Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಹತ್ತು ಕಿಲೋಮೀಟರುಗಳ ಪಾದಯಾತ್ರೆ; ನೆಲದ ಮಣ್ಣು ಕಾಲಿಗೆ ತಾಕಿದ ಅಮರ ಕ್ಷಣ

ಕಾಲುಗಳಿನ್ನೂ ಸ್ವಾಧೀನಕ್ಕೆ ಬಂದಿಲ್ಲ.
ಎರಡೂ ಕಾಲುಗಳ ಮೀನಖಂಡಗಳು ನರಗುಡುತ್ತಿವೆ. ನಾನು ಚಿಕ್ಕಂದಿನಿಂದಲೂ ನಡೆಯುವುದರಲ್ಲಿ ಗಟ್ಟಿಗ. ಎಲ್ಲಿಂದ ಎಲ್ಲಿಯವರೆಗೆ ನಡೆದೆ ಎಂಬುದರ ಪ್ರತಿ ವಿವರವೂ ನನಗೆ ಗೊತ್ತಿದೆ. ನೆನಪಿದೆ. ಮೊದಲು ನಾನು ನಡೆದದ್ದು ಚಳ್ಳಕೆರೆಯಿಂದ ಮಲ್ಲಾಡಿಹಳ್ಳಿಗೆ. ಆನಂತರ ಶಿವಮೊಗ್ಗದಿಂದ ಜೋಗಕ್ಕೆ ನಡೆದೆ. ಕುಂಸಿ, ಆನಂದಪುರಗಳ ರಸ್ತೆಯಲ್ಲಿ ಒಬ್ಬಂಟಿಯಾಗಿ ಕಾಲೆಳೆಯುತ್ತಾ ನಡೆಯುತ್ತಿದ್ದಾಗ ಆ ದಟ್ಟಕಾಡು ನಡು ಮಧ್ಯಾಹ್ನದಲ್ಲೂ ಭಯ ಹುಟ್ಟಿಸುತ್ತಿತ್ತು. ಮುಂದೆ ಜೋಗದಿಂದ ತೀರ್ಥಹಳ್ಳಿಗೆ, ತೀರ್ಥಹಳ್ಳಿಯಿಂದ ಆಗುಂಬೆಗೆ ನಡೆದೆ. ನನ್ನ ಹದಿನೆಂಟನೆಯ ವಯಸ್ಸಿನಲ್ಲಿ ಹಿಮಾಲಯದ ಜೋಶಿಮಠ್‌ದಿಂದ ಬದರೀನಾಥದ ತನಕ ಸ್ವೀಡನ್‌ನ ಗೆಳೆಯನಾದ ಕುರ್ತ್‌ನೊಂದಿಗೆ ಆ ಮಂಜಿನಲ್ಲಿ ಕೊರೆಯುವ ಚಳಿಯಲ್ಲಿ ಹೇಗೆ ನಡೆದೆನೆಂದರೆ ಹಿಮಾಲಯದ ತುದಿ ಬದರೀನಾಥವನ್ನು ತಲುಪುವ ಹೊತ್ತಿಗೆ ನನ್ನ ಎರಡೂ ಪಾದಗಳಲ್ಲಿ ಬಿರುಕುಗಳಾಗಿ ನೆತ್ತರು ಸೋರುತ್ತಿತ್ತು.

