Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಒಡೆದು ಬಿದ್ದ ಕೊಳಲು ನಾನು ಎಂಬ ಕಳೆದು ಹೋದ ಗೀತೆಯ ಕುರಿತು...

``ಶ್ಯಾಮ್-ಎ-ಗಮ್ ಕೀ ಕಸಂ... ಆಜ್ ತನ್ಹಾಹೈ ಹಮ್" ಅಂತ ಒಂದು ಹಾಡು. ನಾನು ಬಾಲ್ಯ ಕಳೆದು, ತಾರುಣ್ಯಕ್ಕೆ ಕಾಲಿಡುತ್ತಿದ್ದ ದಿನಗಳಲ್ಲೇ ಇದನ್ನು ಕೇಳಿದ್ದೆ. ಎರಡು ವರ್ಷ ನಾನು ಅಣ್ಣನ ಮನೆಯಲ್ಲಿದ್ದೆ, ತುಮಕೂರಿನಲ್ಲಿ. ಆಗ ನನಗೆ ಹೆಚ್ಚೆಂದರೆ ಒಂಬತ್ತು ವರ್ಷ. ಆ ವಯಸ್ಸಿಗಾಗಲೇ ನನಗೆ ಹಿಂದಿ ಸಾಹಿತ್ಯ- ಸಂಗೀತಗಳ introduction ಆಗಿತ್ತು. ಅದೊಂದು ತೆರನಾದ exposure. ಕಾಲ ಅಥವಾ ಕಾಲಮಾನ ಯಾವುದೇ ಇರಲಿ: ಒಂಬತ್ತು ವರ್ಷದ ಒಬ್ಬ ಪಿಲ್ಟು ತೀರಾ ಕುಂದನ್‌ಲಾಲ್ ಸೈಗಲ್‌ರಂತಹ ಅಮರ ಗಾಯಕರ ದನಿ ಕೇಳಿದ್ದ ಎಂಬುದು ಸಣ್ಣ ಸಂಗತಿ ಯೇನಲ್ಲ. ಆ ವಿಷಯಕ್ಕೆ ಬಂದರೆ ನಾನು ನನ್ನ ಅಣ್ಣ ನಿಗೆ, ಅತ್ತಿಗೆಗೆ ಋಣಿಯಾಗಿರಬೇಕು. ಅಣ್ಣ ಇತ್ತೀಚೆಗೆ ತೀರಿಕೊಂಡ. ಅವನು ಕೆಲಕಾಲ ಗುಲಬರ್ಗಾದಲ್ಲಿ ಇದ್ದುದರಿಂದ ಅವನಿಗೆ ಹಿಂದಿ-ಉರ್ದುಗಳ ಪರಿಚಯ ವಾಗಿತ್ತು. ಆತನಿಗೆ ಬಿ.ಎ.ಸನದಿಯವರಂತಹ ಸಜ್ಜನ ಮುಸ್ಲಿಮರ ಪರಿಚಯವಾಗಿತ್ತು. ಮುಸ್ಲಿಮರೆಡೆಗೆ ಅವನಿಗಿದ್ದ ಸೆಳೆತ ಎಂಥದು ಅಂದರೆ ಇಡೀ ದೇಹ ಮುಚ್ಚುವ ಶೇರವಾನಿ-ಸುರವಾಲ್ ಧರಿಸಿ, ಪಕ್ಕಾ ಮುಸ್ಲಿಮರು ಧರಿಸುವ ಟೋಪಿ ಇಟ್ಟುಕೊಂಡು ಫೊಟೋ ತೆಗೆಸಿಕೊಂಡಿದ್ದ. ಅದನ್ನು ಎನ್‌ಲಾರ್ಜ್ ಮಾಡಿಸಿ ಮನೆಯಲ್ಲಿ ಹಾಕಿಕೊಂಡಿದ್ದ. ನನ್ನ ಅಣ್ಣ, ನಿಜಕ್ಕೂ smart fellow. ಹಿಂದಿ ಚಿತ್ರನಟ ರಾಜೇಂದ್ರ ಕುಮಾರ್‌ನ ಹೋಲಿಕೆಯಿತ್ತು. ಒಳ್ಳೆ ಆಳ್ತನ, ಚೆಂದದ ಬಣ್ಣ ಇದ್ದವು.

