Ravi Belagere
Welcome to my website
“ಕನಸೇ..."
ಹೊಸ ವರ್ಷದ ದಿನ ನಾನು ಆಫೀಸಿನಲ್ಲಿ ಒಬ್ಬನೇ ಕುಳಿತು ಸಿದ್ಧಪಡಿಸಿಕೊಂಡ ಹೊಸ ಸಿ.ಡಿ ಬದುಕಿನಲ್ಲಿ ಕನಸು ಎಂಬುದೇ ವಿಚಿತ್ರವಾದದ್ದು. ನೀವು ಮನೆ ಕಟ್ಟಿ ಅಥವಾ ಬಿಡಿ. ‘ಕನಸೇ...’ ಸಿ.ಡಿ. ಒಮ್ಮೆ ಕೇಳಿ ನೋಡಿ. ಯಾರಿಗೆ ಗೊತ್ತು ನಿಮ್ಮಲ್ಲಿರುವ ಯಾವುದೋ ಸುಪ್ತ ಕನಸು ಗರಿಗೆದರಿ ನಿಂತೀತು. ಕನಸೇ ಸಿ.ಡಿ. ಮಾರುಕಟ್ಟೆಯಲ್ಲಿದೆ. ಬೆಲೆ 60/- ರುಪಾಯಿ. ಆಫೀಸಿಗೇ ಬಂದು ಕೊಳ್ಳುತ್ತೀರಾ? 50/- ರುಪಾಯಿಗೆ ಸಿಕ್ಕುತ್ತೆ? ಹೊಸ ವರ್ಷದ ಆರಂಭಕ್ಕೆ ಚಿಕ್ಕದೊಂದು ಉಡುಗೊರೆ ಕಣ್ರೀ.
Home About Us Gallery Books Feedback Prarthana Contact Us

ನೀವು ಸಂಕ್ರಾಂತಿಯಂದು ಉಂಡ ಗಡದ್ದು ವಾರ್ತೆ ಬಂತು

"Why so much? ನಿನ್ನ ಶ್ವಾಸಕೋಶ ಕಪ್ಪಾಗ್ತದೆ. ಮುಖದ ಮೇಲೆ ರಿಂಕಲ್ಸ್ ಬರ‍್ತವೆ. ನೋಡಲಿಕ್ಕೆ ಚೆಂದ ಇದ್ದೀಯ. ಮೊಮ್ಮಕ್ಕಳಿದ್ದಾರೆ ಅಂತ ಹೇಳೋ ಹಾಗೇ ಇಲ್ಲ. ಆದರೆ ಈ ಸಿಗರೇಟು? ಇದು ಆರೋಗ್ಯ ಕೆಡಿಸುತ್ತೆ. ಬಿಟ್ಟು ಬಿಡು" ಅಂತಾಳೆ ಅದಿ. ಅವಳು ನನ್ನ ಹೊಸ ಇಸ್ರೇಲಿ ಮಗಳು. ಮಂಗಳೂರಿನ ಬಳಿಯ ಬ್ರಹ್ಮಾವರದ ತುಂಟ exactly 6 ಅಡಿ 6 ಇಂಚು ಎತ್ತರದ ಆಲ್ವಿನ್ ಪಟಾಯಿಸಿರುವ ಇಸ್ರೇಲಿ ಚೆಲುವೆ. ಕೊಂಚ ಕತ್ರೀನಾ ಕೈಫ್‌ಳನ್ನು ಹೋಲುತ್ತಾಳೆ. ಅವರು ಸದ್ಯದಲ್ಲೇ ಮದುವೆಯಾಗಬೇಕು. ಅದಿ, ಜಾತಿಯಿಂದ ಯಹೂದಿ. ಬ್ರಹ್ಮಾವರದ ಆಲ್ವಿನ್ ಕ್ರೈಸ್ತ. ಇಸ್ರೇಲ್‌ನಲ್ಲಿ ಅಂತರ್ ಜಾತೀಯ, ಅಂತರ್ ಮತೀಯ, ಅಂತರ್ ದೇಶೀಯ ಮದುವೆಗಳಿಗೆ ಮನ್ನಣೆ ಇಲ್ಲ. ಹೀಗಾಗಿ ಅವರು ಮದುವೆ ಊರ್ಜಿತ ಮಾಡಿಕೊಳ್ಳಲಿಕ್ಕಾಗಿ ಸೈಪ್ರಸ್‌ಗೆ ಹೋಗಬೇಕು. ಅಲ್ಲಿ ಮದುವೆಯಾಗಬೇಕು. ಅವಸರದ ಸಂಗತಿಯೆಂದರೆ, ಅದಿ ಪುಟ್ಟ ಬಸುರಿ. ಈಗಾಗಲೇ ನಾಲ್ಕು ತಿಂಗಳು. Scanning ಎಲ್ಲ ಆಗಿ, ಒಳಗಿರುವುದು ಆರೋಗ್ಯವಂತ ಗಂಡು ಮಗು ಅಂತ ಖಚಿತವಾಗಿದೆ. ಹೆರಿಗೆಗೆ ಮುಂಚೆ ಮದುವೆಯಾಗುವ ಆಸೆ. ‘ನಿಮ್ಮ ಮದುವೆಗೆ ಸೈಪ್ರಸ್‌ಗೆ ಬರುತ್ತೇನೆ, ನಿಕೋಷಿಯಾಗೆ : ಹೆಣ್ಣಿನ ಕಡೆಯವನಾಗಿ’ ಅಂತ ಮಾತು ಕೊಟ್ಟಿದ್ದೇನೆ. ಅವಳಿಗೆ ನಾನು God father. ಇವೆಲ್ಲ ಎಲ್ಲಿಂದೆಲ್ಲಿಯ ಸಂಬಂಧಗಳು? ಯಾವ ಕರುಳು-ಬಳ್ಳಿ?