ಇನ್ನು ಸೈಕಲ್ ತುಳಿಯುವ ವಿಷಯಕ್ಕೆ ಬಂದರೆ ಬಳ್ಳಾರಿಯಿಂದ ತೆಲುಗು ಸಿನೆಮಾ ನೋಡಲು ಗುಂತಕಲ್ಲಿಗೆ, ಕನ್ನಡ ಸಿನೆಮಾ ನೋಡಲು ಹೊಸಪೇಟೆಗೆ ಅದೆಷ್ಟು ಬಾರಿ ಸೈಕಲ್ ತುಳಿದಿದ್ದೇನೋ ನನಗೇ ನೆನಪಿಲ್ಲ. ಒಮ್ಮೆ ಮಾತ್ರ ಬಳ್ಳಾರಿಯಿಂದ ಮಂಡ್ಯದ ತನಕ ಸ್ಕೌಟ್ ಕ್ಯಾಂಪಿಗೆಂದು ಏಳು ಜನ ಗೆಳೆಯರೊಂದಿಗೆ ಸೈಕಲ್ ತುಳಿದಿದ್ದೆ. ನನ್ನ ಕಾಲಿನ ಬಲ, ಮೀನಖಂಡಗಳ ಗಾತ್ರ ಸೃಷ್ಟಿಯಾದದ್ದೇ ಈ ನಡಿಗೆ, ಸೈಕ್ಲಿಂಗ್ ಹಾಗೂ ಈಜಿನಿಂದಾಗಿ. ಮೀನಖಂಡವನ್ನು ಮನುಷ್ಯನ ದೇಹದ second heart ಅನ್ನುತ್ತಾರೆ. ಹೃದಯ ರಕ್ತವನ್ನು ಮೆದುಳಿನ ಸಹಸ್ರಾರದಿಂದ ಪಾದದ ತನಕ ಪಂಪ್ ಮಾಡಿದರೆ ಅದನ್ನು ವಾಪಾಸ್ ಹೃದಯಕ್ಕೆ ಪಂಪ್ ಮಾಡುವುದು ಇದೇ ಮೀನಖಂಡ ಎಂಬ ನಂಬಿಕೆಯಿದೆ. ಇದು scientific ಎಷ್ಟು ಸತ್ಯ ಎಂಬುದು ನನಗೆ ಗೊತ್ತಿಲ್ಲ. ಆದರೆ, ನನ್ನ ಕಾಲುಗಳ ತಾಕತ್ತು ಮಾತ್ರ ಅಂದು ಅಮೋಘವಾಗಿತ್ತು.

ಈಗೇನಿದೆ? ಹಾಸಿಗೆಯಿಂದ ಎದ್ದು toiletಗೆ ನಡೆದರೆ ಅವತ್ತಿಗೆ ಅಷ್ಟೇ ಪುಣ್ಯ. Tpilet ಕೂಡ ಇಂಗ್ಲಿಷ್ ಕಮೋಡ್. ಮನೆಯಿಂದ ಹೊರಬಿದ್ದರೆ car. ಕಾರಿನಿಂದ ಇಳಿದರೆ ‘ಜನಶ್ರೀ’ ವಾಹಿನಿಯ lift. ಕೂಡುವುದು ಕುರ್ಚಿಯ ಮೇಲೆ. ದಿನಕ್ಕೆ ಹದಿನೆಂಟು ತಾಸು ಕುರ್ಚಿಯ ಮೇಲೆಯೇ ಕಳೆದು ಹೋಗುತ್ತದೆ. ರಾತ್ರಿ ಹಾಸಿಗೆಗೆ ಬೆನ್ನು ಚೆಲ್ಲಿದರೆ ಅಲ್ಲಿಗೆ ಮುಕ್ತಾಯ. ಕಾಯಿಲೆ ಬಿದ್ದು ಎದ್ದ ಮೇಲಂತೂ ನಡಿಗೆಯ ಮಾತೇ ಮರೆತು ಹೋಗಿತ್ತು.

