Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ನೀನು ನನ್ನನ್ನು ಹೂತು ಹಾಕು: ನಾನು ಮೊಳಕೆಯೊಡೆಯುವ ಬೀಜ!

ಶಾಶ್ವತ!
ಯಾವುದು ಶಾಶ್ವತ?

ಹಿರಿಯರಾದ ಪತ್ರಕರ್ತರೂ ಆದ `ವೈಯೆನ್ಕೆ' ಅನೇಕ ಸಲ ಈ ಮಾತು ಹೇಳುತ್ತಿದ್ದರು.
""What is permanent? ಅಂದ್ರೆ ಏನೂಂತ ಗೊತ್ತೇನ್ರೀ? change is permanent!'' ಈ ಮಾತನ್ನು ಖುದ್ದು ವೈಯೆನ್ಕೆ ನಂಬುತ್ತಿದ್ದರಾ? ಗೊತ್ತಿಲ್ಲ. ಆದರೆ ಅವರನ್ನುತ್ತಿದ್ದ ಮಾತು ಮಾತ್ರ ದೊಡ್ಡ ಸತ್ಯ. ನೆನಪು ಮಾಡಿಕೊಳ್ಳಿ:ನಾವು ನೋಡು ತ್ತಿದ್ದಂತೆಯೇ, ಇತ್ತೀಚಿನ ವರ್ಷಗಳಲ್ಲೇ ಅನೇಕ ಸಂಗತಿಗಳು ನಡೆದು ಹೋದವು. ``ಪ್ರಧಾನಮಂತ್ರಿಯ fundಗೆ ಹಣ ಕಳಿಸೋ ಬದಲು ಕಾರ್ಗಿಲ್ ಯುದ್ಧದಲ್ಲಿ ನಮ್ಮ ಕರ್ನಾಟಕದ ಹುಡುಗರೇ ಹದಿನೇಳು ಜನ ಬಲಿಯಾಗಿದ್ದಾರೆ. ನೇರವಾಗಿ ಅವರ ಕುಟುಂಬಗಳಿಗೇ ಕೊಡೋಣ" ಎಂಬ ದನಿ ಮೊಟ್ಟ ಮೊದಲ ಬಾರಿಗೆ ಎತ್ತಿದವನೇ ನಾನು. ಆಯ್ತು, ಓದುಗರು ಲಕ್ಷ ಗಟ್ಟಲೆ ಹಣ ಕೊಟ್ಟರು. ನಾನಾದರೂ, ಅದನ್ನು ತುಂಬ ಪಾರದರ್ಶಕವಾಗಿ ಇರಿಸಿ ಹದಿನೇಳು ಕುಟುಂಬಗಳಿಗೆ ಹಂಚಿದೆ. Dont Feel bad: ಆ ಹದಿನೇಳು ಯೋಧರ ಹೆಸರುಗಳೇ ಇವತ್ತು ನನಗೆ ನೆನಪಿಲ್ಲ! ಅವರು ದೇಶಕ್ಕಾಗಿ ಪ್ರಾಣ ನೀಡಿದರು: ಆದರೆ ಇವತ್ತು ನೆನಪ್ಯಾರಿಗಿದ್ದಾರೆ?

