Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಕಾರ್ಗಿಲ್‌ನ ಬೆಟ್ಟ ಕಣಿವೆಗಳಲ್ಲಿ ಜೊತೆಗೆ ಅಲೆದ ಹುಡುಗ

ಯಾವತ್ತೂ ವಿವಾದಗಳಿಗೆ ಸಿಲುಕದೆ, ಎಲ್ಲ ರಾಜಕಾರಣಿಗಳೊಂದಿಗೂ ಪರಿಚಯವಿಟ್ಟುಕೊಂಡು, ಯಾರೂ ಹೆಗಲು ಮುಟ್ಟದಂತೆ ನೋಡಿಕೊಂಡ, ಖಚಿತವಾದ ನಂತರವೇ ಬರೆಯುವ, ಬರವಣಿಗೆಯಿಂದ ಹಿಡಿದು ಖಾಸಗಿ ಬದುಕಿನ ತನಕ ಎಲ್ಲೂ ನಿಯತ್ತು ಕೊಂದುಕೊಳ್ಳದ ನನ್ನ ಮಿತ್ರ, `ಪತ್ರಿಕೆ`ಯ ರಾಜಕೀಯ ವರದಿಗಾರ ಆರ್.ಟಿ.ವಿಠ್ಠಲಮೂರ್ತಿಗೆ ಮೊನ್ನೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಿದೆ.
`ಪತ್ರಿಕೆ` ಆರಂಭಿಸಿದಾಗ ನಾವು ಇದ್ದವರೇ ಮೂವರು : ನಾನು, ವಿಠ್ಠಲಮೂರ್ತಿ ಮತ್ತು ಸೀತಾನದಿ ಸುರೇಂದ್ರ. ಮೊದಲ ಪ್ರತಿ ಪ್ರಿಂಟಿಗೆ ಹೋಗುವ ಹೊತ್ತಿಗೆ ಬಂದು ಸೇರಿಕೊಂಡವಳು ನಿವೇದಿತಾ. ಗೆಳೆಯ ಸುರೇಂದ್ರ ಅಕಾಲದಲ್ಲಿ ತೀರಿಕೊಂಡ. `ಅಣ್ಣಾ, ನೀವು ಧೈರ‍್ಯವಾಗಿ ಬರೀರಿ. ಸಹಾಯಕ್ಕೆ ನಾನಿದ್ದೇ ಇರುತ್ತೇನೆ" ಅಂದ ವಿಠ್ಠಲಮೂರ್ತಿ ಇವತ್ತಿಗೂ ಮಾತು ತಪ್ಪಿಲ್ಲ. ಶಿಸ್ತು ಮುರಿದಿಲ್ಲ. ಮೊದಲು ನನ್ನಂತೆಯೇ ಪೆನ್ನು ಹಾಳೆ ಬಳಸಿ ಬರೆಯುತ್ತಿದ್ದ. `ಬರೆಯುವಾಗ ನಾನು ಮತ್ತು ದೇವರು-ಇಬ್ಬರೇ ಇರುತ್ತೇವೆ. ನಮಗಷ್ಟೆ ಬರವಣಿಗೆ ಅರ್ಥವಾಗುತ್ತದೆ. ಬರೆದಾದ ಮೇಲೆ ದೇವರೂ ಇರುವುದಿಲ್ಲ. ನಾನು ಬರೆದದ್ದು ನನಗೂ ಅರ್ಥವಾಗುವುದಿಲ್ಲ" ಎಂಬ ಜೋಕೊಂದಿದೆ. ವಿಠ್ಠಲಮೂರ್ತಿಯ ಹ್ಯಾಂಡ್‌ರೈಟಿಂಗ್ ಆ ಹಂತ ತಲುಪಿದಾಗಲೇ ಅವನು ಒಂದು ಕಂಪ್ಯೂಟರು ಖರೀದಿಸಿ, ಅದರಲ್ಲಿ ಟೈಪ್ ಮಾಡುವುದು ಕಲಿತು ನಮ್ಮನ್ನೆಲ್ಲ ಉದ್ಧರಿಸಿದ.

