Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಪ್ರತಿಯೊಂದು ಕಗ್ಗಲ್ಲಿನಲ್ಲೂ ಒಂದು ಶಿಲೆ ಇರುತ್ತದೆ! ಆದರೆ ಶಿಲ್ಪಿ?

ಅದರ ಹೆಸರು ಡೇವಿಡ್.

ಅದೊಂದು ಜಗತ್ಪ್ರಸಿದ್ಧ ಪ್ರತಿಮೆ. ಹದಿನೆಂಟು ಅಡಿ ಎತ್ತರವಿರುವ ಅಮೃತ ಶಿಲೆಯ ಪ್ರತಿಮೆ. ಅದು ಫ್ಲಾರೆನ್ಸ್‌ನಲ್ಲಿದೆ. ಮೈಕೆಲೇಂಜಲೋನ ಮಾಸ್ಟರ್‌ಪೀಸ್ ಅನ್ನಿಸಿಕೊಂಡ ನಗ್ನ ಪುರುಷನ ಪ್ರತಿಮೆ. ನಾನು ಫ್ಲಾರೆನ್ಸ್‌ಗೆ ಹೋಗಿದ್ದೆ. ಮೈಕೆಲೇಂಜಲೋ ಬಗ್ಗೆ ಕೊಂಚ ಮಟ್ಟಿಗೆ, ಇತಿಹಾಸದ ವಿದ್ಯಾರ್ಥಿಯಾದ್ದರಿಂದ ಗೊತ್ತು. ಆದರೆ ನಾನು ಹೋಗಿದ್ದ ಕೆಲಸವೇ ಬೇರೆ ಇತ್ತಾದ್ದರಿಂದ \'ಡೇವಿಡ್‌\' ಪ್ರತಿಮೆಯ ಬಗ್ಗೆ ತುಂಬ ಶ್ರದ್ಧೆ ತೋರಿಸಲಿಲ್ಲ. ಐದು ನೂರು ವರ್ಷದ ಹಿಂದಿನ ಈ ಪ್ರತಿಮೆಯನ್ನು ಇಟಲಿಗೆ ಹೋದವರೆಲ್ಲ ನೋಡದೆ ಹಿಂತಿರುಗುವುದಿಲ್ಲ. ಆದರೆ ಇದರ ಹಿಂದಿನ ಕಥೆ ಎಷ್ಟು ಜನರಿಗೆ ಗೊತ್ತು?

ಅದೊಂದು ಬೃಹತ್ತಾದ ಕಲ್ಲು. ಎಷ್ಟೋ ಶತಮಾನಗಳಿಂದ ಅಲ್ಲಿ ಬಿದ್ದಿತ್ತು. ಮಹಾನ್ ಶಿಲ್ಪಿ ಲಿಯೋನಾರ್ಡೋ ದ ವಿಂಚಿಯಿಂದ ಹಿಡಿದು ನಾನಾ ಕಲಾವಿದರನ್ನು ಕರೆಸಿದ ಚಕ್ರವರ್ತಿಗಳು ಈ ಕಲ್ಲಿಗೊಂದು ರೂಪ ಕೊಡುತ್ತೀರಾ ಅಂತ ಕೇಳಿದ್ದರು.

