Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನೂರಾರು ಪಕ್ಷಗಳ ಗೊಂದಲದ ನಡುವೆ ಹುಟ್ಟಿಕೊಂಡ ಸರ್ವಾಧಿಕಾರಿ: ಮೋದಿ

ಭಾರತ ತನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಚುನಾವಣೆಯನ್ನು ಎದುರಿಸಿದೆ. ದೇಶ ಸ್ವತಂತ್ರವಾದ ಕಾಲಘಟ್ಟದಲ್ಲಿ ಕಾಂಗ್ರೆಸ್ ಯುಗ ನೆಲೆಸಿತ್ತು. ಹೀಗಾಗಿ ಮೊದಲ ಚುನಾವಣೆಯಲ್ಲಿ ಅವರನ್ನು ಬಿಟ್ಟು ಬೇರೆಯವರು ಬರಲು ಸಾಧ್ಯವೇ ಇರಲಿಲ್ಲ. ೧೯೭೭ರ ತನಕ ಕಾಂಗ್ರೆಸ್ ಯುಗ ಮುಂದುವರಿದೇ ಇತ್ತು. ಹಾಗಂತ ಅದುವರೆಗೆ ವಿರೋಧ ಪಕ್ಷಗಳೇ ಇರಲಿಲ್ಲ ಅಂತಲ್ಲ. ರಾಮ್‌ಮನೋಹರ ಲೋಹಿಯಾ ಅವರಿಂದ ಹಿಡಿದು ಹಲವರು ಕಾಂಗ್ರೆಸ್‌ನ್ನು ಸಾಕಷ್ಟು ಅಲುಗಾಡಿಸಿದರು. ಅವರಾಡುತ್ತಿದ್ದ ಮಾತಿಗೆ ನೆಹರೂ ಅವರಂತಹವರೇ ಬೆಕ್ಕಸ ಬೆರಗಾಗಿ ಹೋಗುತ್ತಿದ್ದರು. ಬರಬರುತ್ತಾ ಕಾಂಗ್ರೆಸ್ ಪಕ್ಷದ ಹುಳುಕುಗಳು ಒಂದೊಂದಾಗಿ ಬಯಲಾಗತೊಡಗಿದವು. ನೆಹರೂ ಅವರಂತಹ ನೆಹರೂ ಕೂಡ ವಂಶಪಾರಂಪರ‍್ಯ ರಾಜಕಾರಣದ ಮೊರೆ ಹೋದರು ಅಥವಾ ಕಾಂಗ್ರೆಸ್‌ನಲ್ಲಿದ್ದವರಿಗೆ ನೆಹರೂ ವಂಶಜರ ಗೀಳು ಶುರುವಾಯಿತು. ಇದರ ಪರಿಣಾಮವಾಗಿ ನೆಹರೂ ತೀರಿಕೊಂಡ ನಂತರ ಹಂಗಾಮಿ ಪ್ರಧಾನಿಯಾಗಿ ಗುಲ್ಜಾರಿಲಾಲ್ ನಂದಾ ಆಯ್ಕೆಯಾದರು. ಅವರ ಜಾಗಕ್ಕೆ ಲಾಲ್‌ಬಹಾದ್ದೂರ್ ಶಾಸ್ತ್ರಿ ಬಂದಿದ್ದೂ ಇತಿಹಾಸವೇ. ಅವರ ನಿಧನದ ನಂತರವೂ ಗುಲ್ಜಾರಿಲಾಲ್ ನಂದಾ ದೇಶದ ಹಂಗಾಮಿ ಪ್ರಧಾನಿಯಾದರು.

