Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಅಂದು ಮೂಕಿ ಸಿನೆಮಾದ ನರ್ತಕಿಯಂತೆ ತಿರುಗಿದ ಫ್ಯಾನು!

ಈ ಬಿಸಿಲು, ಈ ಧಗೆ ಕಳೆದರೆ ಸಾಕೆನ್ನಿಸಿದೆ. ಬೆಂಗಳೂರೇ ಮೇಲು. ಇವತ್ತಿಗಿನ್ನೂ ಮಳೆ ಅಂತ ಆಗದಿದ್ದರೂ ಇಲ್ಲಿಂದ ಹೊರ ಊರುಗಳಿಗೆ ಹೋದರೇನೇ ಬೆಂಗಳೂರು ಇದ್ದುದರಲ್ಲೇ ಎಷ್ಟು ಸಹನೀಯ ಅಂತ ಗೊತ್ತಾದೀತು. ಶಿರಸಿ, ಶಿವಮೊಗ್ಗ, ನನ್ನ ಪ್ರೀತಿಯ ದಾಂಡೇಲಿ, ಜೊಯಿಡಾ-ಆ ಪರಿ ಕಾಡುಗಳಿದ್ದರೂ ಒಂದೊಂದೂ ಅಗ್ನಿ ಕಣಗಳಾಗಿ ಕುಳಿತಿವೆ. ಸಾಮಾನ್ಯವಾಗಿ ಕಾಮನ ಹುಣ್ಣಿಮೆಗೆ, ಯುಗಾದಿ ಹಿಂಚು ಮುಂಚಿಗೆ ಮಳೆಯಾಗಬೇಕಿತ್ತು. ಎರಡು ದಿನ ಬಿರುಬಿಸಿಲು ಸುಟ್ಟರೆ ಇವತ್ತು ಸಂಜೆಗೆ ಮಳೆ ಇದೆ ಅಂತಲೇ ಬೆಂಗಳೂರಿಗರು ಆಕಾಶ ನೋಡುತ್ತಿದ್ದೆವು. ಈ ಬಾರಿ ಬಾಯಿ ಬಿಡುತ್ತಿದ್ದೇವೆ : ಮಳೆರಾಯ ಹುಯ್ಯುತ್ತಿಲ್ಲ.

ಇದರ ಮಧ್ಯೆ ಮದುವೆಗಳ ಸೀಝನ್ನು!

ಭಗವಂತಾ, ನನಗೆ ನನ್ನ ಮದುವೆ ನೆನಪಾಗುತ್ತದೆ. ಸರಿಯಾಗಿ ಮೇ 23. ಹೇಳಿ ಕೇಳಿ ಬಳ್ಳಾರಿಯಲ್ಲಿ ಮದುವೆ. \"ಸೂಟು ಹಾಕದಿದ್ದರೆ ಹೆಣ್ಣೇ ಕೊಡಲ್ಲ\" ಎಂದು ನನ್ನ ಗೆಜೆಟೆಡ್ ಆಫೀಸರ್ ಮಾವ ಹಟ ಹಿಡಿದಿದ್ದರು. ಹುಬ್ಬಳ್ಳಿಯಿಂದ ಥ್ರೀಪೀಸ್ ಸೂಟು ಹೊಲಿಸಿಕೊಂಡು ಬಂದಿದ್ದೆ. ವಾಸವಿ ಕಲ್ಯಾಣಮಂಟಪವೆಂಬುದು ಆ ಕಾಲಕ್ಕೆ ಬೃಹತ್ ಗೋದಾಮು. ಕಿಟಕಿಗಳೆಲ್ಲಿ ಬರಬೇಕು. ರಿಸೆಪ್ಷನ್ ಮುಗಿದು ಕೊನೆಯ ಆರುನೂರನೆಯ ಹ್ಯಾಂಡ್ ಷೇಕ್ ಕೊಡುವ ಹೊತ್ತಿಗೆ ಥ್ರೀಪೀಸ್ ಸೂಟ್‌ನೊಳಗೆ ಆಲೂಗಡ್ಡೆಯಂತೆ ಬೆಂದು ಹೋಗಿದ್ದೆ. ಬ್ರಾಹ್ಮಣರಲ್ಲಿ ಮದುವೆಯಂದೇ ಪ್ರಸ್ಥ.