ಆದರೆ, ಮೊನ್ನೆ ನಡೆಯಲು ನಿರ್ಧರಿಸಿದೆ. ಬಳ್ಳಾರಿ ಜಿಲ್ಲೆಯ ಗುಂಡಾ ಗ್ರಾಮದಿಂದ ಡಣಾಪುರದವರೆಗೆ. ಅದು ಪಾದಯಾತ್ರೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಸುದ್ದಿಮನೆ, ಒಂದು ವಾಹಿನಿ ಬೀದಿಗಿಳಿದು ಪಾದಯಾತ್ರೆ ಮಾಡಿದ ಘಟನೆ ಇದು. ‘ಜನಶ್ರೀ ವಾಹಿನಿ’ಯು ರವಿ ಬೆಳಗೆರೆ ಸಾರಥ್ಯದಲ್ಲಿ, “ಬಿ.ಎಂ.ಎಂ ಇಸ್ಪಾತ್ ಕಂಪೆನಿ"ಯ ಅಕ್ರಮ, ಗೂಂಡಾಗಾರಿಕೆ ಹಾಗೂ ರೈತರಿಗೆ ಮಾಡಿದ ವಂಚನೆಯ ವಿರುದ್ಧವಾಗಿ ಹಮ್ಮಿಕೊಂಡ ಸುಮಾರು ಹತ್ತು ಕಿಲೋಮೀಟರುಗಳ ಪಾದಯಾತ್ರೆಯ ಪ್ರತಿಭಟನೆ ಇದು. ಈ ದೇಶದಲ್ಲಿ ಅನೇಕ ಪಾದಯಾತ್ರೆಗಳು ಆಗಿವೆ. ಆಚಾರ್ಯ ವಿನೋಬಾ ಭಾವೆ ಹಮ್ಮಿಕೊಂಡ “ಭೂದಾನ ಯಜ್ಞ"ದ ಪಾದಯಾತ್ರೆ, ಗ್ವಾಲಿಯರ್‌ನಿಂದ ಹೊರಟ ಪಿ.ವಿ.ರಾಜಗೋಪಾಲರ ಇನ್ನೊಂದು ಪಾದಯಾತ್ರೆ, ರಾಜಸ್ಥಾನದ ಭಗೀರಥ ರಾಜೇಂದ್ರಸಿಂಗ್‌ರ ಪಾದಯಾತ್ರೆಮುಂತಾದವನ್ನು ಬಿಟ್ಟರೆ ಉಳಿದೆಲ್ಲಾ ಪಾದಯಾತ್ರೆಗಳೂ ಕೂಡ ಸಾಮಾನ್ಯವಾಗಿ political ಪಾದಯಾತ್ರೆಗಳೇ. ಆದರೆ, ನನ್ನದು ಸಂಪೂರ್ಣವಾಗಿ ರಾಜಕೀಯದಿಂದ ಮುಕ್ತವಾದ apolitical ಪಾದಯಾತ್ರೆ.

ಗುಂಡಾ ಅರಣ್ಯ ನನ್ನ ಪಾಲಿಗೆ ಅನೇಕ ವರ್ಷ ಮೋಜಿನ, ವಿಶ್ರಾಂತಿಯ ತಾಣವಾಗಿತ್ತು. ಬಿ.ಎಂ.