Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಪುಸ್ತಕದ ಅಂಗಡಿಯ ಮಾರಾಟ ಹೀಗೂ ಇರುತ್ತಾ?

ಇದನ್ನು ಹಿರಿಯ ಕವಿಗಳ ಆಶೀರ್ವಾದ ಅನ್ನಲಾ? ಅವತ್ತು ಫೆಬ್ರುವರಿ 5ರಂದು ಬಂದು ‘ಬೆಳಗೆರೆ ಬುಕ್ಸ್ ಅಂಡ್ ಕಾಫಿ’ ಉದ್ಘಾಟಿಸಿ, ದೀಪ ಬೆಳಗಿಸಿ ಶುಭ ಕೋರಿದವರು ಅನೇಕ ಸಾಹಿತಿಗಳಿದ್ದರು. ಹಿರಿಯರು-ಕಿರಿಯರು-ಓರಗೆಯವರು. ಉಳಿದಂತೆ ಸಾವಿರಾರು ಓದುಗರು, ನಿಜವಾದ ಪುಸ್ತಕ ಪ್ರೇಮಿಗಳು, ನನ್ನ ಬರಹ-ಮಾತು ಇಷ್ಟಪಡುವವರಿದ್ದರು. ಅದೊಂದು ಅದ್ಭುತ ಸಮಾರಂಭ. ಒಂದು ಪುಸ್ತಕ ಮಳಿಗೆ, ವ್ಯಾಪಾರಿ ಮಳಿಗೆ ಹಾಗೆಲ್ಲ ವಿಜೃಂಭಣೆಯಿಂದ ಆರಂಭಗೊಳ್ಳುವುದು ಅಪರೂಪ.

ಆದರೆ ವ್ಯಾಪಾರ?

ಬಿಲ್ಡಿಂಗು ಅಳಿಯನದೇ ಆದರೂ ಅದಕ್ಕೆ ಬಾಡಿಗೆ ಕಟ್ಟಲೇಬೇಕಲ್ಲ? ಗಾಂಧಿಬಜಾರ್‌ನಲ್ಲಿ ಅಷ್ಟು ದೊಡ್ಡ ಮಳಿಗೆಗೆ ಬಾಡಿಗೆ ಕಟ್ಟುವುದೆಂದರೆ ದಿನಕ್ಕಿಷ್ಟು ಸಾವಿರ ರುಪಾಯಿ ವ್ಯಾಪಾರ ಆಗಲೇಬೇಕು. ನನಗೆ ಪ್ರತೀ ರಾತ್ರಿ ಲೆಕ್ಕ ಚುಕ್ತಾ ಮಾಡಿ ‘ಅಣ್ಣಾ, ಇವತ್ತಿನ ಮಾರಾಟ ಇಷ್ಟು ಸಾವಿರ ಆಗಿದೆ’ ಅಂತ ಲೆಕ್ಕ ಕೊಡುವುದು ನನ್ನ CEO ಮತ್ತು ನನ್ನ ಸಂಸ್ಥೆಯ ಹಣಕಾಸಿನ ಚುಕ್ಕಾಣಿ ಹಿಡಿದಿರುವ ಉಮೇಶ್ ಹೆಗಡೆ. ನಿಮ್ಮೆಲ್ಲರ ಪಾದ ಧೂಳಿ, ಹರಕೆ, ‘ನಾವಿದೀವಿ ಮಾಡಯ್ಯಾ’ ಎಂಬ ಭರವಸೆ ಹೇಗಿದೆ ನೋಡಿ. ಪ್ರತಿನಿತ್ಯ ಜನ ಬರುತ್ತಲೇ ಇದ್ದಾರೆ. ಪ್ರೀತಿಯಿಂದ ಕೊಡುವ ಕಾಫಿಯದು ನಿರಂತರ ಸಮಾರಾಧನೆ. ಒಂದು ದಿನಕ್ಕೆ ಆವರೇಜ್ 60 ಸಾವಿರ ರುಪಾಯಿಗಳ ಪುಸ್ತಕ ಮಾರಾಟ ಆಗುತ್ತದೆ. ಪುಸ್ತಕ ಬಿಡುಗಡೆಯಾದ ದಿನವೇ ಏಳು ಲಕ್ಷ ಅರವತ್ತೈದು ಸಾವಿರ ರುಪಾಯಿ ಬೆಲೆಯ ಪುಸ್ತಕಗಳು ಮಾರಾಟವಾಗಿದ್ದವು. ಅವು ಕೇವಲ ನನ್ನವೇ ಪುಸ್ತಕ ಮತ್ತು ಸಿ.ಡಿ.ಗಳು. ಈಗ ಅದಾದ ಹತ್ತು ದಿನಗಳಲ್ಲಿ ಆರು ಲಕ್ಷ ಮೀರಿ ಪುಸ್ತಕಗಳ ಮಾರಾಟವಾಗಿದೆ. ಇದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ : ಒಬ್ಬ ಲೇಖಕನಾಗಿ, ಪುಸ್ತಕ ವ್ಯಾಪಾರಿಯಾಗಿ. I am really happy.

