Ravi Belagere
Welcome to my website
ನಾನು ಮೂವರನ್ನೂ ನೋಡಿದ್ದೆ. ಒಬ್ಬನನ್ನು ಪೊಲೀಸರು ಬಿಜಾಪುರ-ಗುಲಬರ್ಗ-ಸೊಲ್ಲಾಪುರದ ಬಯಲುಗಳಲ್ಲಿ ಬೇಟೆಯಾಡಿ ಆಡಿ ಕೊಂದರು. ಅವನ ಹೆಸರು ಚಂದಪ್ಪ ಹರಿಜನ. ಇನ್ನೊಬ್ಬನನ್ನು ನಾನು ನೋಡುವ ಹೊತ್ತಿಗಾಗಲೇ ಸಾವು ಅವನ ತಲೆಯ ಮೇಲೆ ‘ಕಫನ್’ ಹೊದಿಸಿತ್ತು. ಭೀಮಾ ತೀರದ ಆ ಹಂತಕ ಅಷ್ಟು ದೂರದಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಯೊಂದರಲ್ಲಿ ಪ್ರಾಣ ಬಿಟ್ಟ. ಅವನ ಹೆಸರು ಕೇಶಪ್ಪ ತಾವರಖೇಡ.ಮೂರನೆಯವನು ಶಿವಾಜಿ ಬೋರಗಿ. ಭೀಮಾ ತೀರದ ಅಷ್ಟೂ ರಕ್ತಪಾತಕ್ಕೆ ಕಾರಣನಾದ ಹುಂಬ. ಭೀಮಾ ತೀರದ ಈ ಮೂವರು ಹಂತಕರ ಸಾವುಗಳೇ ಅಂಥವರ ಬದುಕುಗಳಿಗೆ ಬೆನ್ನುಡಿಗಳಾದವು. ನಾನು ಸುಮ್ಮನೆ ಕುಳಿತು ’ಭೀಮಾ ತೀರದ ಹಂತಕರು’ ಪುಸ್ತಕ ಬರೆದಿದ್ದೇನೆ.
Home About Us Gallery Books Feedback Prarthana Contact Us

ಸುದ್ದಿ ಇವತ್ತು ಬಂದಿದೆ ನಿಜ: ಆದರೆ ನಾನು ರಹಸ್ಯ ಬಗೆದದ್ದು ಯಾವಾಗ?

\\\" \"The profits made by Tatra Sipox(UK) Ltd., owned by Vectra Ltd., Chief Ravinder Kumar Rishi, who has been questioned by the CBI in the case of alleging BEML fraudulently \' \' assigning a contract involving Tatra trucks to his company, and suspected to have found their way to LIECHTENSTEIN, a west European tax haven \' \'

ಎಂಬುದು ಏಪ್ರಿಲ್ ಮೂರು, 2012ರಂದು  \'ಡೆಕ್ಕನ್ ಹೆರಲ್ಡ್‌ \' ಪತ್ರಿಕೆಯ ಮುಖಪುಟದಲ್ಲಿ ಮೊಟ್ಟಮೊದಲ ಸುದ್ದಿಯಾಗಿ ಪ್ರಕಟವಾದ ಚಂದನ್ ನಂದಿ ಎಂಬ ವರದಿಗಾರರ  \"Tatra money trail leads to tax haven \' ಎಂಬ ಶೀರ್ಷಿಕೆಯಡಿ ಮುದ್ರಣಗೊಂಡ ಸುದ್ದಿಯ ಮೊಟ್ಟಮೊದಲ ಪ್ಯಾರಾ. ಅವರ ಕೊನೆಯ ಎರಡನೇ ಪ್ಯಾರಾದಲ್ಲಿ valduz ಎಂಬ ನಗರದ ಬ್ಯಾಂಕಿನ ಪ್ರಸ್ತಾಪವಿದೆ.
ಇದು ಈಗ ಇಡೀ ದೇಶ, ಸೇನೆ, ಕೇಂದ್ರ ಸರ್ಕಾರವನ್ನು, ಬೆಂಗಳೂರಿನ ಆಉIಔ ಕಂಪೆನಿಯೂ ಸೇರಿದಂತೆ ಘಟಾನುಘಟಿಗಳನ್ನು ನಡುಗಿಸಿ ಹಾಕಿರುವ ಬಹುದೊಡ್ಡ ಹಗರಣ. ಕೆಲವು ಮಿಲಿಯನ್ ಡಾಲರುಗಳ ಅವ್ಯವಹಾರದ ಹುತ್ತ ಇದ್ದಕ್ಕಿದ್ದಂತೆ ಅಸಹ್ಯಕರವಾಗಿ ಬಿಚ್ಚಿಕೊಂಡಿದೆ. ನೇರವಾಗಿ ಇಆಐ ತನಿಖೆ ಆರಂಭವಾಗಿದೆ.

