್ಚ!

ಹಾಗಂತ ಬರೆದ ವರಕವಿ ಬೇಂದ್ರೆಯವರಿಗೆ ಆಗ ವಯಸ್ಸು ಎಷ್ಟಾಗಿತ್ತು? ನಾನು ಲೆಕ್ಕ ಹಾಕಿಲ್ಲ. ಬೇಂದ್ರೆಯವರಲ್ಲಿ ಅಗಾಧ ಪ್ರೇಮವೊಂದು ಜೀವನದುದ್ದಕ್ಕೂ ಇದ್ದೇ ಇತ್ತು. ತುಂಬ ಇತ್ತೀಚೆಗೆ ಹುಡುಗಿಯೊಬ್ಬಳು ಕೇಳಿದಳು, “ಸರ್, ನಿಮ್ಮ ವಯಸ್ಸಿನವರನ್ನು ನಾನು ನೋಡಿದ್ದೇನೆ. ಅವರಿಗಾಗಲೇ ಕಣ್ಣು ಮಂಜಾಗಿರುತ್ತವೆ. ಹಲ್ಲು ಸಡಿಲ. ಅವರ ಪ್ರಪಂಚವೇ ಬೇರೆ. ಅರವತ್ತಕ್ಕೆ ಮುಂಚೆ, ಅಂದ್ರೆ ಐವತ್ತೆಂಟಕ್ಕೇ ವಿ.ಆರ್.ಎಸ್. ತಗೊಳ್ಳೋಣಾ ಅಂತ ಯೋಚಿಸುತ್ತಿರುತ್ತಾರೆ. ಅವರಲ್ಲಿ warmth ಉಳಿದಿರೋದೇ ಇಲ್ಲ. But ನೀವು: ನೀವು always an young man. “ಇದು ಹೇಗೆ ಸಾಧ್ಯ?" ಅಂತ ಕೇಳಿದಳು.

ಅದೆಲ್ಲವೂ ನಿಜ. ಕೆಲವು ನಮ್ಮ genesನಲ್ಲಿ ರುತ್ತವೆ. ನಾನು ಅಷ್ಟೆಲ್ಲ ವಯಸ್ಸಾದವರಂತೆ ಕಾಣಲ್ಲ. ಮುಖ್ಯವಾಗಿ ಮನಸು. ಅದನ್ನು ಪ್ರತೀ ನಿತ್ಯ fieldಗೆ ಹೋಗಿ jog ಮಾಡಿಸುತ್ತೇನೆ. Fortunately, ಹಲ್ಲು ಚೆನ್ನಾಗಿವೆ. ತಲೆಗೂದಲು ತುಂಬ ಹಣ್ಣಾಗಿಲ್ಲ. I will never be bald. ತಲೆಗೂದಲು ಉದುರಿ ಹೋಗಿ ತಲೆಯೆಂಬುದು ಚೊಂಬಿನಂತಾಗೋದಿಲ್ಲ ನನಗೆ. May be, ಅದು ಅನುವಂಶಿಕ. ನನ್ನ ಅಮ್ಮನಿಗೆ ಅಕ್ಷರಶಃ ಕಾಳಸರ್ಪದಂಥ ಜಡೆಯಿತ್ತು. ನನ್ನ ಕಿವಿಗಳಿಗೆ ನಾಗ ಚುರುಕು. ಅದಿನ್ನೂ ಹಾಗೇ ಇದೆ. ಆದರೆ ಓದಲಿಕ್ಕೆ, ಬರೆಯಲಿಕ್ಕೆ ಕನ್ನಡಕ ಬೇಕು. ಗೆರೆ ಗೀಚಿದಂತಿರುವ ಮೂಗಿಗೆ ಸರಿಯಾದ ಘ್ರಾಣ ಶಕ್ತಿ ಇದೆ. ಕೆಲವು ಸಲ ನನಗೇ ಕಿರಿಕಿರಿಯಾಗುವಂತಹ ನೆನಪಿನ ಶಕ್ತಿ ಇದೆ. ಅದೃಷ್ಟ ವಶಾತ್ it never fails. ನನಗೆ ಹುಟ್ಟಾ ಕೊಂಚ ಬಾಗಿದ ಬೆನ್ನು. ಇತ್ತೀಚೆಗೆ ಅದು ಹೆಚ್ಚಾಗಿದೆ. ಹೊತ್ತ ಭಾರವೇನು ಕಡಿಮೇನಾ? “ಅಲ್ಲ ಸರ್, ನಿಮ್ಮ ಹೆಣ್ಣು ಮಕ್ಕಳಿಬ್ಬರಿಗೂ ಮದುವೆಯಾಗಿ, ಅವರಿಗೀಗ ಮಕ್ಕಳಾಗಿವೆ. ಅಂಥದರಲ್ಲಿ ನಿಮಗೆ ಈ ವಯಸ್ಸಿನಲ್ಲೂ ಎಳೆಯ ಮಗುವಿದೆ!" ಆ ಹುಡುಗಿಯ ಕುತೂಹಲ ಮುಂದುವರೆದಿತ್ತು.