ಅದೇ ರೀತಿಯಲ್ಲಿ ಉಗ್ರಗಾಮಿಗಳ ಗುಂಡಿಗೆ ಬಲಿಯಾದದ್ದು ಮೇಜರ್ ಸಂದೀಪ್ ಉನ್ನಿ ಕೃಷ್ಣನ್. ನೆನಪಿದ್ದಾರಾ? ನಿಧಾನವಾಗಿ ಆ ಹೆಸರು, ಮುಖದ ನೆನಪುಗಳು ಮರೆಯಾಗುತ್ತಿವೆ. ಆ ಜಾಗಕ್ಕೆ ಡಿ.ಸಿ.ರವಿ ಬಂದರಾ? ಅದಾಗಲೇ ಈಗ ತರಹೇವಾರಿ ಕಾರಣಗಳಿಂದಾಗಿ, ಡಿ.ಕೆ.ರವಿ ಹೆಸರು ಇನ್ನೊಂದ್ಯಾವುದೋ ಸ್ವರೂಪ ಪಡೆದಿದೆ. ನಮ್ಮ ಕಣ್ಣೆದುರಿಗೇ ನಡೆದ ಈ ಸಂಗತಿಗಳನ್ನ ನಾವೇ ಕ್ರಮೇಣ ಮರೆಯುತ್ತಿದ್ದೇವೆ. ಇರಿ, ನಿಮಗೆ ಸೂಲಮಂಗಲಮ್ ರಾಜಲಕ್ಷ್ಮಿ ಗೊತ್ತಾ? No chance. ನನ್ನ ವಯಸ್ಸಿನವರಿಗೇ ಅದು ಮಾಸಿ ಹೋದ ಹೆಸರು. ಆಕೆ ಗಾಯಕಿ, ಕೆಲವು ಚೆಂದನೆಯ ಕನ್ನಡ ಚಿತ್ರಗೀತೆಗಳನ್ನು ಹಾಡಿದ್ದಾರೆ. ಆ ಕಾಲಕ್ಕೆ ಆಕೆ ಮತ್ತು ಆಕೆಯ ಸೋದರಿಯರನ್ನು ಸೂಲಮಂಗಲಮ್ ಸಿಸ್ಟರ್‍ಸ್ ಅನ್ನುತ್ತಿದ್ದರು. ಈಗ ಅಕಸ್ಮಾತ್ ಸಿಕ್ಕರೆ googleನಲ್ಲಿ ಸಿಗಬೇಕು.

Public memory is short AíñÝÃæ. Private memory ಕೂಡ ಅಷ್ಟೆ. ಕಂಡಾ ಬಟ್ಟೆ ಹತ್ತಿರದವರು ಅಂತ ಅಂದುಕೊಂಡಿರುತ್ತೇವೆ. ಅವರು ನಾಲ್ಕು ದಿನ ಕಣ್ಣಿಗೆ ಸಿಕ್ಕದಿರಲಿ? ಅವರನ್ನಾಗಲೇ ಮರೆಯಲಾರಂಭಿ ಸಿರುತ್ತೇವೆ. ಇನ್ನೂ ಕೊಂಚ ಹಸಿಯಾಗಿ ನಮಗೆ ವೀರಪ್ಪನ್ ನೆನಪಿರುವ ಛಾನ್ಸ್ ಇದೆ. ಅವನು ಕೊಂದು ಹಾಕಿದ ಐದು ಅಕಾರಿಗಳ ಹೆಸರನ್ನು ಸರಸರನೆ ಹೇಳಿ ನೋಡೋಣ? ಕಷ್ಟ. ಜಗತ್ತು ಇರೋದೇ ಹೀಗಾ? ಕಾಣೆ. ಮೊನ್ನೆ ಅದೆಲ್ಲಿಗೋ ಹೋಗುತ್ತಿದ್ದಾಗ ಗಮನಿಸಿದೆ. ನಾವು ಗೆಳೆಯರು ಓಡಾಡುತ್ತಿದ್ದ area ಅದು. ಅಲ್ಲೊಂದು ರುಚಿಯಾದ ತಿಂಡಿ ಮಾಡುವ hotel ಇತ್ತು. ಈಗ ಆ ಬಿಲ್ಡಿಂಗೇ ನಾಪತ್ತೆ. ಅದರ ಪಕ್ಕದಲ್ಲಿ ಖಾಲಿ ಜಾಗ? ಅದೂ ಇಲ್ಲ. ಅವೆಲ್ಲವನ್ನೂ underpass ನಿರ್ಮಾಣ ನುಂಗಿ ಹಾಕಿದೆ. ಅಂಥವನ್ನು ನೋಡಿದಾಗಲೇ ನಾವು ವೇದಾಂತಿಗಳಂತೆ ಮಾತಾಡುತ್ತೇವೆ: `ಬಿಡೀ ಸ್ವಾಮೀ, ಜಗತ್ತಿನಲ್ಲಿ ಯಾವುದು ಶಾಶ್ವತ? ಅದಕ್ಕೇ `ವೈಯೆನ್ಕೆ' ಹೇಳಿದ್ದು ಸತ್ಯವೆನ್ನಿಸುತ್ತದೆ. "only change is permanent. ಆದ್ದರಿಂದಲೇ ಕೆಲವರು ಬೈತಿರ್ತಾರೆ. `ನಿನ್ನನ್ನ ಹುಟ್ಲಿಲ್ಲ ಅನ್ನಿಸಿ ಬಿಡ್ತೇನೆ!' ಅಂತ. ಇದರ ರ್ಥವೂ ಅದೇ. ಜನರ ಮನಸ್ಸಿನಿಂದ ನಿನ್ನನ್ನು ಅಳಿಸಿ ಹಾಕ್ತೇನೆ ಎಂಬ ಅರ್ಥ. ಅದು ನಿಜವಾದ, serious ಆದ threat. ಏಕೆಂದರೆ ಪ್ರತಿ ಮನುಷ್ಯನಿಗೂ ನಾಲ್ಕು ಕಾಲ ಅವರಿವರ ನೆನಪಿನಲ್ಲಿ ಇರಬೇಕು ಎಂಬ ಆಸೆಯಿರುತ್ತದೆ. ನನ್ನ ಅಸ್ತಿತ್ವವೇ demolish ಆಗಿಹೋಗುತ್ತದೆ ಅಂದಾಗ ಮನುಷ್ಯ ಹೆದರುತ್ತಾನೆ.