Hold on for a while.

ನೀವು ನನ್ನ  \'ಹಿಮಾಗ್ನಿ \' ಕಾದಂಬರಿಯನ್ನು ಓದಿದ್ದೀರಾದರೆ, ನಿಮಗಿದು ಅರ್ಥವಾಗುತ್ತೆ. ಭಾರತದ ಮೇಲೆ ಪೈಶಾಚಿಕ ದಾಳಿ ನಡೆಸಿದ ಲಷ್ಕರ್-ಇ-ತೈಬಾದ ಹದಿನೆಂಟು ಪ್ರಮುಖ ಮುಖಂಡರನ್ನ, ಇಡೀ ಮಾರಣಹೋಮದ ಹಿಂದಿನ ಪ್ಲಾನರ್‌ಗಳನ್ನ, ಡಿಸೈನರ್‌ಗಳನ್ನ, ಸಾಮಗ್ರಿ ಮತ್ತು ಹಣ ಸರಬರಾಜು ಮಾಡುವವರನ್ನ, ಮುಖ್ಯವಾಗಿ  \'ಜಿಹಾದೀ ಚಿಂತಕ \'ರನ್ನ ಅವರು ಎಲ್ಲೆಲ್ಲಿದ್ದಾರೋ ಆ ದೇಶಗಳಿಗೇ ಹೋಗಿ ಉಡಾಯಿಸಿ ಬಿಡಿ. Create terror amongst the terrorists. ಭಯೋತ್ಪಾದಕರ ಮನಸ್ಸಿನಲ್ಲೇ ಭಯ ಹುಟ್ಟಿಸಿ. ಹಾಗಂತ ಐದು ಜನ ಭಾರತೀಯ RAW (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್)ನ ಅಧಿಕಾರಿಗಳಿಗೆ ಅಪ್ಪಣೆ ನೀಡಿ ಕಳಿಸುತ್ತಾರೆ ನಮ್ಮ ದೇಶವನ್ನು ತೆರೆಮರೆಯಿಂದಲೇ ಆಳುವ ಇಟಾಲಿಯನ್ ಹಿರಿಯೆ ಮಾಯಿನೋ ಗಾಂಧಿ. ಆಕೆಯ ಉದ್ದೇಶ ಭಾವುಕವಾದದ್ದು. ನನ್ನ ದೇಶದ ಜನರನ್ನು ಕೊಲ್ಲುತ್ತೀರಾ? ತಗೊಳ್ಳಿ, ನಿಮ್ಮನ್ನೇ ಕೊಲ್ಲುತ್ತೇವೆ. ಸುಮ್ಮನೆ ಯಾರೋ ಪಾಕಿಗಳನ್ನಲ್ಲ. ಭಯೋತ್ಪಾದಕ ಮುಖಂಡರನ್ನೇ. Nothing less, nothing more. ಹಲ್ಲಿಗೆ ಹಲ್ಲು: ಕಣ್ಣಿಗೆ ಕಣ್ಣು.

ಈ ಹತ್ಯೆಗಳು ಇಟಲಿ, ಫ್ರಾನ್ಸ್, ಜರ್ಮನಿ, ಸ್ವಿಟ್ಝರ್‌ಲಂಡ್, ನೆದರ್‌ಲಂಡ್ ಸೇರಿದಂತೆ ನನ್ನ ಕಾದಂಬರಿಯಲ್ಲಿ ನಡೆಯಬೇಕು. ಅಂದರೆ, ಆ ದೇಶಗಳು ಹೇಗಿವೆ ಎಂಬುದಾದರೂ ನನಗೆ ಗೊತ್ತಿರಬೇಕು.  \"ಅದಕ್ಕೇನಂತೆ ಬರ್ರೀ ಸರ್ ತೋರಿಸ್ತೀನಿ \" ಎಂದು ಜರ್ಮನಿಗೆ ಕರೆದವರು ಸಿದ್ದಾಪುರದ ಬಳಿಯ ಬಪ್ಪನಕೇರಿಯವರಾದ ದತ್ತಾ ಹೆಗಡೆ. ನನಗೋಸ್ಕರ ಇಡೀ ಹದಿನೈದು ದಿನ ರಜೆ ಹಾಕಿದ್ದರು. ಅವರದೇ ಆವ್ಡಿ ಕಿ೫ನಲ್ಲಿ ಜರ್ಮನಿಯ ಕಾಲ್ಸ್‌ರೂಹೆಯಿಂದ ನಮ್ಮ ಯಾತ್ರೆ ಆರಂಭ. ಜರ್ಮನಿಯ  \'ಆಟೋಬಾನ್‌ \' ಎಂದು ಕರೆಯಲ್ಪಡುವ ಕೆಲವು (ಹನ್ನೆರಡು?) ಸಾವಿರ ಕಿಲೋಮೀಟರುಗಳ ಹೆದ್ದಾರಿಯ ಮೇಲೆ ಡ್ರೈವ್ ಮಾಡುವುದಿದೆಯಲ್ಲ? ಸೊಬಗು ಸೊಬಗು.

ಅಲ್ಲಲ್ಲಿ ಹೆದ್ದಾರಿ ಪಕ್ಕದ Rasthans (Rest house) ಗಳಲ್ಲಿ ತಿಂಡಿ ತಿನ್ನುತ್ತಾ, ಚಹ ಕುಡಿಯುತ್ತಾ, ಒಂದಿನಿತೂ ಬೋರಾಗದಂತೆ ಹರಟುತ್ತಾ, ನಾನು notes ಮಾಡುತ್ತಾ ನಮ್ಮದೇ ವೇಗದಲ್ಲಿ ಜಿಪ್ಸಿಗಳಂತೆ ಸಾಗುತ್ತಿದ್ದರೆ ಮೊದಲು ಸಿಕ್ಕದ್ದು ಫೋರ್ಜ್ ಹೈಮ್ ಎಂಬ ಊರು. ಜರ್ಮನಿಯ ಇತಿಹಾಸ ಬಿಚ್ಚಿ ನೋಡಿದರೆ, ಅದು ಚಿನ್ನದ ನಗರಿ ಅಂತ ಅನಾದಿಕಾಲದಿಂದಲೂ ಅನ್ನಿಸಿಕೊಂಡದ್ದು ಗೊತ್ತಾಗುತ್ತದೆ. ಹಾಗಂತ ಅಲ್ಲಿ ಗಣಿಗಳಿಲ್ಲ. ವರ್ತಕರಿದ್ದಾರೆ. ಜರ್ಮನಿಯಲ್ಲಿ ಯಹೂದಿಗಳನ್ನೆಲ್ಲ ಹಿಟ್ಲರ್ ಕೊಂದು, ಆಮೇಲೆ ಪ್ರಾಪಂಚಿಕ ಯುದ್ಧದಲ್ಲಿ ಅಸಲು ಗಂಡಸರೇ ಬದುಕುಳಿಯಲಿಲ್ಲ ಎಂಬಂತಾದಾಗ, ಜರ್ಮನ್ನರು ಕೂಲಿಗೆ ಮತ್ತೊಂದಕ್ಕೆ ಅಂತ ಕರೆಸಿಕೊಂಡವರೇ ಮುಸಲ್ಮಾನರಾದ ಟರ್ಕಿಗಳನ್ನ. ಇವತ್ತಿಗೂ ಅದು ಒಬ್ಬ ಮುಸ್ಲಿಂ ಉಗ್ರನಿಗೆ ಹೇಳಿ ಮಾಡಿಸಿದ ಅಡಗುತಾಣ.

