Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

Back with a Bang

ಯಾವ ಕಾಲವಾಯಿತು ಕೈಯಲ್ಲಿ ಲೇಖನಿ ಹಿಡಿದು. ಮೂವತ್ತು ವರ್ಷದ ಪತ್ರಿಕೋದ್ಯಮದಲ್ಲಿ ಮತ್ತು ಹದಿನೆಂಟು ವರ್ಷದ ಸ್ವತಂತ್ರ ಪತ್ರಿಕೋದ್ಯಮದಲ್ಲಿ ನಾನು ಬರೆಯದೆ ಉಳಿದದ್ದು ನನಗೆ ನೆನಪಿಲ್ಲ. ಊಟ ಬಿಟ್ಟಾದರೂ ಇರಬಲ್ಲೆ, ಬರೆಯದೇ ಇರಲು ನನಗೆ ಸಾಧ್ಯವಿಲ್ಲ. ಆದರೆ ನನ್ನ ವ್ಯಸನಗಳು, ವಿಷಾದಗಳು, ಅನಾರೋಗ್ಯ ನನ್ನನ್ನು ಒಂದು ಅರ್ಥದಲ್ಲಿ ಗೋರಿಯ ಆಳಕ್ಕೆ ನೂಕಿ ಮಣ್ಣು ಹೊದಿಸಿಬಿಟ್ಟಿದ್ದವು. ದಿನಗಟ್ಟಲೆಯ ಕೋಮ, ತಿಂಗಳುಗಟ್ಟಲೆ ಆಸ್ಪತ್ರೆ ವಾಸ, ವಿಪರೀತವಾದ ಔಷಧಿಗಳು ಇವೆಲ್ಲವೂ ನನ್ನನ್ನು ನಿಜಕ್ಕೂ ಹಣ್ಣು ಮಾಡಿ ಹೈರಾಣಾಗಿಸಿದ್ದವು. ನಾನು ತಿಂಗಳುಗಟ್ಟಲೆ ದಿನಪತ್ರಿಕೆ ಓದಲಿಲ್ಲ. ನನ್ನ ನೆಚ್ಚಿನ ಗಾಯಕರಾದ ಪಿ.ಬಿ.ಶ್ರೀನಿವಾಸ್, ಭೂಪೇಂದ್ರ ಸಿಂಗ್ ತೀರಿಕೊಂಡದ್ದು ಗೊತ್ತಾಗಿದ್ದು ನಾಲ್ಕು ತಿಂಗಳಾದ ನಂತರ, ಅಂದರೆ ನಾನು ಯಾವ ಸ್ಥಿತಿಯಲ್ಲಿ ಇದ್ದಿರಬಹುದು ನೀವು ಊಹಿಸಿ. ಒಂದು ಊಟ ಮಾಡುವುದರೊಳಗಾಗಿ ನಲವತ್ತು ಸಲ ನಾಲಗೆ ಕಚ್ಚಿಕೊಳುತ್ತಿತ್ತು. ಬಳಬಳನೆ ರಕ್ತ ಸೋರುತ್ತಿತ್ತು. ಅದಕ್ಕೆ ಡಾಕ್ಟರ್ ಹೇಳಿದ್ದು ಗೊತ್ತೇ? ನಿಮ್ಮ ಹಲ್ಲುಗಳು ನಿಮ್ಮ ನಾಲಗೆಯನ್ನು ಗುರುತಿಸಲು ಮರೆತಿವೆ. ತಿಂಗಳುಗಟ್ಟಲೆ ಡ್ರಿಪ್ಸ್ ಮತ್ತು ದ್ರವ ಆಹಾರದ ಮೇಲೆ ಇದ್ದರೆ ಇನ್ನೇನಾದೀತು. ನನ್ನ ಆತ್ಮೀಯರೂ ನನ್ನನ್ನು ಮರೆಯಲಿಲ್ಲ. ಕರ್ಣ, ಅಕ್ಷರಶಃ ನನ್ನನ್ನು ತನ್ನ ಮಗುವಿನಂತೆ ನೋಡಿಕೊಂಡ. ಹಾಗೆಯೇ ಪತ್ರಿಕೆಯನ್ನು ತಮ್ಮ ಮಗುವಿನಂತೆ ನೋಡಿಕೊಂಡವರು ನನ್ನ ನಂಬಿಕೆಯ ವರದಿಗಾರರಾದ ಸುನೀಲ್ ಹೆಗ್ಗರವಳ್ಳಿ ಮತ್ತು ಲಕ್ಷ್ಮೀಸಾಗರ ಸ್ವಾಮಿಗೌಡ. ಉಳಿದಂತೆ ಅಷ್ಟೂ ಜನ ಜಿಲ್ಲಾ ಪ್ರತಿನಿಧಿಗಳು, ಕಚೇರಿಯ ಸಿಬ್ಬಂದಿ ಮತ್ತು ಮುಖ್ಯವಾಗಿ ನೀವು ಈ ಪತ್ರಿಕೆಯನ್ನು ಪೊರೆಯುವಂತಾಯಿತು.

Now I am back with a Bang. ಇನ್ನೂ ಈ ಅಕ್ಷರ ಸರಪಳಿ ತುಂಡಾಗುವುದಿಲ್ಲ. ಒಂದರ್ಥದಲ್ಲಿ ಸುಮಾರು ಹದಿನೇಳು ವರ್ಷ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ನಾನೇ ನಾನಾಗಿ ತುಂಬಿಕೊಂಡು ನಿಮ್ಮ ಮಧ್ಯೆ ಮೆರವಣಿಗೆಯಲ್ಲಿ ಮೆರೆದಿದ್ದೇನೆ. ಮಂಕಾಗುವುದು ನನ್ನ ಜಾಯಮಾನದಲ್ಲಿಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 04 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books