Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಅಂತಃಸಾಕ್ಷಿಗಿಂತ ಸಾಕ್ಷಿ ಮುಖ್ಯವಾದರೆ ಏನೇನು ಅನಾಹುತಗಳಾಗುತ್ತವೆ ನೋಡಿ!

ಮೊನ್ನೆ ನನ್ನ ಗೆಳೆಯನೊಬ್ಬ ಒಂದು ಇಂಟರೆ ಸ್ಟಿಂಗ್ ಕತೆ ಹೇಳಿದ.


ಒಂದೂರಿನಲ್ಲಿ ಒಂದು ಕೊಲೆಯಾಯಿತು. ನಾಲ್ಕು ಜನ ಸೇರಿ ಒಬ್ಬ ವ್ಯಕ್ತಿಯನ್ನು ಲಾಂಗ್ ಬಳಸಿ ಕೊಂದರು. ಸರಿ, ಕೊಂದವರು ಓಡಿ ಹೋದರೂ ಊರ ಜನ ಬಿಡಲಿಲ್ಲ. ಒಬ್ಬರ ಹಿಂದೊಬ್ಬರಂತೆ ನಾಲ್ಕು ಮಂದಿಯನ್ನೂ ಹಿಡಿದುಕೊಂಡು ಬಂದರು. ಸರಿ, ಈ ನಾಲ್ಕೂ ಮಂದಿಯನ್ನು ಒಂದು ಕಡೆ ಬಂಧಿಸಿಟ್ಟು ಘಟನೆಯ ಸಾಕ್ಷಿಗಳನ್ನೆಲ್ಲ ಪಡೆದರು. ತನಿಖೆಯಲ್ಲಿ ಅವರು ಕೊಲೆ ಮಾಡಿರುವುದು ಸ್ಪಷ್ಟವೆಂದು ಗೊತ್ತಾಯಿತು. ಇದರ ಆಧಾರದ ಮೇಲೆ ಅವರ ವಿರುದ್ಧ ಶಿಕ್ಷೆ ಜಾರಿಯಾಗುವುದು ನಿಶ್ಚಿತವಾಯಿತು. ಕುತೂಹಲದ ಸಂಗತಿ ಎಂದರೆ ಆ ಊರಿನಲ್ಲಿ ಎರಡು ಹಂತದ ಪಂಚಾಯ್ತಿಗಳಿದ್ದವು. ಒಂದು ಕಿರಿಯ ಪಂಚಾಯ್ತಿ. ಮತ್ತೊಂದು ಹಿರಿಯ ಪಂಚಾಯ್ತಿ. ಒಂದು ವೇಳೆ ಕಿರಿಯ ಪಂಚಾಯ್ತಿಯ ತೀರ್ಪು ಹಿಡಿಸಲಿಲ್ಲ ಎಂದಾದರೆ, ಹಿರಿಯ ಪಂಚಾಯ್ತಿಗೆ ಹೋಗುವ ಅಕಾರ ಆರೋಪಿಗಳಿಗಿತ್ತು.

