Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಬಯಕೆ ಮೊಳೆತ ಘಳಿಗೆಯಿಂದ ಕನಸು ಕೈಗೆಟುಕಿದ ತನಕ!

``ಬರುವುದೇನುