Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಹೊಸವರ್ಷಕ್ಕೆ ನಿಮ್ಮ ಶಪಥ ಏನು?

ಹೊಸವರ್ಷಕ್ಕೆ ನಿಮ್ಮ ಶಪಥ ಏನು?

ನಾವು ಶಪಥವೀರರು ಮತ್ತು ಅಷ್ಟೇ ಮರೆಗುಳಿಗಳು. ‘ತಲೆಮೇಲೆ ತಲೆಬಿದ್ರೂ ಸರಿ, ನಾಳೆಯಿಂದ ನಾನು ಗುಂಡು ಹಾಕೋಲ್ಲ ಗುರೂ’ ಅಂತೀವಿ. ಮಾರನೇ ದಿನ ಸಂಜೆ ಹೊತ್ತಿಗೆ, ಅದೇ ಗುರುವನ್ನು ಅದೇ ಬಾರಲ್ಲಿ ಭೇಟಿಯಾಗಿ ಚಿಯರ್ಸ್ ಅಂತೀವಿ. ಹಿಂದಿನ ದಿನ ಮಾಡಿದ ಶಪಥ ಇತಿಹಾಸದ ಕಸದಬುಟ್ಟಿ ಸೇರುತ್ತದೆ. ‘ನಿನ್ನಾಣೆ, ನಾಳೆಯಿಂದ ನಾನು ಸಿಗರೇಟು ಸೇದೋಲ್ಲ ಕಣೇ’ ಎಂದು ತನ್ನ ಗರ್ಲ್ ಫ್ರೆಂಡ್ ತಲೆಮೇಲೆ ಕೈಇಟ್ಟು ಆಣೆ ಮಾಡುವ ಅಮರಪ್ರೇಮಿ, ಅವಳು ಆಚೆ ಸರಿದ ಕೂಡಲೇ ಜೇಬಲ್ಲಿ ಪ್ಯಾಕಿಗೆ ತಡಕಾಡುತ್ತಾನೆ. ನಮಗೆ ಚಟಗಳನ್ನು ಬಿಡುವುದಕ್ಕೊಂದು ನೆಪ ಬೇಕು, ಆದರೆ ಮತ್ತದನ್ನೇ ಅಂಟಿಸಿಕೊಳ್ಳುವುದಕ್ಕೆ ಕಾರಣಗಳು ಬೇಕಿಲ್ಲ.

ಸಾಮಾನ್ಯವಾಗಿ ಇಂಥಾ ಪ್ರತಿಜ್ಞೆಗಳೆಲ್ಲಾ ಉದ್ಭವವಾಗುವುದು ಹೊಸವರ್ಷದ ಹಿಂದಿನ ದಿನ. ಅಂದರೆ ಡಿಸೆಂಬರ್ 31ರಂದು. ಆಂಗ್ಲಭಾಷೆಯಲ್ಲಿ ಇದನ್ನು resolution ಅನ್ನುತ್ತಾರೆ. ಹೊಸವರ್ಷಕ್ಕೆ ಹೊಸಮನುಷ್ಯನಾಗಬೇಕು ಎಂಬ ಕಾಳಜಿ ಈ ಪ್ರತಿಜ್ಞೆಯ ಹಿಂದಿರುತ್ತದೆ. ಜೊತೆಗೆ ತನ್ನ ಪ್ರೀತಿಪಾತ್ರರನ್ನು ಮೆಚ್ಚಿಸುವ ಮತ್ತು ತನ್ನ ತನುವನ್ನು ತಾನೇ ಸಂತೈಸಿಕೊಳ್ಳುವ ಹುನ್ನಾರವೂ ಇರುತ್ತದೆ. ಹಳೆಯ ಚಟಗಳಿಗೆ ವಿದಾಯ ಹೇಳಿ, ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಜೀವಕ್ಕೆ ಒಳ್ಳೇದು. ಉದಾಹರಣೆಗೆ ಗುಂಡು ಹಾಕುವುದನ್ನು ಬಿಡುವುದರ ಜೊತೆಗೆ ಅದೇ ದುಡ್ಡನ್ನು ಇನ್ಯಾವುದೋ ಸತ್ಕಾರ್ಯಕ್ಕೆ ವಿನಿಯೋಗಿಸುವುದು. ಒಳ್ಳೆಯ ಪುಸ್ತಕ ಓದುವುದು, ಒಳ್ಳೆಯ ಸಿನಿಮಾ ನೋಡುವುದು, ವಾರಕ್ಕೊಮ್ಮೆ ಸಂಸಾರದ ಜೊತೆ ಪಿಕ್ನಿಕ್ ಹೋಗುವುದು, ದಿನಕ್ಕೆ ಕನಿಷ್ಠ ಒಂದು ತಾಸು ಮನೆಮಂದಿ ಜೊತೆ ಕಾಲಕಳೆಯುವುದು, ಹೊಸ ಟೇಪ್ ರೆಕಾರ್ಡರಲ್ಲಿ ಹಳೇ ಹಾಡುಗಳನ್ನು ಕೇಳುವುದು, ಇವೆಲ್ಲಾ ಒಳ್ಳೆಯ ಶಪಥಗಳು.

ಅಂದಹಾಗೆ 2014ರ ವರ್ಷ ಮುಗಿಯುತ್ತಾ ಬಂದಿದೆ, ಹೊಸವರ್ಷದ ಸ್ವಾಗತಕ್ಕೆ ಜಗತ್ತು ಸಿದ್ಧವಾಗುತ್ತಿದೆ. ಈ ಸಂದರ್ಭದಲ್ಲಿ ನೀವೇನಾದರೂ ಹೊಸ ರೆಸಲ್ಯೂಷನ್ ಗಳನ್ನು ಕೈಗೊಂಡಿದ್ದೀರಾ? ಹಾಗಿದ್ದರೆ ಅದನ್ನು ‘ಓ ಮನಸೇ’ ಜೊತೆ ಹಂಚಿಕೊಳ್ಳಿ. ಅದನ್ನು ನಾವು ಪ್ರಕಟಿಸುತ್ತೇವೆ, ಆ ಮೂಲಕ ನೀವು ಮಾಡಿದ ಪ್ರತಿಜ್ಞೆಗೆ ನೀವು ಕಮಿಟ್ ಆಗಿರುವಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಪ್ರತಿಜ್ಞೆ ಯಾವುದು ಮತ್ತು ಅದಕ್ಕೆ ಕಾರಣವೇನು ಅನ್ನುವುದನ್ನು ಚುಟುಕಾಗಿ ಬರೆದು ಕಳಿಸಿ ([email protected]).

ಅಂಕಣದ ಹೆಸರು ‘ನನ್ನ ಶಪಥ’.

ಈ ಕೆಳಗಿನ Form ಮೂಲಕವೂ ನಿಮ್ಮ ಶಪಥವನ್ನು ಕಳಿಸಬಹುದು…
http://ravibelagere.com/omanase/nimma-shapata/

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 29 December, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books