ಸರಿ, ಸುದೀರ್ಘ ಕಾಲ ವಿಚಾರಣೆ ನಡೆಸಿದ ಕಿರಿಯ ಪಂಚಾಯ್ತಿ, ಈ ನಾಲ್ಕೂ ಮಂದಿ ಸೇರಿ ಕೊಲೆ ಮಾಡಿರುವುದು ನಿಜ. ಹೀಗಾಗಿ ಈ ನಾಲ್ಕೂ ಮಂದಿಗೆ ಶಿಕ್ಷೆ ವಿಧಿಸಬೇಕು ಎಂದು ತೀರ್ಪು ನೀಡಿತು. ಆದರೆ ನಡು ರಸ್ತೆಯಲ್ಲಿ, ಹಲವರ ಕಣ್ಣಿಗೆ ಕಾಣುವಂತೆ ಲಾಂಗು ಝಳಪಿಸಿ ಕೊಂದವರು, ಈ ತೀರ್ಪಿನ ವಿರುದ್ಧ ಹಿರಿಯ ಪಂಚಾಯ್ತಿಗೆ ಹೋದರು. ಹಿರಿಯ ಪಂಚಾಯ್ತಿಯೂ ವಿಚಾರಣೆ ನಡೆಸಿತು. ಆದರೆ ಕಿರಿಯ ಪಂಚಾಯ್ತಿಯಷ್ಟು ಸುದೀರ್ಘ ಕಾಲವೇನಲ್ಲ. ಫೈನಲಿ, ಅದು ಒಂದು ತೀರ್ಪು ನೀಡಿತು. ಈ ನಾಲ್ಕೂ ಮಂದಿ ಸೇರಿ ಕೊಲೆ ಮಾಡಿದ್ದಾರೆ ಎಂಬ ವಿಷಯದಲ್ಲಿ ಸಾಕ್ಷಿ ಒದಗಿಸ ಬೇಕಾದವರು ಸರಿಯಾಗಿ ಸಾಕ್ಷಿ ಒದಗಿಸಿಲ್ಲ. ಮೊದಲನೆಯದಾಗಿ, ಕೊಲೆ ಮಾಡಲು ಬಳಸಿದ ಲಾಂಗು ಯಾವ ಸೈಜಿನದು ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಅದೇ ರೀತಿ ಲಾಂಗಿನಿಂದಲೇ ಕೊಲೆ ಆಗಿದ್ದರೆ ಅದು ಎಷ್ಟು ಇಂಚು ಮೃತ ವ್ಯಕ್ತಿಯ ಹೊಟ್ಟೆಯೊಳಗೆ ಹೋಗಿದೆ ಎಂಬ ಕುರಿತು ಹೇಳಿಲ್ಲ. ಅದೇ ರೀತಿ ಇಂತಹದೇ ಕಂಪನಿಯ ಲಾಂಗು ಎಂಬ ಬಗ್ಗೆ ಯಾವ ಸಾಕ್ಷಿಯೂ ಇಲ್ಲ. ಹೀಗಾಗಿ ಈ ಕೊಲೆ ಮಾಡಿರುವುದು ಸದರಿ ನಾಲ್ಕು ಮಂದಿಯಲ್ಲ.

ಹಿರಿಯ ಪಂಚಾಯ್ತಿ ಹೇಳಿದ ಮೇಲೆ ಏನು ಮಾಡಲು ಸಾಧ್ಯ? ನಾಲ್ಕೂ ಮಂದಿ ಶಿಕ್ಷೆಯಿಂದ ಪಾರಾದರು. ಆದರೆ ತಮ್ಮ ಕಣ್ಣಾರೆ ಕೊಲೆ ನಡೆದಿದ್ದನ್ನೂ ನೋಡಿದರೂ ಜನ ಏನೂ ಮಾಡಲಾಗದೆ ಮೌನವಾಗ ಬೇಕಾಯಿತು. ಈ ಕತೆ ಕೇಳಿದರೆ ನಿನಗೇನನ್ನನಿಸುತ್ತದೆ ಅಣ್ಣಾ ಎಂದ. ನೋಡು, ಅಂತಃಸಾಕ್ಷಿಗೆ ಬೆಲೆಯೇ ಇಲ್ಲ
ವಾಗಿ, ಸಾಕ್ಷಿಯೇ ಮುಖ್ಯವಾದಾಗ ಇಂತಹವೆಲ್ಲ ಆಗುತ್ತವೆ. ಹಾಗಂತ ಇವೆಲ್ಲವನ್ನು ಜನ ತುಂಬ ದಿನ ಸುಮ್ಮನೆ ನೋಡುವುದಿಲ್ಲ. ಅವರೇನೂ ದಡ್ಡರಲ್ಲ. ಹಿರಿಯ ಪಂಚಾಯ್ತಿ ನೀಡಿದ ತೀರ್ಪು ರಾಜಕೀಯ ಲಾಭಕ್ಕೋ, ಹಣದ ಲಾಭಕ್ಕೋ ಬಂದಿದೆ ಎಂಬುದು ಅವರಿಗೂ ಗೊತ್ತಾಗುತ್ತದೆ. ಕಾಲ ಬದಲಾಗಿದೆ ಕಣಪ್ಪಾ ಎಂದೆ. ಆತ ವಿಷಾದದ ನಗು ನಕ್ಕು ಎದ್ದು ಹೋದ. ಆತ ಹೋದ ಮೇಲೆ ಇತ್ತೀಚಿನ ಹಲವು ವಿದ್ಯಮಾನಗಳ ಕುರಿತು ಯೋಚಿಸತೊಡಗಿದೆ. ಅರೇ, ಕತೆ ಎಷ್ಟು ಸೂಟಬಲ್ ಆಗಿ ಹಲವು ಘಟನೆಗಳಿಗೆ ಹೊಂದಿಕೊಳ್ಳುತ್ತಿದೆಯಲ್ಲ ಅನ್ನಿಸಿತು. ನಿಮಗೂ ಹಾಗನ್ನಿಸಿದ್ದರೆ ಅದು ಸಹಜ. ಅಂತಃಸಾಕ್ಷಿಗಿಂತ ಸಾಕ್ಷಿಯೇ ಮುಖ್ಯವಾದಾಗ ಆತ್ಮಕ್ಕೆ ಬೆಲೆಯೇ ಇಲ್ಲದಂತಾಗಿ ಬಿಡಬಹುದು. ಆದರೆ ಜನ ತುಂಬ ದಿನ ಸುಮ್ಮನಿರುತ್ತಾರಾ?
