Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ನನ್ನನ್ನು ಗುರುತಿಸಲಿ ಎಂಬ ಸಹಜ ಹಂಬಲವೇ ಬೇರೆ : ಅದರ ಗೀಳೇ ಬೇರೆ!

ನಾನು ಅವನನ್ನೇ ನೋಡುತ್ತಿದ್ದೆ. ಚಿಕ್ಕ ಪಾರ್ಟಿ ಅದು. ಗೋವೆಯ ಕೆಲವು ಗೆಳೆಯರು ಬಂದಿದ್ದರು. ಧಾರವಾಡದ ಕೆಲವು ಮಿತ್ರರು. ಆ ಪೈಕಿ ಮೂವರು ಹುಡುಗಿಯರಿದ್ದರು. ಮಧ್ಯೆ ಒಂದಷ್ಟು ಚಳಿ ಬೆಂಕಿ ಹಾಕಿಕೊಂಡು ಸುತ್ತ ಕುಳಿತು ಹರಟುತ್ತಿದ್ದೆವು. ಆದರೆ ಅವನು ಒಂದೇ ಸಮನೆ ಮಾತನಾಡುತ್ತಿದ್ದ. ನಿಜಕ್ಕೂ ಅವ್ಯಾಹತ. ನನಗೆ ಮಾತು ಅಲರ್ಜಿಯಲ್ಲ. Basically ನಾನೇ ಭಯಂಕರ ಹರಟೆಕೋರ. ಆದರೆ ವಿಷಯವೇ ಇಲ್ಲದೆ, ಉಳಿದವರಿಗೆ ಮಾತನಾಡಲೂ ಬಿಡದೆ ಅವನು ಎಲ್ಲರನ್ನೂ dominate ಮಾಡಿ ಮಾತನಾಡುತ್ತಿದ್ದುದು ಕಂಡು ಆಶ್ಚರ್ಯ ಪಟ್ಟೆ, ಗಮನಿಸಿದೆ, ತೀರ ಬೋರೆದ್ದು ಹೋಗಿದ್ದರೂ ಅವನನ್ನು ಗಮನಿಸಿದೆ. ಒಂದು ತಾಸು ಕಳೆಯುವಷ್ಟರಲ್ಲಿ ಅವನಿಗಿರುವ ಸಮಸ್ಯೆ ಗುರುತಿಸಿದೆ : ಅದು ಅಟೆನ್ಷನ್ ಸೀಕಿಂಗ್ ಸಮಸ್ಯೆ!

ನನ್ನನ್ನು ಯಾರಾದರೂ ಗುರುತಿಸಲಿ ಎಂಬ ಸಮಸ್ಯೆ. ಅದು ರೋಗವಾ? ಹೌದು. ಕೆಲವು ಬಾರಿ ರೋಗವಲ್ಲ. It is funny.

