Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಅದೊಂದು ತೆರನಾದ ಹಣ್ಣು ಹಂಚಿ ತಿಂದ ಸಂತಸ!

ಅದೊಂದು ಸುಂದರ ಹಾಡು.

"ಲಬೋನ್ಸೆ ಚೂಮ್‌ಲೋ... ಆಂಖೋನ್ಸೆ ಥಾಮ್ ಲೋ ಮುಝ್ ಕೋ..." ಅಂತ ಶುರುವಾಗುತ್ತೆ. ಸಿನೆಮಾದ ನಿರ್ದೇಶಕ, ಸಂಗೀತ ನಿರ್ದೇಶಕ, ಗಾಯಕರು, ಕೋರಿಯೋ ಗ್ರಾಫರ್-ಎಲ್ಲರೂ ಹೊಸಬರೇ. ನಟರಾದ ಓಂಪುರಿ ಮತ್ತು ರೇಖಾ ಪರಿಚಿತರಲ್ಲ. ಗೀತರಚನೆಗಾರರ ಮಾತು ಬಿಡಿ: ಅವರೊಂಥರಾ ನಿರಂತರ ಮಾಂತ್ರಿಕ. ಹೆಸರು ಸಂಪೂರನ್‌ಸಿಂಗ್ ಕಾಲ್ರಾ ಅಲಿಯಾಸ್ ಗುಲ್ಜಾರ್! ಎದ್ದರೆ ಕುಳಿತರೆ ಆ ಹಾಡು ಕಾಡುತ್ತದೆ. ಮತ್ತೆ ಮತ್ತೆ ಕೇಳಬೇಕೆನ್ನಿಸುತ್ತದೆ.

ಕೆಲವು ಹಾಡುಗಳೇ ಹಾಗೆ. ಬೆಳ್ಳಬೆಳಿಗ್ಗೆ ಏಳೇಳುತ್ತಲೇ ಗಂಟು ಬೀಳುತ್ತವೆ. ದಿನವಿಡೀ ಗುನುಗುತ್ತೇನೆ. ನಾಳೆಗೆ ಇನ್ಯಾವುದೋ ಹಾಡು. ಕೆಲವು ಸಲ ಒಂದೇ ಹಾಡು ಇಡೀ ವಾರ ಕಾಡುತ್ತದೆ. ಈಗ ಗುಲ್ಜಾರ್ ಸಾಹೇಬರ ಹಾಡು ಗಂಟು ಬಿದ್ದು ಎಂಟು ದಿನಗಳೇ ಆಗಿವೆ. ಅದು "ಆಸ್ಥಾ" ಎಂಬ ಸಿನೆಮಾದ ಹಾಡು. ಹೊಸದೇನಲ್ಲ. ಮೋಹಕ

ಹಾಗೂ ನಿಗೂಢ ಸುಂದರಿಯೂ, ನೆಚ್ಚಿನ ನಟಿಯೂ ಆದ ರೇಖಾ ಬಗ್ಗೆ ಒಂದಷ್ಟು ಮಾಹಿತಿ ಕಲೆಹಾಕುತ್ತಿದ್ದೆ. It's a small research for a book. ಆಗ ತಗುಲಿಕೊಂಡದ್ದೇ 'ಆಸ್ಥಾ' ಚಿತ್ರದ ಹಾಡು. ಅದು ನಿಜಕ್ಕೂ ಲವ್ಲಿ. ಮೊದಲು ಸುಮ್ಮನೆ ಹಾಡಿನ ಆಡಿಯೋ ಕೇಳಿದೆ. ಅದರ ಸಾಹಿತ್ಯ ಬರೆದಿಟ್ಟುಕೊಂಡೆ. ಆನಂತರ ಹಾಡಿನ ಹಿಂದೆ ಇರೋರೆಲ್ಲ ಯಾರು ಅಂತ ತಲಾಷ್ ಮಾಡಿದೆ. ಕಡೆಗೆ, ಅದರ ವಿಡಿಯೋ ನೋಡಿದೆ. Felt very very happy.

ನಾನು ಹೀಗೆ ಗಂಟು ಬೀಳುವುದರಿಂದಲೇ ನನಗೆ ಸಾವಿರಗಟ್ಟಲೆ ಹಾಡು ನೆನಪಿವೆ. ವೇದಿಕೆಯ ಮೇಲೆ ನಿಂತು ಹಾಡುಗಳ ಬಗ್ಗೆ ಹಾಗೆ ನಿರರ್ಗಳವಾಗಿ ಮಾತನಾಡಲಿಕ್ಕೆ ನನಗೆ ಸಾಧ್ಯವಾಗುವುದೇ ಹಾಗೆ. I enjoy that.