ಅಲ್ಲಿಂದ ಮುಂದಕ್ಕೆ ಹೊರಟಾಗಲೇ ದತ್ತಾ ಹೆಗಡೆ ಹೇಳಿದ್ದು,

\"ಜರ್ಮನ್ನರು ಇದನ್ನು ಇವತ್ತಿಗೂ ಮ್ಯೂನ್‌ಷೇನ್ ಅಂತಲೇ ಅಂತಾರೆ. ಇದೇ ನಿಮ್ಮ ಕಾದಂಬರಿಯ ಬರಹವನ್ನು ಪ್ರೇರೇಪಿಸಿದ ಕೇಂದ್ರ ಸ್ಥಳ ಮ್ಯೂನಿಕ್. 1972ರಲ್ಲಿ ಇಲ್ಲಿ ನಡೆದದ್ದೇ ಅರಬ್ ಮುಸ್ಲಿಮರ ಭಯೋತ್ಪಾದನೆ. ಅವರು ಹನ್ನೊಂದು ಇಸ್ರೇಲಿ ಅಥ್ಲೀಟ್‌ಗಳನ್ನು ಕಿಡ್ನಾಪ್ ಮಾಡಿ ಕೊಂದಿದ್ದರು. ಆಗ ಇಸ್ರೇಲಿ ಅಧ್ಯಕ್ಷಳಾಗಿದ್ದ ಗೋಲ್ಡಾಮೇರ್ ಐದು ಜನರ hit teamಗೆ ಅಪ್ಪಣೆ ನೀಡಿದ್ದಳು: ಭಯೋತ್ಪಾದಕರನ್ನು ಅವರಿದ್ದಲ್ಲಿಗೇ ಹೋಗಿ ಹೊಡೆಯಿರಿ. ಅವರನ್ನು ಮಾತ್ರ ಹೊಡೆಯಿರಿ. ರವೀ ಸರ್, ಜರ್ಮನ್ನರು ಹೆಮ್ಮೆ ಪಡಲಿಕ್ಕೆ ಆಟೋಬಾನ್ ರಸ್ತೆ ಒಂದು ಕಾರಣವಾದರೆ ಮ್ಯೂನಿಕ್ ಪ್ರಾಂತ್ಯ (ಬವೇರಿಯಾ)ದಲ್ಲಿ ತಯಾರಾಗುವ ಬಿಯರ್ ಇನ್ನೊಂದು ಕಾರಣ ಅಂತ ವಿವರಿಸಿದ್ದರು ಹೆಗಡೆ. ನಾನು ಮ್ಯೂನಿಕ್ ನಗರ, ಒಲಿಂಪಿಕ್ ನಡೆದ ಜಾಗ, ಇಸ್ರೇಲಿಗಳ ಹತ್ಯೆ ನಡೆದ ಏರ್‌ಪೋರ್ಟ್: ಎಲ್ಲವನ್ನೂ ಗಮನಿಸಿದೆ. ನೋಟ್ಸ್ ಮಾಡಿಕೊಂಡೆ. ನೂರಾರು ಫೊಟೋ ತೆಗೆದೆ.

ಅಲ್ಲಿಂದ ಮುಂದೆ ನಾವು ಜುಗ್ಸುಚ್ಪೇ ಎಂಬ ಅತಿ ಎತ್ತರನೆಯ Alps ಪರ್ವತ ಪ್ರಾಂತ್ಯದ  \'ಗಾರ್ಮಿಷ್‌ \' ಎಂಬ ಊರಿಗೆ ಹೋದೆವು. ಯೂರಪ್‌ನಲ್ಲಿ ನೀವು ಮುಂದಿನ ಬುಧವಾರ ಸಂಜೆ ಎಲ್ಲಿ ಉಚ್ಚೆ ಮಾಡಬೇಕು ಎಂಬುದನ್ನು ಇವತ್ತೇ ಬುಕ್ ಮಾಡಬೇಕು. ಆದರೆ ನಾವು ಹೊರಟದ್ದು ಶುದ್ಧ ಜಿಪ್ಸಿಗಳಂತೆ. ತೀರ ಹೊಟೇಲು ಸಿಗದಿದ್ದರೆ ಇದೇ ಇದೆಯಲ್ಲ ಅದ್ಭುತ ಕಾರು?ಅದರಲ್ಲೇ ಮಲಗಿದರಾಯ್ತು ಎಂಬ ಭಾವ. ಆದರೆ ಗಾರ್ಮಿಷ್‌ನಲ್ಲಿ ಸಿಕ್ಕೇ ಸಿಗುತ್ತದೆ ಅಂದುಕೊಂಡಿದ್ದ ಬೆಟ್ಟದ ತಪ್ಪಲಿನ ಹೊಟೇಲು ಟೂರಿಸ್ಟುಗಳಿಂದಾಗಿ ಸಿಗಲಿಲ್ಲ.  \'ಹತ್ತೇ ನಿಮಿಷ ಬಂದೆ \' ಎಂದು ಹೊರಟ ದತ್ತಾ ಅದ್ಭುತವಾದ ಸರೋವರ  \'ಐಬ್‌ಝೀ \' ಪಕ್ಕದಲ್ಲಿ ಅದೇ ಹೆಸರಿನಲ್ಲಿದ್ದ ಒಂದು ಹೊಟೇಲಿನಲ್ಲಿ ರೂಮು ಹಿಡಿದಿದ್ದರು.

