Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ತಿಪ್ಪೆ ಕೆದರಿ ಆಯ್ಕೊಂಡು ತಿನ್ನೋ ಕೋಳಿಗೆ ಕಾಲು ಮುರಿದರೆ ಹೇಗೆ?

“ನಿನ್ನ ಕಾಲು ಮುರೀತೀನಿ" ಅಂತಾರೆ.

ಕೈ ಮುರೀತೀನಿ ಅನ್ನಲ್ಲ. ಯೋಚಿಸಿ ನೋಡಿ, ಯಾಕಿರಬಹುದು? ನಿನ್ನ ಹಲ್ಲು ಮುರೀತೀನಿ ಅಂತೇವೆಯೇ ಹೊರತು ‘ದವಡೆ ಸಿಗೀತೀನಿ’ ಅನ್ನಲ್ಲ. ಏಕೆಂದರೆ ಉಳಿದವು ಅಷ್ಟೇನೂ care ಮಾಡಬೇಕಾದಂಥ ಮುಖ್ಯ ಅಂಗಗಳಲ್ಲ. ಒಬ್ಬ ವ್ಯಕ್ತಿಯ ಹಲ್ಲು ಮುರಿದು ಬಿಡಲಿ? ಅದರಲ್ಲೂ ಮುಂದಿನ ಹಲ್ಲು. ಮುರಿಸಿಕೊಂಡವನ ನಗೆಯೇ ಬರಬಾದ್. ಯಾರೊಂದಿಗೂ ಮುಖ ಕೊಟ್ಟು ಮಾತನಾಡಲಾರ. ಮುರಿದ ಹಲ್ಲಿನ ಜಾಗದಲ್ಲಿ ಒಂದು ದೊಗರು ಬೀಳುತ್ತದೆ. ಮಾತನಾಡುವಾಗ ಆ gapನಿಂದ ಗಾಳಿ ಹೊರಬೀಳುತ್ತದೆ. ಅಲ್ಲಿಗೆ ಮಾತೇ ಬರಬಾದ್. ನಿನ್ನೆ ತನಕ ಚನ್ನಾಗಿದ್ದವನು ಇದ್ದಕ್ಕಿದ್ದಂತೆ ಹಲ್ಲು ಮುರಕೊಂಡು ಇದಿರಾದರೆ ಎಲ್ಲರೂ ಕೇಳುವವರೇ: ಏನಾಯ್ತು? ಯಾರು ಹೊಡೆದದ್ದು?

ಒಂದು ವಿಷಯ: ಪ್ರತಿನಿತ್ಯ ಕೋರ್ಟುಗಳಲ್ಲಿ ಹೊಡೆದಾಟ ಬಡಿದಾಟಗಳ ವಿಚಾರಣೆ ನಡೆಯುತ್ತಿರುತ್ತವೆ. ತಲೆ ಸಿಡಿದು ಹೋಳಾಗಿರುತ್ತದೆ. ಆದರೆ ಕಾನೂನು ಅಂಥ ಕಠಿಣವಾಗಿ ಅದನ್ನು ಗಮನಿಸುವುದಿಲ್ಲ. ಆದರೆ ಹಲ್ಲು ಮುರಿದ ಕೇಸು ಬರಲಿ? ಅದಕ್ಕೆ ತೀವ್ರತರ ಶಿಕ್ಷೆಯೂ ಇದೆ. ವಿಪರೀತವಾದ ದಂಡವನ್ನೂ ಹಾಕುತ್ತಾರೆ: ಹಲ್ಲು ಮುರಿದವನಿಗೆ. ಹಲ್ಲು ಎಂಬುದು ಮನುಷ್ಯನ front office! ಕಾಲಾದರೂ ಅಷ್ಟೆ. ಬೇರೆ ಕೈ ಮುರಿತ, ಉಳುಕು, ಊತ ಮುಂತಾದವುಗಳನ್ನು ಮುಚ್ಚಿಟ್ಟುಕೊಂಡು ಅಥವಾ adjust ಮಾಡಿಕೊಂಡು ಕೊಂಚ ದಿನ ತಳ್ಳಿ ಬಿಡಬಹುದು. ಅದು ತೀರ ಸುಲಭ ಅಂತೇನೂ ನಾನು ಅನ್ನುತ್ತಿಲ್ಲ. ಆದರೆ ಕೈ ಮುರಿತವೆಂಬುದು ಕಾಲು ಮುರಿಯುವುದಕ್ಕಿಂತ ಬೆಟರು. ಹಲ್ಲು ಮನುಷ್ಯನ front office ಆದರೆ ಕಾಲು ಅವನ shock obsorber! ಹೀಗಾಗಿ ಹಳಬರು ಕಾಲು ಮುರೀತೇನೆ, ಹಲ್ಲು ಮುರೀತೇನೆ ಎಂಬಂತಹ ಮಾತುಗಳನ್ನಾಡಿದರು. ಅದು ರೂಢಿಯಲ್ಲಿದೆ ಈಗಲೂ.