ಎಂ ಕಾರ್ಖಾನೆಯ ಕಲ್ಲು ಗಣಿಗಾರಿಕೆಯಿಂದಾಗಿ ಅಲ್ಲಿ ಇವತ್ತಿಗೆ ಔಷಧಿಗೆ ಬೇಕು ಅಂದರೂ ಕೂಡ ಒಂದೇ ಒಂದು ಮರವಿಲ್ಲ. ಹಸಿರಂತೂ ಇಲ್ಲವೇ ಇಲ್ಲ. ತುಂಗಭದ್ರಾ ಹಿನ್ನೀರು ಎಂಬುದು ಬಳ್ಳಾರಿ ಜಿಲ್ಲೆಯ ಪಾಲಿಗೆ ಜೀವಜಲ. ಅದರಿಂದ ಎರಡು MGD ನೀರು ಮಾತ್ರ ಬಳಸಲಿಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಆದರೆ, ಬಿ.ಎಂ.ಎಂ ಒಡೆಯ ದಿನೇಶ್ ಸಿಂಘ್ವಿ ಕಡಿಮೆ ಎಂದರೂ ಮೂರು ಟಿಎಂಸಿ ನೀರು ಬಳಸುತ್ತಾನೆ. ಅಲ್ಲಿನ ವಿದ್ಯುತ್ ಕದಿಯುತ್ತಾನೆ. ಸ್ಥಳೀಯರಿಗೆ ಕೂಲಿ ಕೆಲಸವನ್ನೂ ಕೂಡ ಕೊಡುವುದಿಲ್ಲ. ಕಾರ್ಮಿಕರನ್ನು ತನ್ನ ರಾಜಸ್ಥಾನದಿಂದ ಕರೆತಂದು ಅವರಿಗಾಗಿ ಶೆಡ್ ನಿರ್ಮಿಸಿ ಒಂದು ಪ್ರತ್ಯೇಕ ಗ್ರಾಮವನ್ನೇ ಸೃಷ್ಟಿಸಿದ್ದಾನೆ. ಎಲ್ಲದಕ್ಕಿಂತ ನನಗೆ ನೋವಾಗಿದ್ದೆಂದರೆ ಗುಂಡಾ, ಡಣಾಪುರ ಮುಂತಾದ ಮೂವತ್ಮೂರು ಹಳ್ಳಿಗಳ ಭೂಮಿ ನಿಜಕ್ಕೂ ಭೂತಾಯಿಯಷ್ಟು ಫಲವತ್ತು. ಅಂತಹ ಶುದ್ಧ ನೀರಾವರಿ ಭೂಮಿಯನ್ನು ಖುಷ್ಕಿ ಭೂಮಿ ಎಂದು ಸರ್ಕಾರಿ ನಾಯಿಗಳ ಸಹಯೋಗದಿಂದ ಪರಿವರ್ತಿಸಿ ಕೆ.ಐ.ಎ.ಡಿ.ಬಿಯಿಂದ ವಶಪಡಿಸಿಕೊಂಡು ಅದನ್ನು ತನ್ನ ಕಾರ್ಖಾನೆಯ ಹೆಸರಿಗೆ ಪರಭಾರೆ ಮಾಡಿಸಿಕೊಂಡು ಆ ಭೂಮಿಯನ್ನು ಬೆಂಗಳೂರಿನ Sstate bank of Indiaಕ್ಕೆ ಒತ್ತೆಯಿಟ್ಟು ಐದು ಸಾವಿರದ ನಾನ್ನೂರು ಕೋಟಿಗೆ ಸಾಲ ಎತ್ತಿದ್ದಾನೆ. ಆದರೆ ಇವತ್ತಿಗೂ ಒಬ್ಬೇ ಒಬ್ಬ ರೈತನಿಗೆ ಸಿಂಘ್ವಿ ಪರಿಹಾರ ಕೊಟ್ಟಿಲ್ಲ.