ನನ್ನನ್ನು ಎಲ್ಲರೂ ಗಮನಿಸಲಿ ಎಂದು ಬಯಸುವುದು ಮನುಷ್ಯನ ಸಹಜ ಗುಣ. ಅಷ್ಟೇ ಅಲ್ಲ, ಪ್ರಾಣಿಗಳಲ್ಲೂ ಇದು ಕಂಡು ಬರುತ್ತದೆ. ನೀವು ಸಾಕಿದ ನಾಯಿಯನ್ನೇ ನೋಡಿ. ಮನೆಗೆ ನೀವು ಹೋದ ಕೂಡಲೆ ಎಷ್ಟು ಎಕ್ಸೈಟ್ ಆಗಿ, ಮುದ್ದಿಸಿ, ಮೈಮೈಗೆ ಅಡರಿ, ಮೈ ಉಜ್ಜಿ ನಿಮ್ಮನ್ನು ಪ್ರೀತಿಸಿ ನಿಮ್ಮ ಅಟೆನ್ಷನ್‌ನನ್ನು ತನ್ನೆಡೆಗೆ ಸೆಳೆಯುತ್ತದೆ. ಈ ಗುಣ ಪ್ರತಿ ಮಗುವಿನಲ್ಲೂ ಇರುತ್ತದೆ. ಏಕೆಂದರೆ, ಪ್ರತಿ ಮಗುವೂ ತಾನು ತನ್ನ ಸುತ್ತಲಿನ ಪ್ರಪಂಚದ ಕೇಂದ್ರಬಿಂದು ಎಂದು ಭಾವಿಸುತ್ತದೆ. ಆದರೆ ಮಗುವು ಬೆಳೆದಂತೆಲ್ಲ ತಾನು ಉಳಿದೆಲ್ಲರಂತೆ ಸಹಜ, ಸಾಮಾನ್ಯ ಜೀವ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತದೆ. ಇದನ್ನೇ ನಾವು maturity ಅಂತ ಕರೆಯುತ್ತೇವೆ. ಅದಕ್ಕೆ ಮುಂಚೆ ಚಿಕ್ಕದಕ್ಕೂ ಹಟ ಮಾಡುವುದು, ಸುಮ್ಮನೆ ಎಡವಿಕೊಂಡರೂ ಭಯಂಕರ `ಅಬ್ಬೂ` ಆಯ್ತು bandage ಹಾಕು ಅನ್ನುವುದು, ಹಿರಿಯರಿಬ್ಬರು ಮಾತನಾಡುತ್ತಿದ್ದರೆ ಅವರ ಗಮನ ತನ್ನತ್ತ ಸೆಳೆದು ತಾನಿನ್ನೇನೋ ಮಾತನಾಡುವುದು-ಮುಂತಾದವುಗಳನ್ನು ಮಾಡುತ್ತಿರುತ್ತದೆ. ಶಾಲೆಗೆ ಸೇರಿ, ಇತರೆ ಮಕ್ಕಳೊಂದಿಗೆ ಬೆರೆತು, ಆಟದ ಬಯಲಿನಲ್ಲಿ ತನ್ನ ಎನರ್ಜಿ ವ್ಯಯ ಮಾಡಿ, ತನ್ನ ಜಗತ್ತನ್ನು ವಿಸ್ತರಿಸಿಕೊಳ್ಳುತ್ತ ಹೋದಂತೆ ಆ ಮಗುವಿನ `ಅಟೆನ್ಷನ್ ಸೀಕಿಂಗ್` ಸಮಸ್ಯೆ ತಂತಾನೆ ಅದರ ವ್ಯಕ್ತಿತ್ವದಿಂದ ನಿರ್ಗಮಿಸುತ್ತದೆ.

ಆದರೆ ಕೆಲವರಲ್ಲಿ ಈ ಸಹಜವಾದ inner child mentality ಬದಲಾಗುವುದಿಲ್ಲ. ಆ ವಿಷಯದಲ್ಲಿ ಅವರಿಗೆ ಪ್ರಬುದ್ಧತೆ ಬರುವುದಿಲ್ಲ. ಅಂಥವರು ವಿಚಿತ್ರ ರೀತಿಯಲ್ಲಿ ತಮ್ಮ ಸುತ್ತಲಿನವರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ. ಮಾತೊಂದೇ ಅಲ್ಲ : ಗಮನ ಸೆಳೆಯುವ ಗೀಳು ನಾನಾ ತರಹದ್ದಾಗಿರುತ್ತದೆ. ಹಾಗೆ ನೋಡಿದರೆ ನೀವು-ನಾನು ಎಲ್ಲರೂ ಕೊಂಚ ಮಟ್ಟಿಗೆ ಈ ಗೀಳು ಉಳ್ಳವರೇ. ನಮ್ಮನ್ನು ಸ್ನೇಹಿತರು, ಸುತ್ತಲಿನವರು, ಇಡೀ ಸಮಾಜ ಗುರುತಿಸಲಿ ಎಂದು ಬಯಸುತ್ತಿರುತ್ತೇವೆ. ಇದು ಸಹಜ. ಆದರೆ ಈ ಗುರುತಿಸುವಿಕೆಗಾಗಿ ನಮ್ಮ ಮೌಲ್ಯಗಳನ್ನೇ ಮಾರಿಕೊಂಡು ಬಿಡುತ್ತೇವೆ ಅಂದಾಗಲೇ ಅದು ಖಾಯಿಲೆಯ ಸ್ವರೂಪ ತಳೆದು ಬಿಡುತ್ತದೆ. ಈ ಗೀಳಿಗೆ ಬಿದ್ದವರು ಸುತ್ತಲಿನವರ ಗಮನ ಸೆಳೆಯುವುದಕ್ಕಾಗಿ ಏನು ಬೇಕಾದರೂ ಮಾಡಿ ಬಿಡುತ್ತಾರೆ. ಭಯಂಕರ ಸುಳ್ಳು ಹೇಳುತ್ತಾರೆ. At the same time, ಕೆಲವರು ತುಂಬ positive ಆದ ರೀತಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ನಿಂತು ಬಿಡುತ್ತಾರೆ. ಉದಾಹರಣೆಗೆ, ಭಿಕ್ಷುಕರ ಶವ ಸಂಸ್ಕಾರ ಮಾಡುವುದು, ಬೀದಿ ನಾಯಿಗಳಿಗೆ ಅಂತಲೇ ಒಂದು `ಆಶ್ರಮ` ತೆಗೆಯುವುದು-ಇತ್ಯಾದಿ. ಇದೇ ಗೀಳಿಗೆ ಬಿದ್ದವರು ತಮ್ಮ ವ್ಯಕ್ತಿಗತ ಬದುಕಿನಲ್ಲಿ ನಿಜಕ್ಕೂ ದೊಡ್ಡ ಸಾಧನೆ ಮಾಡಿ ಸಮಾಜದ ಗಮನ ಸೆಳೆದದ್ದೂ ಇದೆ. ಈ ಗಮನ ಸೆಳೆಯುವ ಗೀಳಿನ ವಿಚಿತ್ರ ಲಕ್ಷಣವೆಂದರೆ ಇದು ಥಟ್ಟನೆ ಇತರೆ ಮಾನಸಿಕ ವ್ಯಾಗಳಂತೆ ಗುರುತಿಸಲ್ಪಡುವುದಿಲ್ಲ.

