Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಅದರ ಪ್ರತಿ ಇಟ್ಟಿಗೆಯಲ್ಲೂ ಒದುಗ ದೊರೆಯ ಆಶೀಸ್ಸು

ಒಂದು ಸಿಕ್ಸರ್ ಹೊಡೆದರೆ ಚಪ್ಪಾಳೆ ತಟ್ಟುತ್ತೇವೆ. ಎರಡನೇದಕ್ಕೂ ಚಪ್ಪಾಳೆ. ನೂರ ಹನ್ನೆರಡೂ ಸಲ ಸಿಕ್ಸರ್ರೇ ಹೊಡೀತಿದ್ರೆ? ಅದೀಗ ನನ್ನ ಸ್ಥಿತಿ. ನಿಮ್ಮ ಊಹೆ ಸರಿ. ಒಂದೇ ಒಂದು ಮಗು, ಸೋಷಿಯಲ್ ಸ್ಟಡೀಸ್‌ನಲ್ಲಿ ಇಪ್ಪತ್ತಾರು ಮಾರ್ಕ್ಸ್ ತೆಗೆದು ಫೇಲಾಗಿರೋದನ್ನ ಬಿಟ್ರೆ ನಮ್ಮದು ಇನ್ನೂ ಒಂದು ಸಿಕ್ಸರ್ರೇ: ಪ್ರಾರ್ಥನಾ ಸ್ಕೋರ್! ನಮ್ಮ ಶೀಲಕ್ಕ ಊರಲಿಲ್ಲ. ಫೋನ್ ಮಾಡಿ ಕಂಗ್ರಾಟ್ಸ್ ಹೇಳಿದರೆ Stiff ಆದ ಉತ್ತರ ಬಂತು: I am not happy ravi.

``ಅಯ್ಯೋ ರಾಮಾ, ನಿಂದೊಳ್ಳೆಯ ಕಥೆಯಾಯ್ತಲ್ಲ ಶೀಲಕ್ಕಾ? ಒಂದು ಮಗೂನೂ ಫೇಲಾಗಬಾರದಾ? ಸಂತೇಲಿರೋರೆಲ್ಲ ಬೆಳ್ಳಗೇ ಇರಬೇಕು ಅಂದ್ರೆ?" ಎಂದೆ. ಶೀಲಕ್ಕ Stiff ಆಗೇ ಇದ್ದಳು. ಆಯಮ್ಮ ಹಂಗೇನೇ, ವಿಪರೀತ perfectionist. ಎಲ್ಲವೂ ಗೆರೆ ಗೀಚಿದ ಹಾಗೇ perfect ಆಗಿ ಆಗಬೇಕು. ಆಕೆಗೆ ಫೋನ್ ಮಾಡಿ, ಫೋನ್ ಕೆಳಗಿಟ್ಟ ಮರುಕ್ಷಣವೇ ಇಬ್ಬರು ಹೆಣ್ಣು ಮಕ್ಕಳು ಬಂದರು. ವಿವರಣೆ ಬೇಡವೇ ಬೇಡ ಎಂಬಷ್ಟು ತದ್ರೂಪಿಗಳು. ಅವರು twins ಅವರಲ್ಲೊಬ್ಬಳು `ಪ್ರಾರ್ಥನಾ'ಗೆ topper. ರಿಜಲ್ಟ್ ಷೀಟ್ ನೋಡಿದರೆ, ಅದರಲ್ಲಿ ಕೊಂಚವೇ ಕೊಂಚ ಕಡಿಮೆ ಎನ್ನಬೇಕು: ಆ ಪರಿ ಮಾರ್ಕ್ಸ್ ತಗೊಂಡಿದ್ದಾಳೆ. ಅವಳ ತಂಗಿಯಾದರೂ ಅಷ್ಟೆ. ಇನ್ನೇನು ಅವರಿಗೆ ಶುಭ ಹಾರೈಸಿ ಕಳಿಸಬೇಕು, ಅಷ್ಟರಲ್ಲಿ ಅವರ ತಾಯಿ ಬಂದರು. ``ನಮಸ್ಕಾರ" ಅನ್ನ ಹೊರಟವನು ಫಕ್ಕನೆ ಸುಮ್ಮನಾಗಿ ``ನೀನೇನಮ್ಮಾ?" ಅಂದೆ. ``ಹೌದು ಸರ್, ಇವರಿಬ್ಬರೂ baby sitting ನಿಂದ ಇವತ್ತು ಹೊರಬೀಳೋ ತನಕ ಇಲ್ಲೇ ಓದಿದವರು. ನಿಮ್ಮ ಆಶೀರ್ವಾದ..." ಅಂದಳು.