ಅತ್ತಿಗೆಯ ಸಂಗತಿಯಂತೂ ಕೇಳಲೇಬೇಡಿ. ಆಕೆಯ ಬಣ್ಣದ ಮುಂದೆ ನನ್ನ ಅಣ್ಣ ಕರಿಯ. ತುಂಬ ಲಕ್ಷಣವಂತೆ ಹಾಗೂ ಜಾಣ ಹೆಣ್ಣು ಮಗಳಾಕೆ. ಹಾಗೆ ಅವರಿಬ್ಬರೂ ನನಗೆ ರಕ್ತ ಸಂಬಂಗಳೇ. ನನ್ನ ತಾಯಿಯ ಖಾಸಾ ಅಕ್ಕ ಬೆಳಗೆರೆ ಜಾನಕಮ್ಮನವರ ಮಗ, ನನ್ನ ಅಣ್ಣ. ಅಂತೆಯೇ ನನ್ನ ತಾಯಿಯ ಖಾಸಾ ಅಣ್ಣ ಬೆಳಗೆರೆ ಸೀತಾರಾಮ ಶಾಸ್ತ್ರಿಗಳ ಮಗಳೇ ನನ್ನ ಅತ್ತಿಗೆ. ಅವರದು ಸೋದರಿಕೆಯ ವಿವಾಹ. ಮೊದಲು ಅನೇಕ ವರ್ಷ ಗುಲಬರ್ಗದಲ್ಲಿ ಲೆಕ್ಚರರ್ ಆಗಿದ್ದ ಅಣ್ಣ, ಆನಂತರ ತುಮಕೂರಿನ ಸರ್ಕಾರಿ ಕಾಲೇಜಿಗೆ ಅಣ್ಣ ವರ್ಗಾ ಆಗಿ ಬಂದಿದ್ದ. ಗುಲಬರ್ಗ ಸೀಮೆಯ ಜೋಳದ ರೊಟ್ಟಿ, ಎಣ್ಣೆಗಾಯಿ, ಅಲ್ಲಿನ ಉರ್ದು ಬೆರೆತ ಕನ್ನಡ, ಹಿಂದಿ-ಉರ್ದು ಸಾಹಿತ್ಯಗಳ ಪರಿಚಯ ಮುಂತಾದವೆಲ್ಲ ಅಣ್ಣನಿಗೆ ಬಳುವಳಿಯಾಗಿ ಬಂದಿದ್ದವು. ಆತ `ಚಿಕ್ಕಮ್ಮ' ಎಂಬ ಶಬ್ದ ಬಳಸುತ್ತಿರ ಲಿಲ್ಲ. `ಅಬಚಿ' ಅನ್ನುತ್ತಿದ್ದ. ಪಾರ್ಕಿಗೆ `ಬಗೀಚಾ' ಅನ್ನುತ್ತಿದ್ದ-ಸಾಕಷ್ಟು ನಿರರ್ಗಳ ಹಿಂದಿ-ಉರ್ದು ಮಾತಾಡುತ್ತಿದ್ದ. ಅವನಲ್ಲಿ ನನಗೆ ತುಂಬ ಇಷ್ಟವಾದ ಎರಡು ಸಂಗತಿಗಳೆಂದರೆ, ಬೆಳಿಗ್ಗೆ ಎದ್ದ ತಕ್ಷಣ ಅವನು ಹಳೆ ಹಿಂದಿ ಹಾಡುಗಳ ರೇಡಿಯೋ ಕಾರ್ಯಕ್ರಮ ಕೇಳುತ್ತಿದ್ದುದು. ಆಗ ಅದು ಶ್ರೀಲಂಕಾ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಶನ್ ಆಗಿರಲಿಲ್ಲ. ಅದನ್ನು ರೇಡಿಯೋ ಸಿಲೋನ್ ಅನ್ನುತ್ತಿದ್ದರು. ಬೆಳಿಗ್ಗೆ ಏಳೂವರೆಯಿಂದ ಶುರು `ಪುರಾನೆ ಫಿಲ್ಮೋಂಕೆ ಗೀತ್' `ಭೂಲೇ ಬಿಸರೇ ಗೀತ್' ಕಾರ್ಯಕ್ರಮಗಳು ಒಂದರ ನಂತರ ಒಂದು ಬರುತ್ತಿದ್ದವು. ಪ್ರತೀರಾತ್ರಿ `ಛಾಯಾಗೀತ್' ಬರುತ್ತಿತ್ತು.