ಹೀಗೆ ಹಂಗಾಮಿ ಪ್ರಧಾನಿಯಾದ ಗುಲ್ಜಾರಿಲಾಲ್ ನಂದಾ ಅವರಿಗೆ ಸಾಧು ಸಂತರೆಂದರೆ ಬಹಳ ಗೌರವ. ಇದಕ್ಕೆ ಕಾರಣ, ಜನಸಾಮಾನ್ಯರ ಕಷ್ಟ ಸುಖಗಳನ್ನು ಅವರಂತೆ ಬಹುಬೇಗ ಅರಿತವರು ಕಡಿಮೆ ಎಂಬುದು. ಅವರು ಜಾರಿಗೆ ತರುತ್ತಿದ್ದ ಬಹುತೇಕ ಯೋಜನೆಗಳೂ ಸಾಧು ಸಂತರ ಮಾತನ್ನು ಕೇಳಿ ತಂದವುಗಳೇ. ಆದರೆ ದೇಶಕ್ಕೆ ಗುಲ್ಜಾರಿಲಾಲ್ ನಂದಾ ಅವರಂತಹವರ ಅವಶ್ಯಕತೆ ಬೀಳಲಿಲ್ಲ. ದೇಶಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ಗೆ ಬೇಕಾಗಲಿಲ್ಲ. ಮತ್ತೆ ಹಂಗಾಮಿ ಪ್ರಧಾನಿಯಾಗುವ ಅವಶ್ಯಕತೆ ಬಂದಾಗ ನಂದಾ ಅವರೇ ಬೇಸತ್ತು, ಈ ಪಟ್ಟಕ್ಕೆ ಯಾರನ್ನಾದರೂ ಬೇಗ ತನ್ನಿ. ಸುಮ್ಮನೆ ವಾಚ್‌ಮನ್ ಕೆಲಸ ಮಾಡಿಸುತ್ತಾ ಕೂಡಬೇಡಿ ಎಂದು ರೇಗಾಡಿದರು. ಅವರು ಹೀಗೆ ರೇಗಾಡುವುದರ ಹಿಂದೆ ಒಂದು ಸಲ ಈ ದೇಶಕ್ಕೆ ಖಾಯಂ ಪ್ರಧಾನಿ ಆಗಬೇಕು ಎಂಬ ಆಸೆಯೂ ಇತ್ತೇನೋ? ಆದರೆ ಒಂದು ಮಾತಂತೂ ನಿಜ, ನಂದಾ ಅವರಿಗೆ ವೈಯಕ್ತಿಕವಾಗಿ ಯಾವುದೇ ಆಮಿಷಗಳಿರಲಿಲ್ಲ. ಸ್ವಂತಕ್ಕೆ ಅಂತ ಏನನ್ನೂ ಮಾಡಿಕೊಳ್ಳಬೇಕಿರಲಿಲ್ಲ. ಆದರೆ ಕಾಂಗ್ರೆಸ್‌ನವರಿಗೆ ಬೇಕಿತ್ತಲ್ಲ. ಹೋಗಿ ಹೋಗಿ ಗುಲ್ಜಾರಿಲಾಲ್ ನಂದಾ ಅವರಂತಹವರು ಪ್ರಧಾನಿಯಾದರೆ ಒಂದು, ದುಡ್ಡು ಮಾಡಿಕೊಳ್ಳುವುದು ಕಷ್ಟ. ಎರಡನೆಯದು, ಹೊಗಳಿ ಹೊನ್ನ ಶೂಲಕ್ಕೇರಿಸುವುದು ಕಷ್ಟ. ಮೂರನೆಯದಾಗಿ, ಭಟ್ಟಂಗಿಗಳ ಕೂಟ ಕಟ್ಟುವುದು ಕಷ್ಟ. ಹೀಗಾಗಿ ಎಲ್ಲರೂ ಸೇರಿ, ಮುಂದೆ ಜನತಾ ಪರಿವಾರ ಕಟ್ಟಲು ಕಾರಣರಾದವರೂ ಸೇರಿದಂತೆ ಹಲವರು ಸೇರಿ ಇಂದಿರಾಗಾಂಧಿ ಅವರನ್ನು ಖಾಯಂ ಪ್ರಧಾನಿ ಸ್ಥಾನಕ್ಕೆ ಏರಿಸಿಬಿಟ್ಟರು. ಒಂದು ವೇಳೆ ಆ ಕಾಲದಲ್ಲಿ ಗುಲ್ಜಾರಿಲಾಲ್ ನಂದಾ ಪ್ರಧಾನಿಯಾಗಿದ್ದರೆ ಭಾರತದ ಚಿತ್ರಣವೇ ಬದಲಾಗುತ್ತಿತ್ತೋ ಏನೋ?