ಇದು ನನ್ನ ಮೊದಲನೆಯ ನೋವಾದರೆ, ಎರಡನೆಯದು ರಸ್ತೆಯದು. ಗುಂಡಾ ಗ್ರಾಮದಿಂದ ಮರಿಯಮ್ಮನಹಳ್ಳಿಯವರೆಗಿನ ರಸ್ತೆಯ ತನಕ ಮನುಷ್ಯರಿರಲಿ, ಸರ್ಕಾರಿ ಬಸ್ಸು ಕೂಡ ಹೋಗದಂತೆ ತಡೆ ಒಡ್ಡಿ ಒಂದು ಇಡೀ ರಸ್ತೆಯನ್ನು ತನ್ನ ಜಹಗೀರನ್ನಾಗಿ ಮಾಡಿಕೊಂಡಿದ್ದಾನೆ ದಿನೇಶ್ ಸಿಂಘ್ವಿ. ಒಂದು ರಸ್ತೆ ಅಂದರೆ ಅದು ರಾಜ್ಯದ ಸ್ವತ್ತು. ಅಲ್ಲಿ ನಿರ್ಮಾಣವಾಗಿರುವುದು ಪ್ರಧಾನಮಂತ್ರಿಯವರ ಸಡಖ್ ಯೋಜನೆಯ ರಸ್ತೆ. ಅದಕ್ಕೂ ಮುಂಚೆ ನನ್ನ ಜನ ಆ ರಸ್ತೆಯಲ್ಲಿ ನಡೆಯುತ್ತಿದ್ದರು. ತಮ್ಮ ಹೊಲಗಳಿಗೆ ಹೋಗುತ್ತಿದ್ದರು. ಅವರ ಪತ್ನಿಯರು ಗಂಡಂದಿರಿಗೆ ಹೊಲಕ್ಕೆ ಬುತ್ತಿ ಹೊರುತ್ತಿದ್ದುದು ಇದೇ ರಸ್ತೆಯಲ್ಲಿ. ಇವತ್ತು ಆ ರಸ್ತೆ ನನ್ನ ಜನಕ್ಕೆ ನಿಷಿದ್ಧ ಪ್ರದೇಶ. ಇದನ್ನು ಒಬ್ಬ ಕನ್ನಡಿಗನಾಗಿ, ಬಳ್ಳಾರಿಯವನಾಗಿ ನಾನು ಹೇಗೆ ಸಹಿಸಲಿ.

ನಾನು ತಿರುಗಿಬಿದ್ದೆ. ಪಾದಯಾತ್ರೆ ಹೋಗುವುದು ಶತಃಸಿದ್ಧ ಎಂದು ನಿರ್ಧರಿಸಿದ್ದೆ. ನನ್ನ ‘ಜನಶ್ರೀ’ ವಾಹಿನಿಯು ಅದಕ್ಕೆ ದನಿಗೂಡಿಸಿತು. ಗೆಳೆಯರಾದ ಸುನೀಲ್ ಹೆಗ್ಗರವಳ್ಳಿ, ಸ್ವಾಮಿಗೌಡ, ‘ಜನಶ್ರೀ’ ವರದಿಗಾರರಾದ ಲಕ್ಷ್ಮೀಪ್ರಸಾದ್, ಮುತ್ತುರಾಜ್ ಮತ್ತು ಸುಮಾರು ನಾಲ್ಕು ನೂರು ಮಂದಿ ‘ಜನಶ್ರೀ’ಯ ಸಿಬ್ಬಂದಿ ದನಿಗೂಡಿಸಿ ನನಗೆ ಅನುಮತಿ ಕೊಟ್ಟರು. ನಾನು ಈ ವಯಸ್ಸಿನಲ್ಲಿ ಕಾಯಿಲೆಯಿಂದ ಚೇತರಿಸಿಕೊಂಡು ಕೇವಲ ಹತ್ತು ಕಿಲೋಮೀಟರು ದೂರ ಪಾದಯಾತ್ರೆ ಮಾಡಿದೆ. ಜನ ನನ್ನನ್ನು ಎತ್ತಿಕೊಂಡು ಕುಣಿದರು. ಡೊಳ್ಳು, ಕಹಳೆಗಳ ಶಬ್ದ ಝೇಂಕಾರದಿಂದ ನಾನು ಪುನೀತನಾಗಿ ಹೋದೆ.

