Ravi Belagere
Welcome to my website
ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅವರ ಪ್ರೇಮ ಯಾತ್ರೆ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ‘ಒಲವೇ’ ಸಿಡಿ ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೇ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...
Home About Us Gallery Books Feedback Prarthana Contact Us

ರವಿ ಬೆಳಗೆರೆ ಎಂಬ ಕಿಲಾಡಿ ಮಾಂತ್ರಿಕನ ಮಾಯಾ ಬುಟ್ಟಿಯಿಂದ!

ಇದರ ಮೇಲೆ ಫೊಟೋ ನನ್ನದಿದೆ.

ಅದು ನಿಮ್ಮದೂ ಇರಬಹುದು. ಈ ಜಗತ್ತಿನಲ್ಲಿ ಮತ್ತೊಂದು ಜೀವವನ್ನು ಪ್ರೀತಿಸುವಂಥ ಯಾರದಾದರೂ ಇರಬಹುದು. ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅದು ಯಾವ magic? ಸುಮಕೆ ಸೌರಭ ಬಂದ ಘಳಿಗೆ ಯಾವುದು? ಒಂದು ನೋಟ, ಒಂದು eye contact, missed call, miss directed message, ಮಾಗುವ ಫ್ರೆಂಡ್‌ಷಿಪ್, ಇಷ್ಟವಾಗಿ ಬಿಡುವ ಸಹಪಾಠಿ-ಏನಾದರೂ ಆಗಬಹುದು. ಒಬ್ಬರನ್ನೊಬ್ಬರು ನೋಡದೇನೇ ಪ್ರೀತಿಸಲೂಬಹುದು. All in the game.


ಅಲ್ಲಿಂದ ಶುರುವಾಗುತ್ತೆ ಪ್ರೇಮ ಯಾತ್ರೆ. ಅದರಲ್ಲಿ ಪಿಸುಮಾತು, ಬಿರುನುಡಿ, ಕೊಂಕು, ಮುನಿಸು, ಅಸಮಾಧಾನ, ಕನಸು, ಪುಟ್ಟ ಪುಟ್ಟ gifts, ದೊಡ್ಡ ದೊಡ್ಡ problems, ಜಾತಿ, convertion, ಮದುವೆ, ಸಂಸಾರ, ಅಪ್ಪ-ಅಮ್ಮ, ಸಮಾಜ-ಒಂದಾ ಎರಡಾ? ಇದೆಲ್ಲದರ ಮಧ್ಯೆ ಪ್ರೀತಿಸುವ ಕಾಲದಲ್ಲಿ, ಮದುವೆಗೆ ಮುಂಚೆ ದೈಹಿಕ ಸಂಬಂಧ ಇಟ್ಟುಕೋ ಬೇಕಾ ಬ್ಯಾಡವಾ ಅನ್ನೋ ಪ್ರಶ್ನೆ ಉದ್ಭವವಾಗುತ್ತೆ. ಇದಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೇನೆ : ‘ಒಲವೇ...’ ಸಿ.ಡಿಯಲ್ಲಿ.

ತುಂಬ ಮಧುರವಾಗಿದ್ದ, ಇನ್ನೇನು ಕನಸು ನನಸಾಗಿಯೇ ಹೋಯ್ತು ಅಂದುಕೊಂಡ ಹಂತದಲ್ಲಿ ಥತ್! ಮನಸು ಮುರಿದು ಹೋಗುತ್ತೆ. ರಥದ ಒಂದು ಗಾಲಿ ಕಳಚಿ ಬೀಳುತ್ತೆ. A great disappointment. ಅದರಿಂದ ಚೇತರಿಸಿಕೊಳ್ಳುವುದಾದರೂ ಹೇಗೆ? ಪ್ರೇಮದಲ್ಲಿ ಆಗುವ ನಿರಾಶೆ : ಅದೇ ಬದುಕಿನ ಅಂತ್ಯವಾ? What next? ರವಿ ಬೆಳಗೆರೆ ಎಂಬ ಈ ಕಿಲಾಡಿ ಮಾಂತ್ರಿಕನ ಮಾಯಾ ಬುಟ್ಟಿಯಲ್ಲಿ ಅದಕ್ಕೂ ಉತ್ತರವಿದೆ ಕಣ್ರೀ.

ನೀವು ಮಾಡಬೇಕಾದುದಿಷ್ಟೆ : ಫೆಬ್ರವರಿ 5 ಸಂಜೆ, ಪದ್ಮನಾಭ ನಗರಕ್ಕೆ ಬನ್ನಿ. ಅಲ್ಲಿ 12 B ಬಸ್‌ಸ್ಟಾಪ್ ಎಲ್ಲಿದೆ ಅಂತ ಯಾರನ್ನ ಕೇಳಿದರೂ ಹೇಳ್ತಾರೆ. ಪದ್ಮನಾಭ ನಗರಕ್ಕೆ ಬರೋ 12 B, 15 A, 210 A, 210 N, 210 D ಈ ಮುಂತಾದ ಬಸ್ಸುಗಳೆಲ್ಲ ಬರುತ್ತವೆ.

ಅಲ್ಲೊಂದು ಅದ್ಭುತ ಸಭೆ. ಕಿವಿಗೆ ಇಂಪಾಗುವ ಸಂಗೀತ. ಅಲ್ಲೇ ನಿಮಗೆ ಸಿಕ್ಕುವ ನನ್ನ ‘ಮನಸೇ...’, ‘ಕನಸೇ...’ ಮತ್ತು ‘ಒಲವೇ...’ ಸಿ.ಡಿ.ಗಳು. ಒಲವೇ... ಸಿ.ಡಿಯ ಎರಡು ಪ್ರತಿ ಕೊಂಡಿಟ್ಟುಕೊಂಡು ಬಿಡಿ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ಅದನ್ನು ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಬೆಚ್ಚಗೆ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...

-ಬೆಳಗೆರೆ

Read Archieves of 03 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books