ಇಲ್ಲ ಇಲ್ಲ, ಇದು ಮೂರ್ತಿಯ ರೂಪ ಪಡೆಯಲು ಸಾಧ್ಯವಿಲ್ಲ. ಕಲ್ಲಿನಲ್ಲಿ ದೋಷವಿದೆ. ಸುಮ್ಮನೆ ಶ್ರಮ ಎಂದೆಲ್ಲ ನೆಪ ಹೇಳಿ ಪ್ರತಿಯೊಬ್ಬರೂ ತಿರಸ್ಕರಿಸುತ್ತಿದ್ದರು. ಆದರೆ ಮೈಕೆಲೇಂಜಲೋ ಎಂಬ ಮಹಾನ್ ಕಲಾವಿದನಿಗೆ ಇಂಥ ಕರೆ ಬಂದಾಗ ಅದಕ್ಕೆ ಒಪ್ಪಿಕೊಂಡನೋ ಗೊತ್ತಿಲ್ಲ : ಆಯ್ತು, ನನಗೊಂದು ಅವಕಾಶ ಕೊಡಿ ಅಂದುಬಿಟ್ಟ. ಅವತ್ತಿನಿಂದಲೇ ಉಳಿ-ಸುತ್ತಿಗೆ ಹಿಡಿದುಕೊಂಡು \'ಡೇವಿಡ್‌\'ನ ಪ್ರತಿಮೆ ಕೆತ್ತಲು ಆರಂಭಿಸಿದ. ಕೆತ್ತನೆ ಎಂಬುದು ಸುಲಭದ ಮಾತಲ್ಲ. ಕಲ್ಲು ಅಮೃತ ಶಿಲೆ ಅನ್ನಿಸಿಕೊಂಡರೂ ಬೀಳುವ ಉಳಿಯ ಏಟು ಬಲವಾಗಿಯೇ ಬೀಳಬೇಕು. ಮೈಕೇಲ್ ತನ್ನ ಶಕ್ತಿಯನ್ನೆಲ್ಲ ಬಳಸಿ, ಆ ಕಾಡುಗಲ್ಲಿಗೆ ಉಳಿ-ಸುತ್ತಿಗೆಯ ಏಟು ಬೀಸತೊಡಗಿದ.
ರಸ್ತೆಯಲ್ಲಿ ಹೋಗುತ್ತಿದ್ದ ಫ್ಲಾರೆನ್ಸ್‌ನ ಹುಡುಗನೊಬ್ಬ ಆತನ ಬಳಿಗೆ ಬಂದು,

\'\'ಇದ್ಯಾಕೆ ಈ ಕಾಡು ಕಲ್ಲನ್ನು ಈ ಪರಿ ಬಡಿಯುತ್ತಿದ್ದೀಯ?\'\' ಅಂತ ಕೇಳಿದ.

\'\'ಮಗೂ, ಈ ಕಾಡುಗಲ್ಲಿನೊಳಗೊಬ್ಬ ದೇವರಿದ್ದಾನೆ. ಅವನನ್ನು ಬಿಡುಗಡೆ ಮಾಡಲು ಸುತ್ತಿಗೆಯಿಂದ ಬಡಿಯುತ್ತಿದ್ದೇನೆ\'\' ಎಂದಷ್ಟೆ ಉತ್ತರಿಸಿದ್ದ.

ಇದಿಷ್ಟೇ ಕತೆ. ಆದರೆ ಯೋಚಿಸಿ ನೋಡಿ, ನಾವೆಲ್ಲರೂ ಮೂಲತಃ ಆ ಅಮೃತ ಶಿಲೆಯೆಂಬ ಕಾಡುಗಲ್ಲಿನಂಥವರೇ. ನಮ್ಮೊಳಗಿರುವವನು ದೇವರಲ್ಲದಿರಬಹುದು. ಆದರೆ ಒಳಗೊಬ್ಬ ಜೀನಿಯಸ್, ಒಬ್ಬ ಬುದ್ಧಿವಂತ, ಒಬ್ಬ ಮಹಾನ್ ಚೈತನ್ಯಶಾಲಿ ಇದ್ದೇ ಇದ್ದಾನೆ. ನಮ್ಮೊಳಗಿನ ಆ winner ಒಬ್ಬ ಶಿಲ್ಪಿಯ ಉಳಿಯ ಪೆಟ್ಟಿಗಾಗಿ ಕಾಯುತ್ತಿದ್ದಾನೆ. ನಾವ್ಯಾರೂ ಕೆಲಸಕ್ಕೆ ಬಾರದ, ದೋಷಪೂರಿತ ಕಾಡುಗಲ್ಲುಗಳಲ್ಲ. ನಾವು ಕಾಯುತ್ತಿರುವುದು ಕೇವಲ ನಮ್ಮನ್ನು ಉಳಿ-ಸುತ್ತಿಗೆಯಲ್ಲಿ ಬಡಿದು, ಒಳಗಿರುವ ನಿಜವಾದ ತಾಕತ್ತಿನವನನ್ನ, ಒಬ್ಬ winner ನನ್ನ ಈಚೆಗೆ ತಂದು ಬಿಡುಗಡೆ ಮಾಡುವ ಶಿಲ್ಪಿಗಾಗಿ.

