Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಒಬ್ಬ ಮಗನ ಮದುವೆ : ಇನ್ನೊಬ್ಬ ಮಗನ ನಿಶ್ಚಿತಾರ್ಥ

ಒಬ್ಬ ಮಗನದು ಮದುವೆ ನಿಶ್ಚಿತಾರ್ಥ. ಇನ್ನೊಬ್ಬ ಮಗನದು ಮಂತ್ರ ಮಾಂಗಲ್ಯದ ಮದುವೆ. ನಿಮಗೆ ಕರ್ಣ ಗೊತ್ತು. ಮೊನ್ನೆ ಏಪ್ರಿಲ್ ೯ರ ಸಂಜೆ ಅವನ ನಿಶ್ಚಿತಾರ್ಥ ಜೆ.ಡಬ್ಲು. ಮ್ಯಾರಿಯಟ್ ಹೊಟೇಲಿನಲ್ಲಿ ಆಯಿತು. ಅವನ ಬಾಳ ಸಂಗಾತಿಯ ಹೆಸರು ಬಿ.ಎಸ್.ಲಕ್ಷ್ಮಿ. ನಿವೃತ್ತ ಪ್ರೊಫೆಸರ್ ಹಾಗೂ ಕನ್‌ಕಾರ್ಡ್ ವಾಣಿಜ್ಯ ಸಂಸ್ಥೆಯ ಮುಖ್ಯಸ್ಥರೂ ಆದ ಬೂದನೂರು ಶಿವರಾಮ ಹಾಗೂ ಸುಶೀಲಮ್ಮ ಅವರ ಮಗಳು ಲಕ್ಷ್ಮಿ... ಶೀಮಂತಿಕೆ ತಂದಿಟ್ಟ ಯಾವ ಅಹಂಕಾರವೂ ಇಲ್ಲದ ಲಕ್ಷ್ಮಿ ಅಮೆರಿಕ ಮತ್ತು ಇಂಗ್ಲಂಡ್‌ನಲ್ಲಿ ಅಷ್ಟೆಲ್ಲ ಓದಿ ಬಂದು ಈಗ ಬೆಂಗಳೂರಿನಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತೆ? ಮಾನಸಿಕ ವಿಭಿನ್ನ ಚೇತನ ಮಕ್ಕಳಿಗೆ ಪಾಠ ಹೇಳುತ್ತಿದ್ದಾಳೆ. ಸಿಕ್ಕಿದ್ದ ಅಂತಾರಾಷ್ಟ್ರೀಯ ಬ್ಯಾಂಕೊಂದರ ನೌಕರಿಗೆ ರಾಜೀನಾಮೆ ಕೊಟ್ಟು ಈ spastic ಮಕ್ಕಳ ಶಾಲೆಗೆ ಶಿಕ್ಷಕಿಯಾಗಿ ಕೆಲಸ ಒಪ್ಪಿಕೊಂಡಿರುವ ಲಕ್ಷ್ಮಿಯ ಆದರ್ಶಕ್ಕೆ ನಾನು ವಿಸ್ಮಿತ. ಮಕ್ಕಳಿಗೆ ಹಾಗೂ ಎರಡೂ ಕುಟುಂಬಗಳಿಗೆ ಒಳ್ಳೆಯದಾಗಲಿ ಎಂಬುದು ನನ್ನ ಅಭೀಪ್ಸೆ. ನಿಶ್ಚಿತಾರ್ಥ ಆದದ್ದು ಕರ್ಣನಿಗೆ ಸೂಪರ್ ಖುಷಿ ನೀಡಿದೆ. ಅವನಿಗಿಂತ ಹೆಚ್ಚು ಸಂತೋಷದಲ್ಲಿ ಬೀಗುತ್ತಿರುವವಳು ಅವನ ಅಮ್ಮ. ಆಗಲಿ, ಎರಡು ತಿಂಗಳ ನಂತರ ಅವನ ಮದುವೆ. ನಮ್ಮದು ಯಾವತ್ತೂ ಭಣಗುಡುವ ಖಾಲಿ ಮನೆಯಲ್ಲ. ಆದರೆ ‘ಸೊಸೆ’ ಬಂದರೆ ಅದರ ಸಂಭ್ರಮವೇ ಬೇರೆ. ಲಕ್ಷ್ಮಿ ಬರುವ ಹೊತ್ತಿಗೆ ನಾವು ಕರಿಷ್ಮಾ ಹಿಲ್ಸ್‌ನ ಹೊಸ ಮನೆಗೆ ವಲಸೆ ಹೋಗಿರುತ್ತೇವೆ. “ಹೆಜ್ಜೆಯ ಮೇಲೊಂದ್ಹೆಜ್ಜೆಯ ನಿಕ್ಕುತ... ಲಕ್ಷ್ಮೀ ಬಾರಮ್ಮಾ..." ಅನ್ನುವುದಕ್ಕೆ ಸಿದ್ಧರಾಗಿದ್ದೇವೆ. ಅಷ್ಟಾದರೆ ಸಾಕು.