ನಾನೂ ಅನೇಕ ದೇಶ ಸುತ್ತಿದ್ದೇನೆ. ಅಷ್ಟು ಚೆಂದನೆಯ ಸರೋವರ, ಸುತ್ತ ಕಾಡು, ಎದುರಿಗೆ ಆಕಾಶಕ್ಕೆ ಮೊರೆ ಹೆಟ್ಟಿ ನಿಂತ ಆಲ್ಪ್ಸ್ ಪರ್ವತ ಶ್ರೇಣಿ, ಸರೋವರದ ಸುತ್ತ ಏಳು ಕಿಲೋಮೀಟರುಗಳ path way ಮತ್ತು ದಿವ್ಯ ಮೌನ...

\"ದತ್ತಾ, ಹಿಮಾಗ್ನಿಯ ತಿರುವು ಪಡೆಯುವುದೇ ಇಲ್ಲಿ. ಆ ಪ್ರಮುಖ ಪಾತ್ರ ಸಾಯುವುದೇ ಇಲ್ಲ. ಕಥಾನಾಯಕ ಕರ್ನಲ್ ರವೀಂದ್ರ ಮಾಚಿಮಾಡ ಪೂಣಚ್ಚನಿಗೆ ಈ ಆಲ್ಪ್ಸ್ ತುದಿಯ ಹಿಮದ ಅಡಿಯಲ್ಲೇ ಅನುಮಾನದ ಅಗ್ನಿ ಕಣ ಗೋಚರವಾಗುವುದು. ನೀವು ನೋಡ್ತಿರಿ... ಎಲ್ಲ ಕಣ್ಣಿಗೆ ಕಟ್ಟಿದಂಥ ಬರವಣಿಗೆಯಾಗಿರುತ್ತದೆ... \" ಅಂದೆ.

ನನಗಿನ್ನೂ ಎರಡು ದಿನ ಅಲ್ಲೇ ಐಬ್‌ಝೀ ಹೊಟೇಲಿನಲ್ಲಿರುವ ಇರಾದೆ ಇತ್ತು. Alps ಪರ್ವತದ ತುದಿ ಹತ್ತಿದವರು ಎರಡೇ ಎರಡು (ಅಕ್ಷರಶ ಎರಡು) ಹೆಜ್ಜೆ ಪಕ್ಕಕ್ಕೆ ಇಟ್ಟರೆ ನಾವು ಜರ್ಮನಿಯ ಸರಹದ್ದು ದಾಟಿ ಆಸ್ಟ್ರಿಯಾದೊಳಕ್ಕೆ ಇಳಿಯುತ್ತಿದ್ದೆವು. ಅಲ್ಲಿಯ ದೇಶ ವಿಂಗಡನೆಗಳೇ ಹಾಗೆ. ಕರ್ನಾಟಕದಿಂದ ಹೊಸೂರಿಗೆ ಹೊರಳಿದರೆ ತಮಿಳುನಾಡಿನಲ್ಲಿರುತ್ತೀರಲ್ಲ, ಹಾಗೆ.