ಅಂಥದೊಂದು ಶಿಲ್ಪಿ ಸಿಗುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಅವತ್ತು ಮೈಕೆಲೇಂಜಲೋ ಬಳಸಿದ ಉಳಿ-ಸುತ್ತಿಗೆ, ಆ tool kit ಖಂಡಿತ ನಿಮಗೆ ಸಿಗುತ್ತದೆ. ತಮಾಷೆಯೆಂದರೆ ಕಾಡುಗಲ್ಲು ನೀವೇ ಆಗಬೇಕು. ಬಡಿದು, ಆಕಾರ ಕೊಟ್ಟು, ನಮ್ಮೊಳಗಿನ winner ಎಂಬ ಸಾಧಕನನ್ನು ಬಿಡುಗಡೆ ಮಾಡಿ, ಮೂರ್ತಿಯಾಗಿಸುವಂಥ ಶಿಲ್ಪಿ ಕೂಡ ನಾವೇ ಆಗಬೇಕು.

In fact, ಇವತ್ತು ಮೈಕೆಲೇಂಜಲೇನ tool kitನಲ್ಲಿರುವುದು ಉಳಿ-ಸುತ್ತಿಗೆಗಳಲ್ಲ. ಅದರಲ್ಲಿರುವುದು ಬದುಕಿನಲ್ಲಿ ವಿಜಯ-ಗೆಲುವು, ಯಶಸ್ಸು ಸಾಧಿಸಿದವರ ಕತೆಗಳು. ನಮಗೆ ಬೇಕಾಗಿರುವುದೇ ಆ ಕತೆಗಳು. ನಮ್ಮನ್ನು ಕವಿದುಕೊಂಡ ಅಷ್ಟಿಷ್ಟು ಅಮೃತ ಶಿಲೆಯನ್ನ ಬಡಿದು, ಕೆತ್ತಿ ಬಿಸಾಕಿ, ಒಳಗಿರುವ ತಾಕತ್‌ವಾನ್ ಡೇವಿಡ್‌ನನ್ನು ಸ್ವತಂತ್ರಗೊಳಿಸಿ ಜಗತ್ತಿಗೆ ಕಳಿಸಿ ಕೊಡುವುದಕ್ಕೆ ತುಂಬ ಸಹಾಯಕವಾದ ಕತೆಗಳು. Please ನಂಬಿ, ನಮ್ಮಲ್ಲಿ (ಪ್ರತಿಯೊಬ್ಬರಲ್ಲೂ) ಒಬ್ಬ winner ಇದ್ದಾನೆ. ನಾಯಕನಿದ್ದಾನೆ. ಎದ್ದು ನಿಂತು ದೇದೀಪ್ಯಮಾನವಾಗಿ ಪ್ರಕಾಶಿಸಲು ಕಾಯುತ್ತಿರುವ ತಾಕತ್‌ವಾನ್ ಪೈಲ್ವಾನನಿದ್ದಾನೆ. ನೀವು ಯಾರು, ಯಾರ ಮಗ, ಯಾವ ಜಾತಿ, ನೋಡಲು ಹೇಗಿದ್ದೀರಿ, ನೀವೆಷ್ಟು ಸಿರಿವಂತರು-bull shit. ಅವುಗಳ ಬಗ್ಗೆ ಯೋಚಿಸಬೇಡಿ. ನೀವು \'ಡೇವಿಡ್‌\'ನನ್ನು ಒಳಗಿಟ್ಟುಕೊಂಡಿರುವ ಹದಿನೆಂಟು ಅಡಿಯ ಕಾಡುಗಲ್ಲು ಅಷ್ಟೆ. ನಮ್ಮಲ್ಲಿ ಕೆಲವರು ನಮಗೇ ಗೊತ್ತಿಲ್ಲದೆ ಉಳಿ ಸುತ್ತಿಗೆಗಾಗಿ ಕಾಯುತ್ತಿದ್ದೇವೆ.

