Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಅತಿಮಧುರಾ... ಅನುರಾಗ....

“ಯಾಕೆ ಕಾಡುತಿದೆ ಸುಮ್ಮನೆ ನನ್ನನು? ಯಾವುದು ಈ ರಾಗ?"

ಅದೊಂದು ಹಾಡು, ಒಂದೇ ಒಂದು ಹಾಡು. ಆ ಹಾಡು ನಿಮ್ಮನ್ನು ಕಾಡಿದಷ್ಟು ಇನ್ನಾವ ಹಾಡೂ ಕಾಡಿಲ್ಲ. ಮನೆಯ ಚಾವಡಿಯಲ್ಲಿ, ಅಡುಗೆ ಮನೆಯಲ್ಲಿ, ಬಚ್ಚಲು ಮನೆಯಲ್ಲಿ, ರಸ್ತೆಯಲ್ಲಿ, ಬಸ್ಸಲ್ಲಿ, ಆಫೀಸಲ್ಲಿ... ನೀವೆಲ್ಲಿ ಹೋದರೂ ಬೆನ್ನಟ್ಟಿ ಬರುತ್ತದೆ ಆ ಹಾಡು. ಸದಾ ನಿಮ್ಮ ನಾಲಿಗೆ ತುದಿಯಲ್ಲಿ ಕುಣಿದಾಡುತ್ತಿರುತ್ತದೆ. ಯಾವುದು ಆ ಹಾಡು? ಅದ್ಯಾಕೆ ಅಂಥಾ ಪರಿ ನಿಮ್ಮನ್ನು ಕಾಡುತ್ತಿದೆ? ಯಾವತ್ತಾದರೂ ಯೋಚನೆ ಮಾಡಿದ್ದೀರಾ? ನಿಮ್ಮಿಷ್ಟದ ಹಾಡಿನ ಜೊತೆಗಿನ ನಿಮ್ಮ ಸಾಂಗತ್ಯವನ್ನು ಮಿಕ್ಕವರ ಜೊತೆ ಹಂಚಿಕೊಳ್ಳಬೇಕು ಎಂದು ನಿಮಗೆ ಯಾವತ್ತಾದರೂ ಅನಿಸಿದೆಯಾ?

‘ಓ ಮನಸೇ...’ ನಿಮಗೆ ಅಂಥಾದ್ದೊಂದು ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ‘ಓ ಮನಸೇ...’ಯ ನೂರನೇ ಸಂಚಿಕೆಯಲ್ಲಿ (ಅಕ್ಟೋಬರ್ ೧೫-೩೧) ನಿಮ್ಮನ್ನು ಕಾಡುವ ಹಾಡಿನ ಸಾಲುಗಳನ್ನು ನಾವು ಪ್ರಕಟಿಸುತ್ತೇವೆ.

ನೀವು ಮಾಡಬೇಕಾದದ್ದು ಇಷ್ಟೆ.


ನಿಮಗಿಷ್ಟವಾದ ಹಾಡಿನ ಮೊದಲ ಎರಡು ಸಾಲುಗಳನ್ನು ನಮಗೆ ಬರೆದು ಕಳುಹಿಸಿ. ಆ ಹಾಡು ಯಾಕೆ ನಿಮಗಿಷ್ಟ ಅನ್ನುವುದನ್ನು ನಾಲ್ಕು ವಾಕ್ಯಗಳಿಗೆ ಮೀರದಂತೆ ಬರೆಯಿರಿ. ಆ ಹಾಡಿನ ಗಾಯಕ, ಗೀತರಚನೆಕಾರ, ಸಂಗೀತ ನಿರ್ದೇಶಕ ಮತ್ತು ಸಿನೆಮಾದ ಹೆಸರುಗಳೂ ಇರಲಿ. ಜೊತೆಗೆ ನಿಮ್ಮದೊಂದು ಚಿಕ್ಕ ಫೊಟೋ. ಈ-ಮೇಲ್ ಮುಖೇನ ಬರುವ ಪತ್ರಗಳಿಗೆ ಮೊದಲ ಪ್ರಾಶಸ್ತ್ಯ. ‘ಓ ಮನಸೇ’ ಪತ್ರಿಕೆಯ ನೂರನೇ ಸಂಚಿಕೆಯನ್ನು ಓದುಗರು ಮೆಚ್ಚಿದ ಗೀತೆಗಳಿಂದ ಅಲಂಕರಿಸುವ ನಮ್ಮ ಪ್ರಯತ್ನಕ್ಕೆ ನೀವೂ ಕೈ ಜೋಡಿಸಿ. ನಿಮಗೆ ಗೊತ್ತಲ್ವಾ? ಹಾಡು ಹಳೆಯದಾದರೇನು, ಭಾವ ನವನವೀನ.

ನೀವು ಈ-ಮೇಲ್ ಕಳುಹಿಸಬೇಕಾದ ವಿಳಾಸ: [email protected]

ಪತ್ರ ಕಳುಹಿಸಬೇಕಾದ ವಿಳಾಸ : ಓ ಮನಸೇ, ನಂ. ೨, ೮೦ ಅಡಿ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಬಂಕ್‌ನ ಹತ್ತಿರ, ಪದ್ಮನಾಭನಗರ, ಬನಶಂಕರಿ ೨ನೇ ಹಂತ, ಬೆಂಗಳೂರು-೫೬೦೦೭೦.

ನಿಮ್ಮ ಪತ್ರಗಳು ಅಕ್ಟೋಬರ್ 1 ರ ಒಳಗೆ ನಮ್ಮನ್ನು ತಲುಪಬೇಕು.

ಈ ಕೆಳಗಿನ FORM ಮೂಲಕವೂ ನಿಮ್ಮ ಪತ್ರಗಳನ್ನು ಕಳಿಸಬಹುದು.

http://ravibelagere.com/omanase/100-special/

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 19 September, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books