ಆದರೆ ಭಾರತದ ನಕ್ಷೆಯನ್ನು ಇಂದಿರಾ ಬದಲಿಸಿದರು. ಇಂದಿರಾರ ವ್ಯಕ್ತಿತ್ವವನ್ನು ಅವರ ಸುತ್ತ ನೆರೆದಿದ್ದ ಭಟ್ಟಂಗಿಗಳು ಬದಲಿಸಿದರು. ಪಾಕಿಸ್ತಾನದಿಂದ ಬಾಂಗ್ಲಾವನ್ನು ವಿಭಜಿಸಿದ ಇಂದಿರಾ, ದೇಶ ಅನ್ನಕ್ಕಾಗಿ ಹಾಹಾಕಾರ ಮಾಡುವ ಕಾಲದಲ್ಲಿ ಅಮೆರಿಕಾದ ಅಧ್ಯಕ್ಷ ಲಿಂಡನ್ ಜಾನ್ಸನ್ ಮಾಡಿದ ಅವಮಾನವನ್ನು ಸಹಿಸಲಾಗದೇ ಹಸಿರು ಕ್ರಾಂತಿ ಮಾಡಿದ ಇಂದಿರಾ, ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ ಇಂದಿರಾರನ್ನು ಎಂಥವರೂ ಒಪ್ಪಬೇಕು. ಆದರೆ ತುರ್ತು ಸ್ಥಿತಿ ಹೇರಿದ ಇಂದಿರಾಗಾಂಧಿಯನ್ನು ಎಂಥವರೂ ಒಪ್ಪಲು ಸಾಧ್ಯವಿಲ್ಲ. ಆದರೆ ಒಪ್ಪುವ ಜನರು ಅವರ ಸುತ್ತ ನೆರೆದಿದ್ದರು. ಇಂದಿರಾಗಾಂಧಿ ತುರ್ತು ಸ್ಥಿತಿ ಹೇರಿ, ಲೋಕಸಭಾ ಚುನಾವಣೆಯಲ್ಲಿ ಸೋತ ನಂತರವೂ ಅವರ ಸುತ್ತ ಜನ ನೆರೆದಿದ್ದರು. ಇವತ್ತಿಗೂ ಅಷ್ಟೇ, ಸೋನಿಯಾ ಗಾಂಧಿಯನ್ನು ಕಂಡಾಗ, ರಾಹುಲ್‌ಗಾಂಧಿಯನ್ನು ಕಂಡಾಗ ಅನುಕಂಪ ಮೂಡುತ್ತದೆ. ಯಾಕೆಂದರೆ ಅವರ ಸುತ್ತ ನೆರೆದ ಬಹುತೇಕ ಮಂದಿ ಭಟ್ಟಂಗಿಗಳೇ. ಪುಗಸಟ್ಟೆ ಅನ್ನ ತಿಂದು, ಬೇಕಾಬಿಟ್ಟಿ ಸಲಹೆ ನೀಡಿ, ತಮ್ಮ ಬೇಳೆ ಬೇಯಿಸಿಕೊಂಡು ಸುಖವಾಗಿರುವವರು.

