Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಕತ್ತಲಿನತ್ತ ತಲುಪುವ ಸ್ಥಿತಿಯನ್ನು ತಪ್ಪಿಸಿ, ತ್ರಿಕಾಲದಲ್ಲೂ ಜನ ನಿಮ್ಮನ್ನು ನೆನೆಯುತ್ತಾರೆ

ಸಿದ್ದರಾಮಯ್ಯನವರ ಸರ್ಕಾರ ಇದೀಗ ತ್ರಿಕಾಲ ಅಂತ ವಿದ್ಯುತ್ ಸಮಿತಿಯನ್ನೇನೋ ಮಾಡುತ್ತಿದೆಯಂತೆ. ಫೈನ್, ಕಡೆಗಾದರೂ ಅಂತಹದೊಂದು ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆಯಲ್ಲ? ಅಂದ ಹಾಗೆ ನಾವೆಲ್ಲ ನೆನಪಿಡಬೇಕಾದ, ಧಾವಂತ ಪಡಬೇಕಾದ, ಆತಂಕಕ್ಕೊಳಗಾಗಬೇಕಾದ ತುರ್ತು ಸಂಗತಿಗಳೆಂದರೆ ವಿದ್ಯುತ್ ಮತ್ತು ನೀರಿನದು. ಕಳೆದೊಂದು ವರ್ಷದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಲೆವೆಲ್ಲಿಗೆ ಹೋಯಿತೋ ಇಲ್ಲವೋ? ಆ ಮಾತು ಬೇರೆ. ಆದರೆ ಆಸ್ತಿ ನೋಂದಣಿಯ ವಿಷಯದಲ್ಲಿ ದಕ್ಷಿಣ ಭಾರತದಲ್ಲೇ ಅದಕ್ಕೀಗ ಮೊಟ್ಟಮೊದಲ ಸ್ಥಾನ. ಅಂದರೆ ಪರ ರಾಜ್ಯಗಳವರು ಹೆಚ್ಚಾಗಿ ಬಂದು ಕರ್ನಾಟಕದಲ್ಲಿ ನೆಲೆಸುತ್ತಿದ್ದಾರೆ. ಮದ್ಯ ಮಾರಾಟದ ವಿಷಯದಲ್ಲಿ ದಕ್ಷಿಣ ಭಾರತದ ನಂಬರ್ ಟೂ ರಾಜ್ಯ ಕರ್ನಾಟಕ. ಕಳೆದ ವರ್ಷ ನಾಲ್ಕು ಲಕ್ಷ, ಮೂವತ್ತು ಸಾವಿರ ಮದ್ಯದ ಪೆಟ್ಟಿಗೆಗಳು ಮಾರಾಟವಾಗಿದ್ದರೆ, ಈ ಸಲ ಇನ್ನೂ ಇಪ್ಪತ್ತೈದು ಸಾವಿರದಷ್ಟು ಮದ್ಯದ ಪೆಟ್ಟಿಗೆಗಳು ಹೆಚ್ಚಾಗಿ ಖರ್ಚಾಗಿವೆ. ಅರ್ಥಾತ್, ಷೋಕಿಗಾಗಿ ಮಾತ್ರವಲ್ಲ, ನಿರಾಶೆಗಾಗಿ ಕುಡಿಯುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಗಮನಿಸಬೇಕಾದ ಸಂಗತಿ ಎಂದರೆ ಅರ್ಕಾವತಿ ಲೇಔಟ್ ಡಿನೋಟಿಫಿಕೇಷನ್ ಪ್ರಕರಣ ಎನ್ನುತ್ತೇವಲ್ಲ? ಇಲ್ಲಿ ಡಿನೋಟಿಫೈ ಆದ ಭೂಮಿ ಯಾವುದು? ಅಲ್ಲಿ ಈಗ ಏನಿದೆ? ಎಂಬುದನ್ನು ನ್ಯಾಯಮೂರ್ತಿ ಕೆಂಪಣ್ಣ ಆಯೋಗ ಪರಿಗಣಿಸಿದರೆ ಸಾಕು. ಹೀಗೆ ಡಿನೋಟಿಫಿಕೇಷನ್ ಆದ ಜಾಗದಲ್ಲಿ ದಂಡಿಯಾಗಿ ರಿಯಲ್ ಎಸ್ಟೇಟ್ ಮಾಫಿಯಾ ಬೆಳೆದಿದೆ. ಉತ್ತರ ಭಾರತೀಯರು ಮನಾಮನಿಯಾಗಿ ಬಂದು ಫ್ಲ್ಯಾಟುಗಳನ್ನು ಕೊಂಡಿದ್ದಾರೆ. ಬಡ,ಮಧ್ಯಮ ವರ್ಗದ ಕನ್ನಡಿಗ ಅಲ್ಲಿ ಫ್ಲ್ಯಾಟು ಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದರೆ ಅವೆಲ್ಲ ಮಿನಿಮಮ್ ಐವತ್ತು ಲಕ್ಷದಿಂದ ಹಿಡಿದು, ಮೂರು-ನಾಲ್ಕು ಕೋಟಿ ರುಪಾಯಿಗಳ ಗಡಿ ಮುಟ್ಟಿದೆ. ಹೀಗೆ ಯಾರೇ ಬರಲಿ, ಅವರಿಗೆ ಕರೆಂಟು, ನೀರು ಕೊಡುವುದು ಮಾತ್ರ ತಪ್ಪಿಸಲು ಸಾಧ್ಯವಿಲ್ಲವಲ್ಲ? ಆದರೆ ತೆಗೆದು ನೋಡಿ. ಸರ್ಕಾರಿ ಸ್ವಾಮ್ಯದ ಕೆಪಿಸಿಯಿಂದ ಪ್ರತಿ ವರ್ಷ ನಮಗೆ ಅಗತ್ಯ ಬೀಳುವ ಹೆಚ್ಚುವರಿ ವಿದ್ಯುತ್‌ನ್ನು ಉತ್ಪಾದಿಸುವ ಕೆಲಸ ಆಗುತ್ತಿದೆಯೇ? ಇಲ್ಲ. ಯಾಕೆಂದರೆ ಕೆಪಿಸಿಗೀಗ ವಿದ್ಯುತ್ ಉತ್ಪಾದಿಸುವುದರಲ್ಲಿ ಆಸಕ್ತಿ ಇದ್ದರೂ, ಎಲ್ಲರಿಗೂ ಅಂತಲ್ಲ, ಕೆಲವರಿಗೆ ಇದ್ದರೂ ಸರ್ಕಾರಕ್ಕೆ ಅಂತಹ ಆಸಕ್ತಿ ಇಲ್ಲ. ಇದರ ಪರಿಣಾಮವೇ ದೊಡ್ಡ ದೊಡ್ಡ ಬಿಜಿನೆಸ್‌ಮನ್‌ಗಳು ಬಂದು ವಿದ್ಯುತ್ ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿರುವುದು.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ವಿದ್ಯುತ್ ಬೇಡಿಕೆಯ ಪ್ರಮಾಣ ಏನಿಲ್ಲವೆಂದರೂ ವರ್ಷಕ್ಕೆ ಮಿನಿಮಮ್ ಹದಿನೈದು ಪರ್ಸೆಂಟಿನಷ್ಟು ಹೆಚ್ಚುತ್ತಿದೆ. ಕಳೆದ ವರ್ಷ ಇನ್ನೂರು ಮಿಲಿಯನ್ ಯೂನಿಟ್ಟಿನಷ್ಟು ಕರೆಂಟು ಬೇಕಾಗಿದ್ದರೆ, ಈ ವರ್ಷ ಅದರ ಪ್ರಮಾಣ ಇನ್ನೂರಾ ಮೂವತ್ತು ಮಿಲಿಯನ್ ಯೂನಿಟ್‌ಗೆ ಮುಟ್ಟಿದೆ. ಇಂತಹ ಸಂದರ್ಭದಲ್ಲಿ ಇರುವ ಏಳು ಸಾವಿರ ಮೆಗಾವ್ಯಾಟ್ ವಿದ್ಯುತ್‌ನ್ನು ಎಷ್ಟು ಜನರಿಗೆ ಅಂತ ಹಂಚುತ್ತೀರಿ? ಪ್ರತಿ ವರ್ಷ ಕನಿಷ್ಟ ಪಕ್ಷ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್‌ನ್ನು ನಮ್ಮ ಗ್ರಿಡ್‌ಗಳಿಗೆ ಸೇರಿಸುತ್ತೇವೆ ಎಂಬ ಇಚ್ಛಾಶಕ್ತಿ ಇಲ್ಲದಿದ್ದರೆ, ಹೊರ ರಾಜ್ಯಗಳಿಂದ, ಖಾಸಗಿಯವರಿಂದ ವಿದ್ಯುತ್ ಖರೀದಿಸುವುದೊಂದೇ ನಮಗೆ ದಾರಿ. ಇದನ್ನೇ ಯಡಿಯೂರಪ್ಪನವರ ಸರ್ಕಾರ ಮಾಡಿ ದುಡ್ಡು ಹೊಡೆದಿದ್ದು, ಜನರಿಗೆ ಮಣ್ಣು ತಿನ್ನಿಸಿದ್ದು. ಪ್ರತಿ ವರ್ಷ ನಾಲ್ಕು-ಐದು ಸಾವಿರ ಕೋಟಿ ರುಪಾಯಿಗಳಷ್ಟು ಹಣ ತೆತ್ತು ವಿದ್ಯುತ್ ಖರೀದಿ ಮಾಡಿದರೆ ಇಲ್ಲಿನ ಪರಿಸ್ಥಿತಿ ಏನಾಗಬೇಕು?

