Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನಿಮ್ಮಲ್ಲಿ ನಾನು ವಿನಂತಿಸುವುದು ಇಷ್ಟೆ...

Be organised.
ನಾನು ಎಲ್ಲೋ ಕುಳಿತು ಬರೆಯುತ್ತೇನೆ. ಕೋಣೆಯ ಮೂಲೆಯಲ್ಲಿ, ಬಸ್‌ಸ್ಟ್ಯಾಂಡ್‌ಗಳಲ್ಲಿ, ವಿಮಾನಗಳಲ್ಲಿ, ಯುದ್ಧ ಭೂಮಿಯಲ್ಲಿ, ದೇಶ- ಪರದೇಶಗಳಲ್ಲಿ ಹೀಗೆ... ಎಲ್ಲೆಂದರಲ್ಲಿ ಬರೆಯುತ್ತೇನೆ. ನಾನು ಬರೆದದ್ದು ಯಾವುದೋ ಓದುಗನ, ಯಾವುದೋ ಮನದ, ಎಂಥದೋ ಸೂಕ್ಷ್ಮವನ್ನು ನಾಟುತ್ತದೆ. ಬರೆಯುವಾಗ ನನ್ನ ಕಣ್ಣ ಮುಂದೆ ಒಬ್ಬ ವ್ಯಕ್ತಿ ಇರುವುದಿಲ್ಲ. ಮೊನ್ನೆ facebookನಲ್ಲಿ ಗೆಳತಿಯೊಬ್ಬಳು ಇಷ್ಟು ಹೊತ್ತಾದರೂ ಈ ನಡುರಾತ್ರಿಯಲ್ಲಿ ಯಾಕೆ ಒಬ್ಬರೇ ಇರುತ್ತೀರಿ ಎಂದು ಕೇಳಿದ್ದಕ್ಕೆ “ನಾನು ಬರೆಯುವ ಕುಳಿತಾಗ ನನ್ನೊಂದಿಗೆ ನಾನೂ ಇರಬಾರದು ಅದು ನನ್ನ vaccum" ಎಂದೆ. ನಾನು ಬರೆಯುವ ‘ಖಾಸ್‌ಬಾತ್’, ‘ಕೇಳಿ’ ಅಥವಾ ಒಂದು ಎಸ್ಸೆಮ್ಮೆಸ್ ಜೋಕ್ ಕೂಡ ನನ್ನ ಏಕಾಂತದಲ್ಲಿ ಸೃಷ್ಟಿ ಹೊಂದಿದ್ದು.

ಇದನ್ನೆಲ್ಲಾ ಹೇಳುವುದಕ್ಕೆ ಒಂದು ಕಾರಣವಿದೆ. ಕೆಲವರು ಕೇಳುತ್ತಾರೆ. “ಎರಡು ಪತ್ರಿಕೆಗಳು, ಒಂದು ಅದ್ಭುತ ಶಾಲೆ, ಟೀವಿ showಗಳು, ಸಿನೆಮಾ, ಪುಸ್ತಕದ ಅಂಗಡಿ, ಓದುಗರ ಭೇಟಿ, ಆಪ್ತ ಸಲಹೆ ಕೋರಿ ಬರುವವರು ಈಗ ಜನಶ್ರೀ ವಾಹಿನಿಯ ಪ್ರಧಾನ ಸಂಪಾದಕತ್ವ ಇವುಗಳನ್ನೆಲ್ಲಾ ಹೇಗೆ ನಿಭಾಯಿಸುತ್ತೀರಿ. ನಿಮಗೆ ಸಮಯ ಹೇಗೆ ಸಿಗುತ್ತದೆ" ಎಂದು.

ಇದೆಲ್ಲಾ ನನ್ನ ಅಕ್ಷರ ಸಂಬಂಧಿ ಚಟುವಟಿಕೆ. ಮೊನ್ನೆಯಷ್ಟೇ ‘ಪ್ರಥಮ್’ ಎಂಬ ಅತಿಚಿಕ್ಕ ಹುಡುಗನ ನಿರ್ದೇಶನದ “ದೇವ್ರವ್ನೆ ಬುಡು ಗುರು" ಚಿತ್ರದ ಒಂದು ಅತಿಮುಖ್ಯ ಹಾಗೂ ಪ್ರಧಾನ ಪಾತ್ರಕ್ಕೆ ಸಹಿ ಹಾಕಿದೆ. ಇದೆಲ್ಲದರೊಂದಿಗೆ ನಾನು ಪುಸ್ತಕ ಬರೆಯುತ್ತೇನೆ. ತರ್ಜುಮೆ, ಕಾದಂಬರಿ, ವ್ಯಕ್ತಿ ಚಿತ್ರ ವಗೈರೆ, ವಗೈರೆ. ನನಗೆ ಎರಡು ಕುಟುಂಬಗಳಿವೆ. ನಾಲ್ಕು ಮಕ್ಕಳು, ಮೂವರು ಮೊಮ್ಮಕ್ಕಳು, ನೆಂಟರು-ಬೀಗರು ಎಲ್ಲಾ ಇದ್ದಾರೆ. ಅವರೆಲ್ಲರಿಗೂ ಕೂಡ ಆಗಿ ಮಿಕ್ಕುವಷ್ಟು ಸಮಯ ನನ್ನಲ್ಲಿದೆ. “A busy man has time for everything" ಎಂಬುದು ಅನುಭವ ಜನ್ಯವಾದ ನಾಣ್ನುಡಿ.