ನಾನು ಹೇಳುವುದಿಷ್ಟೆ : ನಮ್ಮ ಸುತ್ತ ಸಿಗುವ ಅತ್ಯುತ್ತಮ ಶಿಕ್ಷಕರು, ವೈದ್ಯರು, ಅಥ್ಲೀಟ್‌ಗಳು, ಪತ್ರಕರ್ತರು, ಲೇಖಕರು, ಅಂಕವಿಕಲರು-ಇವರ ಬದುಕಿನ ಕಡೆಗೆ ನೋಡಿ. ಇವರ ಯಶಸ್ಸಿನ ಪುಟ್ಟ ಪುಟ್ಟ ಕಥೆಗಳನ್ನು ಕೇಳಿ. ನಿಮಗೇ ಗೊತ್ತಿಲ್ಲದ ನಿಮ್ಮ ಸುತ್ತಲಿನ unwanted ಅಮೃತ ಶಿಲೆ ಹಾರಿ ಹೋಗಿ ನಿಮ್ಮೊಳಗಿನ ಡೇವಿಡ್ ಹೊರ ಬೀಳುತ್ತಾನೆ. ಹೇಳಿದೆನಲ್ಲ : ನೀವು ಯಾರು? ಏನು ಮಾಡುತ್ತಿದ್ದೀರಿ? ಯಾವ ವರ್ಗ? ಉಹುಂ, ಅದು ಪ್ರಸ್ತುತವೇ ಅಲ್ಲ. ಮೊದಲು ನಿಮ್ಮನ್ನು ನೀವು ನಂಬಿಕೊಳ್ಳಿ. \'ನಿಮ್ಮೊಳಗೊಬ್ಬ ಲೀಡರ್ ಇದ್ದಾನೆ\'. ಅವನು ಈ ಸುತ್ತಲಿನ ಶಿಲೆಯ ಮೂಸೆಯಿಂದ ಹೊರಬಂದು ಪ್ರಜ್ವಲಿಸಲು ಹವಣಿಸುತ್ತಿದ್ದಾನೆ. ನೀವು ಬಹಳ ದೊಡ್ಡ ಸಾಧನ ಮಾಡಬೇಕಿಲ್ಲ. ನಿಮ್ಮದು ಚಿಕ್ಕ ಬೇಕರಿಯೇ ಇರಬಹುದು. ಅದು ನಿಮ್ಮೂರಿನ ಅತ್ಯುತ್ತಮ ಬೇಕರಿಯಾಗಬೇಕು. ಒಂದು ಬೃಹತ್ ಕಂಪೆನಿಯಲ್ಲಿ ಕೆಲಸಕ್ಕಿದ್ದೀರಾ? ಅದರ ಅತಿ ದೊಡ್ಡ ಮೆಟ್ಟಿಲು ನೀವು ಹತ್ತಿ ನಿಲ್ಲಬೇಕು. ಏಕೆಂದರೆ ಈ ಬದುಕು ಕೇವಲ ನಿಮ್ಮದು. ಇದನ್ನು ನೀವೇ ರೂಪಿಸಿಕೊಳ್ಳಬೇಕು. ಉಳಿಯೂ ನೀವೇ : ಶಿಲೆಯೂ ನೀವೇ.

