Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಈ ಪರಿ ಕೆಲಸಗಳಿರುವಾಗ ಅವಳ ಪುಸ್ತಕ ಬರಬೇಕಿತ್ತೆ?

ಇವತ್ತಿಗೆ ಒಂದು ವರ್ಷವಾಯಿತಾ?
ಅದನ್ನು ನೆನಪಿಸಿದ್ದು ಒಬ್ಬ ಯುವ ಪೊಲೀಸ್ ಅಕಾರಿ. ಇವತ್ತಿಗೆ ನಿಮ್ಮನ್ನು ಭೇಟಿಯಾಗಿ ಒಂದು ವರ್ಷವಾಯಿತು. ನೀವು ‘ಕಾಮರಾಜ ಮಾರ್ಗ’ ಕಾದಂಬರಿಯ ಬಿಡುಗಡೆ ಕಾರ್ಯಕ್ರಮದಲ್ಲಿದ್ದಿರಿ ಅಂತ ಆ ಯುವ ಅಕಾರಿ ಮೆಸೇಜು ಕಳಿಸಿದ್ದನ್ನು ಓದಿ ದಿಗ್ಗನೆ ಎದ್ದು ಕುಳಿತೆ. ಕರೆಕ್ಟ್! ಇವತ್ತು ನವೆಂಬರ್ 14. ಅತಿಥಿಗಳಾಗಿ ರಮೇಶ್ ಕುಮಾರ್, ಎಂ.ಪಿ.ಪ್ರಕಾಶ್, ವಿಶ್ವೇಶ್ವರ ಭಟ್ ಮುಂತಾದವರಿದ್ದರು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ, ಅದರ ಹಿಂಬದಿಯ ಸಂಸ ಬಯಲು ರಂಗಮಂದಿರವೂ ಭರ್ತಿಯಾಗಿತ್ತು. ಕಾದಂಬರಿಯ ಮಾರಾಟದ ಮಾತು ಬಿಡಿ : ಅನುವಾದವಿರಲಿ, ಸ್ವಂತ ಕೃತಿಯಿರಲಿ, ನನ್ನ ಯಾವ ಪುಸ್ತಕವೂ 25 ಸಾವಿರ ಪ್ರತಿಗಳಿಗಿಂತ ಕಡಿಮೆ ಮಾರಾಟವಾಗಿಲ್ಲ.

‘ಕಾಮರಾಜ ಮಾರ್ಗ’ ಕಾದಂಬರಿ ನನಗೆ ಮಾಡಿಕೊಟ್ಟ ಲಾಭ ನಲವತ್ತು ಲಕ್ಷ ರುಪಾಯಿ. ಅದು ಮೂಲತಃ ರಾಜಕಾರಣಿಗಳ ಕುರಿತಾಗಿ ಬರೆದ ಕಾದಂಬರಿ. ಅದರಲ್ಲೂ ರಾಜಕಾರಣಿಗಳ ಲೈಂಗಿಕ ಜೀವನಗಳ ಕುರಿತು. ಕೇಶವ ಶಿಲ್ಪದಿಂದ ಹಿಡಿದು ದಕ್ಷಿಣ ಕನ್ನಡದ ಹಿರಿಯ ಸಂಘ ನಾಯಕ ಉರಿಮಜಲು ರಾಮಭಟ್ಟರ ಮನೆಯ ಜಗುಲಿಯ ತನಕ ಕಾದಂಬರಿಯ ಬಗ್ಗೆ ಚರ್ಚೆಯಾಯಿತು. “ಅದ್ಭುತವಾಗಿ ಬರೆದಿದ್ದಾನೆ. ಅಕ್ಷರ ಅಕ್ಷರ ಸತ್ಯ..." ಅಂತಲೇ ಎಲ್ಲರೂ ಅಂದಿದ್ದರು. ಸದ್ಯ, ಯಾರಾದರೂ ಕೋರ್ಟಿಗೆ ಎಳೆಯುತ್ತಾರೇನೋ ಅಂದುಕೊಂಡಿದ್ದೆ. ಪುಸ್ತಕವನ್ನು ಬ್ಯಾನ್ ಮಾಡುವ ಚರ್ಚೆ ಸಣ್ಣ ಮಟ್ಟದಲ್ಲಿ ಆಯಿತಾದರೂ ಸರ್ಕಾರ ಅದಕ್ಕೆ ಮುಂದಾಗಲಿಲ್ಲ.