ವಿಠ್ಠಲಮೂರ್ತಿ ಇದ್ದಲ್ಲಿ ನಗೆಯಿರುತ್ತದೆ. ಕೆಲ ಬಾರಿ ಗಂಭೀರ ಚರ್ಚೆಗಳಾಗುತ್ತವೆ. ಕಾರ್ಗಿಲ್‌ನ ಯುದ್ಧದ ದಿನಗಳಲ್ಲಿ ನನ್ನೊಂದಿಗೆ ಕಾಶ್ಮೀರದ ಕಣಿವೆಯುದ್ದಕ್ಕೂ ಓಡಾಡಿದ ವಿಠ್ಠಲಮೂರ್ತಿ, ಗುಜರಾತದ ಭೂಕಂಪದ ವರದಿಯನ್ನು ಮಾಡಿದ. ಅವನ ಊರು ಸಾಗರ. ತಂದೆ ಚಿಕ್ಕದೊಂದು ಪತ್ರಿಕೆ ನಡೆಸುತ್ತಾ ಟೈಲರಿಂಗ್ ಕೂಡ ಮಾಡುತ್ತಾರೆ. ತುಂಬ ಆರೋಗ್ಯವಂತ ಕುಟುಂಬವದು. ಸಾಗರ ಸೀಮೆಯಲ್ಲಿ ಬೆಳೆದವನಾದ್ದರಿಂದ ವಿಠ್ಠಲಮೂರ್ತಿಗೆ ಸಮಾಜವಾದಿ ಚಿಂತನೆಯ ಅರಿವಿದೆ. ಜಾತಿ-ಜಂಜಡ ಅವನನ್ನು ಕಾಡಿಲ್ಲ. ನನ್ನಂತೆಯೇ ಬರಿಗೈಲಿ ಬೆಂಗಳೂರಿಗೆ ಬಂದವನು ಚಿಕ್ಕ ಚಿಕ್ಕ ಪತ್ರಿಕೆಗಳಿಗೆ ಬರೆದ. `ಕರ್ಮವೀರ`ಕ್ಕೆ ನಾನು ಸಂಪಾದಕನಾದಾಗ ಬಂದು ಕೆಲಸಕ್ಕೆ ಸೇರಿಕೋ ಅಂದೆ. `ಬೇಡ ಅಣ್ಣಾ, ಹಿಂಗೇ ಸ್ವತಂತ್ರವಾಗಿ ಓಡಾಡಿಕೊಂಡಿರುತ್ತೇನೆ` ಅಂದಿದ್ದ. ಅದಾದ ಕೆಲವೇ ದಿನಗಳಿಗೆ ನಾನೇ ನೌಕರಿ ಕಳೆದುಕೊಂಡು ಪ್ರೆಸ್‌ಕ್ಲಬ್‌ನ ಅಂಗಳಕ್ಕೆ ಬಿದ್ದೆ. ಅದರ ಹುಲ್ಲು ಹಾಸಿನ ಮೇಲೆ ಮೂವರೂ ಹರಟುತ್ತಾ ಕುಳಿತಾಗಲೇ ಈ ಕಪ್ಪು-ಬಿಳಿ `ಪತ್ರಿಕೆ`ಯ ಬೀಜ ಮೊಳೆತದ್ದು. ನಂತರದ್ದೆಲ್ಲಾ ಇತಿಹಾಸ.

ಏನೇ ಸುದ್ದಿ ಬರೀತೀವಿ, ಹೊಸತು ಬರೀತೀವಿ ಅಂದುಕೊಂಡರೂ ಪತ್ರಿಕೋದ್ಯಮವೆಂಬುದು ಕೆಲವೇ ದಿನಗಳಲ್ಲಿ ಗಿರಣಿ ಅನ್ನಿಸಿ ಬಿಡುತ್ತದೆ. ಆಗಲೇ ನಾನು-ವಿಠ್ಠಲಮೂರ್ತಿಯಂಥವರು ಪುಸ್ತಕ ಬರೆಯಲು ಕೂಡುತ್ತೇವೆ. ದೊಡ್ಡ ರಿಲೀಫ್ ಅದು. ಮಧ್ಯೆ ಮಧ್ಯೆ ಇಂಥ ಅಕಾಡೆಮಿಗಳು ನೀಡುವ ಪ್ರಶಸ್ತಿಗಳು ಮನಸ್ಸಿಗೆ ಉಲ್ಲಾಸ ನೀಡುವುದರ ಜೊತೆಗೆ, ಪ್ರಶಸ್ತಿ ಪಡೆದವರ ಜವಾಬ್ದಾರಿಯನ್ನೂ ಹೆಚ್ಚಿಸುತ್ತವೆ. ವಿಠ್ಠಲಮೂರ್ತಿಗೆ ನಿಮ್ಮೆಲ್ಲರ ಪರವಾಗಿ, `ಪತ್ರಿಕೆ`ಯ ಪರವಾಗಿ ಶುಭಾಶಯ ಕೋರುತ್ತೇನೆ.

-ಬೆಳಗೆರೆ

Read Archieves of 10 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books