Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಸಮಾಧಾನ! ಈ ಅಂಕಣಕ್ಕೆ ಪತ್ರ ಬರೆಯುವ ಮುನ್ನ : ಓದಿಕೊಳ್ಳಿ


ಈ ಅಂಕಣ ಬಸಿಯುವಷ್ಟು ಸಹನೆ, ಶ್ರಮ ಮುಂತಾದವುಗಳನ್ನು ‘ಓ ಮನಸೇ...’ ಪತ್ರಿಕೆಯ ಮತ್ಯಾವ ಅಂಕಣವೂ ಬಸಿಯುವುದಿಲ್ಲ. ಪ್ರತಿಯೊಂದನ್ನೂ ನಾನು ಬುದ್ಧಿ ಬಳಸಿ ಬರೆಯಬಹುದು. ಕೆಲವೊಮ್ಮೆ ಭಾವಾವೇಶಕ್ಕೆ ಬಿದ್ದು ಹೃದಯದಿಂದ ಬರೆಯಬಹುದು. ಆದರೆ ಈ ಅಂಕಣದಲ್ಲಿ ಮೂಡಿ ಬರುವ ಪತ್ರಗಳು-ಅವಕ್ಕೆ ನಾನು ನೀಡಬೇಕಾದ ಉತ್ತರಗಳು ಬೇರೆಯದೇ ತರಹದ ಅಂತಃಕರಣವನ್ನು ಬಯಸುತ್ತವೆ. ಒಬ್ಬ ಅಣ್ಣನಾಗಿ, ಗೆಳೆಯನಾಗಿ, ತಾಯಿಯ ಸ್ಥಾನದಲ್ಲಿ ನಿಂತು, ತಂದೆಯ ಕಸುವು ತುಂಬಿಕೊಂಡು, ಗೆಳೆಯನ ಆತ್ಮೀಯತೆ ಮೈಗೂಡಿಸಿಕೊಂಡು ಉತ್ತರಿಸಬೇಕು. ಪ್ರತಿ ಪತ್ರವೂ ನನ್ನನ್ನು ಉದ್ದೇಶಿಸಿ ಬರೆದುದಾಗಿರುತ್ತದೆ. ಆದರೆ ನಾನು ಬರೆಯುವ ಉತ್ತರ ಅಂಥದೇ ಸಮಸ್ಯೆಯಿಂದ ಬಳಲುವ, ಗೊಂದಲದಲ್ಲಿರುವ ಸಾವಿರಾರು ಲಕ್ಷಾಂತರ ಹೃದಯಗಳಿಗೆ ಸಮಾಧಾನ ನೀಡುವಂಥದ್ದಾಗಿರುತ್ತದೆ.
ಹೀಗಾಗಿ ನಿಮ್ಮಲ್ಲಿ ಒಂದಷ್ಟು ಮನವಿ.
*ಪತ್ರ ಪೋಸ್ಟಿಗೆ ಹಾಕಿದ ನಂತರ ಮುಂದಿನ ಸಂಚಿಕೆಯಲ್ಲೇ ಉತ್ತರ ನಿರೀಕ್ಷಿಸಬೇಡಿ. ಅನೇಕ ಪತ್ರಗಳು ಇಲ್ಲಿ ಉತ್ತರ ಕಾಯುತ್ತಿರುತ್ತವೆ.
*ಸಮಸ್ಯೆಯ ತೀವ್ರತೆ, ಅದರ urgency ಅರಿತು ಉತ್ತರಿಸುತ್ತೇನಾದ್ದರಿಂದ ಸಹನೆ ಇಟ್ಟುಕೊಳ್ಳಿ.
