Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಹಿಮಾಗ್ನಿಯ ಮೊದಲ ಪ್ರತಿ ಮತ್ತು ಒಂದು ಗೆಲುವಿನ ಸಿ.ಡಿ!

ತುಂಬ ದೊಡ್ಡ ಸಮಾರಂಭವೇನಲ್ಲ: ಚಿಕ್ಕ get together. ಜೊಯಿಡಾ ಬಳಿಯ ಮಳಗಾಂವಕರ್ ಅವರ ಮನೆಯಲ್ಲಿ ಒಂದಷ್ಟು ಗೆಳೆಯರು ಸೇರಿದ್ದೆವು. ಮನೋಹರ ಮಳಗಾಂವಕರ್ ಅವರ ಕುಟುಂಬದವರು ಯಾರೂ ಇರಲಿಲ್ಲ. ಇಷ್ಟಕ್ಕೂ ಅವರಿಗೆ ಇದ್ದರಾದರೂ ಯಾರು? ಪತ್ನಿ ತೀರಿಹೋದ ಐದು ವರ್ಷಕ್ಕೆ ಅವರ ಒಬ್ಬೇ ಮಗಳು ಕೂಡ ತೀರಿ ಹೋಗಿದ್ದಳು. ನನಗೆ ಗೊತ್ತಿದ್ದ ಮಟ್ಟಿಗೆ ಒಬ್ಬ ಸೋದರ ಬೆಂಗಳೂರಿನಲ್ಲಿದ್ದಾರೆ. ಒಬ್ಬ ಸೋದರ ಮುಂಚೆಯೇ ತೀರಿಕೊಂಡಿದ್ದು, ಅವರ ಮಗಳು ಮುಂಬಯಿಯಲ್ಲಿದ್ದಾಳೆ. ಮಳಗಾಂವಕರ್‌ರ ಅಳಿಯ ಆಂದ್ರೆ ಕಪೂರ್‌ಗೆ ತುಂಬ ಖಾಯಿಲೆ. ಸಾಹಿತ್ಯಕ್ಕೂ ಅವರ ಪ್ರಪಂಚಕ್ಕೂ ಸುತರಾಂ ಸಂಬಂಧವಿಲ್ಲ. ಹೀಗಾಗಿ ನಾವೇ ಕೆಲವು ಗೆಳೆಯರು ಅಲ್ಲಿ ಸೇರಿದ್ದೆವು. ಅವರದೊಂದು ಫೊಟೋ ನಾನೇ ತೆಗೆದದ್ದು ಒಯ್ದಿದ್ದೆ. ಅವರೆದುರಿಗೆ ಒಂದು ಕ್ಯಾಂಡಲ್ ಹಚ್ಚಿ ಅವರ ಸಾಹಿತ್ಯದ ಬಗ್ಗೆ ಒಂದಿಬ್ಬರು ಮಾತನಾಡಿದೆವು. ಒಬ್ಬ ಹಿರಿಯ ಲೇಖಕರನ್ನು ಮರೆಯಬಾರದು ಎಂಬುದಷ್ಟೆ ನನ್ನ ಉದ್ದೇಶವಾಗಿತ್ತು.

ಬಂದವನೇ ಒಮ್ಮೆ ಮೈ ಕೊಡವಿ ಕುಳಿತು ಕೊನೆಯ ಅಧ್ಯಾಯ ಬರೆದು ಮುಗಿಸಿದೆ: `ಹಿಮಾಗ್ನಿ` ಕಾದಂಬರಿಯದು. ನಾನು ಒಮ್ಮೆ ಬರೆದದ್ದನ್ನು ಮತ್ತೆ ತಿದ್ದುವುದಿಲ್ಲ. ಕೆಲವೊಮ್ಮೆ ಓದುವುದೂ ಇಲ್ಲ. Second draft ಎಂಬುದು ನನಗೆ ಗೊತ್ತೇ ಇಲ್ಲ. ಆದರೆ `ಹಿಮಾಗ್ನಿ` ಈ ಬಾರಿ ನನ್ನನ್ನು ಎಲ್ಲ ಬರೆದು ಮುಗಿಸಿದ ನಂತರವೂ ಒಮ್ಮೆ ಓದಲಿಕ್ಕೆ, ಕೊಂಚ ತಿದ್ದಲಿಕ್ಕೆ, ಯಾವುದೋ ಮಾಹಿತಿಯನ್ನು ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳಲಿಕ್ಕೆ ಕೂಡಿಸಿದೆ. Not a big job. ಆದರೆ ಕಾದಂಬರಿಯ ಮುದ್ರಣ ಕೊಂಚ ಸಮಯ ಹಿಡಿಯಲಿದೆ. ಈತನಕ ಮಾಡಿದ ಉಳಿದೆಲ್ಲ ಪುಸ್ತಕಗಳಂತಲ್ಲದೆ, ದಪ್ಪ ರಟ್ಟಿನ ರಕ್ಷಾಕವಚ ಹಾಕಿಸಲಿದ್ದೇನೆ. ಅದನ್ನ hard bound copy ಅಂತಾರೆ. ಬಹಳ ದಿನ ಬಾಳಿಕೆ ಬರಬೇಕೆಂಬುದು ಉದ್ದೇಶ. ಅಂಥ ರಕ್ಷಾಕವಚವನ್ನು ಹೊಲಿದು, ಪುಸ್ತಕ ಸಿದ್ಧಪಡಿಸುವುದನ್ನು Box binding ಅಂತಾರೆ. ಶ್ರದ್ಧೆಯಿಂದ ನಾನೇ ಎದುರಿಗೆ ನಿಂತು ಅದನ್ನೆಲ್ಲ ಮಾಡಿಸುತ್ತಿದ್ದೇನೆ. ನಿಜ ಹೇಳಬೇಕೆಂದರೆ `ಹಿಮಾಗ್ನಿ` ನನ್ನ ambitious ಕೃತಿ. ನಿಮ್ಮ ಸ್ವಾಗತವಿರುತ್ತದೆಂದು ನಂಬಿದ್ದೇನೆ, ಎಂದಿನಂತೆ.