ಬುಧವಾರ ರಾತ್ರಿಗೆ ಅಮೀನ್ ಸಯಾನಿ ನಡೆಸಿಕೊಡೋ `ಬಿನಾಕಾ ಗೀತ್ ಮಾಲಾ' ಕೇಳುತ್ತಿದ್ದೆವು. ಅವೆಲ್ಲ ನನಗೆ ಪರಿಚಯವಾದದ್ದೇ ಅಣ್ಣನಿಂದಾಗಿ. ಖುದ್ದು ಅವನ ಇಬ್ಬರು ಮಕ್ಕಳಿಗಿಂತ ಹೆಚ್ಚಾಗಿ ನಾನು ಆ ಗೀತೆಗಳಿಗೆ ಮಾರು ಹೋದೆ. ಇದನ್ನು ಹೊರತುಪಡಿಸಿದರೆ, ಅಣ್ಣನ ಇನ್ನೊಂದು ಗೀಳು ನನಗೆ ಆ ವಯಸ್ಸಿನಲ್ಲೇ ಅಂಟಿ
ಕೊಂಡಿತ್ತು. ಅಣ್ಣ ಬೇರೆ ಯಾವುದೇ ಪತ್ರಿಕೆ, ಮ್ಯಾಗಝೀನು ಓದುತ್ತಿರಲಿಲ್ಲ. ಅವನು ಓದುತ್ತಿದ್ದುದು Readers Digest! ಇವತ್ತು ಬಿಡಿ, ಅದರಲ್ಲಿ ಉತ್ಕೃಷ್ಟ ಅನ್ನಬಹುದಾದಂಥ ಬರಹಗಳೇ ಕಡಿಮೆ. ಆ ಕಾಲಕ್ಕೆ ಮಾತ್ರ ಅದು ಓದುಗರ ಪಾಲಿನ ಮಹಾರಾಜ. ಅದರದೇ ಧಾಟಿಯಲ್ಲಿ ಪಾ.ವೆಂ. ಆಚಾರ್ಯರು ಕನ್ನಡದಲ್ಲಿ `ಕಸ್ತೂರಿ' ಪತ್ರಿಕೆ ಮಾಡಿದರು.

ಕಾಲದ ಹಾಲ್-ಚಾಲ್ ಹೇಗಿರುತ್ತದೋ ನೋಡಿ: ಹಾಡುಗಳ ಖಜಾನೆಯೇ ಆಗಿ ಹೋದೆ ನಾನು. ಅಷ್ಟೇ ಅಲ್ಲ: ಆಚಾರ್ಯರು ಆರಂಭಿಸಿದ ಅದೇ `ಕಸ್ತೂರಿ'
ಪತ್ರಿಕೆಗೆ ನಾನು ಸಂಪಾದಕ ನಾದೆ. ಎರಡೂ ಜ್ಟಛಿZಠಿ. ಅವೆರಡೂ ಅಣ್ಣನ ಕೊಡುಗೆಗಳೇ. ಇದು ಮತ್ತೇನೂ ಅಲ್ಲ. ಬೆಳೆಯುವ ಮಕ್ಕಳಿರುವ ಮನೆಯಲ್ಲಿ ಒಂದು cultural environment ಸೃಷ್ಟಿಸುವ ಕೆಲಸ. ನೀವು ಬೆಳಿಗ್ಗೆ ಒಂಬತ್ತಕ್ಕೆ ಏಳುವ ರೂಢಿ ಮಾಡಿಕೊಳ್ಳಿ? ನಿಮ್ಮ ಮಗ ಹತ್ತು ಗಂಟೆಗೆ ಏಳುತ್ತಾನೆ. ನೀವು ಐದಕ್ಕೆ ಎದ್ದೇಳಿ: ಅವನು ನಾಲ್ಕೂವರೆಗೆ ಎದ್ದು ಕುಳಿತಿರುತ್ತಾನೆ. ಬೆಳಿಗ್ಗೆ ಎದ್ದು ಸಂಗೀತ ಕೇಳಿ? ಅದು ಕೇವಲ ನಿಮ್ಮ ಕಿವಿಗಲ್ಲ: ಮನೆಯ ಮಕ್ಕಳಿಗೆಲ್ಲ ಕೇಳಿಸುತ್ತದೆ. ಇದನ್ನು ಬುದ್ಧಿಪೂರ್ವಕವಾಗಿ ನೀವು ಮಾಡಿ. ಅವರು ತಮಗೇ ಅರಿವಿಲ್ಲದಂತೆ ಅದರ ಪ್ರಭಾವಕ್ಕೆ ಒಳಪಡುತ್ತಾರೆ.

