Ravi Belagere
Welcome to my website
ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅವರ ಪ್ರೇಮ ಯಾತ್ರೆ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ‘ಒಲವೇ’ ಸಿಡಿ ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೇ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...
Home About Us Gallery Books Feedback Prarthana Contact Us

ಒಟ್ಟು ಮಾರಾಟ ಏಳು ಲಕ್ಷ ಅರವತ್ತೈದು ಸಾವಿರ ಕಣ್ರೀ!

ಇದನ್ನೆಲ್ಲ ಹೀಗೆ ಹೇಳಿಕೊಳ್ಳಬೇಕಿಲ್ಲ.

ಹದಿನೇಳು ವರ್ಷಗಳ ಹಿಂದೆ ‘ಪತ್ರಿಕೆ’ಯ ಸರ್ಕ್ಯುಲೇಷನ್ನು ಹತ್ತು ಸಾವಿರದಿಂದ ಹನ್ನೆರಡೂವರೆ ಸಾವಿರಕ್ಕೆ ಬೆಳೆದಾಗ ಕುಪ್ಪಳಿಸಿ ಕುಳಿತು ಹೇಳಿದ್ದೆ. ಈಗ just figures. ನಿನ್ನೆ ಪುಸ್ತಕ ಮತ್ತು ಸಿಡಿಗಳಿನ್ನೂ ಬಿಡುಗಡೆಯಾಗುವ ಮುನ್ನ ‘ಹಾಯ್ ಬೆಂಗಳೂರ್!’ ಕಚೇರಿಯಲ್ಲಿ ಆದ ಮಾರಾಟದ ಮೊತ್ತ ನಲವತ್ತೈದು ಸಾವಿರ ರುಪಾಯಿ. ಆನಂತರ ಸಾಯಂಕಾಲ ‘ಬಿಬಿಸಿ’ ಮಳಿಗೆಯಲ್ಲಿ ಆದ ಪುಸ್ತಕಗಳ ಮತ್ತು ಸಿಡಿಗಳ ಮಾರಾಟದ ಮೊತ್ತ ಹತ್ತು ಸಾವಿರ ರುಪಾಯಿಗಳು. ಪದ್ಮನಾಭನಗರದ ಗ್ರೌಂಡಿನಲ್ಲಿ ಸಂಜೆ ನಡೆದ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಆದ ಮಾರಾಟದ ಮೊತ್ತ ಐದು ಲಕ್ಷದ ಅರವತ್ತು ಸಾವಿರ ರುಪಾಯಿ.
ಯಾವ ಲೇಖಕನ ಕಣ್ಣು, ಕಾಲು, ಸೊಂಟ, ಅದರ ಕೆಳ ಭಾಗ ಬಾಯುವುದಿಲ್ಲ ಹೇಳಿ?

I am happy.

ನೀವು photoಗಳನ್ನು ನೋಡಿ.