ಒಬ್ಬ ಹುಡುಗಿ ಇದ್ದಕ್ಕಿದ್ದಂತೆ ವಿಪರೀತ ತುಂಡು ಬಟ್ಟೆ ಉಟ್ಟು, ಭಯಂಕರ ಪ್ರಚೋದಕವಾದ ರೀತಿಯಲ್ಲಿ ಕಾಣಿಸಿಕೊಳ್ಳ ತೊಡಗುತ್ತಾಳೆ. ಹಾಗಂತ ಅವಳನ್ನು ಕಾಮುಕಳೆಂದಾಗಲೀ, ನೈತಿಕತೆ ಇಲ್ಲದವಳೆಂದಾಗಲೀ ಭಾವಿಸಬೇಕಾಗಿಲ್ಲ. ಅವಳಿಗಿರುವುದು ಕೇವಲ ಗಮನ ಸೆಳೆಯುವ ಗೀಳು. ಹಾಗೆ ಉಡುಪು ತೊಟ್ಟು ಹತ್ತು ಜನ ತನ್ನನ್ನು ನೋಡುವಂತಾದರೆ ಅವಳಿಗೆ ಅದೇ ಸಮಾಧಾನ. ಅದು reassurance. ತಾನು ಈ ಜಗತ್ತಿನಲ್ಲಿ ಅರ್ಹಳು ಎಂಬ ಭಾವ. ಕೆಲ ಗಂಡಸರು ವಿಪರೀತ ದಿರಿಸಿನ ಷೋಕಿ ಹೊಂದಿರುತ್ತಾರೆ. ಅವರಿಗೆ ಡಿಸೈನರ್ ಉಡುಪೇ ಬೇಕು. ಒಡವೆ ಹೇರಿಕೊಂಡು ಓಡಾಡುತ್ತಾರೆ. ದೇಶಾನುದೇಶಗಳ ವಾಚು, ಕಾರು ಖರೀದಿಸುತ್ತಾರೆ. ಅವುಗಳನ್ನು ಸಮಸ್ತರೂ ಗಮನಿಸ ಬಯಸುತ್ತಾರೆ. ಇದೆಲ್ಲವೂ ಗಮನ ಸೆಳೆಯುವ ಗೀಳಿನ ಲಕ್ಷಣಗಳೇ. ಕೆಲವು ಸಲ ಇದು exssisitionism ಎಂಬ ಇನ್ನೊಂದು ಖಾಯಿಲೆಯ ಲಕ್ಷಣವೂ ಆಗಿರುತ್ತದೆ.

