Ravi Belagere
Welcome to my website
ನಾನು ಮೂವರನ್ನೂ ನೋಡಿದ್ದೆ. ಒಬ್ಬನನ್ನು ಪೊಲೀಸರು ಬಿಜಾಪುರ-ಗುಲಬರ್ಗ-ಸೊಲ್ಲಾಪುರದ ಬಯಲುಗಳಲ್ಲಿ ಬೇಟೆಯಾಡಿ ಆಡಿ ಕೊಂದರು. ಅವನ ಹೆಸರು ಚಂದಪ್ಪ ಹರಿಜನ. ಇನ್ನೊಬ್ಬನನ್ನು ನಾನು ನೋಡುವ ಹೊತ್ತಿಗಾಗಲೇ ಸಾವು ಅವನ ತಲೆಯ ಮೇಲೆ ‘ಕಫನ್’ ಹೊದಿಸಿತ್ತು. ಭೀಮಾ ತೀರದ ಆ ಹಂತಕ ಅಷ್ಟು ದೂರದಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಯೊಂದರಲ್ಲಿ ಪ್ರಾಣ ಬಿಟ್ಟ. ಅವನ ಹೆಸರು ಕೇಶಪ್ಪ ತಾವರಖೇಡ.ಮೂರನೆಯವನು ಶಿವಾಜಿ ಬೋರಗಿ. ಭೀಮಾ ತೀರದ ಅಷ್ಟೂ ರಕ್ತಪಾತಕ್ಕೆ ಕಾರಣನಾದ ಹುಂಬ. ಭೀಮಾ ತೀರದ ಈ ಮೂವರು ಹಂತಕರ ಸಾವುಗಳೇ ಅಂಥವರ ಬದುಕುಗಳಿಗೆ ಬೆನ್ನುಡಿಗಳಾದವು. ನಾನು ಸುಮ್ಮನೆ ಕುಳಿತು ’ಭೀಮಾ ತೀರದ ಹಂತಕರು’ ಪುಸ್ತಕ ಬರೆದಿದ್ದೇನೆ.
Home About Us Gallery Books Feedback Prarthana Contact Us

ಗುಬ್ಬಲಾಳದ ತೋಟದಲ್ಲಿ ಕದಲದೆ ಮಲಗಿರುವಾಕೆ ಆಕೆಯೇ

ಬೆಂಗಳೂರಿನ ಪಕ್ಕೆಲುಬಿಗೆ ಅಂಟಿಕೊಂಡೇ ಇದೆ, ಗುಬ್ಬಲಾಳ.

ನಾನು \'ಪತ್ರಿಕೆ\' ಪ್ರಾರಂಭಿಸಿದಾಗ ಅದು ಅಪ್ಪಟ ಹಳ್ಳಿ. ಅಲ್ಲೊಂದು ಅಕ್ರಮ ಮದ್ಯ ತಯಾರಿಕಾ ಘಟಕವಿದ್ದು ಅದರ ತನಿಖೆಗೆ ಅಂತ ಫೊಟೋಗ್ರಾಫರ್ ಕೆ.ಎಂ.ವೀರೇಶ್‌ನನ್ನು ಕರೆದುಕೊಂಡು ಹೋಗಿದ್ದು ನೆನಪಿದೆ. ಆನಂತರ ಮತ್ತೆ ಆ ಕಡೆ ಹೋಗಿರಲಿಲ್ಲ. ನನ್ನ ಮಗ ಮೊನ್ನೆ ಬಂದು \'\'ಕಟ್ಟಿಸ್ತಿರೋ ಮನೆ ಒಂದು ಹಂತಕ್ಕೆ ಬಂದಿದೆ. ಬಂದು ನೋಡ್ತೀರಾ?\'\' ಅಂತ ಕರೆದಾಗ ನೋಡಿ ಬರಲು ಹರಟೆ. ಹೋಗ್ತಾ ಹೋಗ್ತಾ, ಇದು ಗೊತ್ತಿರುವ ಏರಿಯಾನೇ ಅಲ್ಲವಾ ಅನ್ನಿಸಿತು. \'\'ಇಲ್ಲಿ ಬಿ.ಎಸ್.ವಿಶ್ವನಾಥ್ ಅವರ ತೋಟದ ಮನೆ ಇದೆ ಅಲ್ವೆ?\'\' ಅಂತ ಕೇಳಿದೆ.

\'\'ಹ್ಞಾಂ, ಕೇಳಿದೀನಿ. ಆ ತೋಟದ ಹಿಂದೇನೇ ನಾವು ಮನೆ ಕಟ್ತಿರೋ ಏರಿಯಾ ಇರೋದು\'\' ಅಂದ. ಅವನಿಗೆ ಗೊತ್ತಿರುವುದು ಅಷ್ಟೆ. ಅವನಿಗೆ ಗೊತ್ತಿಲ್ಲದಿರುವುದೆಂದರೆ, exactly ಕಳೆದ 33 ವರ್ಷಗಳಿಂದ ಬಿ.ಎಸ್.ವಿಶ್ವನಾಥ್‌ರ ತೋಟದಲ್ಲಿ ಮರವೊಂದರ ಕೆಳಗೆ ನೆರಳಲ್ಲಿ ಒಬ್ಬಾಕೆ ಕದಲದೆ ಮಲಗಿದ್ದಾಳೆ.

ಆಕೆ ಮಿನುಗುತಾರೆ ಕಲ್ಪನಾ.