ಇವತ್ತು ನರೇಂದ್ರಮೋದಿ ಕೂಡ ಹಾಗೇ ಅನ್ನಿಸತೊಡಗಿದ್ದಾರೆ. ಅವರ ಸುತ್ತ ಭಟ್ಟಂಗಿಗಳ ಕೂಟ ನೆರೆಯತೊಡಗಿದೆ. ಒಂದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಗಂಡಾಂತರ ಬರುವುದೇ ಇಂತಹ ಭಟ್ಟಂಗಿಗಳ ಕೂಟ ರಚನೆಯಾದಾಗ. ಇಂತಹವರು ಜಸ್ವಂತ್‌ಸಿಂಗ್ ಅವರಂತಹ ಸಜ್ಜನರನ್ನೂ ಕ್ಯಾರೇ ಅನ್ನುತ್ತಿಲ್ಲ. ಇಡೀ ಬಿಜೆಪಿಯನ್ನು ತೊಡೆಯ ಮೇಲಿಟ್ಟುಕೊಂಡು ಸಲಹಿದ ಲಾಲ್‌ಕೃಷ್ಣ ಅಡ್ವಾಣಿ ಅವರನ್ನೂ ಒಪ್ಪಿಕೊಳ್ಳುತ್ತಿಲ್ಲ. ಯಾರು ನರೇಂದ್ರಮೋದಿಯ ಸರ್ವಾಧಿಕಾರನ್ನು ಒಪ್ಪಲು ತಯಾರಿಲ್ಲವೋ, ಅಂತಹವರನ್ನು ನೊಣೆದು ನುಂಗಿ ಹಾಕಲು ಈ ಭಟ್ಟಂಗಿಗಳ ಪಡೆ ತಯಾರಾಗಿದೆ. ಬಿಜೆಪಿ ಕೂಡ ಕಾಂಗ್ರೆಸ್‌ನಂತಹ ಪಕ್ಷವಾಗಿ ಪರಿವರ್ತನೆಯಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಇವತ್ತಿನ ಸ್ಥಿತಿಯಲ್ಲಿ ಇರುವ ಬಹುತೇಕ ಮಾಧ್ಯಮಗಳ ಒಡೆಯರು ಕೈಗಾರಿಕೋದ್ಯಮಿಗಳೇ ಆಗಿರುವುದರಿಂದ ಅವರಿಗೆ ನರೇಂದ್ರ ಮೋದಿ ಬೇಕು. ಈ ಕೈಗಾರಿಕೋದ್ಯಮಿಗಳ ಮನಸ್ಥಿತಿ ಭಟ್ಟಂಗಿಗಳಿಗೆ ಗೊತ್ತು. ಹೀಗಾಗಿ ಅವರಿಗೆ ಮೃದು ಹಿಂದೂವಾದಿಯಾದ ಲಾಲ್‌ಕೃಷ್ಣ ಅಡ್ವಾಣಿ ಹಿಡಿಸುತ್ತಿಲ್ಲ. ಒಟ್ಟಿನಲ್ಲಿ ದುಡ್ಡಿನ ಹಿಂದೆ ಓಡಬಲ್ಲ ತಾಕತ್ತಿರುವ ನಾಯಕರು ಬೇಕಾಗಿದ್ದಾರೆ.

ಆದರೆ ಅಡ್ವಾಣಿಗೆ ಈ ತಾಕತ್ತಿಲ್ಲ, ನರೇಂದ್ರ ಮೋದಿಗೆ ಈ ತಾಕತ್ತಿದೆ. ವೈಯಕ್ತಿಕವಾಗಿ ಅವರ ಮೇಲೆ ಆರೋಪ ಮಾಡುವ ಅವಕಾಶ ಕಡಿಮೆ. ಎಲ್ಲಕ್ಕಿಂತ ಮುಖ್ಯವಾಗಿ ಗುಜರಾತ್‌ನಲ್ಲಿ ರೈತರನ್ನು ಕ್ಯಾರೇ ಎನ್ನದೇ ಭೂಮಿಯನ್ನು ಬೇಕು ಬೇಕಾದಂತೆ ಕೈಗಾರಿಕೋದ್ಯಮಿಗಳಿಗೆ ಹಂಚಿದ್ದಾರೆ. ರೈತರ ಸಮಸ್ಯೆಯನ್ನು ಗುರುತಿಸುವ ಮಾಧ್ಯಮಗಳ ಸಂಖ್ಯೆ ಕಡಿಮೆ. ಗುರುತಿಸುವವರಿದ್ದರೂ ಅಂತಹ ಮಾಧ್ಯಮಕ್ಕೆ ಬೆಲೆ ಕೊಡುವವರು ಕಡಿಮೆ. ಹೀಗಾಗಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ಕೈಗಾರಿಕೋದ್ಯಮಿಗಳಿಗೆ ಏನೇನು ಫಲ ನೀಡಿದ್ದಾರೆ ಎಂಬುದು ಚರ್ಚೆಯಾಗುತ್ತಿದೆಯೇ ವಿನಾ ರೈತರ ಗತಿ ಏನಾಗಿದೆ ಎಂಬ ಕುರಿತು ಕೊಂಚವೂ ಚರ್ಚೆಯಾಗುತ್ತಿಲ್ಲ. ಇದು ಸರ್ವಾಧಿಕಾರದ ಸಂಕೇತ. ಮೋದಿ ಕೆಟ್ಟವರು ಎಂದಲ್ಲ, ಆದರೆ ಜಾಗತೀಕರಣದ ಮೂರನೇ ಘಟ್ಟಕ್ಕೆ ದೇಶವನ್ನು ಕೊಂಡೊಯ್ಯುವ ನಾಯಕ ನೀವೇ ಎಂದು ಕೈಗಾರಿಕೋದ್ಯಮಿಗಳು ನರೇಂದ್ರ ಮೋದಿಯನ್ನು ನಂಬಿಸಿದ್ದಾರೆ. ಪ್ರಧಾನಿಯಾಗುವ ಉತ್ಸಾಹದಲ್ಲಿರುವ ಮೋದಿ ಕೂಡ ಅದನ್ನು ನಂಬಿದ್ದಾರೆ.

ಇಂದಿರಾಗಾಂಧಿ ಕೂಡ ಇಂತಹವರನ್ನೇ ನಂಬಿದ್ದರು. ಆದರೆ ಒಂದು ವ್ಯತ್ಯಾಸವೆಂದರೆ, ಇಂದಿರಾಗಾಂಧಿ ಅವರನ್ನು ನಂಬಿಸಿದವರು ಈ ದೇಶದ ಕಟ್ಟ ಕಡೆಯ ಬಡವ ಕೂಡ ನಿಮ್ಮ ಕಾರ್ಯಕ್ರಮಗಳ ಲಾಭ ಪಡೆಯಲಿದ್ದಾನೆ ಎಂದು ಹೇಳಿದ್ದರು. ನರೇಂದ್ರ ಮೋದಿಯನ್ನು ನಂಬಿಸುತ್ತಿರುವವರು, ಈ ದೇಶಕ್ಕೀಗ ಉದ್ಯೋಗಗಳ ಅವಕಾಶ ಬೇಕಿದೆ. ಅಂತಹ ಉದ್ಯೋಗಗಳನ್ನು ಕೊಡುವವರು ನೀವು. ಹೀಗಾಗಿ ನೀವು ಉದ್ಯೋಗದಾತ ಎಂದು ನಂಬಿಸುತ್ತಿದ್ದಾರೆ. ಅರ್ಥಾತ್, ದೇಶ ತನಗೆ ಅರಿವಿಲ್ಲದಂತೆಯೇ ಒಬ್ಬ ಸರ್ವಾಧಿಕಾರಿಯನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ಅಂದ ಹಾಗೆ ಮೊದಲ ಚುನಾವಣೆಗೂ ಈಗಿನ ಚುನಾವಣೆಗೂ ಹೋಲಿಕೆ ಮಾಡುವುದು ನಗೆಪಾಟಲಿಗೆ ಗುರಿಯಾಗಬಹುದು. ಆದರೆ ೨೦೦೯ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಕೇಂದ್ರ ಸರ್ಕಾರ ಮಾಡಿದ ವೆಚ್ಚ ಒಂದು ಸಾವಿರದ ಇನ್ನೂರು ಕೋಟಿ ರುಪಾಯಿ. ಅವತ್ತು ಮಹಾರಾಷ್ಟ್ರದಲ್ಲಿ ನೂರೈವತ್ತೈದು ಕೋಟಿ ರುಪಾಯಿ, ಪಶ್ಚಿಮ ಬಂಗಾಳದಲ್ಲಿ ನೂರೈವತ್ತೈದು ಕೋಟಿ ರುಪಾಯಿ, ಅಸ್ಸಾಂನಲ್ಲಿ ತೊಂಬತ್ತೇಳು ಕೋಟಿ ರುಪಾಯಿ, ತಮಿಳ್ನಾಡಿನಲ್ಲಿ ಎಂಬತ್ತು ಕೋಟಿ ರುಪಾಯಿ, ಆಂಧ್ರ ಪ್ರದೇಶದಲ್ಲಿ ಎಪ್ಪತ್ತು ಕೋಟಿ ರುಪಾಯಿ ವೆಚ್ಚ ಮಾಡಿದ್ದರೆ, ಕರ್ನಾಟಕದಲ್ಲೂ ಎಪ್ಪತ್ತು ಕೋಟಿ ರುಪಾಯಿ ವೆಚ್ಚ ಮಾಡಲಾಗಿತ್ತು.