ಮೊನ್ನೆ ಒಂದು ಜಗಳವಾಯಿತು. ಅದು ಮನಸು ಮುರಿಯುವಂಥ ಜಗಳ. ಅದರ ಪರಿಣಾಮವೆಂದರೆ ಜೀವನ ಪರ್ಯಂತ ಕಣ್ಣಿಗೆ ಕಣ್ಣು ಕೊಟ್ಟು ನೋಡಲು, ಮಾತಾಡಲು ಸಾಧ್ಯವಿಲ್ಲ ಎಂಬಂತಾಯಿತು. ಜಗಳವಾಗಿ ಬಿಟ್ಟು ಹೋಗುವ ಮುನ್ನ ಒಂದಷ್ಟು ಬಿರು ಮಾತುಗಳ ನ್ನಾಡುತ್ತೇವೆ. ಅವರು ಆಡಿದ ಮಾತೇನು ಗೊತ್ತೆ? ``ವಿಸ್ಕಿ, ಸಂಗೀತ ಮತ್ತು ಹೆಣ್ಣು! ಇವು ಬಿಟ್ಟರೆ ಇನ್ನೇನಿದೆ ನಿನ್ನಲ್ಲಿ?" ಅಂದರು.What a shot? ನಾನು ಈಗ ಕುಡಿಯುತ್ತಿಲ್ಲ. ಒಂದೂವರೆ ವರ್ಷಗಳಾದವು. ಒಂದು ಹನಿ ಕುಡಿಯುವುದಿಲ್ಲ. ಇನ್ನು ಹೆಣ್ಣು! ಬೇಕಾದರೆ ನೀವು ದಿನವಿಡೀ ಒಂದು ಪಹರೆ ಹಾಕಿ ನೋಡಿ. ಹೆಣ್ಣಿನ ಸುಳಿವೂ ನಿಮಗೆ ಸಿಗುವುದಿಲ್ಲ. ``ಇದೇನು ತೀರಾ ಸನ್ಯಾಸಿ ಯಂತೆ ಬದುಕ್ತಿದೀಯಲ್ಲ?" ಎಂದು ಗೆಳೆಯರು ಬೈತಾರೆ. ಏಕೆಂದರೆ ನಾನು clubಗಳಿಗೆ ಹೋಗಲ್ಲ. ನನಗೆ ವೀಕ್ ಎಂಡ್ ಪಾರ್ಟಿಗಳಿಲ್ಲ. ನಾನಾಯಿತು, ನನ್ನ ಕೋಣೆಯಾಯಿತು. ಕೆಲವೊಮ್ಮೆ ಕೋಣೆಯ ಬಾಗಿಲೂ ದಾಟದಂತೆ ನನ್ನ ಓದು ಬರಹಗಳಿಗೆ ಗಂಟುಬಿದ್ದು ಕುಳಿತಿರುತ್ತೇನೆ. ನನ್ನ ವೃತ್ತಿ-ಪ್ರವೃತ್ತಿ ಎರಡಕ್ಕೂ ಅದು ಬೇಕು. ಏಕಾಂತಕ್ಕೆ ಬೀಳದವನು ಖಂಡಿತ ಬರಹಗಾರನಾಗಲಾರ. ಇನ್ನು `ಹೆಣ್ಣು' ಅಂತೀರಾ? ಅದು ಭಯಂಕರ ಸಹವಾಸ. Skirt chase ಮಾಡೋನಿಗೆ ತುಂಬ free time ಬೇಕು. ಅದು ದಿನಗಟ್ಟಲೆ, ತಿಂಗಳುಗಟ್ಟಲೆ time ತಿನ್ನುತ್ತದೆ. ಅವಳನ್ನು ಓಲೈಸು, ಐಸ್ ಕ್ರೀಂ ಕೊಡಿಸು, chats ಅಂಗಡಿಗೆ ಕರೆದುಕೊಂಡು ಹೋಗು, Gift ಆಯ್ದು ತಂದುಕೊಡು, ಎಸ್ಸೆಮ್ಮೆಸ್ ಕಳಿಸು, ಗಂಟೆಗಟ್ಟಲೆ ಮಾತನಾಡು-ಇತ್ಯಾದಿಗಳೆಲ್ಲ ಯಾರು ಮಾಡುತ್ತಾರೆ? Time ಎಂಬುದು ಈ ಚಟದಿಂದಾಗಿ ಬರ್ಬಾದ್ ಆಗಿ ಹೋಗುತ್ತದೆ. I am