ದಾರಿಯಲ್ಲಿ ನಡೆದೆ. ಬೆಟ್ಟಗುಡ್ಡ ಹತ್ತಿದೆ. ಬಿ.ಎಂ.ಎಂ ಕಾರ್ಖಾನೆಯವರು ಮೋರಿಯನ್ನಾಗಿ ಪರಿವರ್ತಿಸಿದ್ದ ಡಣಾಪುರದ ಕೆರೆಗೆ ಹರಿಯುವ ನೀರನ್ನೂ ಕುಡಿದೆ. ಪಾದಯಾತ್ರೆಯುದ್ದಕ್ಕೂ ಒಬ್ಬ ಮಗಳಾಗಿ ಮರಿಯಮ್ಮನಹಳ್ಳಿಯ ಸುನೀತಾ ಎಂಬ ಹೆಣ್ಣುಮಗಳು ನನ್ನ ಕೈ ಹಿಡಿದುಕೊಂಡು, ಊರಲು ಹೆಗಲು ಕೊಟ್ಟು ‘ಅಪ್ಪಾ’ ಎಂದು ಕರೆದು ನನ್ನೊಂದಿಗೆ ಹೆಜ್ಜೆ ಹಾಕಿದಳು. ಡಣಾಪುರದ ಗ್ರಾಮಪಂಚಾಯ್ತಿ ಸದಸ್ಯೆ ಕಾಶಮ್ಮ ಆರತಿ ಮಾಡಿ ರಣವೀಳ್ಯ ಕೊಟ್ಟು, ಕಡೆಗೆ ತನ್ನ ಮನೆಯಲ್ಲಿ ಅನ್ನಕ್ಕೆ ಮಜ್ಜಿಗೆ ಹಾಕಿ ಕಿವುಚಿ, ಅದಕ್ಕೆ ಗುರೆಳ್ಳು ಪುಡಿ ಬೆರೆಸಿ ಇಡೀ ಖಾದ್ಯವನ್ನು ಕುಡಿಯಲು ಕೊಟ್ಟು ಯಾವುದೋ ಜನ್ಮದ ತಾಯಿಯಾದಳು. ಸಾವಿರಾರು ರೈತರು ಬಳ್ಳಾರಿ ನೆಲದ ಈ ಮಗನೊಂದಿಗೆ ಹೆಜ್ಜೆ ಹಾಕಿದರು. ‘ರವಿ ಬೆಳಗೆರೆಗೆ ಜಯವಾಗಲಿ’, ‘ಜನಶ್ರೀ ಅಭಿಯಾನಕ್ಕೆ ಜಯವಾಗಲಿ’ ಎಂದರು. ‘ರೈತರ ಹೋರಾಟ ಗೆಲ್ಲುವ ತನಕ’ ಎಂದು ಉದ್ಘೋಷ ಮಾಡಿದರು. ಇವು ಇಲ್ಲದಿದ್ದರೆ ನಾನು ಇವತ್ತಿನ ಆರೋಗ್ಯದ ಸ್ಥಿತಿಗತಿಯಲ್ಲಿ ಹತ್ತು ಕಿಲೋಮೀಟರು ನಡೆಯಲು ಸಾಧ್ಯವೇ ಇರಲಿಲ್ಲ.

ಇದೊಂದು ಆರಂಭಿಕ ಪಾದಯಾತ್ರೆಯ ಫಲಿತಾಂಶವನ್ನು ನೋಡಿ. ‘ಜನಶ್ರೀ ಅಭಿಯಾನ’ ರವಿ ಬೆಳಗೆರೆಯ ಸಾರಥ್ಯದಲ್ಲಿ ನಡೆದ ಮರುದಿನವೇ ಬಿ.ಎಂ.ಎಂ ಧಣಿ ದಿನೇಶ್ ಸಿಂಘ್ವಿ, ಕನಿಷ್ಟ ಮೂವತ್ತಾರು ಜನ ಸ್ಥಳೀಯರಿಗೆ ಕೆಲಸ ಕೊಡುವುದಾಗಿ ಮಾತು ಕೊಟ್ಟು, ರೈತರಿಗಾದ ಅನ್ಯಾಯ ಸರಿಪಡಿಸುತ್ತೇನೆಂದು ಆಣೆ ಮಾಡಿದ. ಎಲ್ಲದಕ್ಕಿಂತ ಹೆಚ್ಚಾಗಿ ತಾನು ಆಕ್ರಮಿಸಿಕೊಂಡ, ರೈತರಿಗೂ ನಿರ್ಬಂಧ ಒಡ್ಡಿದ ಗುಂಡಾ-ಡಣಾಪುರ ರಸ್ತೆಯನ್ನು ಮರುದಿನದಿಂದಲೇ ಸಂಚಾರಕ್ಕೆ ಮುಕ್ತಗೊಳಿಸಿದ. ಸುಮಾರು ಎಂಟು ವರ್ಷಗಳಿಂದ ಆ ರಸ್ತೆ ಆತನ ಕಬ್ಜಾದಲ್ಲಿತ್ತು. ಇವತ್ತು ನನ್ನ ನೆಲದ ರೈತ ಆ ರಸ್ತೆಯ ಎದೆಗೆ ಕಾಲು ಚೆಲ್ಲಿ ನಡೆಯುತ್ತಾನೆ. ಮೊಟ್ಟಮೊದಲ ಬಾರಿಗೆ ಮೊನ್ನೆಯಿಂದ ಅಲ್ಲಿ ‘KSRTC ಬಸ್ಸುಗಳು’ ಓಡಾಡಲಾರಂಭಿಸಿವೆ.