ನಿಮಗೊಂದು ವಿಷಯ ಗೊತ್ತಿರಲಿ. ಜನರಿಗೆ ಹೇಗೆ ತಿರುಗಾಡಲು ಒಳ್ಳೆಯ ರಸ್ತೆ ಸಂಪರ್ಕ ಇರಬೇಕೋ, ಹಾಗೆಯೇ ನೀರಿಗೆ ಹರಿಯಲು ಒಳ್ಳೆಯ ಪಾತ್ರ ಇರಬೇಕು. ಕರೆಂಟು ಹರಿದು ಬರಲು ಕಾರಿಡಾರ್ ಇರಬೇಕು. ಆದರೆ ತಮಿಳ್ನಾಡು ಮುಂಜಾಗರೂಕತೆಯಿಂದ ಕಾರಿಡಾರ್‌ಗಳನ್ನು ಬುಕ್ ಮಾಡಿಟ್ಟುಕೊಂಡಿದೆ. ಇಂತಹ ಸಂದರ್ಭದಲ್ಲಿ ನೀವು ವಿದ್ಯುತ್ ಖರೀದಿ ಮಾಡಲು ಸಿದ್ಧವಾದರೂ ಕಾರಿಡಾರ್ ಅಂತೂ ಬೇಕೇ ಬೇಕು. ಏಕಕಾಲಕ್ಕೆ ನೀವೂ ವಿದ್ಯುತ್ ಉತ್ಪಾದಿಸುವುದಿಲ್ಲ. ಆ ಕಡೆ ಕಾರಿಡಾರೂ ಸಿಗುವುದಿಲ್ಲ ಎಂದರೆ ಏನಾಗಬೇಕು ಗತಿ? ಇಂತಹ ಸವಾಲನ್ನು ಎದುರಿಸಲು ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕಲ್ಲವೇ? ಇದೇ ಕೆಪಿಸಿಯಲ್ಲಿ ಪುಗಸಟ್ಟೆ ಅನ್ನ ತಿಂದು, ಮನೆಗೆ ಎದ್ದು ಹೋಗುವ ಅಧಿಕಾರಿಗಳ ಪಡೆ ಇರುವಂತೆಯೇ, ಈ ರಾಜ್ಯಕ್ಕಾಗಿ ಏನಾದರೂ ಮಾಡಬೇಕು ಎಂದು ತಪಿಸುವ ಅಧಿಕಾರಿಗಳದೊಂದು ದೊಡ್ಡ ಪಡೆಯೇ ಇದೆ.