ಇದಾಯ್ತಲ್ಲ: ನಿಮ್ಮದು ಹೇಳಿ ಕಥೆ. ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ‘ouch!' ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು ಕೇವಲ ‘ouch' ಅಲ್ಲ. ಡಾಕ್ಟರು ಹೆಸರಿಡುತ್ತಾರೆ. ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. Finish. ಒಮ್ಮೆ ಪ್ಲಾಸ್ಟರ್ ಬಿತ್ತೆಂದರೆ, ನಡೆಯುವಿಕೆಯೇ ಅತಂತ್ರ. ಪ್ಲಾಸ್ಟರ್ ತೆಗೆದ ಮೇಲೂ ಒಂದಷ್ಟು ವಾರ ಆ ಭರತನಾಟ್ಯ ಮುಂದುವರೆಯುತ್ತದೆ. ಸಂತೋಷದ ಸಂಗತಿ ಯೆಂದರೆ ಮೂಳೆ ಮುರಿಯುವುದು ಉಳಿದವುಗಳಿಗಿಂತ ವಾಸಿ. ಮೂಳೆ ಕೂಡಿಕೊಳ್ಳುತ್ತದೆ. ಅದ ಕ್ಕೊಂದಿಷ್ಟು rest ಸಿಕ್ಕರೆ ಸಾಕು. ಆದರೆ ದುರದೃಷ್ಟವಶಾತ್ ಕಾಲಿನ ಕೀಲು-ಕೀಲು ಕೂಡುವ ಜಾಗದಲ್ಲಿ ಅಕಸ್ಮಾತ್ ‘ಲೆಗಮೆಂಟ್’ ಹರಿದು ಹೋಗಿ ಬಿಟ್ಟರೆ ಅದು ಘೋರ. ಮೂಳೆ ಕೂಡಿಕೊಳ್ಳುತ್ತದೆ, ಬೆಳೆಯುತ್ತದೆ. ಆದರೆ ನಾರಿನಂತಹ ಲೆಗಮೆಂಟ್ ಏನು ಬಾಯಿ ಬಡಕೊಂಡರೂ ಅದು ಬೆಳೆಯುವುದಿಲ್ಲ. ಅದಕ್ಕೊಂದು ಆಪರೇಶನ್ ಅಂತ ಮಾಡುತ್ತಾರೆ. ಅದರ ಪರಿಣಾಮ fifty-fifty. ಆಪರೇಶನ್ ಸಕ್ಸಸ್ ಆಗೇ ಆಗುತ್ತೆ ಅನ್ನಲಾಗದು. ಈ ಲೆಗಮೆಂಟ್ ಟೇರ್ ಶಾಪ ನನಗೂ ಆಗಿದೆ. ಒಂದು shock obsorber ಇವತ್ತಿಗೂ ಸರಿ ಹೋಗಿಲ್ಲ. ಏನು ಹರಸಾಹಸ ಮಾಡಿದರೂ ನನಗೆ ಎಲ್ಲರಂತೆ ಕುಕ್ಕರಗಾಲಿನಲ್ಲಿ ಕೂಡಲಾಗುವುದಿಲ್ಲ. ಮೆಟ್ಟಿಲು ಹತ್ತುವುದು ಕಷ್ಟ ವಲ್ಲ: ಆದರೆ ಇಳಿಯೋದು ಆ ದೇವರಿಗೇ ಪ್ರೀತಿ. ತುಂಬ ವಯಸ್ಸಾದವರು ಬಚ್ಚಲಲ್ಲಿ ಬೀಳುತ್ತಾರೆ. ಆಗ ಸಾಮಾನ್ಯವಾಗಿ hip bone (ಪಿರ್ರೆಯ) fracture ಆಗಿಬಿಡುತ್ತದೆ. ವೃದ್ಧಾಪ್ಯದಲ್ಲಿ ಅದು ನಿಜಕ್ಕೂ ಶಾಪ.
ನಾವು ಚಿಕ್ಕವರಾಗಿದ್ದ ದಿನಗಳಲ್ಲಿ ಇದೇ plaster ಹಾಕುತ್ತಿದ್ದರು. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ಆರು ವಾರ ಕಳೆಯುವ ಹೊತ್ತಿಗೆ ಸಾಕು-ಬೇಕು. ಈಗಲೂ ಪ್ಲಾಸ್ಟರ್ ಪ್ರಯೋಗವಿದೆ. ಆದರೆ ಒಂಥರಾ ಬ್ಯಾಂಡೇಜೇ ಈಗ ಆಕರ್ಷಕ. ಅದೆಂಥದೋ sling ಅಂತ ಕೊಡುತ್ತಾರೆ. ಅದೂ ಅಷ್ಟೆ: ಆಕರ್ಷಕ. ಈಗೆಲ್ಲ ಯಾರಾದರೂ ಬಿದ್ದು, ಕಾಲು ಮುರಿದುಕೊಂಡರೆ ಗೆಳೆಯರೆಲ್ಲ ಬಂದು ಅದರ ಮೇಲೆ ಸಹಿ ಹಾಕಿ, ಡೇಟ್ ಬರೆದು,wish you speedy recovery ಅಂತೆಲ್ಲ ಬರೆದು ಅದನ್ನು ಹೆಚ್ಚು ಸಹನೀಯಗೊಳಿಸುತ್ತಾರೆ.