not ready. ವಯಸ್ಸೂ ಏನು ಕಡಿಮೆ ಆಯಿತಾ ನನಗೆ. I am fifty eight. ಹಾಗಂತ ನಾನು ಮೂಲೆಗೇನೂ ಬಿದ್ದಿಲ್ಲ. ತುಂಬ ಜನ ಗೆಳತಿಯರಿ ದ್ದಾರೆ ನನಗೆ. ಆ ಗೆಳೆತನದ ರೀತಿಯೇ ಬೇರೆ. They are really good women. ತೀರ ನೋಡಿದಾಕ್ಷಣ ದೈಹಿಕ ಸೆಳೆವಿಗೆ ಸಿಕ್ಕುವಂತಹ ಗೆಳೆತನಗಳಲ್ಲ. ಅಂದ ಮೇಲೆ ಆ ಗೆಳೆತನಗಳನ್ನು `ಹೆಂಗಸರ ಸಹವಾಸ' ಅನ್ನಲಾದೀತೇ? Nonsense.

ಮೂರನೆಯ ಆಪಾದನೆ ಮಾತ್ರ correct. `ಕುಡಿತ, ಹೆಣ್ಣು, ಹಾಡು' ಅಂದರೆ ಹಾಡುಗಳ ವಿಷಯದಲ್ಲಿ ನಾನು ಉಸಿರೆತ್ತದೆ ಆಪಾದನೆ ಸಹಿಸಿಕೊಳ್ಳುತ್ತೇನೆ. ಏಕೆಂದರೆ, ಸಂಗೀತವಿಲ್ಲದೆ ನಾನು ಒಂದೇ ಒಂದು ದಿನ ಕಳೆಯಲಾರೆ. ಮನೆ, ಆಫೀಸು, ಕಾರು, toilet, ಮೊಬೈಲ್-ಇಂಥದ್ದಿಲ್ಲ ಅನ್ನಲೇ ಬೇಡಿ. ನಾನು ಇರುವ-ಹೋಗುವ ಜಾಗ ಯಾವುದೇ ಇರಲಿ: ಅಲ್ಲಿ ಸಂಗೀತ ಮೊಳಗಬೇಕು. It is a rule. ಸುಮ್ಮನೆ ಕೇಳುವುದಷ್ಟೆ ಅಲ್ಲ. ಪಕ್ಕದಲ್ಲಿರುವವರಿಗೆ ಕೇಳಿಸುತ್ತೇನೆ. ವಿವರಿಸುತ್ತೇನೆ. ಅರ್ಥ ಹೇಳುತ್ತೇನೆ. ಅವ ರಿಗೆ ಒಂದು ಮನೋ ಭೂಮಿಕೆ ರೂಪಿಸಿ ಕೊಡುತ್ತೇನೆ. ಒಂದು ಭಾಷೆ ಕಲಿಸುತ್ತೇನೆ. It is a real teaching. ಅದರಿಂದ culture ಬೆಳೆಯುತ್ತದೆ, culture ಬೆಳೆಯುತ್ತದೆ. ಬೇಕಾದರೆ ನೀವು ಚೇತನಾಳನ್ನು ಭೇಟಿಯಾಗಿ ನೋಡಿ? ಮಾತನಾಡಿಸಿದರೆ, ಅವಳಿಗೆ ನನ್ನಿಂದ ಅದೆಂಥ ಪ್ರಪಂಚದ ಪರಿಚಯವಾಗಿದೆ ಎಂಬುದು ನಿಮಗೆ ಗೊತ್ತಾಗುತ್ತದೆ. ಅವಳು ಮೊನ್ನೆ ಗೆಳತಿಯೊಬ್ಬಳಿಗೆ Zಛಿಚಿಟಟhನಲ್ಲಿ ಬರೆ ಯುತ್ತಿದ್ದಳು. ``ನಾವು ಕಳೆದ supreme ಚಟುವಟಿಕೆಯ ದಿನಗಳು ಅವು. ನಿಮ್ಮ boss ಒಬ್ಬ difficult boss. ಆದರೆ ಎಷ್ಟೊಂದು ತಿಳುವಳಿಕೆಯಿರುವ, learned