ನೀವು ರಾಜಕುಮಾರ್ ವಿಷಯಕ್ಕೆ ಬನ್ನಿ. ಅವರಿನ್ನೂ ನೆನಪಿದ್ದಾರೆ. ಆದರೆ ಅವರು ಸತ್ತಾಗ ಆದ ಗಲಭೆಯಲ್ಲಿ ಎಂಟು ಜನ ಸತ್ತರು. ಇಬ್ಬರಲ್ಲ. at least ಒಬ್ಬರ ಹೆಸರು ಹೇಳಿ ನೋಡೋಣ. ತೀರ ಇಷ್ಟು ಬೇಗನೆ ರಾಜ್ ಮರೆತು ಹೋಗಲಾರರು. ಆದರೆ ಜನರ ನೆನಪಿಗೂ ವಯಸ್ಸಾಗುತ್ತಿರುತ್ತಲ್ಲ? ಅದಕ್ಕೇನು ಮಾಡೋದು? ನಟ ಮುದುಕನಾಗುತ್ತಾನೆ. ಆತನ ಅಭಿಮಾನಿಗಳಿಗೂ ವಯಸ್ಸಾಗುತ್ತದೆ. ನಟ ಸಾಯುತ್ತಾನೆ. ಆತನ ಅಭಿಮಾನಿಗಳೂ ಸಾಯುತ್ತಾರೆ. ಆಮೇಲೆ `ಥೈ' ಅಂತ ಕರಗ ಕುಣಿಯಲಿಕ್ಕೆ ಯಾರಿರುತ್ತಾರೆ? ಇನ್ನು ಒಂದೇ ಒಂದು ತಲೆಮಾರು ಕಳೆಯಲಿ. ನಮಗೆ ಬೇಂದ್ರೆ ಮರೆತು ಹೋಗುತ್ತಾರೆ. ಕುವೆಂಪು ಮರೆತು ಹೋಗುತ್ತಾರೆ. ಚಕ್ರ ತನ್ನ ಪಾಡಿಗೆ ತಾನು ತಿರುಗುತ್ತಿರುತ್ತದೆ. ಗಡಿಯಾರವನ್ನು ಗದರಿಸಿ ನಿಲ್ಲಿಸಲು ಸಾಧ್ಯವೇ? ನಾನು ಇತ್ತೀಚೆಗೆ ನನ್ನ ಪರಿಚಿತರೊಬ್ಬರ ಮನೆಯವರನ್ನು ನೋಡಿದೆ.