ನೀವು ಒಂದು ಗುಂಪಿನ, ಒಂದು ಆಫೀಸಿನ, ಒಂದು ಚಿಕ್ಕ ಗ್ರೂಪಿನ ಲೀಡರ್ ಆಗಬಯಸುತ್ತೀರಾ? Well, ನಿಮ್ಮ ಯಶಸ್ಸನ್ನು ತೀರ್ಮಾನಿಸುವುದು ನಿಮ್ಮ groupನ leader. ಅದು ನೀವು ಸ್ವಾಮೀ! ಅವರು ಏನು ಮಾಡುತ್ತಾರೆ ಎಂಬುದನ್ನು ನಿರ್ಧರಿಸುವವರು ನೀವು. ಈ ಗ್ರೂಪು ಆಫೀಸಿನಲ್ಲೇ ಇರಬೇಕೆಂದಿಲ್ಲ. ನಿಮ್ಮ ಮನೆಯಲ್ಲೇ ಇರಬಹುದು. ಮನೆಗೆ ನೀನೇ ನಾಯಕ. ನೀವು ಅವರ ಬೆಳವಣಿಗೆಯ ವೇಗವನ್ನು ತೀರ್ಮಾನಿಸಿ. ಅದರ ಪರಿಣಾಮ ಮಾತ್ರ ನಿಮ್ಮದು. ಗೆಲುವಾ, ಸೋಲಾ, ದುಃಖವಾ, ಸಂಭ್ರಮವಾ? ಎಲ್ಲದಕ್ಕೂ ನೀವೇ ಹೊಣೆಗಾರ. ನೆನಪಿರಲಿ, ನೀವು ಅವತ್ತಿನ ಅಮೃತ ಶಿಲೆಯ ಕಾಡುಗಲ್ಲು ಅಲ್ಲ. ನೀವು ಜಗತ್ ಪ್ರಸಿದ್ಧ ಡೇವಿಡ್. ಒಂದು ಹರಬಿದ್ದ ಮುಕ್ತ ಮನುಷ್ಯ.

ಅದಕ್ಕೇ ನಾನು ಹೇಳುವುದು. ಗೆದ್ದವರ ಬದುಕಿನ ಕಥೆಗಳನ್ನು ಓದಿ. ಅದು ನಿಮ್ಮಲ್ಲಿನ ಹತಾಶೆ ಹೊಡೆದೋಡಿಸುತ್ತದೆ. ಅದರಿಂದ ನೀವು ತಕ್ಷಣ ಬದಲಾಗುವುದಿಲ್ಲ. ಆದರೆ ನಿಮ್ಮೊಳಗಿನ ನಾಯಕನನ್ನು ಆ ಕತೆಗಳು ಪ್ರಚೋದಿಸುತ್ತವೆ. ಹೊರತರುತ್ತವೆ. ಚಪ್ಪಲಿ ಹೊಲೆಯುವವನ ಮಗ ಅಬ್ರಹಾಂ ಲಿಂಕನ್ ಅಮೆರಿಕದ ಪ್ರಧಾನಿಯಾದದ್ದು, ಎಂಬುದರಿಂದ ಹಿಡಿದು ಬರಿಗೈಯಲ್ಲಿ ಬೆಂಗಳೂರಿಗೆ ಬಂದ ನಾನು ಈ ಮಟ್ಟಕ್ಕೆ ಬೆಳೆದಿದ್ದು ಎಂಬುದರ ತನಕ-ವ್ಯಕ್ತಿಗತ ಕತೆಗಳು ನಮ್ಮ ಸುತ್ತಲಿನ ಅಮೃತ ಶಿಲೆ ಸೀಳಿ ಹಾಕುತ್ತವೆ. ಒಳಗಿನ ರಾಜಕುಮಾರ ಹೊರಬರುತ್ತಾನೆ. ಈಗ ಹೇಳಿ ಉಳಿ-ಸುತ್ತಿಗೆ ಬೇಕಾ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 03 May, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books