Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಒಂದು ಆನಂದದಾಯಕ ಚಟಕ್ಕೆ ಡಿಕ್ಷನರಿ ಓದೋದು ಅಂತಾರೆ!

ಹಾಗೆ ಬರೆಯಲಾಗಲಿಲ್ಲ.

ಅದೇನೂ ತುಂಬ ದಿನಗಳ ಮಾತಲ್ಲ. ನಿನ್ನೆಯಷ್ಟೆ ಬರೆದೆ, “ಓ ಮನಸೇ..." ಪತ್ರಿಕೆಗೆ. ಆದರೆ “ತುಂಬ ಬರೀಬೇಡಿ: ಜಾಗ ಬಿಟ್ಟಿಲ್ಲ" ಅಂತ ನಮ್ಮ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ವೀರೇಶ್ ಹೇಳುತ್ತಿದ್ದ. ಎಲಾಬೊರೇಟ್ ಆಗಿ ಬರೆಯುವಂತಿರಲಿಲ್ಲ. ಆಯ್ತು, ಇಲ್ಲಿ ಬರೆಯೋಣ ಅಂದುಕೊಂಡೆ.

ಅದು ಹುಡುಕಾಟದ ಬಗ್ಗೆ.
ನನಗೀಗ ವಯಸ್ಸು ಐವತ್ತೆಂಟು: ಬುದ್ಧಿ ಇನ್ನೂ ಹದಿನೆಂಟು. ಹುಡುಕಾಟವೆಂಬುದು ನನಗೆ ಜನ್ಮತಃ ಬಂದ ರೋಗ. ನನಗಿರುವ unending ಚಟವೆಂದರೆ ಡಿಕ್ಷನರಿ ಓದೋದು. “ಏನ್ರೀ ಇವನೂ... ಯಾರಾದ್ರೂ ಡಿಕ್ಷನರಿ ಓದ್ತಾರಾ?" ಅಂತ ನೀವು ಕೇಳಬಹುದು. ಅವರಿವರದು ಗೊತ್ತಿಲ್ಲ: ನನಗಂತೂ ಆ ಚಟವಿದೆ. ಒಂದೇನೋ ಪದದ ಅರ್ಥ ಹುಡುಕಿದರೆ, ಅದನ್ನ dictionary ನೋಡೋದು ಅಂತಾರೆ. I call it consulting the dictionary. ಎಷ್ಟು ಬೇಕೋ ಅಷ್ಟು ನೋಡಿ ನಿಘಂಟು ಮಡಚಿಟ್ಟು ಬಿಡುತ್ತೇವೆ. ನಾನು ಅತಿರೇಕಿ: ಒಮ್ಮೆ ನಿಘಂಟು ಕೈಗೆತ್ತಿಕೊಂಡರೆ ಕನಿಷ್ಟ ಪಕ್ಷ ಹತ್ತು ಪುಟ ಓದುತ್ತೇನೆ. ಕೆಲವು ಪದಗಳ ಅರ್ಥ ಗೊತ್ತಿರುತ್ತದೆ. ಮತ್ತೆ ಕೆಲವು ಹೊಸವು. ಎಲ್ಲ ಅಲ್ಲದಿದ್ದರೂ ಕೆಲವು ಪದಗಳ ಅರ್ಥ ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳುತ್ತೇನೆ. ಹಾಗೇನೇ ನಾನು ಬೇರೆ ಬೇರೆ ಡಿಕ್ಷನರಿಗಳನ್ನ ಓದುತ್ತೇನೆ. ಮೊಟ್ಟ ಮೊದಲು ಕನ್ನಡಿಗರಿಗೆ ಬಾಲ್ಯದಲ್ಲೇ ಪರಿಚಯವಾಗೋದು ಗದುಗಿನ ಬಿ.ಜಿ.ಸಂಕೇಶ್ವರ್ ಡಿಕ್ಷನರಿ. ನಮ್ಮ V.R.L ರೋಡ್‌ಲೈನ್ಸ್, ದಿನಪತ್ರಿಕೆಯಾದ ‘ವಿಜಯ ವಾಣಿ’, ಸುದೀರ್ಘ ಕಾಲದ ಸಂಸತ್ ಸದಸ್ಯತನ-ಇತ್ಯಾದಿಗಳ ಖ್ಯಾತಿಯ, ನನ್ನ ಹಿರಿಯಣ್ಣನಂತಹ ಸಂಕೇಶ್ವರ್‌ರವರು, ಅದೇ ಡಿಕ್ಷನರಿ ಪ್ರಕಾಶಕರಾದ ಆ ಸಂಕೇಶ್ವರ ಕುಟುಂಬದವರು. ಕೆಲ ಕಾಲ ಇವರೂ ಡಿಕ್ಷನರಿ ಪ್ರಕಾಶಕರಾಗಿದ್ದರು.