ಆ ಪರಿಚಿತರು ತೀರಿಕೊಂಡಾಗ ಫೋನ್‌ನಲ್ಲಿ ಮಾತಾಡಲು ಸಾಧ್ಯವೇ ಇಲ್ಲವಾಗಿತ್ತು: ಆತನ ಬಂಧುಗಳು ಆ ಪರಿ ಅಳುತ್ತಿದ್ದರು. ಮೊನ್ನೆ ಆತನ ಅದೇ ಬಂಧುಗಳು ಸಿಕ್ಕರಲ್ಲ? ಅವರ್‍ಯಾರೂ ಚೀರಿ ಅಳುತ್ತಿರಲಿಲ್ಲ. ಆತನ ಪತ್ನಿಯೇ ಅಳುತ್ತಿರಲಿಲ್ಲ. ಹಾಗಂತ ಪ್ರೀತಿ ಇರದಾಗಿದೆ ಅನ್ನಬೇಡಿ. ದುಃಖಕ್ಕೂ, ಕಣ್ಣೀರಿಗೂ ಕೂಡ expiry date ಇರುತ್ತದೆ. ಈ ಪರಿಯಾದ ವೇಗದಲ್ಲಿ ಸ್ಮರಣೆ ಅಳಿಸಿ ಹೋಗುತ್ತಿರುವಾಗ, ಎಲ್ಲವೂ ಬದಲಾಗುತ್ತಿರುವಾಗ ನೆನಪಿನಲ್ಲಿ ಉಳಿಯುವುದು ಹೇಗೆ? ಕೆಲವರನ್ನು ಕಾಡೋ ಪ್ರಶ್ನೆ ಇದು. ಅದು ಕೆಲವರಿಗೆ ಮಾತ್ರ ಸಾಧ್ಯ. ನಾವು ಕೆಂಪೇಗೌಡರನ್ನು ಮರೆತಿಲ್ಲ. ಇನ್ನೂ ನಮಗೆ ಕುಮಾರವ್ಯಾಸ ನೆನಪಿದ್ದಾನೆ. ಚಾಣಕ್ಯ, ಭೀಮಸೇನ, ಅಂಬೇಡ್ಕರ್, ಗಾಂ, ಕೃಷ್ಣದೇವರಾಯ, ಕನಕದಾಸ, ಒನಕೆ ಓಬವ್ವ-ಹೀಗೆ ಕೆಲವರು ನೆನಪಿಗಿದ್ದಾರೆ. ಇದಕ್ಕೆ ರಾಜಕೀಯ ಕಾರಣಗಳೂ ಇವೆಯೆಂಬುದು ಬೇರೆ ಮಾತು. ಹೀಗೆ ನೆನಪಿನಲ್ಲಿ ಉಳಿಯಲಿ ಎಂಬ ಕಾರಣಕ್ಕಾಗಿಯೇ ಹಿಂದಿನ ರಾಜರು ಶಿಲಾಶಾಸನ ಬರೆಸುತ್ತಿದ್ದರು. ಹರ್ಷವರ್ಧನ, ವಿಷ್ಣುವರ್ಧನ, ಅಶೋಕ ಇತ್ಯಾದಿ ಜನ ಆ ಕಾರಣಕ್ಕಾಗಿಯೇ ನೆನಪಿದ್ದಾರೆ.