ಅದೇನೇ ಬದಲಾವಣೆಗಳಾಗಿರಲಿ: ಮುರಿದ ಕೈಕಾಲು ತನ್ನ ‘ಆಟ’ ತೋರಿಸೇ ತೋರಿಸುತ್ತದೆ. ಈಗ ಪ್ರಶ್ನೆಯೆಂದರೆ ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭ ವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆ ಹರಿಯಿತಾ? ಆವಾಗಿನ ಅನುಭವಗಳನ್ನು ವಿವರಿಸಿ. ಎಲ್ಲೂ ಭಾವುಕತೆಗೆ ಬೀಳದೆ ನಿಮ್ಮ ಆಗಿನ ಅನುಭವವೇನು ಅಂತ ಬರೆಯುತ್ತೀರಾ? ಅದು ನಿಮ್ಮದೇ ಆದ ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬೇಕು. ಇದ್ದಲ್ಲೇ ಕೂತು, ಅರ್ಧ ಗಂಟೆ ತಲೆ ತಗ್ಗಿಸಿಕೊಂಡು ಒಂದಷ್ಟು ಸಾಲು ಬರೆಯಿರಿ. ಪ್ಲೀಸ್! ನಿಮ್ಮ ಅನುಭವಗಳನ್ನು [email protected] ಮೂಲಕವೂ ಕಳಿಸಬಹುದು.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 April, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books