ಹಾಗೆ ಬಾಲ್ಯದಲ್ಲಿ ಕೈಗೆ ಸಿಕ್ಕ ‘ಸಂಕೇಶ್ವರ್ ನಿಘಂಟಿ’ನಿಂದ ಹಿಡಿದು ಆಕ್ಸ್‌ಫರ್ಡ್ ಡಿಕ್ಷನರಿ, ತೆಲುಗು ನಿಘಂಟು, ಹಿಂದಿ ನಿಘಂಟು, ಉರ್ದು ನಿಘಂಟು, Medical Dictionary ಹೀಗೆ ಸಾಲು ಸಾಲು ಡಿಕ್ಷನರಿಗಳು ನನ್ನಲ್ಲಿವೆ. ನಿಘಂಟು ಓದುವುದನ್ನು encourage ಮಾಡಿದ್ದು ನನ್ನ ತಾಯಿ. ಯಾರು ಲಖನೌಗೆ ಹೊರಟರೂ ‘ಅಲ್ಲಿಂದ ಒಂದು ಹಿಂದಿ-ಉರ್ದು ನಿಘಂಟು ತಗಂಡು ಬನ್ನಿ’ ಅಂತ ಗಂಟು ಬೀಳುತ್ತೇನೆ. ಅಮ್ಮನ ನಂತರ ನನಗೆ ನಿಘಂಟಿನ ಮಹಾಲೋಕ ಪರಿಚಯಿಸಿದ ಹಿರಿಯರು ಪಾ.ವೆಂ.ಆಚಾರ್ಯರು. ನನ್ನ ಪಾಲಿಗೆ ಅವರು ವೃತ್ತಿರೀತ್ಯಾ ದ್ರೋಣಾಚಾರ್ಯರೇ. ಅವರು ಬಿಡಿ, ಮೇಲೆ ಹೇಳಿದ ಅಷ್ಟೂ ನಿಘಂಟುಗಳಲ್ಲದೆ ಬಂಗಾಲಿ ನಿಘಂಟು, ಫಾರಸಿ ನಿಘಂಟು ಮುಂತಾದವುಗಳನ್ನೆಲ್ಲ ಹಟಕ್ಕೆ ಬಿದ್ದು ಓದುತ್ತಿದ್ದರು. ಒಂದು ಪದ ಅಥವಾ ಶಬ್ದದ ವ್ಯುತ್ಪತ್ತಿ ಸಂಪೂರ್ಣವಾಗಿ ಅರಿಯದ ಹೊರತು ಕೈ ಬಿಡುತ್ತಿರಲ್ಲಿ. ನಾನು ಅಂಥ ಪಂಡಿತರನ್ನ ನೋಡಿಲ್ಲ; ಅಂಥ researcher ರನ್ನ ನೋಡಿಲ್ಲ. Great he was.

ಈಗ ಶ್ರಮ ಸಾಕಷ್ಟು ಕಡಿಮೆಯಾಗಿದೆ. ಕೇಜಿ ಗಟ್ಟಲೆ ನಿಘಂಟು ಬೇಕಿಲ್ಲ. ಎಲ್ಲವೂ ಈಗ Appಗಳಾಗಿ ಲಭ್ಯ. ಕಂಪ್ಯೂಟರೂ ಬೇಕಾಗಿಲ್ಲ. ನಿಮ್ಮ ಮೊಬೈಲ್ ಫೋನ್‌ನೊಳಕ್ಕೇ ಬಸಿದುಕೊಂಡು ಬಿಡ ಬಹುದು. ನಿಮ್ಮದು ಮೂಲತಃ ಕುತೂಹಲಿ ಮನ ಸ್ಸಾಗಿರಬೇಕು. ‘ಹುಡುಕಾಟ’ ನಿಮ್ಮ ಜಾಯಮಾನ ವಾಗಿರಬೇಕು. ಆಗ ಮಾತ್ರ ಡಿಕ್ಷನರಿ ನಿಮ್ಮ ಫೇವರಿಟ್ ಗ್ರಂಥವಾಗುತ್ತದೆ. ಜಗತ್ತಿನಲ್ಲಿ ಅತೀ ಹೆಚ್ಚು ಮಾರಾಟವಾಗುವ ಪುಸ್ತಕವೆಂದರೆ ಬೈಬಲ್. ಬಹುಶಃ next ಪುಸ್ತಕ ಅಂದರೆ ನಿಘಂಟಿರಬೇಕು. ವಿಶೇಷವೆಂದರೆ ಈ ಗ್ರಂಥ ಅತಿಹೆಚ್ಚು ಮಾರಾಟಗೊಂಡು, ಅತಿ ಕಡಿಮೆ ಓದಲ್ಪಡುವ ಕೃತಿ.