ಸುಮ್ಮನೆ ಉದಾಹರಣೆಗೀಗ ದೇಶವನ್ನು ಆಳುತ್ತಿರುವ ನರೇಂದ್ರ ಮೋದಿ ಸರ್ಕಾರವನ್ನೇ ನೋಡಿ. ಇತ್ತೀಚಿನ ದಿನಗಳಲ್ಲಿ ಅವರು ಯಾರಿಗೆ ಕ್ಲೋಜ್ ಆಗು ತ್ತಿದ್ದಾರೋ, ಅವರೆಲ್ಲ ಒಂದು ಕಾಲದಲ್ಲಿ ಮೋದಿಯ ಬದ್ಧ ವಿರೋಧಿಗಳು. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯನ್ನು ತೆಗೆದುಕೊಳ್ಳಿ. ಕಳೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಈ ಇಬ್ಬರೂ ನಾಯಕರು ಶರಂಪರ ಜಗಳವಾಡುತ್ತಿದ್ದರು. ಒಬ್ಬರು ಮತ್ತೊಬ್ಬರನ್ನು ರಾಜಕೀಯವಾಗಿ ಮಟ್ಟ ಹಾಕಿ ಬಿಡುತ್ತೇವೆ ಎಂಬಂತೆ ಮಾತನಾಡುತ್ತಿದ್ದರು. ಈಗ ಇಬ್ಬರು ದೇಶ ಕಟ್ಟುತ್ತಾರಂತೆ. ಹೀಗಾಗಿ ಮೋದಿಯವರು ಮಮತಾ ಬ್ಯಾನರ್ಜಿಯನ್ನು ಹೊಗಳುತ್ತಿದ್ದಾರೆ. ಮಮತಾ ಬ್ಯಾನರ್ಜಿ ಕೂಡಾ, ಮೋದಿ ತನ್ನಣ್ಣ ಎಂಬಂತೆ ಮಾತನಾಡುತ್ತಿದ್ದಾರೆ. ಒಂದು ವೇಳೆ ಮಮತಾ ಬ್ಯಾನರ್ಜಿ ಇದಕ್ಕೆ ರೆಡಿ ಆಗಲಿಲ್ಲವೆನ್ನಿ, ಸಾವಿರಾರು ಕೋಟಿ ರುಪಾಯಿಗಳ ಶಾರದಾ ಹಗರಣದ ಕುರಿತು ಸಿಬಿಐ ಧಡಕ್ಕಂತ ಫೀಲ್ಡಿನಲ್ಲಿ ಆಕ್ಟೀವ್ ಆಗಿ ಬಿಡುತ್ತದೆ. ಒಂದು ಸಲ ಅದು ಆ ರೀತಿ ಕ್ರಿಯಾಶೀಲವಾಯಿತೆಂದರೆ ತನಿಖೆ ಮಮತಾ ಬ್ಯಾನರ್ಜಿಯ ಬುಡಕ್ಕೇ ಬಂದುಬಿಡುತ್ತದೆ. ಮಮತಾ ಬ್ಯಾನರ್ಜಿಗೆ ಅದು ಇಷ್ಟವಿಲ್ಲ.