ಅಲ್ರೀ, ನಾವೇಕೆ ಹೊರರಾಜ್ಯಗಳಿಂದ, ಖಾಸಗಿಯವರಿಂದ ವಿದ್ಯುತ್ ಪಡೆಯಲು ಕಾರಿಡಾರ್‌ಗಳನ್ನು ನೆಚ್ಚಿಕೊಳ್ಳಬೇಕು. ರೈತರಿಗೆ ದಿನಕ್ಕೆ ನಾಲ್ಕೋ, ಆರೋ ಗಂಟೆ ತ್ರೀಫೇಸ್ ವಿದ್ಯುತ್ ನೀಡುತ್ತೇವೆ ಅಂತ ಸುಳ್ಳು ಲೆಕ್ಕ ಬರೆದು ದೊಡ್ಡ ದೊಡ್ಡವರ ಕೈಗೊಂಬೆಗಳಾಗಬೇಕು. ಅದರ ಬದಲು ತ್ರಿಕಾಲದಲ್ಲೂ ದಂಡಿಯಾಗಿ ವಿದ್ಯುತ್ ಉತ್ಪಾದಿಸಲು, ಸ್ವಾವಲಂಬನೆ ಸಾಧಿಸಲು ಮನಸ್ಸು ಮಾಡಿ. ಉದಾಹರಣೆಗೆ ಹೇಳುತ್ತೇನೆ. ಈಗ ಮಳೆಗಾಲದಲ್ಲಿ ಲಿಂಗನಮಕ್ಕಿಯಿಂದ ಹಿಡಿದು ಸೂಪಾ, ಮಾಣಿಯ ತನಕ ಹಲವು ಡ್ಯಾಮುಗಳಲ್ಲಿ ನೀರು ಬರುತ್ತದೆ. ಎಲ್ಲಿಯ ತನಕ ಅವು ತುಂಬುವುದಿಲ್ಲವೋ, ಅಲ್ಲಿಯವರೆಗೆ ಕರೆಂಟೇ ಉತ್ಪಾದನೆ ಮಾಡುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಲಿಂಗನಮಕ್ಕಿ ತುಂಬಿ ಹರಿದು ನೂರಾರು ಟಿಎಂಸಿ ನೀರು ಕುಡಿಯಲೂ ಸಿಗದೆ, ಕರೆಂಟು ಮಾಡಲೂ ಬಳಕೆಯಾಗದೆ ಹೊನ್ನಾವರದ ಬಳಿ ಸಮುದ್ರ ಸೇರುತ್ತಿದೆ. ಇದರ ಬದಲು ಮುಂಗಾರು ಶುರುವಾದ ಕೂಡಲೇ ಡ್ಯಾಮು ತುಂಬುತ್ತದೋ, ಇಲ್ಲವೋ ಎಂಬುದರ ಚಿತ್ರ ಸಿಗುತ್ತದೆ. ಹೀಗಾಗಿ ಅಗತ್ಯವಿರುವಷ್ಟು ನೀರನ್ನು ಉಳಿಸಿಕೊಂಡು ಗರಿಷ್ಟ ಪ್ರಮಾಣದಲ್ಲಿ ಜಲವಿದ್ಯುತ್ ಉತ್ಪಾದನೆ ಮಾಡಿ.

ಅದೇ ರೀತಿ ಚಳಿಗಾಲದಲ್ಲಿ ಜಲವಿದ್ಯುತ್ ಪ್ರಮಾಣವನ್ನು ಕಡಿಮೆ ಮಾಡಿ, ಮಳೆಗಾಲದಿಂದಲೇ ಸಂಗ್ರಹಿಸಿಕೊಟ್ಟುಕೊಳ್ಳುವ ಕಲ್ಲಿದ್ದಲನ್ನು ಹೆಚ್ಚಾಗಿ ಬಳಸಿ, ಹಲವು ಜಿಲ್ಲೆಗಳಲ್ಲಿ ಸೋಲಾರ್ ಕೂಡ ಆ ಟೈಮಿನಲ್ಲಿ ವರ್ಕ್‌ಔಟ್ ಆಗುವುದರಿಂದ ಪರಿಸ್ಥಿತಿಯನ್ನು ಮ್ಯಾನೇಜ್ ಮಾಡಬಹುದು. ಅದೇ ರೀತಿ ಬೇಸಿಗೆ ಬಂದಾಗ ಸೋಲಾರ್ ವಿದ್ಯುತ್ ಮೇಲೆ ಹೆಚ್ಚು ಒತ್ತು ನೀಡಿ. ಮನಸ್ಸು ಮಾಡಿದರೆ ಇವತ್ತು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ತಾಲ್ಲೂಕುಗಳಲ್ಲಿ ಸೋಲಾರ್ ಪವರ್ ಪ್ಲಾಂಟ್‌ಗಳನ್ನು ಸರ್ಕಾರಿ ಜಾಗದಲ್ಲೇ ಮಾಡಿ. ಉದಾಹರಣೆಗೆ ನಿಮಗೆ ಹೇಳುತ್ತೇನೆ. ಮೈಸೂರು ನಗರಕ್ಕೆ ವರ್ಷಕ್ಕೆ ನೂರಾ ಹತ್ತು ಮೆಗಾವ್ಯಾಟ್ ವಿದ್ಯುತ್ ಬೇಕು. ಇಷ್ಟು ಪ್ರಮಾಣದ ಸೋಲಾರ್ ವಿದ್ಯುತ್‌ನ್ನು ತಯಾರಿಸಲು ನೂರು ಎಕರೆ ಭೂಮಿ ಸಾಕು. ಜಲಾಶಯದ ಕೆಳಭಾಗದಲ್ಲಿರುವ ನಾಲೆಗಳನ್ನು ಕೂಡ ಇದಕ್ಕಾಗಿ ಬಳಸಿಕೊಂಡರೆ ಒಳ್ಳೆಯದು. ಆಗ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ ನಿಲ್ಲುತ್ತದೆ. ಎರಡನೆಯದಾಗಿ ನೀರು ಆವಿಯಾಗುವುದು ಕಡಿಮೆಯಾಗುತ್ತದೆ. ಮೂರು ವಿದ್ಯುತ್ ವಿಷಯದಲ್ಲಿ ನಗರ ಸ್ವಾವಲಂಬಿಯಾಗುತ್ತದೆ.

