Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಮಾಡಿದ ಪ್ರೀತಿ ಮರೆಯುವುದುಂಟೆ

‘ಪ್ರೀತಿ’, ಬಹುಶಃ ಈ ಶಬ್ದಕ್ಕೆ ಒಂದು ನವಿ ರಾದ ಭಾವವನ್ನುಂಟು ಮಾಡುವ ಶಕ್ತಿ ಇದೆ. ಪ್ರೀತಿ ಅಂದರೆ ಮಾಧುರ್ಯ, ಅದೊಂದು ಅನುಭೂತಿ, ಬದುಕಿಗೊಂದು ಸುಯೋಗ ಅಂತೆಲ್ಲಾ ಅನಿಸುತ್ತದೆ. ಆದರೆ ಅದೇ ಪ್ರೀತಿ ಕೆಲವರಿಗೆ ಮುಗಿಯಲಾಗದ ದುಃಖ, ಕೊನೆಗೂ ಅರ್ಥವಾಗದೇ ಉಳಿದು ಹೋದ ಸಂಗತಿಯೂ ಆಗಿರಬಹುದು.

ನೀವು ಪ್ರೀತಿ ಮಾಡಿದ್ದೀರಾ? ನಿಮಗೆ ಪ್ರೀತಿ ದಕ್ಕಿತಾ? ಸವಿ ಸಿಕ್ಕಿತಾ? ಇಲ್ಲಾ ಅರಳದೆ ನರಳಿ ಮುದುಡಿ ಹೋಯಿತಾ? ಬದುಕು ಬಣ್ಣವಾಯಿತಾ ಇಲ್ಲಾ ಬದುಕಿನ ಕ್ಯಾನ್ವಾಸೇ ಕಪ್ಪಾಯಿತಾ? ಆ ಪ್ರೀತಿ ಬದು ಕಿಗೆ ಕೊಳಲಾಯಿತಾ ಇಲ್ಲಾ ಮನಸ್ಸಿಗೆ ಉರುಳಾಯಿತಾ?

ನೀವು ಯಾವತ್ತೋ ಪ್ರೀತಿಸಿದ್ದಿರಬಹುದು. ನಿಮ್ಮ ಪ್ರೀತಿ ಯಶಸ್ವಿಯಾಗಿ ಬದುಕು ಸುಗಂಧವಾಗಿರಬಹುದು ಅಥವಾ ಕಳೆದು ಹೋಗಿ ಮರೆಯದ ನೆನಪಾಗಿರಬಹುದು. ಇವತ್ತಿನ ನಿಮ್ಮ ಮನಸ್ಸಿಗೆ ಅವತ್ತಿನ ಪ್ರೇಮ ಏನೆನಿಸುತ್ತದೆ? ನಿಮ್ಮದು ಯಶಸ್ವಿ ಪ್ರೇಮವಾಗಿದ್ದರೆ, ಪ್ರೀತಿಸಿ ಮದುವೆ ಆಗಿದ್ದು ಸರಿ ಎನಿಸುತ್ತದಾ? ಇಲ್ಲಾ ಎಲ್ಲರನ್ನೂ ದೂರ ಮಾಡಿಕೊಂಡು ತಪ್ಪು ಮಾಡಿಬಿಟ್ಟೆ ಅನಿಸುತ್ತದಾ? ಇಲ್ಲಾ ನನ್ನ ಬಾಳು ಬಂಗಾರವಾಯಿತು ಎನಿಸುತ್ತದಾ?
ನಿಮ್ಮದು ಸೋತು ಹೋದ ಪ್ರೀತಿಯಾಗಿದ್ದರೆ, ನಿಮ್ಮ ಪ್ರೀತಿ ಕಲಿಸಿದ ಪಾಠ ಏನಾದರೂ ಇದೆಯಾ? ಅವತ್ತು ಪ್ರೀತಿಗೆ ಬೀಳದೆ ಚೆನ್ನಾಗಿ ಓದಬೇಕಿತ್ತು. ಮತ್ತೇನೋ ಕೆಲಸ ಮಾಡಬೇಕಿತ್ತು. ಮತ್ತಷ್ಟು ಎತ್ತರ ದಲ್ಲಿ ಇರುತ್ತಿದ್ದೆ ಅನಿಸುತ್ತದಾ? ಪಶ್ಚಾತ್ತಾಪವಾಗುತ್ತದಾ? ಮತ್ಹೇಗೋ ನಡೆದುಕೊಂಡಿದ್ದರೆ ಆ ಪ್ರೇಮ ಫಲಿಸುತ್ತಿತ್ತು ಅನಿಸುತ್ತದಾ? ಇಲ್ಲಾ ಅವಳಿಗಾಗಿ/ಅವನಿಗಾಗಿ ಏನೆಲ್ಲಾ ಮಾಡಿ ಹಾಳಾದೆ ಅನಿಸುತ್ತದಾ? ಗಂಟಲಾಳದಲ್ಲಿ ಹುದುಗಿದ ನೋವು ಮತ್ತೆ ಕನಲಿದಂತಾಗುತ್ತದಾ? ಇಲ್ಲಾ ಪ್ರೀತಿ ಕಳೆದು ಹೋಗಿದ್ದೇ ಒಳ್ಳೆಯದಾಯಿತು. ಪ್ರೀತಿ ಸೋತಿದ್ದರಿಂದಲೇ ಬದುಕುವುದನ್ನು ಕಲಿತೆ ಎಂಬಂತೆ ಅನಿಸುತ್ತದಾ? ಇಲ್ಲಾ ಏನೂ ಅರ್ಥವಾಗದೆ ಮುಖದ ಮೇಲೊಂದು ಸಣ್ಣ ಮಂದಹಾಸ ಮೂಡಿ ಮರೆಯಾಗುತ್ತದಾ?


ಈಗ ನೀವು ಯಾವುದೇ ವಯಸ್ಸಿನಲ್ಲಿರಬಹುದು. ನಿಮ್ಮ ಪ್ರೀತಿ ಯಾವತ್ತೋ ಆಗಿರಬಹುದು, ಪ್ರೀತಿ ಇಬ್ಬರೂ ಮಾಡಿರಲೇಬೇಕೆಂದಿಲ್ಲ. ನಿಮ್ಮ ಮನಸ್ಸಲ್ಲೇ ಹುಟ್ಟಿ ಹಾಗೆಯೇ ಉಳಿದು ಹೋದ ನವಿರಾದ ಭಾವವಿರಬಹುದು. ಅವತ್ತಿಗೆ ಅದ್ಹೇಗೋ ನಿಮ್ಮ ಅನುಭವಕ್ಕೆ ಸಿಕ್ಕಿದ್ದ ಆ ಪ್ರೀತಿ ಇವತ್ತಿಗೆ ಈಗ ಹಿಂದಿರುಗಿ ನೋಡಿದಾಗ ಏನೆನಿಸುತ್ತದೆ?

ನಿಮ್ಮ ಹಿತವಾದ ಅನುಭವವನ್ನು ಒಂದು ಪುಟಕ್ಕೆ ಮೀರದಂತೆ ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ನಿಮ್ಮದೊಂದು ಫೊಟೋ ಇದ್ದರೆ ಚೆನ್ನ.

ನಿಮ್ಮ ಅನುಭವ ಯಾರಿಗಾದರೂ ಮಾರ್ಗ ದರ್ಶನವಾದೀತು. ನಿಮ್ಮ ಹೃದಯವೂ ಹಗುರಾದೀತು.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 31 October, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books