ಹೀಗಾಗಿ ಯಾಕೆ ಸುಖಾ ಸುಮ್ಮನೆ ಇಲ್ಲದ ರಗಳೆ ಎಂದು ಕೊಂಡು ಮೋದಿಯ ಜೊತೆ ದೇಶ ಕಟ್ಟಲು ಹೊರಟಿದ್ದಾರೆ. ಮೋದಿಗೂ ಕಾಂಗ್ರೆಸ್ ಪಕ್ಷವನ್ನು ಹಣಿಯಲು ಮಮತಾ ಬ್ಯಾನರ್ಜಿಯ ಬೆಂಬಲಬೇಕು. ಹೀಗಾಗಿ ಅವರು ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಮೇಕ್ ಇನ್ ಬಿಜೆಪಿ ಎಂಬ ಸ್ಲೋಗನ್ನನ್ನು ಜಾರಿಗೊಳಿಸಲು ಹೊರಟಿದ್ದಾರೆ. ಕರ್ನಾಟಕದಲ್ಲಿ ದೇವೆಗೌಡರನ್ನು ನೋಡಿ. ಯಾವುದೋ ಒಂದು ಪ್ರಕರಣದಲ್ಲಿ ಮೋದಿ ತಮ್ಮ ಫ್ಯಾಮಿಲಿಯ ಯಾರನ್ನಾದರೂ ಸಿಲುಕಿಸಿಬಿಡಬಹುದು ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಅವರು ಮೋದಿ ವಿಷಯದಲ್ಲಿ ಚಕಾರ ಎತ್ತುತ್ತಿಲ್ಲ. ಅವರ ಹೋರಾಟ ಏನಿದ್ದರೂ ಈಗ ಸಿದ್ದರಾಮಯ್ಯ ವಿರುದ್ಧ ಮಾತ್ರ. ಮೋದಿಗೆ ಒಂದು ಆಸೆಯಿದೆ. ಮುಂದಿನ ಚುನಾವಣೆಯ ವೇಳೆಗಾದರೂ ಜೆಡಿಎಸ್ ಜೊತೆ ಸಖ್ಯ ಸಾಧಿಸುವಂತಾದರೆ ವಕ್ಕಲಿಗ ಸಮುದಾಯದ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯಬಹುದು ಎಂಬುದು ಅವರ ಲೆಕ್ಕಾಚಾರ. ಇದು ನಿಜವಾದರೆ ಜೆಡಿಎಸ್‌ಗೆ ಲಾಭವಿದೆಯೋ, ಇಲ್ಲವೋ? ಆದರೆ ಬಿಜೆಪಿಗಂತೂ ನಿಶ್ಚಿತವಾಗಿ ಲಾಭವಾಗುತ್ತದೆ.

ಈ ಹಿಂದೆ ಜನತಾ ಪರಿವಾರದ ಒಳಜಗಳದ ಪರಿಣಾಮವಾಗಿ ತಮ್ಮನ್ನು ಉಚ್ಛಾಟಿಸಿದಾಗ ರಾಮಕೃಷ್ಣ ಹೆಗಡೆ ಸೀದಾ ಹೋಗಿ ಬಿಜೆಪಿಯ ಜೊತೆ ಕೈ ಜೋಡಿಸಿ ದರು. ಅವರ ಹಿಂದೆ ದೊಡ್ಡ ಮಟ್ಟದಲ್ಲಿ ಲಿಂಗಾಯತ ಸಮುದಾಯವೂ ಹೋಯಿತು. ಇವತ್ತು ಬಿಜೆಪಿಗೆ ಲಿಂಗಾಯತ ಶಕ್ತಿ ಪ್ರಬಲವಾಗಿ ದಕ್ಕಿದ್ದರೆ ಅದಕ್ಕೆ ರಾಮ ಕೃಷ್ಣ ಹೆಗಡೆ ಅವರ ನಿರ್ಧಾರ ಕಾರಣ. ಯಾಕೆಂದರೆ ನಿಜಲಿಂಗಪ್ಪನವರ ಆಸ್ಥಾನದಲ್ಲಿ ಲವ-ಕುಶ ಎಂದು ಹೆಸರು ಮಾಡಿದ್ದವರು ಹೆಗಡೆ ಹಾಗೂ ವೀರೇಂದ್ರ ಪಾಟೀಲ್. ಇವರಿಬ್ಬರೂ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸಿದ್ದರು. ಮತ್ತು ಕಾಲ ಕಾಲಕ್ಕೆ ತಮಗಿದ್ದ ಈ ವಿಶ್ವಾಸದ ಬೆಂಬಲದಿಂದ ರಾಜಕೀಯ ಮಾಡಿದರು. ಆದರೆ ಯಾವಾಗ ವೀರೇಂದ್ರ ಪಾಟೀಲರು ತೀರಿ ಕೊಂಡರೋ? ಇದಾದ ನಂತರ ಲಿಂಗಾಯತ ಸಮುದಾಯ ದೊಡ್ಡ ಮಟ್ಟದಲ್ಲಿ ನಿಂತಿದ್ದು ರಾಮಕೃಷ್ಣ ಹೆಗಡೆ ಅವರ ಜೊತೆ. ಹೆಗಡೆ ಯಾವಾಗ ದೇವೆಗೌಡರ ಮೇಲಿನ ಕೋಪದಿಂದ ಬಿಜೆಪಿ ಜೊತೆ ಕೈ ಜೋಡಿಸಿದರೋ?
ಅದಾದ ಕೆಲವೇ ವರ್ಷಗಳಲ್ಲಿ ಅವರ ಆರೋಗ್ಯವೂ ಕ್ಷೀಣಿಸಿತು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇದ್ದಾಗಲೇ ತಮಗೆ ಮಂತ್ರಿಗಿರಿ ಕೊಡಲು ಜಾರ್ಜ್ ಫರ್ನಾಂಡಿಸ್ ಅಡ್ಡಿ ಮಾಡಿದರು ಎಂಬ ಕಾರಣಕ್ಕಾಗಿ ಹೆಗಡೆ ನೋವುಂಡರು.

ಹೀಗೆ ನೋವುಂಡ ಹೆಗಡೆ ಮುಂದೆ ಕೆಲವೇ ಕಾಲದಲ್ಲಿ ತೀರಿಕೊಂಡರು. ಇದಾದ ನಂತರ ಬಿಜೆಪಿ ಕಡೆ ವಾಲಿದ್ದ ಲಿಂಗಾಯತ ಸಮುದಾಯ ಅಲ್ಲೇ ಉಳಿದುಕೊಂಡಿತು. ೨೦೦೪ರ ವಿಧಾನಸಭಾ ಚುನಾ ವಣೆಯ ನಂತರ ಯಡಿಯೂರಪ್ಪನವರನ್ನೇ ತನ್ನ ನಾಯಕ ಎಂದು ಒಪ್ಪಿಕೊಂಡು ಬಿಜೆಪಿಯ ಬೆಂಬಲಕ್ಕೆ ನಿಂತಿತು. ಟೋಟಲಿ, ಲಿಂಗಾಯತ ಸಮುದಾಯವೇ ಬಿಜೆಪಿ ಜೊತೆ ನಿಂತಿತು ಎಂದಲ್ಲ. ಆದರೆ ಬಹುಸಂಖ್ಯಾತ ಲಿಂಗಾಯತರು ಬಿಜೆಪಿಯ ಮೂಲಾಧಾರವಾಗಿ ಪರಿ ವರ್ತನೆಯಾದರು. ಈಗ ಲಿಂಗಾಯತ ಶಕ್ತಿಯ ಜೊತೆ ವಕ್ಕಲಿಗ ಶಕ್ತಿಯೂ ಬೆರೆತು ಬಿಟ್ಟರೆ ರಾಜ್ಯದಲ್ಲಿ ಬಿಜೆಪಿಯನ್ನು ಹಿಡಿಯುವವರು ಯಾರು? ಇದು ಮೋದಿ ಲೆಕ್ಕಾಚಾರ. ಬಿಜೆಪಿ ಜೊತೆ ಕೈ ಜೋಡಿಸುವುದರಿಂದ ಅಲ್ಪಸಂಖ್ಯಾತರ ವೋಟುಗಳು ಜೆಡಿಎಸ್‌ಗೆ ಕಡಿಮೆಯಾಗಬಹುದೇ ಹೊರತು, ಬಿಜೆಪಿಗೆ ಯಾವ ರೀತಿಯಿಂದಲೂ ನಷ್ಟವಿಲ್ಲ. ಹೀಗಾಗಿ ಒಂದು ಸಲ ವಕ್ಕಲಿಗರ ವೋಟು ದಕ್ಕುವಂತಾಗಬೇಕು ಎಂದರೆ ಜೆಡಿಎಸ್ ಜೊತೆ ಬಹಿರಂಗವಾಗಿ ಕೈ ಜೋಡಿಸಬೇಕು ಎಂಬುದು ಮೋದಿ ಲೆಕ್ಕಾಚಾರ.