ಆಲ್ವಿನ್ ಬ್ಯುಸಿ ಇದ್ದಾಗ ಅವಳೇ ಕಾರು drive ಮಾಡುತ್ತಾಳೆ. ಒಂದು ನೂರು ಕೇಜಿಯಷ್ಟು ಪುಸ್ತಕ ಕೊಂಡಿದ್ದೇನೆ. ಇಲ್ಲಿಂದ Zಜಟಗೆ ಹಾಕಿದರೆ ಸರಿ. ವಾರಕ್ಕೋ, ಹತ್ತು ದಿನಕ್ಕೋ ಬೆಂಗಳೂರಿಗೆ ಬಂದು ತಲುಪುತ್ತದೆ. ಬಂದವನೇ February 5ರ ಕಾರ್ಯಕ್ರಮಕ್ಕಾಗಿ ಕೆಲಸ ಮಾಡಬೇಕು. ಇನ್ನೊಂದು ಸಿ.ಡಿ., ‘ಉಡುಗೊರೆ’ ಪುಸ್ತಕ ಪ್ರಿಂಟಿಗೆ ಕಳಿಸಬೇಕು.

‘ಹಿಮಾಗ್ನಿ’ ಕೆಲಸ ಚೂರುಪಾರು ಬಾಕಿ ಇದ್ದೇ ಇದೆ. ಪುಸ್ತಕ ಬಿಡುಗಡೆ ಮತ್ತು ಪುಸ್ತಕದ ಅಂಗಡಿ ಆರಂಭವಾಗುತ್ತಿದ್ದಂತೆಯೇ ಆಸ್ಟ್ರೇಲಿಯಾಕ್ಕೆ ಹೊರಡಬೇಕು. ಅಲ್ಲಿಯ ಕನ್ನಡ ಸಂಘಗಳ ಆಹ್ವಾನ. ಮೆಲ್‌ಬರ್ನ್, ಸಿಡ್ನಿ, ಪರ್ತ್-ಹೀಗೆ ನಾನಾ ಊರು. ಇದೆಲ್ಲದರ ಮಧ್ಯೆ ನನ್ನ ದಾಂಡೇಲಿಯ ಕಾಡುಗಳಲ್ಲಿ ಚಳಿ ಬೆಂಕಿ ಕಾಯಿಸಿಕೊಳ್ಳುವ ಹಸಿವು ನನ್ನನ್ನು ಕಾಮದಂತೆ ಕಾಡುತ್ತಿದೆ.

ಹೊಟ್ಟೆಯ ವಿಷಯಕ್ಕೆ ಬರುವುದಾದರೆ ನನ್ನನ್ನು ಇಸ್ರೇಲ್ ನಿಜಕ್ಕೂ ಉಪವಾಸ ಹಾಕಿತು. ಈ ಊಟ, ಮಂಜಿನಲ್ಲಿಟ್ಟು ಬಡಿಸುವ ಮೀನು-ಇದನ್ನು ಯಾರು ತಿಂದಾರು? ವಾಪಸು ಬಂದು ಇಡ್ಲಿ-ವಡೆ-ಸಾಂಬಾರು ಸಂಹರಿಸಿದರೆ ಸಾಕೆಂದು ಹಪಹಪಿಸುತ್ತಿದ್ದೇನೆ. ಮಕರ ಸಂಕ್ರಾಂತಿಯ ದಿನ ಎಳ್ಳು ಇಲ್ಲ. ಬೆಲ್ಲವೂ ಇಲ್ಲ. ಮಂಜಿನಷ್ಟು ತಣ್ಣಗಿನ ಬ್ರೆಡ್ ತಿಂದು ಮಲಗಿದೆ. ಯಹೂದಿಗಳಿಗೆ ಅವತ್ತು ಶಬ್ಬತ್. ಅವರು ಅಡುಗೆ ಹಾಗಿರಲಿ, ಫೋನೂ ರಿಸೀವ್ ಮಾಡುವುದಿಲ್ಲ. ಇಷ್ಟಾಗಿ, ನಾನು ಫೋನು ಯಾರಿಗೆ ಮಾಡಲಿ?

ಪುಸ್ತಕ ಓದುತ್ತಾ ಹಸಿದ ಹೊಟ್ಟೆಯಲ್ಲಿ ಮಲಗಿದೆ.

ನೀವು ಗಡದ್ದಾಗಿ ಉಂಡಿರಂತೆ, ಇಂಟರ್‌ನೆಟ್‌ನಲ್ಲಿ ವಾರ್ತೆ ಬಂತು.

-ಬೆಳಗೆರೆ

Read Archieves of 20 January, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books