ಇವತ್ತು ಕೇಂದ್ರ ಸರ್ಕಾರದ ಯೋಜನೆಯಡಿ ಸೋಲಾರ್ ವಿದ್ಯುತ್‌ಗಾಗಿ ಮುನ್ನೂರು ಕೋಟಿ ರುಪಾಯಿ ಬಂದಿದೆ. ಈ ಪೈಕಿ ಒಂದೇ ಒಂದು ರುಪಾಯಿಯನ್ನೂ ರಾಜ್ಯ ಸರ್ಕಾರ ಖರ್ಚು ಮಾಡಿಲ್ಲ. ಯಾಕೆ ಮಾಡಿಲ್ಲ ಎಂದರೆ, ಅಧಿಕಾರಿಗಳನೇಕರಿಗೆ ಸ್ವಾವಲಂಬನೆ ಸಾಧಿಸುವುದು ಬೇಕಿಲ್ಲ. ಇವತ್ತು ಬಿಜಾಪುರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬೀಳು ಭೂಮಿ ದಂಡಿಯಾಗಿ ಸಿಗುತ್ತದೆ. ಅಂತಹ ಭೂಮಿ ಹುಡುಕಿ ಸೋಲಾರ್ ಪ್ಲಾಂಟು ಹಾಕಿ. ಆ ಜಿಲ್ಲೆ ವಿದ್ಯುತ್ ವಿಷಯದಲ್ಲಿ ಸ್ವಾವಲಂಬಿಯಾದರೆ ಜಲ ವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಹೀಗೆ ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿ ಯಾವ್ಯಾವ ವಿದ್ಯುತ್‌ನ್ನು ಯಾವ್ಯಾವ ಪ್ರಮಾಣದಲ್ಲಿ ಉತ್ಪಾದಿಸಬಹುದು, ಸ್ವಾವಲಂಬನೆ ಸಾಧಿಸಬಹುದು ಎಂಬುದನ್ನು ಅಧ್ಯಯನ ಮಾಡಲು ತ್ರಿಕಾಲ ಎಂಬ ಸಮಿತಿಯನ್ನು ರಚಿಸುವುದು ಒಳ್ಳೆಯ ಕೆಲಸ. ಅಂತಹ ಸಮಿತಿ ಸಿದ್ದರಾಮಯ್ಯನವರ ಬಜೆಟ್‌ನಲ್ಲೇ ರೂಪುಗೊಳ್ಳಬೇಕೆಂದಿಲ್ಲ. ಡೀಕೇಶಿ ಮನಸ್ಸು ಮಾಡಿದರೆ ಅಂತಹ ಸಮಿತಿಯನ್ನು ರಚಿಸಿ, ನಾವು ವಿದ್ಯುತ್ ವಿಷಯದಲ್ಲಿ ಸ್ವಾವಲಂಬಿಗಳಾಗಬೇಕು.