ಕೆಲವು ದಿನ ಒಟ್ಟಿಗೆ ಬಾಳಿದ ನೆನಪಿಗೆಂದೋ, ಇನ್ನೂ ಸಾಯದೆ ಉಳಿದ ಪ್ರೀತಿಗೆಂದೋ ಬಿ.ಎಸ್.ವಿಶ್ವನಾಥ್ ಅವರು ಗೋಟೂರಿನ ಐ.ಬಿ.ಯಲ್ಲಿ ವಿಷ ಸೇವಿಸಿ ತೀರಿಕೊಂಡ ಕನ್ನಡದ ಮಿನುಗುತಾರೆ ಕಲ್ಪನಾಳನ್ನು ತುಂಬ ಗೌರವದಿಂದ ತಂದುಕೊಂಡು ತಮ್ಮದೇ ತೋಟದಲ್ಲಿ ಸಮಾಧಿ ಮಾಡಿಕೊಂಡಿದ್ದಾರೆ.

ನೀವು ಪತ್ರಿಕೆಯ ಹಳೆಯ ಓದುಗರಾಗಿದ್ದರೆ ನಿಮಗೆ ಗೊತ್ತೇ ಇರುತ್ತದೆ : 1998ರಲ್ಲಿ ಕಲ್ಪನಾಳ ಬದುಕು-ನಟನೆ-ಸಾವಿನ ವಿವಾದ- ಆಕೆಯ ವಿವಾಹಗಳು, ಎಲ್ಲ ಸೇರಿದಂತೆ \'ಕಲ್ಪನಾ ವಿಲಾಸ\' ಎಂಬ ಧಾರಾವಾಹಿಯನ್ನು ಪ್ರಕಟಿಸಿತ್ತು ಪತ್ರಿಕೆ. ಅದರ ಬರವಣಿಗೆ, ನಿರೂಪಣೆ ನನ್ನದೇ ಆದರೂ ನಮ್ಮ ವರದಿಗಾರ್ತಿ ಕೆ.ಬಿ.ಪಂಕಜ ಅದಕ್ಕಾಗಿ ತುಂಬ ಕೆಲಸ ಮಾಡಿದ್ದರು. ಫೊಟೋ ಹಾಗೂ ವಿಷಯ ಸಂಗ್ರಹಣೆಯ ಮುತುವರ್ಜಿ ವಹಿಸಿದ್ದರು. ಕಲ್ಪನಾಳ ಕೊನೆಗಾಲದ ಸಂಗಾತಿ ಹಾಗೂ ಗಂಡ ಎಂದೇ ಅನ್ನಿಸಿಕೊಂಡಿದ್ದ ನಾಟಕ ಕಂಪೆನಿ ಮಾಲೀಕ ಮತ್ತು ನಟ ಗುಡಗೇರಿ ಬಸವರಾಜ್‌ರ ಸಂದರ್ಶನ ನಾನು ಮಾಡಿದ್ದೆ. ಇವತ್ತು \'ಕಲ್ಪನಾ ವಿಲಾಸ\'ದಲ್ಲಿ ಪಾತ್ರಧಾರಿಗಳಾಗಿದ್ದವರಲ್ಲಿ ಹೆಚ್ಚಿನವರು ಗತಿಸಿ ಹೋಗಿದ್ದಾರೆ. ಇತ್ತೀಚೆಗೆ ಗುಡಗೇರಿ ಬಸವರಾಜ್ ಕೂಡ ತೀರಿಕೊಂಡರು.

ಹಿಂದೆ 1998ರಲ್ಲಿ ಪುಸ್ತಕ ರೂಪದಲ್ಲಿ \'ಕಲ್ಪನಾ ವಿಲಾಸ\' ಪ್ರಕಟವಾಗಿತ್ತು. ಯಾಕೋ ಗೊತ್ತಿಲ್ಲ : ಮತ್ತೆ ಆ ಕೃತಿಗೆ ಬೇಡಿಕೆಯುಂಟಾಗಿದೆ. ನಮ್ಮಲ್ಲಿ ಪ್ರತಿಗಳು ಮುಗಿದು ಹೋಗಿದ್ದವು. \'ಭಾವನಾ ಪ್ರಕಾಶನ\'ದ ಹುಡುಗರ ಹುರುಪು ಮತ್ತು ಬಿ.ಬಿ.ಸಿಯ ಮಾರಾಟದ ಅಬ್ಬರ ಕಂಡು ಕೆಲವು ಹಳೆಯ ಕೃತಿಗಳನ್ನು ಮರು ಮುದ್ರಣಕ್ಕೆ ಅಣಿ ಮಾಡುತ್ತಿದ್ದೇನೆ. ಅವುಗಳ ಪೈಕಿ \'ಕಲ್ಪನಾ ವಿಲಾಸ\' ಕೂಡ ಒಂದು. ಇನ್ನೊಂದು ವಾರದಲ್ಲಿ ಮಾರುಕಟ್ಟೆಗೆ ಬರಲಿರುವ ಅದರ ಬೆಲೆ ಕೇವಲ ನೂರು ರುಪಾಯಿ. ನಿಮ್ಮ ಏಜೆಂಟರಿಗೆ ಪ್ರತಿ ಬೇಕೆಂದು ಹೇಳಿಡಿ. ಬಿ.ಬಿ.ಸಿಯಲ್ಲಿ ಪುಸ್ತಕ ಸಿಕ್ಕೇ ಸಿಗುತ್ತದೆ : Of course with coffee.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 24 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books