ಮುಖ್ಯವಾಗಿ, ನಾರ್ಸಿಸಮ್‌ನ ಖಾಯಿಲೆಯಿಂದ ನರಳುವವರಿಗೆ ಈ ಗಮನ ಸೆಳೆಯುವ ಗೀಳಿರುತ್ತದೆ. ಅವರ ಸಮಸ್ಯೆಯೆಂದರೆ, ಅವರು ತಮ್ಮನ್ನು ತಾವು ಪ್ರೀತಿಸುತ್ತಿರುತ್ತಾರೆ. ತಮ್ಮನ್ನಷ್ಟೆ ಪ್ರೀತಿಸುತ್ತಿರುತ್ತಾರೆ. ಅಂಥವರು ನಿಮ್ಮ ಗಮನ ಸೆಳೆಯಲು ವಿಫಲರಾದರೆ ಮುಗಿಯಿತು : ನಿಮ್ಮ ಮೇಲೆ ಜನ್ಮಾಂತರದ ಸೇಡು ತೀರಿಸಿಕೊಳ್ಳಲು ನಿಂತು ಬಿಡುತ್ತಾರೆ. ಲೇಖಕರಲ್ಲಿ, ಪತ್ರಕರ್ತರಲ್ಲಿ ಈ ತರಹದ ಜನ ಕಾಣ ಸಿಗುತ್ತಾರೆ. ಅವರನ್ನು ನೀವು ಕ್ಕರಿಸಬೇಕಿಲ್ಲ. ಜಗಳ ಕಾಯಬೇಕಿಲ್ಲ. ಸುಮ್ಮನೆ ignore ಮಾಡಿದರೆ ಸಾಕು ಉರಿದು ಬೀಳುತ್ತಾರೆ. ಏಕೆಂದರೆ, ಗಮನ ಸೆಳೆದು ಆನಂದಿಸುವುದೇ ಅವರ ಮುಖ್ಯ ಅವಶ್ಯಕತೆ. ಅದೇ ಅವರ ಭೋಜನ. ತಮ್ಮನ್ನು ತಾವು ಹೊಗಳಿಕೊಳ್ಳುತ್ತಿರುತ್ತಾರೆ. ತಮ್ಮ ಬಗ್ಗೆಯೇ ಮಾತನಾಡುತ್ತಿರುತ್ತಾರೆ. ತಾವು ಜಗತ್ತಿನ ಉಳಿದೆಲ್ಲರಿಗಿಂತ ಬುದ್ಧಿವಂತರು ಅಂತ ಭಾವಿಸಿರುತ್ತಾರೆ ಮತ್ತು ಹಾಗಂತ ಹೇಳಿಕೊಳ್ಳುತ್ತಿರುತ್ತಾರೆ. ತಾವು ನಂಬಿದ ಧರ್ಮ, ಇಷ್ಟಪಟ್ಟ ಲೇಖಕ, ನಟ, ತಮ್ಮದೇ ಬರಹ, ರೂಪು-ಅದಷ್ಟೇ ಸರಿ ಮತ್ತು ಉಳಿದದ್ದೆಲ್ಲ ನಿಕೃಷ್ಟ ಎಂದು ಭಾವಿಸುವ ಅವರಿಗೆ `ಕನ್ನಡಿ ಕಾಂಪ್ಲೆಕ್ಸ್`. ಕನ್ನಡಿ ಬಿಟ್ಟು ಕದಲುವುದಿಲ್ಲ. ಅಂಥವರನ್ನು ಸರಿಪಡಿಸುವುದು ಸಾಧ್ಯವೇ ಇಲ್ಲ.