ಒಂದು ಕಾಲಕ್ಕೆ craze ಇತ್ತು. ರವಿ ಬೆಳಗೆರೆಯಂತೆ, ಹಾಗೆ ಬರೆಯುತ್ತಾನಂತೆ, ನೋಡಲು ಹಾಗಿದ್ದಾನಂತೆ, ಭಯಂಕರ ಸೆಕ್ಯೂರಿಟಿಯಂತೆ, ಬಾಂಬಂತೆ, ಬಂದೂಕಂತೆ! Non sense. ಈಗ ಅದೇನೂ ಇಲ್ಲ. ನಾನು ಸಾದಾ ಸೀದಾ, ಖುಲ್ಲಂ ಖುಲ್ಲಂ, ಸರಳ ಸರಳ ಮನುಷ್ಯ. ಆದರೆ ಹದಿನೇಳು ವರ್ಷಗಳ ನಂತರವೂ ನನ್ನನ್ನು ನೋಡಲಿಕ್ಕೆ, ನನ್ನ ಕಾರ್ಯಕ್ರಮಗಳಿಗೆ, ಪುಸ್ತಕ ಬಿಡುಗಡೆಗೆ, ಸುಮ್ಮನೆ ಹಸ್ತಾಕ್ಷರಕ್ಕೆ, ಒಮ್ಮೆ ಮಾತನಾಡಿಸಲಿಕ್ಕೆ, ಕೈ ಕುಲುಕುವುದಕ್ಕೆ, ಏನೋ ಹೇಳಿಕೊಳ್ಳುವುದಕ್ಕೆ, ಫೊಟೋ ತೆಗೆಸಿಕೊಳ್ಳುವುದಕ್ಕೆ, ಹೀಗೇ just ನೋಡುವುದಕ್ಕೆ, ಭಾಷಣ ಕೇಳುವುದಕ್ಕೆ, ಪುಸ್ತಕ ಕೊಳ್ಳುವುದಕ್ಕೆ ಜನ ಬರುತ್ತಾರೆ. ಹೀಗೆ ವರ್ಷಗಟ್ಟಲೆ consistant ಆಗಿ ಜನಪ್ರಿಯತೆ, ಜನ ಮನ್ನಣೆ, ಅದಕ್ಕಿಂತ ಹೆಚ್ಚಾಗಿ ಜನರ ವಿಶ್ವಾಸ ಮತ್ತು ನಂಬಿಕೆ ಉಳಿಸಿಕೊಳ್ಳುವುದು ತುಂಬ ಕಷ್ಟ. ಆ ಕಷ್ಟವೇನು ಅಂತ ನನಗೆ ಗೊತ್ತು.

ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು! ಬೆಳಿಗ್ಗೆಯಿಂದಲೇ ಶುರುವಾಯ್ತು ಸಂದಡಿ. ನಮ್ಮ ವರದಿಗಾರ ಸುನೀಲ್ ಹೆಗ್ಗರವಳ್ಳಿಯ ಮಗ ಸೂರ್ಯನ ಬರ್ತ್‌ಡೇ ಇತ್ತು. ‘ತಾತಾ’ ಅಂದವನು ಪರಮ ಜುಗ್ಗನಂತೆ ಒಂದು ಚೂರು ಕೇಕ್ ತಿನ್ನಿಸಿದ. ಆಮೇಲಿಂದ ಬಂದರಲ್ಲ ಓದುಗರು? ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು. ಆಫೀಸಿನ ತುಂಬ ಚಿಲಿಪಿಲಿ. ಅವತ್ತು ಬೆಳಿಗ್ಗೆ ನಮ್ಮ ಆಫೀಸೊಂದರಲ್ಲೇ ನಮ್ಮ ಹುಡುಗರು ಮಾರಾಟ ಮಾಡಿದ್ದು ನಲವತ್ತೈದು ಸಾವಿರ ರುಪಾಯಿಯ ಮಾಲು. ಆಮೇಲೆ ಸಾಯಂಕಾಲ ಸಮಾರಂಭದಲ್ಲಿ ಮಾರಾಟವಾದದ್ದು ಐದು ಲಕ್ಷದ ಅರವತ್ತು ಸಾವಿರ ರುಪಾಯಿಯ ಪುಸ್ತಕ. ಕೊನೆಗೆ ನೋಡಿದರೆ ಬಿಬಿಸಿಯಲ್ಲಿ ಖರ್ಚಾಗಿರುವುದು ಒಂದು ಲಕ್ಷದ ಅರವತ್ತು ಸಾವಿರ ರುಪಾಯಿ ಬೆಲೆಯ ಪುಸ್ತಕ.

ಯಾವ ಲೇಖಕನಿಗೂ, ಕನ್ನಡದ ಯಾವ ಪತ್ರಕರ್ತನಿಗೂ ಈ ‘ಸುಖ’ ದೊರೆತಿಲ್ಲ. ಇದು ನನಗೆ ‘ಹಮ್ಮು’ ಆಗಬಾರದು. ಹೆಗಲ ಮೇಲೆ ತಲೆ ನಿಲ್ಲಬೇಕಷ್ಟೆ.
ಎಚ್ಚರಿಸಲು ನೀವಿದ್ದೀರಲ್ಲ?

-ರವೀ

Read Archieves of 14 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books