Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

“ನಿನ್ನ ಕಾಲು ಮುರೀತೀನಿ" ಅಂತಾರೆ.

ಕೈ ಮುರೀತೀನಿ ಅನ್ನಲ್ಲ. ಯೋಚಿಸಿ ನೋಡಿ, ಯಾಕಿರಬಹುದು? ನಿನ್ನ ಹಲ್ಲು ಮುರೀತೀನಿ ಅಂತೇವೆಯೇ ಹೊರತು ‘ದವಡೆ ಸಿಗೀತೀನಿ’ ಅನ್ನಲ್ಲ. ಏಕೆಂದರೆ ಉಳಿದವು ಅಷ್ಟೇನೂ care ಮಾಡಬೇಕಾದಂಥ ಮುಖ್ಯ ಅಂಗಗಳಲ್ಲ. ಹಲ್ಲು ಎಂಬುದು ಮನುಷ್ಯನ front office!. ಕಾಲಾದರೂ ಅಷ್ಟೆ. ಕೈ ಮುರಿತ, ಉಳುಕು, ಊತ ಮುಂತಾದವುಗಳನ್ನು ಮುಚ್ಚಿಟ್ಟುಕೊಂಡು ಅಥವಾ adjust ಮಾಡಿಕೊಂಡು ಕೊಂಚ ದಿನ ತಳ್ಳಿ ಬಿಡಬಹುದು. ಆದರೆ ಕಾಲು ಅವನ shock obsorber! ಹೀಗಾಗಿ ಹಳಬರು ಕಾಲು ಮುರೀತೇನೆ, ಹಲ್ಲು ಮುರೀತೇನೆ ಎಂಬಂತಹ ಮಾತುಗಳನ್ನಾಡಿದರು.
ಅದು ಈಗಲೂ ರೂಢಿಯಲ್ಲಿದೆ.

ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ‘ouch!’ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್ರೇ ತೆಗೆಸಿದಾಗ ಅದು ಕೇವಲ ‘ouch’ ಅಲ್ಲ. ಡಾಕ್ಟರು ಹೆಸರಿಡುತ್ತಾರೆ. ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. Finish. ಒಮ್ಮೆ ಪ್ಲಾಸ್ಟರ್ ಬಿತ್ತೆಂದರೆ, ನಡೆಯುವಿಕೆಯೇ ಅತಂತ್ರ. ನಾವು
ಚಿಕ್ಕವರಾಗಿದ್ದ ದಿನಗಳಲ್ಲಿ ಇದೇ plaster ಹಾಕುತ್ತಿದ್ದರು. ಅದೊಂಥರಾ ಸಿಮೆಂಟ್ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮ ಹಿಂಸೆ. ಆರು ವಾರ ಕಳೆಯುವ ಹೊತ್ತಿಗೆ ಸಾಕು-ಬೇಕು. ಈಗಲೂ ಪ್ಲಾಸ್ಟರ್ ಪ್ರಯೋಗವಿದೆ. ಆದರೆ ಒಂಥರಾ ಬ್ಯಾಂಡೇಜೇ ಈಗ ಆಕರ್ಷಕ. ಅದೇನೇ ಬದಲಾವಣೆಗಳಾಗಿರಲಿ: ಮುರಿದ ಕೈಕಾಲು ತನ್ನ ‘ಆಟ’ ತೋರಿಸೇ ತೋರಿಸುತ್ತದೆ. ಈಗ ಪ್ರಶ್ನೆಯೆಂದರೆ ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ
ಪೂರ್ಣವಾಗಿ ವಾಸಿಯಾಗಿ ಬಗೆ ಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected] ಕಳುಹಿಸಿ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 05 May, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books