Ravi Belagere
Welcome to my website
ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅವರ ಪ್ರೇಮ ಯಾತ್ರೆ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ‘ಒಲವೇ’ ಸಿಡಿ ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೇ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...
Home About Us Gallery Books Feedback Prarthana Contact Us

ನಿಮಗಿರುವ ಅಂಥದೊಂದು ಸೆಂಟಿಮೆಂಟು ನಮಗಷ್ಟು ತಿಳಿಸಿ

ಅದು ಮೂಢ ನಂಬಿಕೆಯಾ?


May be. ನಾನು ಮೊದಲು ಒಂದು ತುಳಸಿಮಣಿ ಕೊರಳಿಗೆ ಹಾಕಿಕೊಳ್ಳುತ್ತಿದ್ದೆ. ನನ್ನ ತಾಯಿ ಬಸುರಿಯಿದ್ದಾಗ ನನ್ನ ಸೋದರ ಮಾವ ಬೆಳಗೆರೆ ಕೃಷ್ಣ ಶಾಸ್ತ್ರಿಗಳು ಅದನ್ನು ಹಿಮಾಲಯದಿಂದ ಆಕೆಗೆ ತಂದು ಕೊಟ್ಟಿದ್ದು, ಕೊನೆಯ ದಿನದ ತನಕ ಅದು ಆಕೆಯ ಕೈಲಿತ್ತು. ಅದನ್ನು ನಾನು ಕೊರಳಿಗೆ ಹಾಕಿಕೊಂಡೆ. ತುಂಬ ರಿಸ್ಕಿ ಕೆಲಸಗಳಿಗೆ, ಅತಿ ಮುಖ್ಯ ಕೆಲಸಗಳಿಗೆ, ಆಗಲೇಬೇಕು ಎಂಬಂಥ ಕೆಲಸಗಳಿದ್ದರೆ ಅಲ್ಲಿಗೆ-ಅಲ್ಲಿಗೆಲ್ಲ ಹಾಕಿಕೊಂಡು ಹೋಗುತ್ತಿದ್ದೆ. ದುಡ್ಡು ಬಂದ ಮೇಲೆ ಏನೇ ಬೆಳ್ಳಿ ಸುತ್ತಿಸಿದೆ, ಬಂಗಾರ ಸುತ್ತಿಸಿದೆ ಅಂತಾದರೂ, ತುಳಸಿಮಣಿಗಳು ಎಷ್ಟು ಹಳೆಯವಾಗಿದ್ದವೆಂದರೆ ಅವು ಒಡೆದು ಹೋಗತೊಡಗಿದವು. ಈಗ ತುಳಸಿಮಣಿ ಸರ ಲಲಿತಾಳ ತಿಜೋರಿ ಸೇರಿವೆ.


ಅನೇಕರಿಗೆ ಇಂಥ ಸೆಂಟಿಮೆಂಟ್‌ಗಳಿರುತ್ತವೆ. ಒಂದು ಪರ್ಟಿಕ್ಯುಲರ್ ವಾರದಂದು ಅಥವಾ ದಿನಾಂಕದಂದು ಅವರು ಹೊಸದೇನನ್ನೂ ಮಾಡುವುದಿಲ್ಲ. ಪ್ರಯಾಣ ಮಾಡುವುದಿಲ್ಲ. ಕೆಲವು ಕೆಲಸಗಳಿಗೆ ಹೋಗುವಾಗ ಇಂಥವೇ ನಿರ್ದಿಷ್ಟ ಬಣ್ಣದ ಅಂಗಿ ತೊಟ್ಟು ಹೋಗುತ್ತಾರೆ. ಹೊರಡುವಾಗ ಅಮ್ಮನಿಗೋ, ಅಪ್ಪನಿಗೋ, ದೇವರಿಗೋ- ನಮಸ್ಕಾರ ಮಾಡಿಯೇ ಹೊರಡುವ ನಿಯಮ. ರಾತ್ರಿ ಮಲಗುವಾಗ ಒಂದ್ಯಾವುದೋ ನಿರ್ದಿಷ್ಟ ಸಿ.ಡಿ. ಕೇಳಿಯೇ ಮಲಗಬೇಕು. ವರ್ಷಕ್ಕೊಮ್ಮೆ ಒಂದು ಜಾಗಕ್ಕೆ, ಊರಿಗೆ ಅಥವಾ particular ದೇವರಿಗೆ , ಅವನಿರುವ ಊರಿಗೆ ಹೋಗಿ ಬರಬೇಕು. ಏನೇ ಕೆಲಸ ಕೈಗೆತ್ತಿಕೊಂಡರೂ ಒಮ್ಮೆ ಅದ್ಯಾರೋ ಒಬ್ಬರನ್ನು ಸ್ಮರಿಸಿಕೊಳ್ಳಬೇಕು-ಹೀಗೆ.