person ಅವರು" ಅಂತ ಬರೆದಿದ್ದಳು. ಅವಳು learned ಅಂದಳಲ್ಲ? ಅದರಲ್ಲಿ ಸಾಹಿತ್ಯ, ಸಂಗೀತ, ಹಾಡು, ಭಾಷೆ-ಎಲ್ಲವೂ ಸೇರಿವೆ. ಅದನ್ನು ನೀವು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ?

ಇದಕ್ಕೆ ಸಂಬಂಸಿದಂತೆ ಒಂದು ಸಂಗತಿ ಹೇಳಬೇಕು ನಿಮಗೆ. ಅಮೆರಿಕದಲ್ಲಿ ನನ್ನ ಸ್ನೇಹಿತೆಯೊಬ್ಬಾಕೆ ಇದ್ದಾಳೆ. ಆಕೆಗೆ ಕನ್ನಡ-ತೆಲುಗು ಎರಡೂ ಬರುತ್ತವೆ. ಒಳ್ಳೆಯ ಅಭಿರುಚಿ ಇದೆ. ಕೆಲವು ವರ್ಷಗಳ ಹಿಂದೆ ಆಕೆಗೆ ಫೋನ್ ಮಾಡುತ್ತಿದ್ದೆ. ನಾನಾ ವಿಷಯಗಳ ಕುರಿತು ಮಾತು. ಹಾಗೇನೆ, `ಈ ಹಾಡು ಗೊತ್ತಲ್ಲ? ತೆಲುಗಿನದು. ಎಂಥ ಮಧುರವಾದ ಹಾಡು' ಅಂದವನೇ ನನ್ನ ಸ್ಟೀರಿಯೋದಲ್ಲಿ ಹಾಡು ಕೇಳಿಸುತ್ತಿದ್ದೆ. ಈಗ ಬಿಡಿ, ಜಗತ್ತಿನ ಯಾವುದೋ ಭಾಷೆಯ ಯಾವುದೋ ಹಾಡು ಬೇಕಾದರೂ onlineನಲ್ಲಿ ಕೇಳಬಹುದು. ನೋಡಬಹುದು. ಆಗ ಇಂತಹ facility ಇರಲಿಲ್ಲ, ಇದ್ದರೂ ನಮಗದು ಗೊತ್ತಿರಲಿಲ್ಲ. ``ರವೀ, ನಿನ್ನ tasteಗೂ ನನ್ನ ಅಭಿರುಚಿಗೂ ವ್ಯತ್ಯಾಸವೇ ಇಲ್ಲ. ™. I love those songs. ಆದರೆ ಅವೆಲ್ಲ ಹಾಡುಗಳನ್ನ ನಿನ್ನ ಜೊತೆಯಲ್ಲಿ ಕುಳಿತೇ ಕೇಳಬೇಕು. ನಿಜವಾದ ಮಜಾ ಅಂದರೆ ಅದು. ಅದರ ಬಗ್ಗೆ ಹೇಳುವುದಾದರೆ, ™""you are a wonderful company! ಬರ್‍ತೀನಿರು ಇನ್ನು ಕೆಲವೇ ದಿನಗಳಿಗೆ ಇಂಡಿಯಕ್ಕೆ ಬರ್‍ತಿದೀನಿ" ಅಂದಳು. ನಿಜ, ಕೆಲವು ಹಾಡುಗಳನ್ನು ಹಾಗೆspecific ಕೆಲವರೊಂದಿಗೆ ಆಗಿ ಕುಳಿತು ಕೇಳಿದರೇನೇ ಸರಿ. `ಅದರಿಂದ ಏನು ಲಾಭ?' ಅಂತೀರಾ? ಕ್ಷಮಿಸಿ, ನೀವು ನಮ್ಮ ಜಾತಿಗೆ ಸೇರಿ ದವರಲ್ಲ. ಹಾಗಂತಲೇ ಅನ್ನುತ್ತೇನೆ ನಾನು. ಮೊನ್ನೆಯೂ ಅದನ್ನೇ ಅಂದೆ. ಗೆಳೆತನದ ತಂತು ಫಕ್ಕನೆ ಕಡಿದು ಬಿತ್ತು.