*ಇಡೀ ಜೀವನದ ಕಥಾನಕ ಬರೆಯಬೇಕಿಲ್ಲ. ನಿಮ್ಮ ಸಮಸ್ಯೆ, ಅದರ ಸಾರ, ಸಂಬಂಧಿಸಿದವರ ಸ್ಥೂಲ ಪರಿಚಯ, ನೀವು ಬಯಸುವ ಪರಿಹಾರ -ಇಷ್ಟು ಬರೆದರೆ ಸಾಕು.
*ನೇರವಾಗಿ ಹೆಸರುಗಳನ್ನು ಬರೆಯಬೇಡಿ. ಇನಿಷಿಯಲ್‌ಗಳು ಮೇಲು. ಫೋನ್ ನಂಬರ್ ಮತ್ತು ವಿಳಾಸ ತಿಳಿಸಬೇಡಿ. ನಿಮ್ಮ ಹೆಸರು ತಿಳಿಸದಿದ್ದರೂ ಆದೀತು. ಊರು ಅಥವಾ ಜಿಲ್ಲೆ ಸೂಚ್ಯವಾಗಿ ತಿಳಿಸಿದರೆ ಹತ್ತಿರದಲ್ಲಿ ನಿಮಗೆ ದೊರೆಯಬಹುದಾದ ವೈದ್ಯಕೀಯ ನೆರವು ಮುಂತಾದವನ್ನು ಸೂಚಿಸಬಲ್ಲೆ.
*ಪತ್ರ ಬರೆಯುವುದು ನೇರ, ಕ್ಷೇಮ. [email protected]ಗೆ ಬರೆದರೆ ನಾನೇ ಉತ್ತರಿಸುತ್ತೇನೆ. ಅದನ್ನು ಬೇರೆ ಯಾರೂ ಓದುವುದಿಲ್ಲ.
*ನನ್ನನ್ನು ಭೇಟಿಯಾಗುವುದು ಅಸಾಧ್ಯವಲ್ಲ. ಆದರೆ ಕಷ್ಟ. ನಾನು ನನ್ನ ಕೈಗೇ ಸಿಗದಷ್ಟು ತಿರುಗಲು ತಿಪ್ಪ. ಈ ಅಕ್ಷರ ಸಂಬಂಧವೊಂದೇ ಗಟ್ಟಿ. ಅಕಸ್ಮಾತ್ ಕೆಲ ಬಾರಿ ಅಂಕಣ ಚಿಕ್ಕದಾದರೆ, ಎರಡು ಪುಟ ಕಡಿಮೆಯಾದರೆ ಬೇಸರಿಸಿಕೊಳ್ಳಬೇಡಿ. ‘ಪತ್ರಿಕೆ’ಗೆ ಬೇರೆ ಒತ್ತಡಗಳಿರುತ್ತವೆ.
*‘ಓ ಮನಸೇ...’ ೮೧ನೆಯ ಸಂಚಿಕೆಯಲ್ಲಿ ನಿಲ್ಲಿಸಲಾಗಿದ್ದ ‘ಸಮಾಧಾನ’ ಅಂಕಣವನ್ನು ಓದುಗರಿಗೆ ನೆನಪಿಸಿ, ಹೊಸ ಪತ್ರಗಳನ್ನು ತರಿಸಿಕೊಳ್ಳೋಣವೆಂದು ಮತ್ತೆ ಪ್ರಕಟಿಸಿದ್ದೆ. ಮರೆತರೆ ತಾನೆ ನೆನಪಿಸೋದು? ಆಗಲೇ ನನ್ನ ಟೇಬಲ್ ಮೇಲಿನ trayನಲ್ಲಿ ೬೬ ಪತ್ರಗಳು ಅಸಮಾಧಾನದಿಂದ ತುಯ್ಯುತ್ತಿವೆ. E-mailನಲ್ಲಿ inbox ತುಂಬಿ ತುಳುಕುತ್ತಿದೆ. ನೀವಿಟ್ಟ ವಿಶ್ವಾಸಕ್ಕೆ ಅದು ದ್ಯೋತಕ. ನಾನು ಋಣಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 04 January, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books