ಒಂದು ಸಲ ಆ ಕೆಲಸವಾದರೆ ಸಾಕು, ಜನತಾ ಪರಿವಾರದ ಬಹುತೇಕ ಭಾಗ ಬಿಜೆಪಿಯ ಬೆನ್ನಿಗೆ ನಿಂತಂತಾಗುತ್ತದೆ. ಆಮೇಲೆ ಚಿಂತೆ ಮಾಡುವ ಪ್ರಶ್ನೆಯೇ ಇಲ್ಲ ಎಂಬುದು ಮೋದಿ ಭಾವನೆ. ಹೀಗಾಗಿ ಅವರು ದೇವೆಗೌಡರಿಗೆ, ಮೋದಿಗಿರುವ ಸಿಬಿಐ ಬಲ ಗೊತ್ತಿರುವುದರಿಂದ ದೇವೆಗೌಡರು ಪ್ರಧಾನಿ ನರೇಂದ್ರ ಮೋದಿಯ ಜೊತೆ ತುಂಬ ಕ್ಲೋಸ್ ಆಗಿದ್ದಾರೆ. ಹೀಗೆಯೇ ತಮಿಳ್ನಾಡಿನ ಜಯಲಲಿತಾ ಅವರಿಗೆ ದೇಶದ ಪ್ರಧಾನಿ ಯಾಗುವ ಮನಸ್ಸಿತ್ತು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳೋಣ ಎಂದು ಮೋದಿ ಆಫರ್ ಕೊಟ್ಟರೂ ಆಕೆ ಒಪ್ಪಲಿಲ್ಲ. ಬದಲಿಗೆ
ಎಐಎಡಿಎಂಕೆ ಎಂಬ ನಾವೆಯನ್ನು ತಾವೇ ಮುನ್ನಡೆಸಿಕೊಂಡು ಹೋದರು. ಇದರ ಫಲವಾಗಿಯೇ ಒಂದೆರಡು ಸೀಟುಗಳನ್ನು ಹೊರತುಪಡಿಸಿ ತಮಿಳ್ನಾಡಿನ ಎಲ್ಲ ಲೋಕಸಭಾ ಸೀಟುಗಳನ್ನು ಗೆದ್ದರು. ಆಕೆಗಿದ್ದ ವಿಶ್ವಾಸವೆಂದರೆ ಹದಿನಾರು ಸೀಟು ಗೆದ್ದು ತೊಂಬತ್ತಾರರಲ್ಲಿ ದೇವೆಗೌಡರು ದೇಶದ ಪ್ರಧಾನ ಮಂತ್ರಿಯಾದರು. ಈಗ ಅದರ ಎರಡು ಪಟ್ಟಿಗಿಂತ ಹೆಚ್ಚು ಸೀಟುಗಳನ್ನು ಗೆಲ್ಲುವ ತಮಗೆ ಅಂತಹ ಅವಕಾಶ ಸಿಗಬಹುದು ಎಂಬುದು ಜಯಾ ಯೋಚನೆ ಆಗಿತ್ತು. ಅಂತಹ ಯೋಚನೆಗಿದ್ದ ಮುಖ್ಯ ಕಾರಣವೆಂದರೆ ತೃತೀಯ ರಂಗ ತಲೆ ಎತ್ತುತ್ತದೆ ಎಂಬ ವಿಶ್ವಾಸ.

