Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಮತ್ತೆ ಬಾನಿಗೇರಿದೆ ಆಕಾಶಬುಟ್ಟಿ

ಇದು ಮತ್ತೆ ಮುಗಿಲಿಗೇರಿದೆ: ಆಕಾಶ ಬುಟ್ಟಿ! ಪರಮ ಪುಣ್ಯಾತ್ಮಳಾದಂಥ ಎಚ್.ಡಿ.ಸುನೀತಾಳನ್ನು ಹುಡುಕೋದೇ ಒಂದು ಸರ್ಕಸ್ಸಾಗಿತ್ತು. ಆಕೆ ಕಾಲೇಜಿನಲ್ಲಿ ಈಗ ಉಪನ್ಯಾಸಕಿ. ಹಿಂದೆ ‘ಆಕಾಶಬುಟ್ಟಿ’ ಅಂಕಣ ಬರೆಯುತ್ತಿದ್ದಾಗ ಕಾಲೇಜಿಗೆ ಹೋಗುತ್ತಿದ್ದ ಚಿಕ್ಕ ಹುಡುಗಿ. ನನ್ನ ಮಟ್ಟಿಗೆ ಅವಳು ಇನ್ನಾದರೂ ಚಿಕ್ಕ ಹುಡುಗಿಯೇ, ಅವಳ ಮೇಲೊಂದು ಮಮಕಾರ ನನಗೆ ಆವಾಗಲಿಂದಲೂ ಇದೆ. “ನೀನು ಚೆನ್ನಾಗಿ ಬರೀತೀಯ ಅಂತ ನಾನು ಅನ್ನಲ್ಲ. ಅಂದುಬಿಟ್ಟರೆ ಅಹಂಕಾರ ಆಕಾಶಬುಟ್ಟಿಗಿಂತ ಮೇಲಕ್ಕೆ ಹೋಗಿಬಿಡುತ್ತೆ. ಸುಮ್ಮನೆ ಬರಿ. ಬರಹ ಕೂಡ ಒಂದು ರಿಯಾಜ್‌ನಂತಹುದೇ. ಉರ್ದುವಿನಲ್ಲಿ ‘ರಿಯಾಜ್’ ಅಂದರೆ ಪ್ರಾಕ್ಟೀಸ್. ಸಂಗೀತಾಭ್ಯಾಸಕ್ಕೆ ಸಂಬಂಸಿದಂತೆ ಆ ಶಬ್ದ ಬಳಸುತ್ತಾರೆ. ""You should keep on writing." ಈಗ ಬರೆದು, ಮುಂದೆ ಹತ್ತು ವರ್ಷದ ನಂತರ ಮತ್ತೆ ಬರೀತೀನಿ ಅಂದರೆ ನಿನ್ನ ಹೆಸರು ಯಾರಿಗೆ ನೆನಪಿರುತ್ತೆ? ಕೂತು ಬರಿ" ಅಂದೆ. ಗದರಿಸಿದೆ.

ಸುನೀತಾ ಮತ್ತು ಮಧುಚಂದ್ರ ಸಹೃದಯಿ ದಂಪತಿಗಳು. ಅವರಿಗೀಗ ಎರಡು ಮಕ್ಕಳು. ಅವನು ಮಧು, ಚಿತ್ರರಂಗದಲ್ಲಿ ನೆಲೆ ಕಂಡಿದ್ದಾನೆ. ಅವನ ನಿರ್ದೇಶನದ ‘ವಾಸ್ಕೋಡಿಗಾಮ’ ಚಿತ್ರ ಸಿದ್ಧಗೊಂಡಂತಿದೆ. ಸುನೀತಳಿಗೆ ಲೆಕ್ಚರರ್ ಕೆಲಸ ಬಿಟ್ಟು ಮತ್ತೊಂದ್ಯಾವ ಜವಾಬ್ದಾರಿಯೂ ಇಲ್ಲ. Of course, ಮಕ್ಕಳನ್ನು ನೋಡಿಕೊಳ್ಳೋದು ಜವಾಬ್ದಾರಿಯಲ್ಲ. ಅದು ನಾವಾಗೇ ಕಲಿತ ದುರಭ್ಯಾಸ!

ಮೊನ್ನೆ ಕರೆದು ಗದರಿಸಿದಾಗ ತಕ್ಷಣಕ್ಕೆ ಒಪ್ಪಿಕೊಂಡಳು. “ಹತ್ತು ವರ್ಷದ ನಂತರ ಬರೀತಿದೀಯ. ಬರಹದಲ್ಲೊಂದು freshness ಇರಲಿ. Do it honestly...'' ಅಂದೆ. ನನಗಿಂತ ಚಿಕ್ಕವರಿಗೆ ಅಷ್ಟು ಮಾತ್ರದ ಸೂಕ್ಷ್ಮ ಮನಸ್ಸಿದ್ದು ಅವರು ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸುನೀತ ಒಳ್ಳೆಯ ಬರಹಗಾರ್ತಿ. ಬರೆಯಲಿ. ಕೊನೆಯ ತೀರ್ಪು ಹೇಗಿದ್ದರೂ ನಿಮ್ಮದೇ.

-ಸಂಪಾದಕ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 04 May, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books