ಆ ವಿಷಯಕ್ಕೆ ಬಂದರೆ, ನನ್ನ ಮಿತ್ರರಾದ ಪದ್ಮಪಾಣಿ ಯವರು ತುಂಬ ಎಕ್ಸಲೆಂಟ್ ಕಂಪೆನಿ ನನಗೆ. ಅವರ ಪತ್ನಿ ಬಿ.ಆರ್.ಛಾಯಾ ಸಾವಿರಾರು ಹಾಡು ಹಾಡಬಲ್ಲರು. ಹಾಗಂತ ಗಾಯಕಿಯರ ಗಂಡಂದಿರೆಲ್ಲ ಸಂಗೀತ ಲೋಕದ ಪಿತಾಮಹರಾಗಿರಬೇಕೆಂದೇನೂ ಇಲ್ಲವಲ್ಲ? ಆದರೆ ಪದ್ಮಪಾಣಿ ಹಾಡುಗಳ ವಿಚಾರಕ್ಕೆ ಬಂದರೆ ಅವರೊಂದು google. ಅವರು ಎನ್‌ಸೈಕಲೋಪೀಡಿಯಾ. ಸಟ್ಟ ಸರಹೊತ್ತಿನಲ್ಲಿ ಎಬ್ಬಿಸಿ ``ಈ ಹಾಡಿನ ಗಾಯಕರ್‍ಯಾರು" ಅಂತ ಪ್ರಾಣ ತಿನ್ನುತ್ತಿರುತ್ತೇನೆ. He is a perfect company. ಇಷ್ಟು ವರ್ಷಗಳಾದವಲ್ಲ ಪರಿಚಯವಾಗಿ? ನಾವಿಬ್ಬರೂ ಅತೀ ಹೆಚ್ಚಾಗಿ ಮಾತನಾಡಿದ್ದು ಹಾಡುಗಳ ಬಗ್ಗೆಯೇ. ನಮ್ಮ ಸ್ನೇಹ ತುಂಬ ಬಲವಾಗಿದೆ. ತುಂಬ ಜನರೇನಿಲ್ಲ: ಲಕ್ಷಗಟ್ಟಲೆ ಇದ್ದಾರೆ ಎಂಬಂತೆಯೂ ಇಲ್ಲ: ನಮ್ಮ ಹಾಡುಗಳ ಹುಚ್ಚರ ಪ್ರಪಂಚ ಚಿಕ್ಕದೇ ಇರಬಹುದು. ಆದರೆ ಆ ಪ್ರಪಂಚ unlimited ಸಂತೋಷ ನೀಡುತ್ತದೆ.

