Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಂಬೆಗಾಲು

ಅಂಬೆಗಾಲು
ನೀವೊಂದು ಚಿತ್ರ ಬರೀತೀರಾ? ಅದು ಯಾಕೋ ಚೆನ್ನಾಗಿಲ್ಲ ಅಂತ ನಿಮ್ಮ ಮನಸ್ಸಿಗೆ ಅನಿಸುತ್ತದೆ. ಆದನ್ನು ಯಾರಿಗೂ ತೋರಿಸದೇ ಒಂದು ಕಡೆ ಬಚ್ಚಿಟ್ಟುಕೊಂಡಿರುತ್ತೀರಾ. ಕೊನೆಗೊಂದು ದಿನ ಆ ಚಿತ್ರಕ್ಕೂ ನಿಮಗೂ ವಯಸ್ಸಾಗುತ್ತದೆ. ನಿಮಗೇ ಗೊತ್ತಿಲ್ಲದಂತೆ ನಿಮ್ಮೊಳಗಿರುವ ಕಲಾವಿದನೊಬ್ಬ ಸತ್ತು ಹೋಗಿರುತ್ತಾನೆ. ಮುಂದೆ ಯಾವತ್ತೋ ಒಂದು ದಿನ ನಿಮಗನಿಸುತ್ತದೆ, ಛೆ! ಆ ಚಿತ್ರವನ್ನು ಯಾರಿಗಾದರೂ ತೋರಿಸಬಹುದಾಗಿತ್ತು, ನಾನೂ ಅದೇ ಕ್ಷೇತ್ರದಲ್ಲಿ ಮುಂದುವರಿಬಹುದಾಗಿತ್ತು.

But it was too late...
Infact, ಪ್ರತಿಯೊಬ್ಬರಲ್ಲೂ ಏನಾದರೂ ಒಂದು ಪ್ರತಿಭೆ ಇದ್ದೇ ಇರುತ್ತದೆ. ನಿಮ್ಮೊಳಗೊಬ್ಬ ಕತೆಗಾರ ಇರಬಹುದು, ಕವಿ ಇರಬಹುದು, ಲೇಖಕ ಇರಬಹುದು, ಫೋಟೋಗ್ರಾಫರ್ ಇರಬಹುದು. ಅದು ಹೊರ ಜಗತ್ತಿಗೆ ಗೊತ್ತಾದರಷ್ಟೇ ನಿಮ್ಮ ಪ್ರತಿಭೆಗೆ ಮಾನ್ಯತೆ ಸಿಗುತ್ತದೆ. ನಿಮಗೆ ಗೊತ್ತಾ, ಎಂಥಾ ಖ್ಯಾತ ಲೇಖಕನಿಗಾದರೂ ತಾನು ಬರೆದಿದ್ದನ್ನು ಹೊರಗಿನವನಾಗಿ ನೋಡಿದಾಗ ಕಳಪೆ ಅನಿಸುತ್ತದೆ. ಏನೇ ಆದ್ರೂ, ನಾನು ಅನಂತಮೂರ್ತಿ, ಬೇಂದ್ರೆ ಥರ ಬರೆಯುವುದಕ್ಕಾಗಿಲ್ವಲ್ಲ ಅನ್ನುವ ಕೊರಗು ಕಾಡುವುದೂ ಉಂಟು.

ನಿಮ್ಮನ್ನು ಯಾರ ಜೊತೆಗೂ ಹೋಲಿಸಿಕೊಳ್ಳಬೇಡಿ. ಹಾಗಂತ ನಾನು ಬರೆದಿದ್ದೇ ಶ್ರೇಷ್ಠ ಅಂತಾನೂ ಬೀಗಬೇಡಿ. ಆದರೆ ನಾಲ್ಕು ಜನ ಮೆಚ್ಚುವಂತೆ ನಾನು ಬರೆಯಬ, ಚಿತ್ರ ಬಿಡಿಸಬ, ಫೋಟೋ ತೆಗೆಯಬ ಅನ್ನುವ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಿ. ನಿಮಗೆ ಬೇಕಾಗಿರುವುದು ಒಂದು ಚಿಕ್ಕ ಪ್ರಶಂಸೆ, ಒಂದು ಮೆಚ್ಚುಗೆಯ ಮಾತು. ಆ ಕೆಲಸವನ್ನು ‘ಓ ಮನಸೇ...’ ಮಾಡುತ್ತದೆ. ಇನ್ನೇಕೆ ತಡ, ಈಗಲೇ ಶುರು ಹಚ್ಚಿಕೊಳ್ಳಿ. ಪ್ರಕಟವಾಗಿಲ್ಲದಿದ್ದರೆ ಬೇಸರ ಪಡಬೇಕಾಗಿಲ್ಲ. ಮರಳಿ ಯತ್ನವ ಮಾಡು ಅನ್ನೋ ಮಾತನ್ನು ನೆನಪಲ್ಲಿಟ್ಟುಕೊಳ್ಳಿ. ಗುಡ್ ಲಕ್.

ನಮ್ಮ ವಿಳಾಸ. ಓ ಮನಸೇ... ನಂ.2, ಪೆಟ್ರೋಲ್ ಬಂಕ್ ಬಳಿ, 80 ಅಡಿ ರಸ್ತೆ, ಕದಿರೇನಹಳ್ಳಿ, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560070 ದೂರವಾಣಿ: ಕಚೇರಿ: (080) 2679 0804 Email: [email protected]

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books