Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಂದು ಬದುಕಲು ಕಲಿಸಿದ ಗುರುಗಳು ನೆನಪಿದಾರಾ, ಹೇಳಿ?

ಬರವಣಿಗೆಯ ಸೊಬಗು ಕೂಡ ಎಂಥ ಚೆಂದ!

ಮೊನ್ನೆ ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಜೀವನ ಕಥನ ಬರೆಯುತ್ತಿರುವಾಗ ಕೆಲವು ಪ್ರಶ್ನೆಗಳು ಉದ್ಭವವಾದವು. ನಾವು ಬೆಳಗೆರೆಯ ಬ್ರಾಹ್ಮಣರು ಮೂಲತಃ ಪೂಜೆ ಪುನಸ್ಕಾರ, ಪೌರೋಹಿತ್ಯ ಮಾಡಿಸಿ, ಅವರಿವರಲ್ಲಿ ಕಾಳು ಕಡಿ, ತರಕಾರಿ ದಕ್ಷಿಣೆಯನ್ನಾಗಿ ಇಸಿದುಕೊಂಡು ಜೀವನ ಮಾಡುವ ವಲಸಿಗರು. ಆಂಧ್ರದ ಚಿತ್ತೂರಿನಿಂದ ವಲಸೆ ಬಂದ ನಮ್ಮ ಮೂಲ ಪುರುಷರಿಗೆ ಮೈಸೂರು ಅರಸರು ಚಳ್ಳಕೆರೆ ಹತ್ತಿರದ ದೊಡ್ಡೇರಿಯಲ್ಲಿ ಕೊಂಚ ಜಮೀನು ದಾನ ಕೊಟ್ಟಿದ್ದರಂತೆ. ಅದನ್ನು ಬ್ರಹ್ಮಾದಾಯ ಭೂಮಿ ಅನ್ನುತ್ತಾರೆ. ಇವತ್ತಿಗೂ ಅಲ್ಲಿ ಉಳಿದಿರುವುದು ಅದೇ.

ಆದರೆ ಕವಿತೆ, ನಾಟಕ, ಕಾದಂಬರಿ, ಪತ್ರಿಕೋದ್ಯಮ-ಇದೆಲ್ಲ ಬಂದದ್ದು ಹೇಗೆ? ಮಾಮನಿಗೆ ಗೊತ್ತಿರುವ ಪ್ರಕಾರ ನಮ್ಮ ಮನೆಯಲ್ಲಿ ಮೊದಲು ಕವಿತೆ ಕಟ್ಟಿ ಹಾಡುತ್ತಿದ್ದಾತ ಪುಟ್ಟಣ್ಣ. ಆತ ಅವಿವಾಹಿತ. ಆತನ ಫೊಟೋ ಹಾಗಿರಲಿ, ಮನುಷ್ಯ ನೋಡಲು ಹೇಗಿದ್ದ ಅಂತ ಸಾಕ್ಷ್ಯ ಹೇಳುವವರು ಕೂಡ ಈಗ ಇಲ್ಲ. ಆತನ ನಂತರ ನಾಟಕ ಬರೆದು ಆಡಿಸಿದಾತ ನರಹರಿ ಶಾಸ್ತ್ರಿಗಳು. ಅವರ ಫೊಟೋ ಇದೆ. ನಾಟಕಗಳ ಹೆಸರುಗಳೂ ಇವೆ. ಆದರೆ script ಇಲ್ಲ. ಮುಂದೆ ಚಂದ್ರಶೇಖರ ಶಾಸ್ತ್ರಿಗಳು, ಸೀತಾರಾಮ ಶಾಸ್ತ್ರಿಗಳು, ಬೆಳಗರೆ ಜಾನಕಮ್ಮ, ನನ್ನ ತಾಯಿ ಪಾರ್ವತಮ್ಮ, ಬೆಳಗೆರೆ ಕೃಷ್ಣ ಶಾಸ್ತ್ರಿಗಳು, ಶ್ರೇಷ್ಠರ ಮಧ್ಯೆ ಒಂದು ಅನಿಷ್ಟ ಎಂಬಂತೆ ನಾನು-ಹೀಗೆ ’ಬರೆಯುವವರ’ ಪಟ್ಟಿ ಬೆಳೆಯಿತು.

ಆದರೆ ಮ್ಯಾಥಮೆಟಿಕ್ಸು?

ಅದೆಲ್ಲಿಂದ ಬಂತು ಅಂತ ಹುಡುಕುತ್ತ ಹೋದರೆ, ನಮ್ಮ ಮನೆಯಲ್ಲಿ ಗಣಿತಾಗ್ರೇಸರರು, ಪ್ರಕಾಂಡ ಪಂಡಿತರೂ, ವಿದ್ವಾಂಸರು, ಶುದ್ಧ ಗಣಿತದ ಮೇಷ್ಟ್ರುಗಳೂ ಇದ್ದಾರೆ. ನೂರಕ್ಕೆ ಯಾವತ್ತಿಗೂ ಗಣಿತದಲ್ಲಿ ಕಡಿಮೆ ಅಂಕ ತೆಗೆಯದ ಉಜ್ವಲಿಗಳಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಯೋಚಿಸುತ್ತ ಹೋದರೆ, ವಂಶದಲ್ಲಿ ಒಬ್ಬರ‍್ಯಾರೋ ಜೀನಿಯಸ್ ಇದ್ದಿರಬೇಕು. ಅವರು ಕಲಿತದ್ದು ಜ್ಯೋತಿಷ್ಯ. ಜ್ಯೋತಿಷ್ಯವೆಂದರೇನೇ ಗಣಿತ. ಗಣಿತ ಗೊತ್ತಿರಲಾರದವನು ಜ್ಯೋತಿಷಿಯಾಗಲಾರ. ಅವತ್ತಿನ ಜ್ಯೋತಿಷ್ಯ ಮಸಕಾಗಿ, ಕಾಲ ಬೆಳೆದಂತೆ ಗಣಿತ ಪ್ರಾಮುಖ್ಯತೆ ಪಡೆಯಿತು. ಅದರ ನಂತರ ಪ್ರವರ್ಧಮಾನಕ್ಕೆ ಬಂದದ್ದು software ಮತ್ತು ಇಂಜಿನೀರಿಂಗ್. ಎರಡಕ್ಕೂ ಮೂಲ ಗಣಿತವೇ. ಹೀಗಾಗಿ ಮನೆಯ ತುಂಬ ಗಣಿತ ಕಲಿಸುವ ಮೇಷ್ಟ್ರುಗಳಾದರು. ವಿದೇಶಗಳಿಗೆ ಹೋದರು. ಅವರ ಶಿಷ್ಯರೂ ಹೋದರು. ಕೆಲವರಂತೂ ತಮ್ಮ ಶಿಷ್ಯರನ್ನು ಈ ನಾಡಿನ ಅತ್ಯುತ್ತಮ ಜೀವಿಗಳನ್ನಾಗಿ ರೂಪಿಸಿದರು.

ನಾನು ಈಗ ಕೇಳುತ್ತಿರುವುದು ಅದನ್ನೇ.

ಅಕ್ಷರ ಬಲ್ಲ ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ಹಂತದಲ್ಲಿ ಒಬ್ಬ ಗುರುವು ಕೈ ಹಿಡಿದು, ಕಿವಿ ಹಿಂಡಿ, ಬೈದು-ಬಡಿದು, ಬೆನ್ನು ತಟ್ಟಿ ಬುದ್ಧಿ-ಪಾಠ ಹೇಳಿ ಬೆಳೆಸಿರುತ್ತಾನೆ. ಯಾರನ್ನು ಮರೆತರೂ ಬದುಕಿನಲ್ಲಿ ಅವರನ್ನು ಮರೆಯಲಾಗುವುದಿಲ್ಲ. ಕೆಲವು ಸಲ ಅವರೊಂದಿಗೆ ವರ್ಷಗಟ್ಟಲೆ touch ತಪ್ಪಿ ಹೋಗಿರುತ್ತದೆ. ಆದರೆ ಅವಕಾಶ ಸಿಕ್ಕಾಗ ಓಡಿಹೋಗಿ ನಮ್ಮ ಗುರುತು ಹೇಳಿಕೊಂಡು ನಮಸ್ಕರಿಸುತ್ತೇವೆ. ಗೌರವಿಸುತ್ತೇವೆ. ಸನ್ಮಾನಿಸುತ್ತೇವೆ. ಅವಶ್ಯಕತೆಯಿದ್ದಾಗ ಹಣದ ಸಹಾಯ ಮಾಡುತ್ತೇವೆ. ಮನೆಗೊಯ್ದು ತಂದೆ-ತಾಯಿಯರಂತೆ ಇಟ್ಟುಕೊಳ್ಳುತ್ತೇವೆ. ಅದೇನು ಮಾಡಿದರೂ ಆ ಹಿರಿಯ ಜೀವಗಳ ಋಣ ತೀರದು. ಅವರು ಪಾಠ ಹೇಳಿ ಕೊಟ್ಟ ಶಾಲೆಯ ಶಿಕ್ಷಕರಿರಬಹುದು. ಆಟ ಹೇಳಿಕೊಟ್ಟವರಿರಬಹುದು. ಬದುಕಿನ ಪಾಠ ಹೇಳಿಕೊಟ್ಟವರಿರಬಹುದು. ನೀತಿ-ಸಭ್ಯತೆ ಕಲಿಸಿದವರಿರಬಹುದು.

ಅಂಥವರನ್ನೊಮ್ಮೆ ನೆನಪು ಮಾಡಿಕೊಳ್ಳಿ. ಅವರ ಬಗ್ಗೆ ಒಂದು ಪುಟ ಲೆಟರ್ ಮೀರದಂತೆ ಬರೆದು ಕಳಿಸಿ. ಈ ಪ್ರಕಟಣೆ ಕಂಡು 15 ದಿನದೊಳಗಾಗಿ ನಿಮ್ಮ ಪತ್ರ ನಮಗೆ ತಲುಪಲಿ. ಎಂದಿನಂತೆ ಬಹುಮಾನವಿದೆ.

ಇ-ಮೇಲ್ ಕಳಿಸುವವರು [email protected]ಗೆ ಕಳಿಸಬಹುದು.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 May, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books