ಇತ್ತೀಚೆಗೆ ಪುಟ್ಟ ಗೆಳತಿಯೊಬ್ಬಳು Facebook ನಲ್ಲಿ ನನ ಗೊಂದು link ಕಳಿಸಿದಳು. ನೋಡಿದರೆ ಅದು ಗೋಪಾಲಕೃಷ್ಣ ಅಡಿಗರ ಗೀತೆ. ಅದನ್ನ ಪಂಡಿತ್ ಶ್ರೀಪಾದ ಹೆಗಡೆಯವರು ಯಾವುದೋ ಖಯಾಲಿಯ ಸಂದರ್ಭದಲ್ಲಿ ತಮಗೆ ತಾವು ಎಂಬಂತೆ ಹಾಡಿದ್ದಾರೆ. ಕೇಳಿದರೆ, ಎದೆ ಬಗೆದು ಪ್ರಾಣವನ್ನೇ ಕೊಟ್ಟೇನು ನಾನು! ಅಂತಹ ಗೀತೆಯದು: ``ಒಡೆದು ಬಿದ್ದ ಕೊಳಲು ನಾನು, ನಾದ ಬರದು ನನ್ನಲಿ...". ಅದೆಷ್ಟು ಸಾವಿರ ಸಾವಿರ ಸಲ ಕೇಳಿದ್ದೇನೆ ಗೊತ್ತಾ? ವಿಶೇಷವಾಗಿ, ನನ್ನ ಅತ್ಯಂತ ದುಃಖದ ದಿನಗಳಲ್ಲಿ ನನಗೆ ಪರಿಚಯವಾದ ಗೀತೆಯದು. ಆ ದಿನಗಳಲ್ಲಿ ನನ್ನ ಬಳಿ ಸರಿಯಾದ್ದೊಂದು tape recorder ಕೂಡ ಇರಲಿಲ್ಲ. ಕೆಲಬಾರಿ ಅದನ್ನು ನನ್ನ ಪರಿಚಿತೆಯೊಬ್ಬಾಕೆ ಹಾಡುತ್ತಿದ್ದಳು. ಮತ್ತೆ ಕೆಲಬಾರಿ ನನ್ನ ಒಬ್ಬಂಟಿತನದ ಕ್ಷಣ ಗಳಲ್ಲಿ ನಾನೇ ಹಾಡಿಕೊಳ್ಳುತ್ತಿದ್ದೆ. You may not know ಒಂದು ಕಾಲಕ್ಕೆ ನಾನು ತಕ್ಕಮಟ್ಟಿಗೆ ಚೆನ್ನಾಗಿಯೇ ಹಾಡುತ್ತಿದ್ದೆ. ಈಗೇನಿದೆ? ಈ ಪರಿ ಸಿಗರೇಟು ಸೇದಿದರೆ ಯಾವ ಮಾಧುರ್ಯ ಗಂಟಲಲ್ಲಿ ಉಳಿದೀತು?

ಈಗಲೂ in a way, ಇವು ನನ್ನ ಪಾಲಿಗೆ ಸಂತಸದ ದಿನಗಳಲ್ಲ. ಒಂದಷ್ಟು ಅನಿರೀಕ್ಷಿತ ಘಟನೆಗಳಾಗಿ, ನಾನು ಘಾಸಿ ಗೊಂಡಿದ್ದೇನೆ. ನನಗೆ ಈಗಲೂ ಅದೇ ಅಡಿಗರ ಗೀತೆ ಬೇಕು. ಪಂಡಿತ್ ಶ್ರೀಪಾದ ಹೆಗಡೆಯವರು ಹಾಡಿದ್ದು ನನ್ನ ಬಳಿ ಇದೆ. ಆದರೆ ಆ ಮಹಾನ್ ಗಾಯಕರು ಅದನ್ನು ಪೂರ್ತಿ ಹಾಡಿಲ್ಲ. ಇರಲಿ: ಯಾವ್ಯಾವುದನ್ನೋ, ಎಲ್ಲೆಲ್ಲಿಯೋ ಕಳೆದುಕೊಳ್ಳುತ್ತೇವೆ. ಅಂಥವು ಮತ್ತೆಲ್ಲೋ ಸಿಗುತ್ತವೆಂಬ hope. ಎಲ್ಲಿ ಸಿಗದಿದ್ದರೂ ನನ್ನ ಸಂತಸವೆಂಬುದು ಆ ಹಾಡುಗಳಲ್ಲಿ ಸಿಗುತ್ತದೆ.

ನಾನು ಹುಡುಕಿಕೊಳ್ಳುತ್ತೇನೆ.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 12 May, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books