ಮರುದಿನ ದತ್ತಾ ಹೆಗಡೆ,
\"ನಿಮಗೆ ಇಲ್ಲೊಂದು ಮಜಾ ದೇಶ ಐತಿ ತೋರಿಸ್ತೀನಿ ಬರ್ರಿ \" ಅಂದವರೇ ಕರೆದುಕೊಂಡು ಹೊರಟರು. ಕೆಲವೇ ನಿಮಿಷದ ಹಾದಿ. ನಾವು ತಲುಪಿದುದು, ಈ ಬರಹದ ಆರಂಭದಲ್ಲಿ ಪ್ರಸ್ತಾಪ ಮಾಡಿದೆನಲ್ಲ Lieehtenstein ಎಂಬ ದೇಶ. ಅದನ್ನು ಲಿಕ್ಟನ್‌ಸ್ಟೈನ್ ಅನ್ನುತ್ತಾರೆ. ಅಂಥದೊಂದು ದೇಶದ ಹೆಸರನ್ನು ಇತಿಹಾಸದ ವಿದ್ಯಾರ್ಥಿಯಾಗಿ ನಾನೇ ಕೇಳಿರಲಿಲ್ಲ. ಏಕೆಂದರೆ, ನಮ್ಮ ತುಮಕೂರಿನಷ್ಟಿರಬಹುದಾದ, ಮುಖ್ಯವಾಗಿ ಮೂರು ಹಳ್ಳಿಗಳಿರುವ ಸ್ವಿಟ್ಝರ್‌ಲಂಡ್‌ಗೂ ಜರ್ಮನಿಗೂ ಮಧ್ಯೆ ಇರುವ ಈ ತಟುಗು ದೇಶಕ್ಕೆ ಸ್ವಂತ ಪೊಲೀಸು, ಸ್ವಂತ ಸೇನೆ, ಸ್ವಂತ ನಾಣ್ಯ-ನೋಟು, ಸ್ವಂತ ಭಾಷೆ, ಸ್ವಂತ ಕಾರ್ಖಾನೆ, ಸ್ವಂತ ಕೃಷಿ- ಏನೆಂದರೆ ಏನೂ ಇಲ್ಲ. ಇರುವುದು ಕೇವಲ ಕೆಲವು ಬ್ಯಾಂಕು.

ಅಂಥ ವಿಚಿತ್ರ ವಿವರಗಳನ್ನು ನೀವು ಓದಬೇಕಾದದ್ದೇ ಹಿಮಾಗ್ನಿಯಲ್ಲಿ. ಕಾದಂಬರಿಯ ನೂರಾ ಏಳನೇ ಪುಟ ತೆಗೆಯಿರಿ. ಲಿಕ್ಟನ್‌ಸ್ಟೈನ್‌ನ ವಿವರಗಳು ಆರಂಭವಾಗುತ್ತವೆ. ನೀವು ಫೊಟೋ ನೋಡಬೇಕಾ? ನನ್ನ website www.ravibelagere.comಗೆ ಹೋಗಿ ನೋಡಿ. ಅದು ಕೇವಲ ಕೆಲವು ಕುಟುಂಬಗಳಷ್ಟೇ ನಡೆಸುವ ಬ್ಯಾಂಕ್‌ಗಳಿಂದ, ಅವುಗಳಿಂದ ಬರುವ ಹೇರಳ ಹಣದಿಂದ ಬದುಕುವ ದೇಶ. ಕಪ್ಪು ಹಣವೆಂಬುದು ಸ್ವಿಟ್ಝರ್‌ಲಂಡ್‌ನಲ್ಲಿದೆ ಅಂದುಕೊಳ್ಳುತ್ತಾರೆ. ಅಲ್ಲಿರುವುದು ನಿಜ. ಆದರೆ ಅತಿ ಹೆಚ್ಚು ಕಪ್ಪುಹಣ-ಅದರಲ್ಲೂ ಭಾರತೀಯರದಿರುವುದು-ಲಿಕ್ಟನ್‌ಸ್ಟೈನ್‌ನಲ್ಲಿ. ಇಲ್ಲಿ ಬಿಲಿಯನ್, ಟ್ರಿಲಿಯನ್, ಝಿಲಿಯನ್‌ಗಟ್ಟಲೆ ಡಾಲರುಗಳು ಹೊರಳುತ್ತವೆ.