ಆದರೆ ಕೆಲವರು ಅಂಥ ಯಾವ ಶಾಸನವನ್ನೂ ಬರೆಸಲಿಲ್ಲ.ಕ್ರಾಂತಿಕಾರಿ ಚೇ ಗುವರಾ ನೆನಪಿಲ್ಲವಾ? ಸಂಗೂಳ್ಳಿರಾಯಣ್ಣ?ಭಗತ್ ಸಿಂಗ್? ಇಂಥವರೂ ಇದ್ದಾರೆ ಸ್ವಾಮೀ. ತಲೆಮಾರಿಂದ ತಲೆಮಾರಿಗೆ ಅವರ ನೆನಪು renew ಆಗುತ್ತಲೇ ಇದೆ. ಏಕೆ ಗೊತ್ತೆ? ಅವರ್‍ಯಾರು ಅರಸೊತ್ತಿಗೆ ಇದ್ದವರಲ್ಲ. ಹಣ ಕೊಟ್ಟು ಶಾಸನ ಬರೆಸಿದವರಲ್ಲ. ನಮಗೆ ಫಕೀರನಂತಹ ಗಾಲಿಬ್ ನೆನಪಿದ್ದಾನೆ. ಅದೇ ಕಾಲದ ಮೊಘಲ್ ದೊರೆ ಬಹದ್ದೂರ್ ಷಾ ಜಫರ್ ನೆನಪಿಲ್ಲ. ನಿಜವಾದ ಸಾಧಕರೆಂದರೆಗಾಲಿಬ್‌ನಂತಹ ಪ್ರಚಂಡವಾದ ಕ್ರಿಯಾಶೀಲತೆಯಿದ್ದವರು. ಪುರಂದರ ದಾಸರು ನೆನಪಿದ್ದಾರೆ. ಆದರೆ ನವಕೋಟಿ ನಾರಾಯಣ ನೆನಪಿಲ್ಲ. ಆತನೇ ಆಸ್ತಿಯನ್ನೆಲ್ಲಾ ಹಂಚಿ, ಪುರಂದರ ದಾಸನೆಂದು ಹೆಸರಿಟ್ಟುಕೊಂಡು ಭಿಕ್ಷೆಗೆ ಹೋದ. ಗಿಡಕ್ಕೆ ನೀರೆರೆಯೋ ಸಾಲು ಮರದ ತಿಮ್ಮಕ್ಕ ನೆಪಿರುತ್ತಾಳೆ. ಈಗಿನ ನೀರಾವರಿ ಸಚಿವರಲ್ಲ! ಇಂತಹ ವ್ಯಕ್ತಿಗಳು ಸ್ಮರಣೆಯಲ್ಲಿ ಬಹುಕಾಲ ಬದುಕಿರುತ್ತಾರೆ.
ಇದನ್ನೆಲ್ಲ ಯಾಕೆ ಹೇಳಿದೆನೆಂದರೆ, ನನ್ನ ಗೆಳತಿ ಜಾಯಲ್ ವರ್ಮಾ ಒಂದು ಕಡೆ ಬರೆದಳು: ``ಅವರು ನಮ್ಮನ್ನು ಹುಗಿದು ಹಾಕಲೆಂದು ಹೊರಟಿದ್ದಾರೆ. ಗೆಳತೀ, ನಾವು ಬೀಜಗಳು ಎಂಬುದು ಅವರಿಗೆ ಗೊತ್ತಿಲ್ಲ!" ಅಂತ! ಸತ್ಯವಾದ ಮಾತದು. `ನಿನ್ನನ್ನು ಹೂತು ಬಿಡ್ತೀನಿ' ಅಂತ ಯಾರೋ ಒಬ್ಬ ಅಬ್ಬರಿಸುತ್ತಾನೆ. ಎಷ್ಟೇ ಆಳಕ್ಕೆ ಹುಗಿದರೂ ನಾನು ಮತ್ತೆ ಮತ್ತೆ ಸಸಿಯಾಗಿ ಹುಟ್ಟಿ ಬೆಳೆದು, ಹಚ್ಚಗಿನ ಮರವಾಗಿ ಕಣ್ಣಿಗೆ ಬೀಳುವ ಬೀಜ ಕಣೋ! ಹಾಗಂತ ನಾವು challenge ಮಾಡಬೇಕು.

ನಿಜವಾದ ತಾಕತ್ತು ಅದು! we are seeds!

ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 13 May, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books