ಇನ್ನೇನು ನವೆಂಬರ್ ಮುಗಿದು ಡಿಸೆಂಬರ್ ಆರಂಭವಾಗಲಿದೆ. ಅದರಾಚೆ ಮೂರ‍್ನಾಲ್ಕು ತಿಂಗಳಿಗೆ ಮಕ್ಕಳಿಗೆ ಪರೀಕ್ಷೆಗಳು. ನಮ್ಮ ಹುಡುಗ ಓದಲ್ಲ, ಕಷ್ಟಪಟ್ಟು ಓದ್ತಾಳೆ ಆದರೆ ನೆನಪಿರಲ್ಲ ಅಂತಾಳೆ, ಪರೀಕ್ಷೆಗೆ ಪ್ರಿಪೇರ್ ಆಗೋದು ಹೇಗೆ, ಕಾನ್ಸನ್‌ಟ್ರೇಷನ್ ಬರಬೇಕು ಅಂದ್ರೆ ಏನು ಮಾಡಬೇಕು- ಹೀಗೆ ನೂರೆಂಟು ಪ್ರಶ್ನೆ ಕೇಳಿ ಪೋಷಕರು, ವಿದ್ಯಾರ್ಥಿಗಳು ಫೋನ್ ಮಾಡುತ್ತಿರುತ್ತಾರೆ. ಪರೀಕ್ಷೆಯ ಭಯ ಕೆಲವು ಸಲ ಜ್ವರದಂತೆ, ಪೀಡೆಯಂತೆ ಬಾಸಿ ಬಿಡುತ್ತದೆ. ಇದಕ್ಕೆಲ್ಲ ಉತ್ತರವಿಲ್ಲವಾ? ಖಂಡಿತ ಇದೆ. ಸ್ವತಃ ನಾನು ಎಸೆಸೆಲ್ಸಿ ಫೇಲಾಗಿದ್ದವನು. ಆದರೆ ಯಶಸ್ವಿಯಾಗಿ ಎಂ.ಎ., ಮುಗಿಸಿ ಆರು ವರ್ಷ ಮಕ್ಕಳಿಗೆ ಪಾಠ ಮಾಡಿದವನು. ಅದರ ಅರ್ಥವಿಷ್ಟೆ. Failureನಿಂದ ತಪ್ಪಿಸಿಕೊಳ್ಳುವ ತಂತ್ರ ನನಗೆ ಗೊತ್ತಾಗಿತ್ತು. ಅದನ್ನಷ್ಟೆ ವಿವರಿಸಿ ಎಸೆಸೆಲ್ಸಿ ಹಾಗೂ ಪಿಯು ಮಕ್ಕಳಿಗೆ, ಅವರಿಗಿಂತ ಮುಖ್ಯವಾಗಿ ಪೋಷಕರಿಗೆ ಮತ್ತು ಶಿಕ್ಷಕರಿಗೆ ಸರಳವಾಗಿ ಅರ್ಥವಾಗುವಂತೆ ಒಂದು ಸಿ.ಡಿ. ಸಿದ್ಧಪಡಿಸಿದ್ದೇನೆ. ಅಂಥದೊಂದು ಸಿ.ಡಿ ಮಾಡಲಿಕ್ಕೆ ನನಗಿರುವ ಏಕೈಕ ಅರ್ಹತೆಯೆಂದರೆ ನನ್ನ `ಪ್ರಾರ್ಥನಾ`. ಆರಂಭವಾದಾಗಿನಿಂದ ಇವತ್ತಿನ ತನಕ ನಮ್ಮ ಶಾಲೆ ಎಸೆಸೆಲ್ಸಿಯಲ್ಲಿ 100% ರಿಸಲ್ಟ್ ತಂದುಕೊಂಡಿದೆ. ಅದರಲ್ಲಿ ನನ್ನದೇನೂ ಹೆಗ್ಗಳಿಕೆಯಿಲ್ಲ. ಆದರೆ ನಮ್ಮ ಶಿಕ್ಷಕರು ಮಾಡಿದ ಎಕ್ಸ್‌ಪೆರಿಮೆಂಟುಗಳು, ತುಂಬ ಚುರುಕಲ್ಲದ ಮಕ್ಕಳನ್ನೂ ಪರೀಕ್ಷೆಯಲ್ಲಿ ಗೆಲ್ಲುವಂತೆ ಮಾಡಿದ ಅವರ ತಂತ್ರಗಳು ಮತ್ತು ಸ್ವತಃ ನಾನು ಏನನ್ನಾದರೂ ಗ್ರಹಿಸುವ, ಟಿಪ್ಪಣಿ ಮಾಡಿಕೊಳ್ಳುವ ವಿಧಾನಗಳು-ಇವುಗಳನ್ನೆಲ್ಲ ಕ್ರೋಢೀಕರಿಸಿ ಮಾಡಿದ ಸಿ.ಡಿ. ಅದು. ಸದ್ಯದಲ್ಲೇ ನಿಮಗೆ ಸಿಗಲಿದೆ. ನಿಮ್ಮ ಮಗುವಿಗಾಗಿ ಒಂದು ಪ್ರತಿ ಕಾಯ್ದಿರಿಸಿ.

-ಬೆಳಗೆರೆ

Read Archieves of 03 December, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books