ನಾವಿನ್ನೂ ಲ್ಯಾಂಡಸ್ ಹೊಟೇಲು ತಲುಪಿ ಊಟ ಮಾಡಲು ಹೊರಹೋಗಿ ವಾಪಸು ಬರುವಷ್ಟರಲ್ಲಿ ನಮಗೋಸ್ಕರ ಒಬ್ಬಾಕೆ ಒಂದು folder ಇರಿಸಿದ್ದಳು.  \"ನೀವು ಭಾರತೀಯರು. ವ್ಯಾಪಾರಿಗಳಾ? ಹಣವಿಡಲು ಬಂದಿದ್ದೀರಾ? ನಮ್ಮ ಸಹಕಾರ, ನೆರವು ಇದೆ. ನಾನು ನಿಮಗೆ ಅಡ್ವೈಸರ್ ಆಗಿರಬಲ್ಲೆ. ನೋಡಿ, ಈ ನಂಬರಿನಲ್ಲಿ ಸಿಗುತ್ತೇನೆ \" ಎಂದು ಬರೆದು ತನ್ನ ಕ್ರೆಡಿಬಿಲಿಟಿಗೆ ಸಂಬಂಧಿಸಿದ ಅನೇಕ ಪತ್ರಗಳನ್ನಿರಿಸಿದ್ದಳು. ಭೇಷ್! ಹೊಟೇಲಿನಲ್ಲಿ ರೂಂ ಮಾಡುವಾಗ ನಾವು ಪಾಸ್‌ಪೋರ್ಟ್ ತೋರಿಸಿದ್ದೆವು. ಆಕೆಗೆ ವರ್ತಮಾನ ತಲುಪಲು ಅಷ್ಟು ಸಾಕು.

\"ನೋಡೀ, ನಾವು ಇಂಡಿಯಾದ ಕರ್ನಾಟಕದವರು. ಕರ್ನಾಟಕ ಗೊತ್ತಲ್ಲ. Now famous for mining. ಕೊಂಚ ಮಾತನಾಡಬೇಕು \' \' ಅಂತ ಲ್ಯಾಂಡೆಸ್ ಬ್ಯಾಂಕಿನ ಭವ್ಯ ಕಟ್ಟಡದ ರಿಸೆಪ್ಷನಿಸ್ಟ್‌ಗೆ ಹೇಳುತ್ತಿದ್ದಂತೆಯೇ ನನ್ನನ್ನೂ-ದತ್ತಾ ಹೆಗಡೆಯನ್ನೂ ನೇರವಾಗಿ ಭವ್ಯ ಬ್ಯಾಂಕಿನ ಏಳನೆಯ ಅಂತಸ್ತಿಗೆ ಕರೆದೊಯ್ಯಲಾಯಿತು.

ಅಲ್ಲಿ ಭೇಟಿಯಾದವನು ಲ್ಯಾಂಡಸ್ ಬ್ಯಾಂಕಿನ ವೈಸ್ ಡೈರೆಕ್ಟರ್ ಕುರ್ಟ್ ವಾಂಗರ್.

\"ನೀವು ನಾನಿಡುವ ಹಣಕ್ಕೆ ಎಷ್ಟು ಬಡ್ಡಿ ಕೊಡುತ್ತೀರಿ? \" ಕೇಳಿದೆ.

\"ಸರ್, ಹೀಗೆ ಕೇಳಲೇಬಾರದು \" ಅಂದು ನಕ್ಕ ವಾಂಗರ್.

\"ಯಾಕೆ? \" ಅಂದೆ.

\"ನಾವು ಬಡ್ಡಿ ಕೇಳುವ ನಿಮ್ಮ ದೇಶಗಳ ಬ್ಯಾಂಕಿನಂಥವರಲ್ಲ. ನಿಮ್ಮ ಹಣ, ನಿಮ್ಮ ಬಂಗಾರ, ವಜ್ರ ಭದ್ರವಾಗಿ ಇರಿಸಿಕೊಳ್ಳುವ ನಂಬಿಗಸ್ತ ಜನ. ಅದಕ್ಕಾಗಿ ನಾವು ನಿಮ್ಮಿಂದಲೇ handling charges ವಸೂಲಿ ಮಾಡುತ್ತೇವೆ. ಬಡ್ಡಿಯದೇನು? ನಿಮ್ಮಲ್ಲಿ 8-10% ಕೊಡ್ತಾರಲ್ಲವಾ? ನಾವು 0.17%, ಅಂದರೆ ಒಂದು ಪರ್ಸೆಂಟಿಗಿಂತ ಕಡಿಮೆ. ಆದರೆ ನಿಮಗೆ ನಿಮ್ಮ ಹಣ ಬೇಕಾ? ಎಲ್ಲಿ? ಡಾಲರು? ದಿರಹಮ್, ಫ್ರಾಂಕ್, ಪೌಂಡ್, ರುಪಾಯಿ? Fine. ನೀವು ಕೇಳಿದ ದೇಶದಲ್ಲಿ ಕೆಲವೇ ನಿಮಿಷಗಳಲ್ಲಿ pay ಮಾಡ್ತೇವೆ. ನಾನು ನಿಮ್ಮ ಖಾಸಗಿ handling officer. ಇದು ನನ್ನ ಶಾಶ್ವತ ನಂಬರ್. ಯಾವ ಸರಹೊತ್ತಿನಲ್ಲಾದರೂ ಸರಿ, 24x7 ಯಾವಾಗ ಬೇಕಾದರೂ ಒಂದು ಫೋನ್ ಮಾಡಿ, ನಿಮ್ಮ ಕೆಲಸವಾಗುತ್ತದೆ \" ಅಂದ.