ಈಗ ಪರ್ಲೀನ್ ಗಿಲ್, ಐಶ್ವರ್ಯ ಮಜುಮ್‌ದಾರ್, ಹುಸ್ನೇನ್ ಲಾಹೋರಿ ಮುಂತಾದ ಹೊಸಬರ ಹಾಡುಗಳನ್ನು ಒಂದು ಕಡೆಯಿಂದ ಕಲೆ ಹಾಕುತ್ತಿದ್ದೇನೆ. "ಅಯ್ಯೋ ಬಿಡ್ರಿ, ಮೊದಲಿದ್ದ ಆ ಗಂಧರ್ವ ಗಾಯಕರಾದ ಲತಾ, ಆಶಾ, ಮುಖೇಶ್, ರಫಿ ಮುಂತಾ ದವರೆಲ್ಲ ಹೊರಟು ಹೋದ ಮೇಲೆ ಅದೇನು ಉಳಿದಿದೆ? ಈಗಿನ ಹಾಡುಗಳನ್ನ ಯಾರು ಕೇಳ್ತಾರೆ?" ಅಂತ ನಾನು ನೂರು ವರ್ಷ ವಯಸ್ಸಾದವರಂತೆ ಮಾತನಾಡುವುದಿಲ್ಲ. ನನಗದು ಕಾತರಿಯಾಗಿ ಗೊತ್ತಿದೆ. ಒಬ್ಬ ಮಹಾನ್ ಗಾಯಕನನ್ನು ಹಾಗೆಲ್ಲ ಸುಲಭಕ್ಕೆ replace ಮಾಡಲಾಗುವುದಿಲ್ಲ. "ಹೆಲೆನ್‌ಳಂಥ ನರ್ತಕಿ ಇನ್ನೊಬ್ಬಳು ಸಿಗುವುದಿಲ್ಲ. ಅವಳೆಲ್ಲಿ ನರ್ಗಿಸ್? ಮಧುಬಾಲ ಹೋದಮೇಲೆ ಅವಳಂಥ ಹೀರೊಯಿನ್ ಇನ್ನೊಬ್ಬಳು ಸಿಗುತ್ತಾಳಾ? ನಮ್ಮ ರಾಜಕುಮಾರ್ ತೀರಿ ಹೋದರು. ಇನ್ನೊಬ್ಬ ರಾಜ್‌ಕುಮಾರ್ ಸಿಗೋದು ಸಾಧ್ಯವಾ?"

ಇಲ್ಲ ಅದು ಸಾಧ್ಯವಾಗುವುದಿಲ್ಲ. ಆದರೆ ಅಂಥವರು ಹೊರಟು ಹೋದ ಮೇಲೆ ಕವಿಯುವ ಶೂನ್ಯ ಕೂಡ ತುಂಬ ದಿನ ಉಳಿಯುವುದಿಲ್ಲ.ಆ ಶೂನ್ಯ ದಿಂದಲೇ ಇನ್ನೊಬ್ಬರು ಹುಟ್ಟಿಕೊಳ್ಳುತ್ತಾರೆ. ಬದುಕಿನ ನಿಯಮವಿರುವುದೇ ಹಾಗೆ. ಅಂಥ ಬೇಂದ್ರೆ, ಗೋಪಾಲಕೃಷ್ಣ ಅಡಿಗ, ನರಸಿಂಹಸ್ವಾಮಿ ಮುಂತಾದವರು ಗತಿಸಿ ಹೋದ ನಂತರ ಸಾಹಿತ್ಯ ಸೃಷ್ಟಿ ನಿಂತೇನೂ ಹೋಗುವು ದಿಲ್ಲ. ಸಮಯದ ಚಕ್ರ ನಿರಂತರವಾಗಿ ತಿರುಗುತ್ತಲೇ ಇರುತ್ತದೆ. ಬೇಂದ್ರೆ ಯಂಥವರು ಒಂದು ಮೈಲಿಗಲ್ಲಿನಂತೆ ಚಿರಸ್ಥಾಯಿಯಾಗಿ ಉಳಿದು ಬಿಡುತ್ತಾರೆ. But that is not an end. ನಾವು ಹೊಸಬರನ್ನು ಹುಡುಕಿ, ಗುರುತಿಸಿ, enjoyment®Ü ಸಂತೋಷ ವನ್ನು ಸುತ್ತಲಿನವರಿಗೆ ಹಂಚಬೇಕು.