ನನಗೆ ಗೊತ್ತು, ಇದಷ್ಟೇ ಹೋರಾಟದ ಗೆಲುವಲ್ಲ. ಇದು ಮೊದಲ ಯುದ್ಧ ಮಾತ್ರ. ಮೊದಲ ವಿಜಯ ಮಾತ್ರ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡದ ಹೊರತು ನಾನು ವಿಶ್ರಮಿಸುವುದಿಲ್ಲ.
ಕೇವಲ ಒಬ್ಬ ಬಿ.ಎಂ.ಎಂ ಅಲ್ಲ. ಅಲ್ಲಿ ಪ್ರಚಂಡ ಲೂಟಿಕೋರ “ಜಿಂದಾಲ್ ಕಂಪೆನಿ" ಇದೆ. ಇನ್ನೂ ಹೋರಾಟ ನನಗಿದೆ-ಅವರಿಗಿದೆ. ಒಬ್ಬ ಜನಾರ್ದನ ರೆಡ್ಡಿಯನ್ನು ರಾಜಕೀಯ ಕಾರಣಗಳಿಗಾಗಿ ಈ ಸರ್ಕಾರ ಜೈಲಿನಲ್ಲಿಟ್ಟಿದೆ. ಆದರೆ, ದಿನೇಶ್ ಸಿಂಘ್ವಿಯಂತಹ ಲೂಟಿಕೋರರಿಗೆ ಈ ನೆಲದ ಯಾವ ಕಾನೂನು ಅನ್ವಯಿಸುತ್ತಿಲ್ಲ. ಇವರು ಅಗೆದ ಹೊಂಡದಲ್ಲಿ ಬಿದ್ದು ಡಣಾಪುರದ ಕೇವಲ ಹನ್ನೊಂದು ವರ್ಷ ವಯಸ್ಸಿನ ಫಯೀಂ ಮತ್ತು ಖಾಸೀಂ ಎಂಬಿಬ್ಬರು ಹುಡುಗರು ಮೃತಪಟ್ಟರು. ನನ್ನ ಹೋರಾಟ ಗೆದ್ದ ದಿನ ಆ ಕಂದಮ್ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ. ನನ್ನ ಹೋರಾಟದ ವೇದಿಕೆಗೆ ನಾನು ಫಯೀಂ ಮತ್ತು ಖಾಸೀಂ ವೇದಿಕೆ ಎಂದೇ ಹೆಸರಿಟ್ಟೆ. ವೈಯಕ್ತಿಕ ಬದುಕಿನಲ್ಲಿ ಸೋಲು-ಗೆಲುವು, ಎಡವು, ಮುಗ್ಗರಿಸುವಿಕೆ ಎಲ್ಲವನ್ನೂ ಕಂಡಿದ್ದೇನೆ. ಆದರೆ ಹೋರಾಟದ ಬದುಕಿನಲ್ಲಿ ನಾನು ಸೋಲು ಕಂಡವನಲ್ಲ. ಅದು ನನ್ನ ಜಾಯಮಾನವೂ ಅಲ್ಲ. ನನ್ನ ರಕ್ತದಲ್ಲೂ ಇಲ್ಲ.