ಒಂದು ವೇಳೆ ತೃತೀಯ ರಂಗ ನೂರೈವತ್ತರಷ್ಟು ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ ಐವತ್ತರಿಂದ ಅರವತ್ತರಷ್ಟು ಸೀಟುಗಳನ್ನು ಗೆಲ್ಲಬಹುದು. ಹಾಗೇನಾದರೂ ಆದರೆ ಸರ್ಕಾರ ರಚಿಸಲು ತಮ್ಮ ಬೆಂಬಲ ಅನಿವಾರ್ಯವಾಗಬಹುದು ಎಂಬುದು ಜಯಾ ಯೋಚನೆಯಾಗಿತ್ತು. ಅಂತಹ ಅನಿವಾರ್ಯತೆ ಬಂದಾಗ ಪ್ರಧಾನಿ ಪಟ್ಟಕ್ಕೆ ತಾವು ಬೇಡಿಕೆ ಇಡಬಹುದು. ಮುಲಾಯಂ ಸಿಂಗ್ ಯಾದವ್ ಆಸೆಯನ್ನು ಸೈಡಿಗೆ ಸರಿಸಬಹುದು ಎಂದು ಜಯಾ ಯೋಚಿಸಿದ್ದರು. ಆದರೆ ಜಯಾ ಶಕ್ತಿ ಫ್ರೂವ್ ಆಯಿತು. ಆದರೆ ತೃತೀಯ ರಂಗ ನೆಲ ಕಚ್ಚಿ ಹೋಯಿತು. ಆದರೆ ಈಗ ಜಯಲಲಿತಾ ಕೂಡಾ ಮೆಲ್ಲ ಮೆಲ್ಲಗೆ ಪ್ರಧಾನಿ ನರೇಂದ್ರ ಮೋದಿಗೆ ಕ್ಲೋಸು ಆಗಿದ್ದಾರೆ. ಅವರ ಮಾತುಗಳ ಧಾಟಿಯನ್ನು ನೋಡಿದರೇ ಅದು ಅರ್ಥವಾಗುತ್ತದೆ. ಇದರರ್ಥ, ಬೇರೇನೂ
ಅಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ತಮಿಳ್ನಾಡಿನಲ್ಲಿ ತಳ ಊರಲು ಜಯಲಲಿತಾ ಅವಕಾಶ ನೀಡುತ್ತಾರೆ. ರಾಜ್ಯಸಭೆಯಲ್ಲಿ ಮೋದಿ ಸರ್ಕಾರ ಮಂಡಿಸುವ ಬಿಲ್ಲುಗಳನ್ನು ಪಾಸು ಮಾಡಲು ನೆರವು ನೀಡುತ್ತಾರೆ. ಅದು ನೇರವಾಗಿ ಬೆಂಬಲ ನೀಡು ತ್ತಾರೋ, ಕಲಾಪವನ್ನು ಎಐಎಡಿಎಂಕೆ ಸದಸ್ಯರು ಬಹಿಷ್ಕಾರ ಹಾಕುವ ರೀತಿ
ನೋಡಿಕೊಂಡು ಮಾಡಿಕೊಡುತ್ತಾರೋ ಎಂಬುದಷ್ಟೇ ಈಗಿರುವ ಕುತೂಹಲ.