ಆದರೆ ಐದೇ ವರ್ಷದಲ್ಲಿ ಈ ವೆಚ್ಚ ಮೂರು ಸಾವಿರದ ಐನೂರು ಕೋಟಿ ರುಪಾಯಿಗಳಿಗೇರಿದೆ ಎಂದರೆ ಭಾರತದ ಚುನಾವಣಾ ವ್ಯವಸ್ಥೆ ಯಾವ ಮಟ್ಟಕ್ಕೆ ಬಂದು ಮುಟ್ಟಿರಬೇಕು. ಅಂದ ಹಾಗೆ ಇದು ಕೇಂದ್ರ ಸರ್ಕಾರ ಮಾಡುವ ವೆಚ್ಚ. ಉಳಿದಂತೆ ಅಭ್ಯರ್ಥಿಗಳು ಮಾಡುವ ವೆಚ್ಚ. ಸೆಂಟರ್ ಮೀಡಿಯಾ ಸ್ಟಡೀಸ್ ಪ್ರಕಾರ, ಈ ಬಾರಿ ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣೆಗಾಗಿ ಮಾಡಿರುವ ವೆಚ್ಚದ ಪ್ರಮಾಣ ಮೂವತ್ತು ಸಾವಿರದ ಐನೂರು ಕೋಟಿ ರುಪಾಯಿ. ಇದು ರಾಜಕೀಯ ಪಕ್ಷಗಳ ಕತೆಯಾಯಿತು. ಇನ್ನು ಅಭ್ಯರ್ಥಿಗಳು ಮಾಡುವ ವೆಚ್ಚದ ಪ್ರಮಾಣವೆಷ್ಟು? ಇದನ್ನು ಲೆಕ್ಕ ಹಾಕುತ್ತಾ ಕುಳಿತರೆ ನಮ್ಮ ಲೋಕಸಭಾ ಚುನಾವಣೆಗಾಗಿ ಹೂಡಿಕೆಯಾಗುವ ಬಂಡವಾಳದ ಪ್ರಮಾಣ ಅರವತ್ತು ಸಾವಿರ ಕೋಟಿ ರುಪಾಯಿಗಳಿಗಿಂತಲೂ ಜಾಸ್ತಿ. ಇಷ್ಟು ಪ್ರಮಾಣದ ಬಂಡವಾಳವನ್ನು ಹೂಡಿದರೆ ಎಷ್ಟು ಮಂದಿ ಬಡವರ ಜೀವನ ಹಸನಾಗಬಹುದು? ಉದಾಹರಣೆಗೆ ನಾಮಪತ್ರ ಸಲ್ಲಿಸಿದ ಬಹುತೇಕರ ಆಸ್ತಿ ವಿವರವನ್ನು ನೋಡಿ. ಬಹುತೇಕ ಮಂದಿ ಕೊಟ್ಟಿರುವುದು ಸುಳ್ಳು ಅಫಿಡವಿಟ್. ನೂರಾರು ಕೋಟಿ ರುಪಾಯಿ ಆಸ್ತಿ ಇದ್ದವರು ಕೂಡ ತಮ್ಮ ಹೆಸರಲ್ಲಿ ಐದೋ, ಆರೋ ಕೋಟಿ ರುಪಾಯಿ ಇದೆ ಎಂದು ಹೇಳುತ್ತಿದ್ದಾರೆ. ಇದನ್ನು ಪತ್ತೆ ಮಾಡುವುದು ಹೇಗೆ? ಮಧ್ಯಮ ವರ್ಗದವರು ಹತ್ತು ಸಾವಿರವೋ, ಇಪ್ಪತ್ತು ಸಾವಿರವೋ ವ್ಯತ್ಯಾಸ ಮಾಡಿದರೆ ಐಟಿ ಗಂಡಾಂತರಕ್ಕೆ ಸಿಲುಕುತ್ತಾರೆ. ಆದರೆ ನೂರಾರು ಕೋಟಿ ರುಪಾಯಿ ಆಸ್ತಿ ಇಟ್ಟುಕೊಂಡೂ ಇವರ‍್ಯಾರೂ ಐಟಿ ಕೈಗೆ ಸಿಲುಕುವುದಿಲ್ಲ.