ನಾನು ಆಂಧ್ರದ ‘ನಲ್ಲಮಲ್ಲ’ ಕಾಡಿನಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರ ನೇತೃತ್ವದಲ್ಲಿ ಕಮ್ಯುನಿಸ್ಟ್ ಹೋರಾಟದ ದೀಕ್ಷೆ ತೆಗೆದುಕೊಂಡವನು. ನಕ್ಸಲೀಯ ಭಾಷೆಯಲ್ಲಿ ‘ಕೊರಿಯರ್’ ಎಂಬ ಶಬ್ದವಿದೆ. ಅದರರ್ಥ ನಾಯಕನ ಬೆಂಗಾವಲಿಗ, ಅಂದರೆ Gun man. ಕೊಂಡಪಲ್ಲಿಯವರು ಮುಂದೆ ನಡೆಯುತ್ತಿದ್ದರೆ ನಾನು ಕಿಸೆಯಲ್ಲಿ ಬಂದೂಕು ಇಟ್ಟುಕೊಂಡು ಅವರಿಗಿಂತ ಒಂದು ಹೆಜ್ಜೆ ಮುಂದೆ ನಡೆಯುತ್ತಿದ್ದವನು. ನನಗೆ ನಿರ್ಭಯ, ನಿರ್ಭೀತಿ, ನ್ಯಾಯ ಹೋರಾಟ ಎಲ್ಲವನ್ನೂ ಕಲಿಸಿದ ತಾಯಿ ‘ನಲ್ಲಮಲ್ಲ’ ಅರಣ್ಯ. ಇವತ್ತಿಗೂ ಆ ಹೋರಾಟಕ್ಕೆ ನಾನು ಬದ್ಧನಾಗಿದ್ದೇನೆ.

“ಆ ರಾಮನು ಇಟ್ಟ ಬಾಣದ ಗುರಿಯು ಎಂದೂ ತಪ್ಪಿಲ್ಲ: ಎಂದೆಂದೂ ತಪ್ಪಿಲ್ಲ, ಈ ರಾಮಾಚಾರಿ ಕೆಣಕುವ ಗಂಡು ಇನ್ನೂ ಹುಟ್ಟಿಲ್ಲ" ಇದು ವಿಜಯ ನಾರಸಿಂಹ ಅವರು ರಚಿಸಿದ ‘ನಾಗರಹಾವು’ ಸಿನೆಮಾದ ಗೀತೆ. ಪುಟ್ಟಣ್ಣ ಕಣಗಾಲ್ ಆ ಚಿತ್ರದ ನಿರ್ದೇಶಕರು. ಕಾದಂಬರಿ ಬರೆದವರು ನನ್ನ ತಾಯಿಯ ಸೋದರ ಸಂಬಂಧಿ ತ.ರಾ.ಸು. ಅಂದರೆ ತಳುಕಿನ ರಾಮಸ್ವಾಮಿಗಳ ಮಗ ಸುಬ್ಬರಾಯ. ನನ್ನ ಪಾಲಿಗೆ ಇದು ಕೇವಲ ಗೀತೆಯಲ್ಲ. ಅದು ನನ್ನ ಘೋಷವಾಕ್ಯ. ನಾನು ದ್ವೇಷ ಸಾಧಿಸುವವನಲ್ಲ. ಹೆಡೆ ತುಳಿದರೆ ನಾಗರಹಾವು. ಹಾಲು ಎರೆದರೆ ನಿಮ್ಮ ಅಂಗಳದ ಗುಲಾಮ. ಈಗ ಒಂದೇ ಒಂದು ಘೋಷ: ರೈತರು ಬಂದರೆ ದಾರಿ ಬಿಡಿ: ರೈತರ ಕೈಗೆ ರಾಜ್ಯ ಕೊಡಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 February, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books