``No, you are wrong. ನೀನು ಪಿಯುಸೀಲಿ ಇದ್ದಾಗಿನಿಂದಲೂ!" ಅಂದೆ. ಆಕೆ ನಗತೊಡಗಿದಳು. ಆಕೆಯ ಹೆಸರು ವಿದ್ಯಾ ಪ್ಯಾಟಿ. ಬಳ್ಳಾರಿಯವಳು. ಅಲ್ಲಿ ನಾನು ಲೆಕ್ಚರರ್ ಆದಾಗ ಅವಳು ಆಗಷ್ಟೆ ಪಿ.ಯು.ಸಿಗೆ ಸೇರಿದ್ದಳು. ಆಯ್ತಲ್ಲ? ಒಂಥರಾ ತಲೆಮಾರಿನಿಂದ ತಲೆಮಾರಿಗೆ ಗುರು-ಶಿಷ್ಯ ಬಾಂಧವ್ಯ. ವಿದ್ಯಾ ಸುಮಾರು ಹನ್ನೆರಡು ವರ್ಷಗಳ ಹಿಂದೆ ಇವೆರಡನ್ನೂ ಎತ್ತಿಕೊಂಡು ಬಂದು ಅಡ್ಮಿಷನ್ ಮಾಡಿಸಿದ್ದು ನಂಗೆ ನೆನಪಿದೆ. ಈಗ ಅವು ಇಡೀ ಜಯನಗರಕ್ಕೆ ಹಂಚಬಹುದಾದಷ್ಟು ಮಾರ್ಕು ತಗೊಂಡು topperಗಳು ಅನ್ನಿಸಿಕೊಂಡು `ಪ್ರಾರ್ಥನಾ'ದಿಂದ ಹೊರಬೀಳುತ್ತಿವೆ. ನನ್ನ warm wishes ಹೇಳಿ ಕಳಿಸಿದೆ. ಕಣ್ಣ ಮುಂದಿನ ಮಕ್ಕಳು ನಿಮಿಷ ನಿಮಿಷಕ್ಕೂ ಬೆಳೆಯುತ್ತಿರುತ್ತಾರೆ. ಅವರು ಬೆಳೆದು ಬೆಳೆದೇ ನಮ್ಮನ್ನು ಮುದುಕರನ್ನಾಗಿ ಮಾಡುತ್ತಾರೆ. ನೋಡಿ, ನಾನಿಲ್ಲಿ `ಪತ್ರಿಕೆ'ಯ ಆಫೀಸಿನಲ್ಲಿ ಇಪ್ಪತ್ತು ವರ್ಷಗಳಿಂದ ಕೂತೇ ಇದ್ದೇನೆ. `ಪ್ರಾರ್ಥನಾ'ದಿಂದ ಹೊರಬಿದ್ದ ಅನೇಕ ಮಕ್ಕಳು ವಿದೇಶದಲ್ಲಿದ್ದಾರೆ. ಕೆಲವು ಹೆಣ್ಣು ಮಕ್ಕಳು ಮದುವೆಯಾಗಿ, ಅವರಿಗಾಗಲೇ ಮಕ್ಕಳು! ಹಿರಿಯರು ಅನ್ನೋದೇ ನಿಜ: ತಿರುಗುವ ಚಕ್ರ ತಿರುಗುತ್ತಲೇ ಇರುತ್ತದೆ! ಸದ್ಯ, ಹಿಂದಕ್ಕೆ ತಿರುಗುವುದಿಲ್ಲವಲ್ಲ? ಅಷ್ಟೇ ಪುಣ್ಯ. `ಪ್ರಾರ್ಥನಾ' schoolಗೆ ಈಗ ನನ್ನ ಅವಶ್ಯಕತೆಯೇ ಇಲ್ಲ. ಅದು ನನ್ನ ನಿರೀಕ್ಷೆಯಲ್ಲೇ ಇಲ್ಲ. ಅದರ pattern ಈಗ ಪಕ್ಕಾ set ಆಗಿದೆ. ಶೀಲಕ್ಕ, ಉಮೇಶ, ಕರ್ಣ ಎಲ್ಲರೂ ತಂತಮ್ಮ ಭಾರ ಹೊರುತ್ತಿದ್ದಾರೆ. ರಥ ಎಳೆಯುತ್ತಿದ್ದಾರೆ. ಇಂತಿಂತಿಷ್ಟು ಹೊತ್ತಿಗೆ ಎಂಬಂತೆ ಪ್ರತೀ ತಿಂಗಳು ಚೆಕ್‌ಗಳಿಗೆ ಸಹಿ ಹಾಕಿದರೆ ನನ್ನ ಜವಾಬ್ದಾರಿ ಮುಗಿಯುತ್ತದೆ. ಹಾಗಂತ ಅಸಡ್ಡೆ ಮಾಡೋದಿಲ್ಲ ನಾನು. ಒಂದು ಕಣ್ಣು ಅದರ ಮೇಲೆ ಇಟ್ಟೇ ಇರುತ್ತೇನೆ. ಅಲ್ಲದೆ ಶಾಲೆಯ ಮೇಲೆ ನಿಮ್ಮದೂ ಕಣ್ಣೀರುತ್ತದೆ.

``ಎಷ್ಟು ಅದ್ಭುತವಾದ ಸಂಸ್ಥೆ ಮಾಡಿದ್ದೀರಲ್ಲಪ್ಪಾ" ಅಂದರು ಇತ್ತೀಚೆಗೊಮ್ಮೆ ದೇವೆಗೌಡರು. `ಆ ಸಂಸ್ಥೆಯ ಪ್ರತಿ ಇಟ್ಟಿಗೆಯಲ್ಲೂ ನನ್ನ `ಪತ್ರಿಕೆ' ಓದುಗ ದೊರೆಯ ಆಶೀಸ್ಸು ಇದೆ' ಅಂದು ಕೊಂಡೆ. ಸುಳ್ಳಲ್ಲವಲ್ಲ? ನಿಮ್ಮಿಂದ ಇಸಿದುಗೊಂಡು ಹೋದ ಕೋಟಿ- ಕೋಟ್ಯಂತರ ರುಪಾಯಿಗಳನ್ನೆಲ್ಲ ಅದಕ್ಕೇ ಹಾಕಿದ್ದೇನೆ.

ನಿಮ್ಮ ಒಲವಿರಲಿ. ಕರುಣೆ ಇರಲಿ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 20 May, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books