ಕುಸ್ತಿಯ ಕಣಕ್ಕೆ ಇಳಿದ ಪೈಲ್ವಾನ ಎದುರಾಳಿಯತ್ತ ನೋಡಿ ಸುಮ್ಮನೆ ಗೂಳಿ ನುಗ್ಗಿದ ಹಾಗೆ ನುಗ್ಗುವುದಿಲ್ಲ. ಒಮ್ಮೆ ತೊಡೆ ತಟ್ಟಿಕೊಳ್ಳುತ್ತಾನೆ. ಭುಜ ತಟ್ಟಿಕೊಳ್ಳುತ್ತಾನೆ. ಕರಾಟೆ ಪಟು ಹಿಂಸ್ರ ಪಟುವಿನಂತೆ ಆರ್ಭಟಿಸುತ್ತಾನೆ. ಅವೆಲ್ಲವೂ ಗೆಲುವಿಗೆ, ಮುನ್ನುಗ್ಗುವಿಕೆಗೆ, ಹೋರಾಟಕ್ಕೆ ಸಿದ್ಧಗೊಳಿಸುವ ಟ್ರಿಗರ್ ಪಾಯಿಂಟ್‌ಗಳು. ನನ್ನ ಗೆಳತಿಯೊಬ್ಬಳು ಕಾರ್ಯಕ್ರಮ ನಿರ್ವಹಣೆ ಮಾಡಲಾರಂಭಿಸುವ ಮುನ್ನ ‘ಜೈ ರವಿ ಬೆಳಗೆರೆ!’ ಅಂತ ಹೇಳಿಕೊಳ್ಳುತ್ತಾಳಂತೆ.
ಇವೆಲ್ಲ ಮೂಢ ನಂಬಿಕೆಗಳಾ? ಅಭ್ಯಾಸಗಳಾ? ಆದತ್‌ಗಳಾ? ಅನುಕೂಲಗಳಾ? ಅವಶ್ಯಕತೆಗಳಾ? ಗೊತ್ತಿಲ್ಲ. ಅವುಗಳ ಚರ್ಚೆ ಇಲ್ಲಿ ಬೇಕಾಗಿಲ್ಲ. ನಿಮಗೆ ಅಂಥ ಯಾವ ನಂಬಿಕೆಗಳಿವೆ. ಉಂಗುರ? ಸರ? ಷರಟು? ಸೀರೆ? ಮನೆ ದೇವರ ನೆನಪು? ಮನುಷ್ಯರದು? ನಮಸ್ಕಾರ? ಈ ವಾರ? ಯಾವ ದಿನಾಂಕ? ಯಾವುದಾದರೂ ದಿಕ್ಕು?


ಹಾಗಿದ್ದರೆ, ಅದರ ಬಗ್ಗೆ ಸಂಕ್ಷಿಪ್ತವಾಗಿ ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಪ್ರಕಟಣೆ ಕಂಡ ಹದಿನೈದು ದಿನದೊಳಗಾಗಿ ನಿಮ್ಮ ಪತ್ರ, ಕೊನೆಯ ಪುಟದಲ್ಲಿರುವ ‘ಪತ್ರಿಕೆ’ಯ ವಿಳಾಸಕ್ಕೆ ತಲುಪಲಿ. ಜೊತೆಗೆ ನಿಮ್ಮದೊಂದು ಫೊಟೋ ಇರಲಿ. ‘ಪತ್ರಿಕೆ’ಯ ರೂಪುಗೊಳ್ಳುವಿಕೆಯಲ್ಲಿ ನೀವು ಪಾಲ್ಗೊಳ್ಳುವುದು ನಂಗಿಷ್ಟ. ನಿಮ್ಮ ಲೇಖನಗಳನ್ನು [email protected] ಗೂ ಮೈಲ್ ಮಾಡಬಹುದು.


-ಬೆಳಗೆರೆ

Read Archieves of 10 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books