‘ಕಾಮರಾಜ ಮಾರ್ಗ’ ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆ. ಆದರೆ ‘ಹಿಮಾಗ್ನಿ’ ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾದಂಬರಿ. ಮುಂಬಯಿಯಲ್ಲಿ, ದಿಲ್ಲಿಯಲ್ಲಿ, ಕೊಡಗಿನ ಪಾಲಿಬೆಟ್ಟದಲ್ಲಿ, ಹರಿದ್ವಾರದಲ್ಲಿ ಬೆಳೆಯುತ್ತ ಯೂರಪ್‌ನಾದ್ಯಂತ ನಡೆಯುವ ನಿರಂತರ ಹತ್ಯೆಗಳ ಮುಸಲ ಯುದ್ಧದ ಕತೆ. ಬರವಣಿಗೆ ಹೆಚ್ಚು ಕಡಿಮೆ ಮುಗಿದಿದೆ. ಡಿಸೆಂಬರಿನ ಹೊತ್ತಿಗೆ ಪುಸ್ತಕ ನಿಮ್ಮ ಕೈ ತಲುಪುವುದು ಖಚಿತ.

ಒಂದು ಕಾದಂಬರಿ ತೀರ ಒಂದು ವರ್ಷ ತೆಗೆದುಕೊಂಡರೆ ಆಶ್ಚರ್ಯವೇನಿಲ್ಲ. ಅದಕ್ಕಾಗಿ ಪಟ್ಟ ಶ್ರಮ ವ್ಯರ್ಥವಲ್ಲ ನೋಡಿ? ಈ ಸಲದ ಡಿಸೆಂಬರ್ ತಿಂಗಳ ಒಂದು ಭಾನುವಾರ ಕಾದಂಬರಿ ಬಿಡುಗಡೆ ಮಾಡಿಬಿಡಲೇ? ಯೋಚಿಸುತ್ತಿದ್ದೇನೆ. ಜೊತೆಗೆ ಒಂದು ಪುಸ್ತಕ ‘ಉಡುಗೊರೆ’ ಪ್ರಿಂಟಿಗೆ ಹೋಗಿದೆ. ‘ಖಾಸ್‌ಬಾತ್ 2೦೦4’, ‘ಬಾಟಮ್ ಐಟಮ್ ೬’ ಹೀಗೆ ಒಂದು ಕಂತೆ ಪುಸ್ತಕಗಳ ಜೊತೆಗೆ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿದ್ದೇನೆ. ಹೀಗಾಗಿ ಮೈ ತುಂಬ ಕೆಲಸ. ಲೋಕಾಯುಕ್ತ ವರದಿ ಕುರಿತಂತೆ ನೂರಾರು ಪುಟಗಳ ನೋಟ್ಸ್ ಹಾಗೂ ಚಿತ್ರಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇನೆ. ಬಿಗಿಯಾಗಿ ಕುಳಿತು ಬರೆದರೆ ಐದು ದಿನದ ಕೆಲಸ. ಆದರೆ ಒಂದೇ ಸಮ ತಿರುಗಾಟ. ಟೀವಿ ಷೋಗಳು, ನೆಂಟರ-ಸ್ನೇಹಿತರ ಮನೆಗಳಲ್ಲಿ ಮದುವೆಗಳು, ಭಾಷಣ-ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದೇನೆ. ‘ಪತ್ರಿಕೆ’ಯ ಕೆಲಸಕ್ಕೆ ಹುಡುಗರಿದ್ದಾರೆ. ಆದರೆ ಪುಸ್ತಕದ ಶಿಲುಬೆ ಹೊರಲು ಸಹಾಯಕರು ಸಿಗುವುದಿಲ್ಲ. ಅದು ತೀರ ಏಕಾಂಗಿ ನಡಿಗೆ. ಮತ್ತು ಮಜ ಇರುವುದೇ ಅದರಲ್ಲಿ.

ಅವಸರದಲ್ಲಿ ಅಜ್ಜಿ ಮೈನೆರೆತಳಂತೆ ಎಂಬ ಗಾದೆಯೊಂದಿದೆ. ಇಷ್ಟೆಲ್ಲ ಕೆಲಸಗಳ ಮಧ್ಯೆ, ತಪಸ್ಸಿಗೆ ಕುಳಿತವನಿಗೆ ರಂಭೆ ಪ್ರತ್ಯಕ್ಷಳಾದಳಂತೆ ಎಂಬ ಹಾಗೆ ನಾನು ಕೆಲವು ವರ್ಷಗಳಿಂದ ಹುಡುಕುತ್ತಿದ್ದ ಅಪರೂಪದ ಪುಸ್ತಕವೊಂದು ನಿನ್ನೆ ಅಂಚೆಯ ಮೂಲಕ ಬಂದು ಬಿಟ್ಟಿದೆ. ಆಕೆ ಇಟಲಿಯ ಲೇಖಕಿ ಹಾಗೂ ಪತ್ರಕರ್ತೆ. She strips truth down to its naked bone. ಹಾಗೆ ಬರೀತಾಳೆ. ಓದದೆ ಹೇಗಿರಲಿ?

-ಬೆಳಗೆರೆ

Read Archieves of 17 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books