ನನ್ನ ಕಾದಂಬರಿ ‘ನೆತ್ತರು ಮೆತ್ತಿದ ಗೋಡೆಯಾಚೆಗೆ’ ನಿಮಿ ನಿಮಿಷಕ್ಕೂ ಪದನುಗೊಳ್ಳುತ್ತಿದೆ. ಕುಳಿತು ಬರೆಯುವುದಷ್ಟೆ ಬಾಕಿ. ಮುಸ್ಲಿಮರ ವಿರುದ್ಧ ಇಸ್ರೇಲಿಗಳು ಮಾಡಿದ ಏಳು ಪ್ರಚಂಡ ಯುದ್ಧಗಳ ಹಿನ್ನೆಲೆಯಲ್ಲಿ ಒಬ್ಬ ಅಂಗವಿಕಲ war hero ಮತ್ತು ಒಬ್ಬ ಭಾರತೀಯ ಹುಡುಗ ಹಾಗೂ ಒಬ್ಬ ಇಸ್ರೇಲಿ ಹುಡುಗಿಯ ಪ್ರೀತಿಯ ಹಂದರ ಹುಟ್ಟುವ romantic ಆದ, ಹಾಳೆ ಹಾಳೆಗೂ ನೆತ್ತರು ಮತ್ತು ಭಾವುಕತೆ ಮೆತ್ತಿದ ದಿವ್ಯ ಕಥನ. For a change, ಈ ಕಾದಂಬರಿಯುದ್ದಕ್ಕೂ ಆಯಾ ಪಾತ್ರಗಳ ಫೊಟೋಗಳು ಪ್ರಕಟವಾಗುತ್ತವೆ. ಅದೂ ಒಂದು ಪ್ರಯೋಗವೇ ಮಾರ್ಚ್ 15ಕ್ಕೆ ನನ್ನ ಹುಟ್ಟುಹಬ್ಬ. ಅವತ್ತಿಗೆ ಸರಿಯಾಗಿ ಪುಸ್ತಕ ನಿಮ್ಮ ಕೈಗಿರಿಸಿ ನಾನು ಜೋಯಿಡಾದ ಪಾಂಜೇಲಿಯ ಕಾಡುಗಳಿಗೆ ಓಡಿ ಬಿಡಲಾ ಅಂತ ಯೋಚಿಸುತ್ತಿದ್ದೇನೆ. ನಮ್ಮ ನಿಲಯದ ಕಲಾವಿದ ವೀರೇಶ ಹೊಗೆಸೊಪ್ಪಿನವರ ಈಗಾಗಲೇ ಒಂದು rough ಆದ cover page ಸಿದ್ಧಪಡಿಸಿದ್ದಾನೆ. ಬರೆಯುವ ಹುರುಪು ಹತ್ತಿಸಲು ನನಗೆ ಅಷ್ಟು temptation ಸಾಕು. ಈ ನಡುವೆ ಪುಸ್ತಕದ ಅಂಗಡಿ organise ಮಾಡಬೇಕಿದೆ. ಕಳೆದ ಅನೇಕ ದಿನಗಳಿಂದ ನಮ್ಮ ಉಮೇಶ್ ಹೆಗಡೆ ನಿದ್ರೆ ಮಾಡಿಲ್ಲ. ಸಂಸ್ಥೆಗಾಗಿ ಅವನು ದುಡಿಯುತ್ತಿರುವ ರೀತಿ ನಿಜಕ್ಕೂ ಆಪರೂಪವಾದದ್ದು. ಕಡೆತನಕ ಕೈ ಹಿಡಿಯುವವರು ಗೆಳೆಯರೇ ಅಲ್ಲವೆ?

-ಬೆಳಗೆರೆ

___________________________

ಲೇಖನದ ಬಗೆಗಿನ ನಿಮ್ಮ ಅನಿಸಿಕೆಗಳನ್ನು [email protected] ಗೆ ಕಳಿಸಿ.

Read Archieves of 18 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books