ಇವೆಲ್ಲ ಜನರಿಗೆ ಅರ್ಥವಾಗುವುದಿಲ್ಲವೇ? ಅರ್ಥ ವಾಗುತ್ತದೆ. ಅವರೂ ಟೈಮಿಗಾಗಿ ಕಾಯುತ್ತಾರೆ. ಈ ಮುಂಚೆಲ್ಲ ಜನರಿಗೆ ರಾಜಕೀಯದ ನಾಟಕಗಳು ಅರ್ಥ ವಾಗುತ್ತಿರಲಿಲ್ಲ. ಆದರೆ ಈಗ ರಾಜಕೀಯದ ಬೇರುಗಳು ಹೇಗಿರುತ್ತವೆ? ಅದರ ಟಿಸಿಲುಗಳು ಹೇಗೆ ಮೇಲೆದ್ದು ಯಾರಿಗೆ ನೆರಳು ನೀಡುತ್ತವೆ ಎಂಬುದು ಅರ್ಥವಾಗುತ್ತದೆ. ಅಂದ ಹಾಗೆ ಇಲ್ಲಿ ಅಂತಃಸಾಕ್ಷಿಯ ಪ್ರಕಾರ ಯಾರಾದರೂ ನಡೆದುಕೊಳ್ಳುತ್ತಾರಾ ಎಂದು ಯೋಚಿಸಬೇಡಿ. ಎಲ್ಲರಿಗೂ ತಮಗೆ ಪೂರಕವಾದ ಸಾಕ್ಷಿಯನ್ನು ಸೃಷ್ಟಿಸಿಕೊಳ್ಳಬೇಕು. ತಮ್ಮ ನಡೆ ಸರಿಯಾಗಿದೆ ಎಂಬುದನ್ನು ಸಮರ್ಥಿಸಿಕೊಳ್ಳಬೇಕು ಅಷ್ಟೇ. ಮೋದಿಯೂ ಇದಕ್ಕೆ ಹೊರತಲ್ಲ, ಯಾವ ನಾಯಕರೂ ಇದಕ್ಕೆ ಹೊರ ತಲ್ಲ. ಅರ್ಥಾತ್, ಇದೊಂದು ವಿಷಮ ಸನ್ನಿವೇಶ. ಇಂತಹ ಸಂದರ್ಭ ವನ್ನು ಜನರೇ ಎದುರಿಸಬೇಕು. ಮೊನ್ನೆ ನನ್ನ ಗೆಳೆಯ ಈ ಕತೆಯನ್ನು ಹೇಳಿದಾಗ ಇವೆಲ್ಲ ನೆನಪಿಗೆ ಬಂತು.

ನಿಜ ಅಲ್ಲವೇ? ಈಗ ನಿಮಗೆ ಬೇಕಿರುವುದು ಸಾಕ್ಷಿಯೇ ಹೊರತು ಅಂತಃಸಾಕ್ಷಿಯಲ್ಲ. ಸಾಕ್ಷಿಯಲ್ಲೂ ದೋಷ ಕಂಡು ಹಿಡಿಯುವ ಶಕ್ತಿ ನಿಮಗಿದ್ದರೆ ನೀವು ಸಹಜವಾಗಿ ಲಾಭ ಪಡೆಯುತ್ತೀರಿ. ಅದನ್ನು ಬಿಟ್ಟು ಅಂತಃಸಾಕ್ಷಿಯ ಮಾತನಾಡಿದಿರೋ? ನಿಶ್ಚಿತವಾಗಿಯೂ ನೀವು ಅಂದುಕೊಂಡಿದ್ದು ನಡೆಯುವುದಿಲ್ಲ. ಹಾಗಂತ ನಿರಾಶರಾಗಬೇಕಾಗಿಯೂ ಇಲ್ಲ. ಕಳ್ಳರು ಎಲ್ಲ ಕಡೆ ಇರುತ್ತಾರೆ ಎಂಬುದು ಅರ್ಥವಾದರೆ ಸಾಕು, ನೀವು ಹುಷಾರಾಗಿರುತ್ತೀರಿ. ನಿಮ್ಮ ನಡೆ ಹುಷಾರಾಗಿರುತ್ತದೆ. ನಾಟಕ ಮಾಡುವವರು ಒಂದು ದಿನ ಮೂಲೆಗೆ ಹೋಗುತ್ತಾರೆ.

ಅಂದ ಹಾಗೆ ಈ ರೀತಿ ನಾಟಕ ಮಾಡಿ ಮೂಲೆ ಗುಂಪಾದ ಎಷ್ಟು ಜನರನ್ನು ನೀವು ನೋಡಿಲ್ಲ? ಈಗ ಸಹಜವಾಗಿ ನಿಮಗೆ ನಾಟಕದ ಸ್ವರೂಪವೇ ಅರ್ಥ ವಾಗುತ್ತದೆ. ನಿಮಗೆ ಅರ್ಥವಾಗುತ್ತಿರುವುದೇ ಪ್ರಜಾ ಪ್ರಭುತ್ವದ ನಿಜವಾದ ಲಕ್ಕು.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 May, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books