ಅಂದ ಹಾಗೆ ಯಾರು ಚುನಾವಣೆಗೆ ಅಂತ ಕೋಟಿಗಟ್ಟಲೆ ಬಂಡವಾಳ ಹೂಡುತ್ತಾರೋ, ಅವರು ಅದರ ನೂರು ಪಟ್ಟು ಹಣ ವಾಪಸು ಪಡೆಯಲು ಅಂತಲೇ ಬಂಡವಾಳ ಹೂಡುತ್ತಾರೆ. ಇಲ್ಲದಿದ್ದರೆ ಇವರು ಆ ಪ್ರಮಾಣದ ಬಂಡವಾಳವನ್ನು ಯಾಕೆ ಹೂಡುತ್ತಾರೆ? ಇವತ್ತು ಕರ್ನಾಟಕವನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಿ. ಬೆಂಗಳೂರಿನಿಂದ ಹಿಡಿದು ದೂರದ ಬೀದರ್ ತನಕ ಹೂಡಿಕೆಯಾಗುವ ಹಣದ ಪ್ರಮಾಣ ಎಷ್ಟು? ಒಬ್ಬ ಅಭ್ಯರ್ಥಿ ಇಂತಿಷ್ಟು ಎಂದು ಖರ್ಚು ಮಾಡಬಹುದು ಎಂದು ಚುನಾವಣಾ ಆಯೋಗ ಹಣದ ನಿಗದಿ ಮಾಡುವುದೇನೋ ನಿಜ. ಆದರೆ ಅದನ್ನು ಪಾಲಿಸುವವರು ಯಾರು? ಯಾಕೆಂದರೆ ಇವತ್ತು ಭಾರತದ ಹಳ್ಳಿ ಹಳ್ಳಿಗಳನ್ನು ಭ್ರಷ್ಟಗೊಳಿಸುವ ಕಾರ್ಯ ನಡೆದಿದೆ. ದುಡಿದು ತಿನ್ನುವ ಕೆಲಸವೆಂದರೆ ಹೀನಾಯವಾದದ್ದು ಎಂಬ ಮನಃಸ್ಥಿತಿಯನ್ನು ಬೆಳೆಸಲಾಗುತ್ತಿದೆ. ಇಂತಹ ಮನಃಸ್ಥಿತಿಯನ್ನು ಬೆಳೆಸಬಲ್ಲವರೇ ಭಾರತದ ನಾಯಕರಾಗುತ್ತಿದ್ದಾರೆ. ವಾಸ್ತವವಾಗಿ ಚುನಾವಣೆ ಎಂಬುದು ದೇಶವನ್ನು ಕಟ್ಟುವ ಕೆಲಸಕ್ಕೆ ವೇದಿಕೆ ಆಗಬೇಕು. ಆದರೆ ಅದು ದೇಶವನ್ನು ಕಟ್ಟುವ ಕೆಲಸಕ್ಕೆ ವೇದಿಕೆ ಆಗುವ ಬದಲು ದೇಶವನ್ನು ಒಡೆಯಲು ವೇದಿಕೆ ಆಗುತ್ತದೆ. ೧೯೫೨ರಲ್ಲಿ ಇದ್ದ ಪಾರ್ಟಿಗಳು ಎಷ್ಟು? ಈಗಿರುವ ಪಾರ್ಟಿಗಳು ಎಷ್ಟು? ಎಂಬುದನ್ನು ಒಂದು ಸಲ ಗಮನಿಸಿ ನೋಡಿ. ಜನರ ಗೊಂದಲ ಏನೆಂಬುದು ಅರ್ಥವಾಗುತ್ತದೆ.

ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ ನೇತೃತ್ವದ ಯುಪಿಎ, ತೃತೀಯ ರಂಗ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಜಗಂ, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ, ಬಹುಜನ ಸಮಾಜ ಪಕ್ಷ, ಮಹಾರಾಷ್ಟ್ರ ನವ ನಿರ್ಮಾಣ ಸೇನಾ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್, ಶಿವಸೇನಾ, ಸ್ವಾಭಿಮಾನಿ ಪಕ್ಷ, ರಾಷ್ಟೀಯ ಸಮಾಜ ಪಕ್ಷ ಹೀಗೆ ಹೇಳುತ್ತಾ ಹೋದರೆ ಒಂದಲ್ಲ, ಎರಡಲ್ಲ, ಹತ್ತಾರು ಪಕ್ಷಗಳು ಎಡತಾಕುತ್ತವೆ. ಹೀಗೆ ಇಡೀ ಭಾರತವೇ ಹಂಚಿ ಹೋದ ಮೇಲೆ ಇಡೀ ಭಾರತವನ್ನು ಒಗ್ಗೂಡಿಸುವ ಕೆಲಸ ಆಗುವುದು ಹೇಗೆ? ಇದು ಸದ್ಯದ ಪ್ರಶ್ನೆ. ಒಂದು ಚುನಾವಣೆಗೆ ಅರವತ್ತು ಸಾವಿರ ಕೋಟಿ ರುಪಾಯಿಗಳಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆ ಆಗುತ್ತಿದೆ ಎಂದರೆ ಇದು ಜನಪರವಾದ ಚುನಾವಣೆ ಆಗಲು ಹೇಗೆ ಸಾಧ್ಯ? ಬರುವ ಸರ್ಕಾರ ಜನಪರವಾಗಿರಲು ಹೇಗೆ ಸಾಧ್ಯ? ಒಂದು ಪಕ್ಷ ಮುಸ್ಲಿಮರನ್ನು ಹೆದರಿಸುತ್ತದೆ. ಒಂದು ಪಕ್ಷ ಮುಸ್ಲಿಮರನ್ನು ಮುಖ್ಯವಾಹಿನಿಗೆ ತರಲು ಬಿಡಲಾಗುತ್ತಿಲ್ಲ ಎಂದು ಆರೋಪಿಸುತ್ತದೆ. ಹೀಗೆ ಒಂದಲ್ಲ, ಎರಡಲ್ಲ, ನೂರಾರು ಪಕ್ಷಗಳು ನೂರಾರು ಮಾತನಾಡಿ ಮೂಡಿಸುವ ಗೊಂದಲವನ್ನು ಬಗೆಹರಿಸುವುದು ಹೇಗೆ? ಇಂತಹ ಸಂದರ್ಭದಲ್ಲೇ ಸರ್ವಾಧಿಕಾರಿ ಹುಟ್ಟುವುದು. ಒಂದು ಪ್ರಜಾತಂತ್ರ ವ್ಯವಸ್ಥೆಗೆ ಒಳ್ಳೆಯ ದಿನಗಳಂತೂ ಇದಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 19 May, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books