ನೀವು, ಇವತ್ತು phone ಮಾಡಿ ವಿಜಯ ಸಂಕೇಶ್ವರ ಅವರನ್ನು ಕೇಳಿ ಯಾವತ್ತು ಸಿಗ್ತೀರಿ ಅಂತ. ಅವರು ಹೇಳುತ್ತಾರೆ "೨೦೧೭, ಏಪ್ರಿಲ್ ಹದಿನಾಲ್ಕಕ್ಕೆ ಬೆಂಗಳೂರಿಗೆ ಬರುತ್ತೇನೆ. ಸಾಯಂಕಾಲ ನಾಲ್ಕು ಗಂಟೆಗೆ ಬನ್ನಿ" ಅವರಿಂದ ನಾನು ಕಲಿತ ಅದ್ಭುತ ಪಾಠಗಳಲ್ಲಿ ಇದೂ ಒಂದು.
Be organised.
ತುಂಬಾ ಜನಕ್ಕೆ ನಾಳೆ ಏನು ಮಾಡಲಿದ್ದೇವೆ ಎಂಬುದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ಅದನ್ನು ಬರೆದಿಟ್ಟುಕೊಳ್ಳುವುದಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ತಮ್ಮ ದೈನಂದಿನ dairy ನೋಡುವುದಿಲ್ಲ. ಏಕೆಂದರೆ they are not organised. ಅದಿಲ್ಲದ ಹೊರತು ಬದುಕಿನಲ್ಲಿ ಯಾರೂ, ಯಾವತ್ತೂ ಯಶಸ್ವಿಯಾಗುವುದಿಲ್ಲ. ಬದುಕು ಎಂಬುದು ನಿತ್ಯ ತಪಸ್ಸು. ತಪಸ್ಸಿಗೂ ಒಂದು ವೇಳೆ ಎಂಬುದಿರುತ್ತದೆ. ಅದನ್ನು ಪಾಲಿಸದ ಹೊರತು ನಾವು ಬದುಕಿನಲ್ಲಿ ಯಶಸ್ವಿಯಾಗುವುದಿಲ್ಲ. ನನ್ನ ಬದುಕು ಹೀಗೆ ಇರಬೇಕು ಎಂಬುದನ್ನು ನಿರ್ಧರಿಸಿಯೇ ನಾನು ಬೆಳಿಗ್ಗೆ ಎದ್ದೇಳುತ್ತೇನೆ. ನನಗೆ ಪ್ರತಿನಿತ್ಯ ಒಂದು ಹೊಸ ಕನಸು ಬೀಳುತ್ತದೆ. ಹೊಸ ಆಶಯ ಮೂಡುತ್ತದೆ. ಅದಕ್ಕಾಗಿ ಅದರ realilsationಗಾಗಿ ಅವತ್ತಿಡೀ ಶ್ರಮಿಸುತ್ತೇನೆ. ಅದು ಬೇರೆ ಯಾವ ಕಾರಣಕ್ಕೂ ಅಲ್ಲ. ಅದರಲ್ಲಿ ಸ್ವಾರ್ಥವಿಲ್ಲ. ಅದರಲ್ಲಿ ವ್ಯಾಪಾರವೂ ಇಲ್ಲ. ಅದರಲ್ಲಿ ವ್ಯಾಮೋಹವಿಲ್ಲ. ಆದರೆ ಅದರಲ್ಲಿ ಎಲ್ಲವೂ ಇದೆಯಾದ್ದರಿಂದ ನನ್ನ ಬದುಕು ಯಶಸ್ಸಿನ ಮೆಟ್ಟಿಲು ಹತ್ತುತ್ತಾ ಬಂದಿದೆ. ಅದಕ್ಕಾಗಿ ನಾನು ನಿಮಗೆ ಋಣಿ. ನನ್ನನ್ನು organised ಬದುಕು ಬದುಕುವಂತೆ ಮಾಡಿದವರು ನೀವು. ನಿಮಗೆ, ಅಂದರೆ ನನ್ನ ಓದುಗ ದೊರೆಗಳಿಗೆ ನಮಸ್ಕಾರ.

“ಮಾಡಲಿಕ್ಕೆ ನೂರು ಕೆಲಸಗಳಿರುತ್ತವೆ. ಮಾಡುವುದು ನಾನೇ ತಾನೆ. ನಾಳೆ ಮಾಡಿದರಾಯಿತು ಬಿಡು" ಎನ್ನುವ ಮೂರ್ಖತನ ನಮ್ಮನ್ನು ಅನೇಕ ಸಲ defeat ಮಾಡುತ್ತದೆ. ನಾಳೆ ಮಾಡುವುದನ್ನು ಇವತ್ತು ತೀರ್ಮಾನಿಸಿ, ನಿರ್ಧರಿಸಿ ಮತ್ತು ಮಾಡಿ ಬಿಡಿ. ನಿಮಗೆ ಜಯವಾಗದಿದ್ದರೆ ನನಗೊಂದು ಧಿಕ್ಕಾರದ ಪತ್ರಬರೆಯಿರಿ. I am always with you and only you.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 13 February, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books