ತೆಗೆದು ನೋಡಿ,  \'ಹಿಮಾಗ್ನಿ \' ಕಾದಂಬರಿಯ ೧೦೮ನೇ ಪೇಜ್.

ಕುರ್ಟ್ ವಾಂಗರ್ ಕಾದಂಬರಿಗಾಗಿ ನಾನು ಕಲ್ಪಿಸಿಕೊಂಡ ವ್ಯಕ್ತಿಯಲ್ಲ. ಪುಗಸಟ್ಟೆ ಪಾತ್ರವಲ್ಲ. ಆತನ phone ನಂಬರೂ ಇದೆ. He is very much alive.

ಇನ್ನೂ ಸಮಾಧಾನವಾಗಲಿಲ್ಲವಾ?

ಹಿಮಾಗ್ನಿಯ 505, 506, 507ನೇ ಪುಟಗಳಲ್ಲಿ ಬ್ಯಾಂಕಿನ ಅಕೌಂಟ್ ತೆರೆಯುವ ಫಾರ್ಮ್, ಅದರ ಬಡ್ಡಿ ವಿವರ, ಅವರು ನೀಡಿದ safty box(ಲಾಕರ್)ನ ಆಳ-ಅಳತೆಗಳ, ಅವರೇ ನೀಡಿದ ದಾಖಲಾತಿಯ ವಿವರ ಮತ್ತು formಗಳನ್ನು ಯಥಾವತ್ತಾಗಿ ಪ್ರಕಟಿಸಿದ್ದೇನೆ.

ಇವತ್ತು ಟಟ್ರಾ ಸಿಫೋಕ್-ಬೆಮೆಲ್ ಹಗರಣ exactly, ಅದೇ ದೇಶದ-ಅದೇ ಬ್ಯಾಂಕಿನ ಹೆಬ್ಬಾಗಿಲಿಗೆ ಸಿಬಿಐ ಅಧಿಕಾರಿಗಳನ್ನು ಒಯ್ದು ನಿಲ್ಲಿಸಿದೆ. ಇವತ್ತು ತಾರೀಖು ಏಪ್ರಿಲ್ ಮೂರು, 2012. ನಾನು  \'ಹಿಮಾಗ್ನಿ \' ಪ್ರಕಟಿಸಿದ್ದು ಫೆಬ್ರುವರಿ ಐದು, 2012. ಜರ್ಮನಿಗೆ ಮತ್ತು ಲಿಕ್ಟನ್‌ಸ್ಟೈನ್‌ಗೆ ಹೋದದ್ದು? ಅದಕ್ಕೂ ಮುಂಚೆ.

ಭಾರತದ ಇವತ್ತಿನ ನಾಯಕರು, ಉದ್ಯಮಿಗಳು, ಇವತ್ತಿಗೆ ಐವತ್ತು ವರ್ಷಕ್ಕೆ ಹಿಂದಿನವರು ಮಾಡಿದ್ದೂ ಇದೇ ಅವ್ಯವಹಾರವನ್ನ. ಒಬ್ಬ ಪತ್ರಕರ್ತನಾಗಿ ಹೇಳಲಾಗದ್ದನ್ನು ಕಾದಂಬರಿಕಾರನಾಗಿ ಹೇಳಿದ್ದೇನೆ.

ಓದುಗ ಕೊಟ್ಟ ಕೂಲಿ ವ್ಯರ್ಥವಾಗಬಾರದಲ್ಲವೆ?

-ನಿಮ್ಮವನು
ಆರ್.ಬಿ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books