ಹಾಗೆ ಮಾಡಿ, ಅಧ್ಯಯನ ಮಾಡಿ ಸಮಗ್ರ ವರದಿ ನೀಡಿ ಎಂದರೆ ನಮ್ಮ ನಿಷ್ಟಾವಂತ ಅಧಿಕಾರಿಗಳ ದಂಡು ಅದಕ್ಕೆ ಸಿದ್ಧವಿದೆ. ಅಂತಹವರನ್ನು ದೂರವಿಟ್ಟು, ಕೇವಲ ವಿದ್ಯುತ್ ಖರೀದಿಯ ಮೇಲೆ ಕಣ್ಣಿಡುವ ಬ್ರೋಕರ್ ಮೈಂಡ್ ಸೆಟ್‌ನ ಅಧಿಕಾರಿಗಳನ್ನು ಪಕ್ಕದಲ್ಲಿಟ್ಟುಕೊಂಡರೆ ಯಥಾಪ್ರಕಾರ ಅದೇ ಸುಳ್ಳು ಲೆಕ್ಕ. ರೈತರಿಗಾಗಿ ಇಪ್ಪತ್ಮೂರು ಪರ್ಸೆಂಟು ವಿದ್ಯುತ್ ನೀಡುತ್ತಿದ್ದೇವೆ ಎಂಬ ಧೋಕೇ ಭಾಜಿ. ಇವೆಲ್ಲ ಇನ್ನೆಷ್ಟು ಕಾಲ? ಇಂತಹ ಅಧಿಕಾರಿಗಳಿಗೆ ಪವರ್ ಪರ್ಚೇಸ್ ಮಾಡಿಸುವುದರಲ್ಲೇ ದೊಡ್ಡ ಲಾಭವಿದೆ. ಖಾಸಗಿ ಕಂಪನಿಗಳು ಇಂತಿಷ್ಟು ಅಂತ ಕಮೀಷನ್ ಕೊಡುತ್ತವೆ. ನಾಳೆ ರಿಟೈರ್ ಆಗುವುದಕ್ಕಿಂತ ಮುನ್ನವೇ ವರ್ಷಕ್ಕೆ ಐವತ್ತು-ಅರವತ್ತು ಲಕ್ಷ ರುಪಾಯಿ ವೇತನ ನೀಡಿ ಕೆಲಸಕ್ಕಿಟ್ಟುಕೊಳ್ಳಲು ರೆಡಿ ಇರುತ್ತವೆ. ಈ ಎಲ್ಲ ವಿಷಯಗಳೂ ಜನಸಾಮಾನ್ಯರಿಗೂ ಅರ್ಥವಾಗುತ್ತಿರುವ ಕಾಲ ಇದು. ಹೀಗಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್, ತಕ್ಷಣವೇ ತ್ರಿಕಾಲ ವಿದ್ಯುತ್ ಸಮಿತಿಯನ್ನು ರಚಿಸಲಿ. ಆ ಮೂಲಕ ಕರ್ನಾಟಕ ವಿದ್ಯುತ್ ವಿಷಯದಲ್ಲಿ ಸ್ವಾವಲಂಬಿಯಾಗುವಂತೆ ಮಾಡಲಿ. ಇಲ್ಲದಿದ್ದರೆ ಅವರ ಸುತ್ತ ನೆರೆದಿರುವ ಹಲವು ಮೀರ್ ಸಾಧಿಕ್‌ಗಳಂತಹ ಅಧಿಕಾರಿಗಳು ರಾಜ್ಯವನ್ನು ಕಂಡವರ ಎದುರು ಬೊಗಸೆಯೊಡ್ಡಿ ನಿಲ್ಲುವಂತೆ ಮಾಡಿಬಿಡುತ್ತಾರೆ, ಹಾಗಾಗದಿರಲಿ.
ಡೀಕೇಶಿ ಪರ್ಸನಲ್ ಇಂಟರೆಸ್ಟ್ ತೆಗೆದುಕೊಂಡು ತ್ರಿಕಾಲ ವಿದ್ಯುತ್ ಬಳಕೆ ಸಮಿತಿಯೊಂದನ್ನು ರಚಿಸಿ ವರದಿ ಪಡೆಯಲಿ. ಇಲ್ಲವಾದರೆ ಸಿದ್ದು ಕಿವಿ ತಲುಪಿರುವ ಯೋಜನೆಗೆ ಅಧಿಕಾರಿಗಳೇ ಕಲ್ಲು ಹಾಕುವ ಅಪಾಯವಿರುತ್ತದೆ. ಈ ಕಲ್ಲನ್ನು ಬದಿಗೆ ಸರಿಸುವ, ಆ ಮೂಲಕ ಕರ್ನಾಟಕ ಕಗ್ಗತ್ತಲಿನಿಂದ ಪಾರಾಗುವ ದಾರಿಯನ್ನು ಡೀಕೇಶಿ ಹುಡುಕಲಿ, ಜನ ಸದಾಕಾಲ ಅವರನ್ನು ನೆನೆಸುತ್ತಾರೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 March, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books