ಹ್ಞಾಂ, ಅವರು ನಿಮಗೆ ಸಿಕ್ಕಾರು. ಅವರು ವೈದ್ಯರಾಗಿರುತ್ತಾರೆ. ಬಿಟ್ಟರೆ ಕುತೂಹಲಿಗಳಾಗಿರುತ್ತಾರೆ. ಅವರು ಕೆಲವು ಪೋಸ್ಟ್‌ಮಾರ್ಟಂಗಳನ್ನು ನೋಡಿರುತ್ತಾರೆ. ಪೋಸ್ಟ್‌ಮಾರ್ಟಂ ಅಂದರೆ ಶವ ಪರೀಕ್ಷೆ. ಅದಕ್ಕೆ ಸಂಬಂಸಿದ ವೈದ್ಯಶಾಸ್ತ್ರ ವನ್ನು Forensic ಶಾಸ್ತ್ರವೆನ್ನುತ್ತಾರೆ. ಒಬ್ಬ ವ್ಯಕ್ತಿ ಅದೆಷ್ಟು ಶವಪರೀಕ್ಷೆಗಳನ್ನ ನೋಡಿರಬಹುದು? ಹತ್ತು, ನೂರು-ನೂರೈವತ್ತಾ? ನಾನು ಎಣಿಸಲು ಕುಳಿತರೆ, ಸಂಖ್ಯೆ ಸಲೀಸಾಗಿ ಸಾವಿರ ದಾಟಿ ಬಿಡುತ್ತದೆ. ಯಾವುದೇ ದೊಡ್ಡ ಮೆಡಿಕಲ್ ಕಾಲೇಜಿಗೆ ಹೋಗಲಿ: ನಾನು ಪರಿಚಯ ಮಾಡಿಕೊಳ್ಳುವುದೇ ಫೊರೆನ್ಸಿಕ್ ಶಾಸ್ತ್ರ ವಿಭಾಗದ ವೈದ್ಯರನ್ನ. General ಆಗಿ ನೇಣು ಹಾಕಿಕೊಂಡವರು, ರೈಲಿಗೆ ತಲೆ ಕೊಟ್ಟವರು, ಗಿಡಕ್ಕೆ ಹೊಡೆಯೋ ಔಷ ಕುಡಿದು ಸತ್ತವರು, ರೇಪ್‌ಗೆ ಒಳಗಾಗಿ ನಂತರ ಕೊಲೆಯಾದವರು, ಬಂದೂಕಿನ ಹೊಡೆತಕ್ಕೆ ಸತ್ತವರು- ಹೀಗೆ ಹತ್ತಾರು ಬಗೆಯಲ್ಲಿ ಸತ್ತವರ ಶವ ಪರೀಕ್ಷೆಗಳಿರುತ್ತವೆ. ನಾನು ಫೊರೆನ್ಸಿಕ್ ಸೈನ್ಸ್ ಪ್ರೊಫೆಸರರನ್ನು ಯಾವ ಪರಿ ಜೀವ ತಿನ್ನುತ್ತೇನೆ ಅಂದರೆ- ಕೆಲಬಾರಿ ಬರುವ ಅತ್ಯಂತ ಕುತೂಹಲ ಕಾರಿ ಕೇಸುಗಳ ಶವ ಪರೀಕ್ಷೆ ಮಾಡುವ ಮುನ್ನ “ರವಿ ಬೆಳಗೆರೇನ ಕರೆಸಿಬಿಡ್ರೀ... ಪಾಪ, ಕೇಳ್ತಾ ಇರ್‍ತಾನೆ" ಅನ್ನುವುದುಂಟು. ಅವುಗಳನ್ನೆಲ್ಲ ಟಿಪ್ಪಣಿ ಮಾಡಿ, ಬರೆದು, ಒಂದು ಕಡೆ file ಮಾಡಿದ್ದರೆ- ಅದೊಂದು ಅದ್ಭುತವಾದ data ಆಗಿಬಿಡುತ್ತಿತ್ತು. ಆದರೆ ನನ್ನ ನೆನಪಿನ ಶಕ್ತಿಯ ಮುಂದೆ ಯಾವ ಫೈಲು-ಯಾವ ಡಾಟಾ?