ಕಿಟಕಿಯೇ ಇಲ್ಲದ ರೂಮಿನಲ್ಲಿ ಕಬ್ಬಿಣದ ಮಂಚ. ಅದರ ಮೇಲೆ ಹೊಸಾ ಹಾಸಿಗೆ. ಅದಕ್ಕೆ ರೇಶಿಮೆ ಬೆಡ್‌ಷೀಟು. ಮಂಚದ ಸುತ್ತ ನಾಲ್ಕು ಕಡ್ಡಿಗಳಿಗೆ ರೇಶ್ಮೆ ಸೀರೆಗಳನ್ನು ಕರ್ಟನ್‌ಗಳಂತೆ ಸುತ್ತಿ, ಮೂಗಿನ ರಂಧ್ರ ಒಡೆದು ಹೋಗುವಷ್ಟು ಘಾಟಾದ ಮಲ್ಲಿಗೆ ಹೂವನ್ನು ಬುಟ್ಟಿಗಟ್ಟಲೆ ಚೆಲ್ಲಿ, ಮಧ್ಯರಾತ್ರಿಯ ತನಕ ನೂರೆಂಟು ಶಾಸ್ತ್ರ ಮಾಡಿ, ರೇಶ್ಮೆ ಬಟ್ಟೆ ಉಡಿಸಿಯೇ ಒಳಕ್ಕೆ ಕಳಿಸಿದ್ದರು.

ಫ್ಯಾನೇನೋ ಹಾಕಿದೆ. ಅದು ಮೂಕಿ ಸಿನೆಮಾದ ನರ್ತಕಿಯಂತೆ ತಿರುಗೇನೋ ತಿರುಗಿತು. ಶಬ್ದವೂ ಇಲ್ಲ. ಗಾಳಿಯೂ ಇಲ್ಲ. ಹೆಂಡತಿ ಯಾವ ಮೂಡ್‌ನಲ್ಲಿದ್ದಳೋ? \"ನನ್ನನ್ನು ಮುಟ್ಟಿದರೆ ಕೊಂದೇನು!\" ಎಂದಷ್ಟೆ ಹೇಳಿ ಮಂಚದ ಒಂದು ಮೂಲೆಯಲ್ಲಿ ಒಣಗಿದ ಚಕ್ಕುಲಿಯಂತೆ ಮಿಟುರಿಕೊಂಡು ಮಲಗಿದ್ದೆ. ನಡೆಯಬೇಕಾದ ಮುಂದಿನ ಸುಮಧುರ ಅಕೌಂಟೆನ್ಸಿಯೆಲ್ಲ ಮುಂದೆ ನಡೆಯಿತೆನ್ನಿ.

ಆ ಮಾತು ಬೇರೆ. ಮಾರನೆಯ ದಿನ ನಮ್ಮ ಆ ಬಡತನದ ದಿನಗಳ thrill ಇದ್ದದ್ದು ಮದುವೆಗೆ ಏನೇನು ಉಡುಗೊರೆ ಬಂದಿವೆ ಅಂತ ನೋಡುವುದರಲ್ಲಿ. ಇವತ್ತು ನನ್ನ ಪುಸ್ತಕದ ಮಳಿಗೆ BBCಗೆ ಬರುವವರು \'ಉಡುಗೊರೆ\' ಪುಸ್ತಕ ಕೊಳ್ಳುತ್ತಿದ್ದರೆ ನನಗೆ ಅದೆಲ್ಲ ನೆನಪಾಗುತ್ತದೆ. ಕೆಲಸಕ್ಕೆ ಬಾರದ ಗಣಪತಿ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ \"ಉಡುಗೊರೆ\"ಯಂತಹ ಅರ್ಥಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾಗುವಂಥ ಪುಸ್ತಕ.

ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡಬೇಡಿ. \'ಉಡುಗೊರೆ\' ಪುಸ್ತಕ ನಿಮ್ಮೂರಿನಲ್ಲಿ ಸಿಗುತ್ತದೆ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books