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ನನ್ನ ಬಗ್ಗೆ ಚಿಕ್ಕ ದೊಂದು ಚರ್ಚೆ ನಡೆದಿತ್ತು. `ನೀವೇನೇ ಅನ್ನಿ, ನಮ್ಮ ನ್ನೆಲ್ಲ ಓದಲು ಹಚ್ಚಿದವನು ರವಿ ಬೆಳಗೆರೆ' ಅಂತ ಕೆಲವರಂದರು. `ನಾನು ಇಷ್ಟು ಎತ್ತರಕ್ಕೆ ಬೆಳೆಯೋದಕ್ಕೆ ಅವರ ಬರಹಗಳೇ ಕಾರಣ' ಅಂತ ಇನ್ನಷ್ಟು ಜನ ಅಂದರು. `ಹೊಸ ಓದುಗರನ್ನು ಸೃಷ್ಟಿಸಿಕೊಂಡು ಬರೆ ಯುತ್ತಾ ಹೋದವನು ರವಿ ಬೆಳಗೆರೆ' ಅಂದರು. ಯಾವುದಕ್ಕೂ ನಾನು ರಿಯಾಕ್ಟ್ ಮಾಡಲಿಲ್ಲ. ಇದೇ ತರಹದ ಚರ್ಚೆ ನನ್ನ ನಂತರದ ತಲೆಮಾರಿನ ಇನ್ಯಾ ರದೋ ಬಗ್ಗೆ ಮತ್ತೆಂದೋ ನಡೆಯುತ್ತದೆ. ನನಗದು ಗೊತ್ತಿರಬೇಕು.
ಸದ್ಯಕ್ಕೆ ನನ್ನ ಕೆಲಸ ಇಷ್ಟೇ: ತುಂಬ ಅಕ್ಕರೆಯಿಂದ, ಪ್ಯಾಷನೇಟ್ ಆಗಿ ಬರೆಯುತ್ತ ಹೋಗಬೇಕು. ಯಾವತ್ತೋ ಕೈ ಸೋಲಬಹುದು. ಆದರೆ ಹೀಗೆ ಬರೆ ಯುತ್ತ, ಜೊತೆಯಲ್ಲೇ ಇಂಟರೆಸ್ಟಿಂಗ್ ಆದುದನ್ನ ಹೆಕ್ಕುತ್ತಾ, ಕಲೆಹಾಕುತ್ತಾ, ಸುತ್ತಲಿನವರಿಗೆ ವಿವರಿಸುತ್ತಾ, ತೋರಿಸುತ್ತಾ, ಕೇಳಿಸುತ್ತಾ, ಚಪ್ಪರಿಸಲಿಕ್ಕೊಂದು ತೊಳೆದ ಉಪ್ಪಿನಕಾಯಿಯ ಹೋಳು ಕೊಡುತ್ತಾ ಅದರ ಸಂತೋ ಷಕ್ಕೆ ಕಾರಣನಾಗಬೇಕು. I love to do it.

ನನ್ನನ್ನು ಹುಡುಕಿಕೊಂಡು ಕೆಲವು ಗೆಳೆಯರು ಇದೇ ಕಾರಣಕ್ಕೆ ಬರುತ್ತಾರೆ. ನನಗೆ ಬಿಡುವಿರಬೇಕು, ಲಹರಿಗೆ ಬೀಳ ಬೇಕು, ಹಿತವಾದ ವಾತಾವರಣ ಇರಬೇಕು. ಆಗ ಶುರುವಾಗುತ್ತದೆ ಮಾತು. ಏನೋ ಮಾತು, ಮರೆತು ಹೋಗಿದ್ದ ಕೆಲವು ಸಂಗತಿಗಳು, ಫಕ್ಕನೆ ನಾಲಗೆಗೆ ಎಟಕುವ ಹಾಡು, ನನ್ನ ಹೊಚ್ಚ ಹೊಸ ಓದು-ಎಲ್ಲ ಬರುತ್ತವೆ ಹರಟೆಯ ಅಂಗಳಕ್ಕೆ. ಅದು ಅದ್ಭುತ ಪಟ್ಟಂಗ. ಬಂದವರ ಪಾಲಿಗೆ ಎಂಟರ್‌ಟೇನ್‌ಮೆಂಟು. ನನ್ನ ಪಾಲಿಗದು ರಿಫ್ರೆಶ್‌ಮೆಂಟ್. ಮತ್ತೆ ನನ್ನ ಗಾಡಿಯ ಟ್ಯಾಂಕ್‌ಗೆ ಪೆಟ್ರೋಲು ಬಿದ್ದಂತೆ. ನಿರುಮ್ಮಳವಾಗಿ ಓಡಿಸತೊಡಗುತ್ತೇನೆ. ಮೊನ್ನೆ ಇಂಥದೊಂದು ಪಟ್ಟಾಂಗಕ್ಕೆ ನನ್ನ ಗೆಳತಿಯೊಬ್ಬಳು ಬಂದು ಸೇರಿಕೊಂಡಳು. My God! ಅವಳ ಬಗ್ಗೆ ಒಮ್ಮೆ ನಿಮಗೆ ವಿವರಿಸಬೇಕು. ``ನೀನೊಂಥರಾ ವಿಷಕನ್ಯೆ ಕಣೇ" ಅನ್ನುತ್ತಿರು ತ್ತೇನೆ. ಕೊಂಚ ಸಹನೆ ಇರಲಿ: ಅವಳ ಕುರಿತು ಬರೆಯುತ್ತೇನೆ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 April, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books