ಇನ್ನೊಬ್ಬ ಮಗ ಅರುಣ. ಅವನು ಅರುಣ ಕೆಂಭಾವಿ: ಐ.ಎ.ಎಸ್. ಅಕಾರಿ. ಈಗ ಮೇಘಾಲಯದಲ್ಲಿದ್ದಾನೆ. “ನನ್ನ ಐ.ಎ.ಎಸ್ ಪರೀಕ್ಷೆ ಪಾಸಾಯಿತು. ಈಗ ತರಬೇತಿಗಾಗಿ ಹಿಮಾಲಯದ ತಪ್ಪಲಲ್ಲಿರುವ ‘ಮಸೂರಿ’ಗೆ ಹೋಗುತ್ತಿದ್ದೇನೆ. ಐ.ಎ.ಎಸ್., ಪರೀಕ್ಷೆಯಲ್ಲಿ ಗೆಲುವು ಕಂಡೆನಲ್ಲ? ಅದಕ್ಕೆ ನಿಮ್ಮ ಬರವಣಿಗೆಗಳೂ ಕಾರಣ. ಬೆಂಗಳೂರಿನಲ್ಲಿ ಒಂದು ಚಿಕ್ಕ ರೂಮ್ ಮಾಡಿಕೊಂಡು ಒಂದು ತಪಸ್ಸಿನಂತೆ ಅದಕ್ಕಾಗಿ ಸಿದ್ಧನಾದೆ. ಪರೀಕ್ಷೆ ಮುಗಿದು ಅಂತಿಮ ಫಲಿತಾಂಶ ಬಂದ ನಂತರವೇ ನಿಮ್ಮನ್ನು ಕಾಣೋದು ಅಂದುಕೊಂಡಿದ್ದೆ. ಈಗ ಬಂದಿದ್ದೇನೆ!" ಅಂದ ಅರುಣ. ನನ್ನ ಮಗನೇ ಐಎಎಸ್ ಪರೀಕ್ಷೆ ಪಾಸಾದ ಸುದ್ದಿ ಕೇಳಿದ್ದಿದ್ದರೂ ನಾನು ಅಷ್ಟು ಸಂಭ್ರಮ ಪಡುತ್ತಿರಲಿಲ್ಲ. ಅವನ ತಂದೆ ಕಂದಾಯ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದವರು. ಈಗ ಅದೇ ಕಂದಾಯ ಇಲಾಖೆಯಲ್ಲಿ ಹತ್ತಾರು ಕ್ಲರ್ಕ್‌ಗಳು ಅರುಣನ ಕೈ ಕೆಳಗೆ ಕೆಲಸ ಮಾಡುತ್ತಾರೆ.

ಅವನು ಪ್ರೀತಿಸಿದ ಹುಡುಗಿ ಕೂಡ ಯಾರ ಮೇಲೋ ಅವಲಂಬಿತೆಯಾಗಿ ಬದುಕಿದವಳಲ್ಲ. ಒಂದರ್ಥದಲ್ಲಿ ಸ್ವತಂತ್ರ ಹಾಗೂ ಬಹುಮುಖ ಪ್ರತಿಭೆಯಂಥವಳು. ಅರುಣ ಇತ್ತೀಚೆಗೊಮ್ಮೆ ಮೇಘಾಲಯದಿಂದ ಬಂದವನು ತನ್ನ ಗೆಳತಿಯನ್ನು ಕರೆತಂದು ಪರಿಚಯಿಸಿದ್ದ. ಅವನದು ಮಂತ್ರ- ಮಾಂಗಲ್ಯ ವಿವಾಹ. ಮದುವೆಗೆ ನೀವೇ ಹಿರಿಯರು, ಬರಲೇಬೇಕು ಅಂದಿದ್ದ. ಅಂಥ ಮದುವೆಗಳಿಗೆ ಮುದ್ದಾಂ ಹೋಗುವವನು ನಾನು. ಆದರೆ ಅಷ್ಟು ಪ್ರಾಣಪ್ರಿಯನಾದ ಅರುಣನ ಮದುವೆಗೆ ಹೋಗಲಾಗಲಿಲ್ಲ. ಸಂತಸವೆಂದರೆ, ನನ್ನ ಆತ್ಮೀಯರಾದ ಜೋಗಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಹೋಗಿದ್ದರು. ಮದುವೆಗೆ ಅವರೇ ಹಿರಿಯರು. ಅರುಣನ ಬದುಕು ಬಂಗಾರವಾಗಲಿ. ಅವರಿಬ್ಬರ ಮದುವೆಗೆ, ನಂತರದ ಸುಂದರ, ಸರಳ, ಪ್ರಾಮಾಣಿಕ ಬದುಕಿಗೆ ಯಶಸ್ಸು ಸಿಗಲಿ ಎಂಬುದು ನನ್ನ ಆಶಯ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 20 April, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books