ಅದು ನಿಜವೂ ಹೌದು. ಹಿಮವಂತ್ ಹುಟ್ಟಿದಾಗ ನನಗೆ ಸರಿಯಾಗಿ ಐವತ್ತು ವರ್ಷ. ಏನು ಮಾಡೋಕಾಗುತ್ತೆ? ಮಗು ಹುಟ್ಟಿದರೆ ಬೇಡವೆನ್ನಲಾದೀತೇ? ಹಿಮಂಗೆ ಈಗ ಏಳು ವರ್ಷ. ಮೊದಲ ಮಗಳು ಚೇತನಾ ಹುಟ್ಟಿದಾಗ ನನಗೆ ಬರೀ ಇಪ್ಪತ್ತೆರಡು. ಇಪ್ಪತ್ತೇಳನೇ ವಯಸ್ಸಿನಲ್ಲಿ ಕೆಲವರಿನ್ನೂ ಮದುವೆ ಆಗಿಬಿಡೋಣ ಅಂತ ಡಿಸೈಡ್ ಮಾಡುತ್ತಿರುತ್ತಾರೆ. ಇಪ್ಪತ್ತೇಳು ನಡೆಯುತ್ತಿದ್ದಾಗ ನನಗಾಗಲೇ ಮೂವರು ಮಕ್ಕಳಾಗಿದ್ದರು. ಒಂದು ಆ ಅತಿರೇಕ. ಇನ್ನೊಂದು ಈ ಅತಿರೇಕ!

ಒಂದಷ್ಟು walk ಮಾಡುತ್ತೇನೆ. ಅದು ಬಿಟ್ಟರೆ ಬೇರೆ ಯಾವ ಕಸರತ್ತೂ ಇಲ್ಲ. ನಾನು ಯೋಗ ಮಾಡುವುದಿಲ್ಲ. ಒಂದು ಕಾಲಕ್ಕೆ ಪ್ರಾಣಾಯಾಮ, ಧ್ಯಾನ ಮಾಡುತ್ತಿದ್ದೆ. ಅದರಿಂದ ಫಾಯ್ದೆ ನನಗೂ ಆಗಲಿಲ್ಲ, ಧ್ಯಾನ-ಪ್ರಾಣಾಯಾಮಗಳಿಗೂ ಆಗಲಿಲ್ಲ. ನಾನು ವಿಪರೀತ health freak ಅಲ್ಲ. ಹಾಗಂತ, ಅಡಸಾ-ಬಡಸಾ ತಿನ್ನುವವನೂ ಅಲ್ಲ. “ನೋಡಿ ಈ ವಯಸ್ಸಲ್ಲೂ ನನಗೆ ಬಿಳೀ ಕೂದಲಾಗಿಲ್ಲ. ನಂಗೆ B.P. ಇಲ್ಲ. ಷುಗರ್ರೂ ಇಲ್ಲ. ಐವತ್ತೈದಾಗಿದೆ ವಯಸ್ಸು. ಯಾರಾದರೂ ಹಾಗಂತ ಹೇಳಲಿ?" ಎಂದು ಕೆಲವರು ಮಾತನಾಡುತ್ತಿರುತ್ತಾರೆ. Hell with them. ಇರೋ ವಯಸ್ಸಿಗಿಂತ ಕಡಿಮೆ ವಯಸ್ಸಾದವರ ಹಾಗೆ ಕಾಣಿಸಿಕೊಳ್ಳೋ ಹಂಬಲ ನನಗಿಲ್ಲ. ಆಗೋದು ಆಗುತ್ತೆ.

ಆದರೆ ಮನಸು? ಅದು ಯಾವಾಗಲೂ ಓಡಲು ಸಿದ್ಧವೆಂಬಂತೆ ಕೆನೆಯುವ ಕಡುಗಪ್ಪು ಕುದುರೆಯಂತಿರಬೇಕು. ಕುಸಿದು ಬಿದ್ದು, ಮೂಲೆ ಸೇರಬಾರದು. I take care of that. ಕೆಲವು ಸಲ ಮನಸ್ಸಿಗೂ ಆಘಾತಗಳಾಗುತ್ತಿರುತ್ತವೆ. ಮೊನ್ನೆ ತುಂಬ unexpected ಆಗಿ ನನಗೇ ಆ ತೆರನಾದ ಆಘಾತವಾಯಿತು. ಎಷ್ಟು ಕಾಲ ಅಳುತ್ತ ಕೂಡಲಿ? ಒಂದಿಬ್ಬರು ಸ್ನೇಹಿತರ ನೆರವು ತಗೊಂಡೆ. ಅದು ಬಿಟ್ಟರೆ ನನಗೆ ನಾನೇ coach. ನಾನೇ trainer. ಕೆಲವೇ ದಿನ: ನಾನು ಮೈಕೊಡವಿ ಎದ್ದು ಬಿಟ್ಟೆ. ಕೃತಕ ಹಲ್ಲು, ಕನ್ನಡಕ, ತಲೆಗೆ ಬಣ್ಣ-ಇವೆಲ್ಲ ದೇಹಕ್ಕೆ ಹಾಕಿಸಬಹುದು. Not for the mind and soul. ಅಲ್ವಾ? ಹಾಗೆ ಮನಸ್ಸು, ಬುದ್ಧಿಗಳಿಗೆ ನಾವೇ ಒಂದು ಶಕ್ತಿ ತುಂಬಿ ಮತ್ತೆ ರೇಸ್‌ನ ಅಂಗಳಕ್ಕೆ ರೆಡಿ ಮಾಡಿ ತರಬೇಕು. ಜಾಣತನವಿರೋದೇ ಅಲ್ಲಿ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 01 June, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books