ಇಷ್ಟಕ್ಕೂ ಈ ಗೀಳು ಯಾಕೆ ಕೆಲವರಲ್ಲಿ ಕಾಣಿಸಿಕೊಳ್ಳುತ್ತದೆ ಅಂದರೆ, ಅದರ ಮೂಲ ಬಾಲ್ಯದಲ್ಲಿರುತ್ತದೆ. ಸದಾ ಜಗಳವಾಡುವ ದಂಪತಿಗಳು, ಮಕ್ಕಳನ್ನು ಹೊಡೆಯುವ ದಂಪತಿಗಳು, ನಿರ್ಲಕ್ಷ್ಯ ಮಾಡುವ ತಂದೆ-ತಾಯಿ ಇಂತಹ ಗಮನ ಸೆಳೆಯುವ ಗೀಳಿನ ಮಕ್ಕಳನ್ನು ಸೃಷ್ಟಿಸುತ್ತಾರೆ. ಇನ್ನೊಂದು ಕಾರಣವೆಂದರೆ, ಮತ್ಸರ! ಎಲ್ಲಿ ನನಗಿರುವ ಪ್ರಾಮುಖ್ಯತೆಯನ್ನು ಇನ್ನೊಬ್ಬರು ಕಸಿದುಕೊಂಡು ಬಿಡುತ್ತಾರೋ ಎಂಬ ಆತಂಕ, ಅಭದ್ರತೆಗಳು ಅನೇಕರನ್ನು ಗಮನ ಸೆಳೆಯುವ ಗೀಳಿಗೆ ತುತ್ತಾಗಿಸುತ್ತದೆ. ಕಳೆದುಕೊಂಡ ಇವೇಜು, ಪ್ರಾಮುಖ್ಯತೆಗಳನ್ನು ಶತಾಯಗತಾಯ ವಾಪಸು ಪಡೆಯಲು ಅವರು ಪ್ರಯತ್ನಿಸುತ್ತಾರೆ. ಈ ಗೀಳಿಗೆ ಬೀಳುವ ಇನ್ನೊಂದು ಗುಂಪಿನ ಜನ ಇದ್ದಾರೆ : ಅವರು ಅಹಂಕಾರಿಗಳು. ವಿಪರೀತವಾದ ಅಹಂಕಾರ, ಅರೋಗೆನ್ಸ್ ಇರುವವರು ಸದಾ ಸುತ್ತಲಿನವರ ಗಮನ ಸೆಳೆಯಲು ಯತ್ನಿಸುತ್ತಾರೆ. ಇವರೆಲ್ಲರಿಗೂ ತದ್ವಿರುದ್ಧವಾದ ಇನ್ನೊಂದು ಗುಂಪು ಅಂದರೆ, ಅವರಿವರಿಂದ `ಅಯ್ಯೋ ಪಾಪ` ಅನ್ನಿಸಿಕೊಂಡು ಸುತ್ತಲಿನ ಗಮನ ಸೆಳೆಯುವವರು.

ಹೆಚ್ಚಿನ ಸಲ ಈ ಗಮನ ಸೆಳೆಯುವ ಗೀಳಿನವರನ್ನು ನಾವು ಕೊಂಚ ಹೊತ್ತಿನ ನಂತರ ignore ಮಾಡಲಾರಂಭಿಸುತ್ತೇವೆ. ಮಕ್ಕಳ ವಿಷಯದಲ್ಲಿ ಅದು ಸರಿಯೂ ಹೌದು. ಆದರೆ ಈ ಗೀಳಿನ ಎಲ್ಲರನ್ನೂ ignore ಮಾಡಬಾರದು. ಅವರ ಗೀಳಿನ, ಆ ಹಪಹಪಿಯ ಹಿಂದಿನ ಕಾರಣವೇನು ಎಂಬುದನ್ನು ಪತ್ತೆ ಮಾಡಿ ಅದಕ್ಕೆ ಪರಿಹಾರ ಒದಗಿಸಬೇಕು. ಸುಳ್ಳು ಹೇಳಿ, ಮತ್ತೇನೋ ಮಾಡಿ ಗಮನ ಸೆಳೆಯುವ ಬದಲು ಬದುಕಿನಲ್ಲಿ positive ಆದದ್ದನ್ನು ಸಾಸಿ ಗಮನ ಸೆಳೆಯುತ್ತೇನೆ ಅಂತ ನಮ್ಮಲ್ಲಿ ನಾವೇ ನಿರ್ಧಾರ ತೆಗೆದುಕೊಳ್ಳಬೇಕು. ಕನ್ನಡಿಯ ಮುಂದಿನಿಂದ ಹೊರಬಂದು ವಿಶಾಲ ಪ್ರಪಂಚದ ಕಡೆಗೆ ನೋಡಬೇಕು. ಈ ಗೀಳು ನನ್ನನ್ನು ಆಳ ಕೂಡದು ಎಂದು ನಾನೇ ನಿರ್ಧರಿಸಬೇಕು.

-ರವೀ

Read Archieves of 03 December, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books