ನಾನು ಎಂ.ಎ., ಮುಗಿಸಿದ ತಕ್ಷಣ ಮಾಡಿದ ಕೆಲಸವೆಂದರೆ ನನ್ನ ಪ್ರೊಫೆಸರ್ ಡಾ.ಸಿಂದಗಿ ರಾಜಶೇಖರರನ್ನು ಕಂಡು, ವಿಜಯನಗರದ ಕುರಿತು ಸಂಶೋಧನೆ ಮಾಡಲು ಹೆಸರು ನೋಂದಾ ಯಿಸಿದ್ದು. ಮುಂದೆ ನಾನಾ subjectಗಳನ್ನಿಟ್ಟು ಕೊಂಡು ರಿಸರ್ಚ್ ಕೆಲಸ ಮಾಡಿದ್ದೇನೆ: ಅವು ವಿಶ್ವವಿದ್ಯಾಲಯದ ಛತ್ತರಿಯಡಿ ಮಾಡಿದ ರಿಸರ್ಚ್ಗಳಲ್ಲ. ವಕೀಲರಿಗೆ ನಾನಾ ಕೇಸುಗಳ ವಾದ-ಪ್ರತಿ ವಾದ-ತೀರ್ಪುಗಳನ್ನ ಹಾಗೆ ಕಲೆಹಾಕಿ ಇಟ್ಟುಕೊಳ್ಳುವ ಅನಿವಾರ್ಯತೆ ಇರುತ್ತದೆ. ಆದರೆ ನಾನು ವಕೀಲನೂ ಅಲ್ಲ: ಅದು ನನ್ನ ಹೊಟ್ಟೆ ಪಾಡಿನ ಸಂಗತಿಯೂ ಅಲ್ಲ. ಆದರೆ ಬಂದು ನೋಡಿ, ನನ್ನಲ್ಲಿ ಎಲ್ಲೆಲ್ಲಿಯವೋ, ಯಾವ್ಯಾ ವುದೋ ಕೋರ್ಟುಗಳ, ತರಹೇವಾರಿ ಕೇಸುಗಳ ಜಡ್ಜ್‌ಮೆಂಟ್ ಕಾಪಿಗಳಿವೆ. ಕೇವಲ data ಸಂಗ್ರಹಿಸುವವನದು ಒಂದು ಜಾತಿ. ಪ್ಯಾಷನೇಟ್ ಆಗಿ, ದಿನಗಟ್ಟಲೆ ಕೆಲಸ ಮಾಡಿ, ಅದರ ಮೇಲೆ ಸಂಶೋಧನೆ ಮಾಡುವ ಶುದ್ಧ ಕುತೂಹಲಿಯದು ಬೇರೆಯೇ ಜಾತಿ. ಅದು ನನ್ನ ಜಾತಿ.

ನಿನ್ನೆ ‘ಓ ಮನಸೇ...’ಗೂ ಅದನ್ನೇ ಬರೆದೆ. ನಿಮಗೆ ಒಳ್ಳೆಯ ಇಂಗ್ಲಿಷ್ ಕಲಿಯಬೇಕಿದೆಯಾ? ಮೊದಲು ಪ್ರತಿನಿತ್ಯ ಒಂದು ಉತ್ತಮವಾದ ಇಂಗ್ಲಿಷ್ ದಿನಪತ್ರಿಕೆ ತರಿಸಿ. ಎದುರಿಗೆ ಅದನ್ನೂ, ಒಂದು ನಿಘಂಟನ್ನೂ ಇಟ್ಟುಕೊಂಡು, ಎರಡು ತಾಸು ನನ್ನವಲ್ಲವೇ ಅಲ್ಲ ಅಂತ ನಿರ್ಧರಿಸಿ, ಪದ್ಮಾಸನ ಹಾಕಿ ಕುಳಿತುಬಿಡಿ. ಅರ್ಥವಾಗದ ಪದಗಳಿಗೆ, ತಕ್ಷಣ ಡಿಕ್ಷನರಿಯಲ್ಲಿ ಅರ್ಥ ಹುಡುಕಿ. ಅರ್ಥ ಬರೆದಿಟ್ಟುಕೊಳ್ಳಿ. ಅದಕ್ಕೇ ಅಂತಲೇ ಒಂದು note book ಇಟ್ಟುಕೊಳ್ಳಿ. ಇದನ್ನು ಪ್ರತೀನಿತ್ಯ ಮಾಡಿ. ಸತತವಾಗಿ ಎರಡು ವರ್ಷ ಮಾಡಿ. ಆನಂತರ ಇಂಗ್ಲಂಡಿಗೆ ಹೋಗಿ, ಇಂಗ್ಲಂಡ್ ರಾಣಿಯೊಂದಿಗೆ ಅರಾಮಾಗಿ ಚಹ ಕುಡಿದು ವಾಪಸು ಬನ್ನಿ. ಅವಳೇನಾದರೂ ನನ್ನ ಬಗ್ಗೆ ವಿಚಾರಿಸಿದಳಾ? ನೇರವಾಗಿ ಬಂದು ನನ ಗಷ್ಟೆ ಕಿವಿಯಲ್ಲಿ ಹೇಳಿ. Ok?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 01 May, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books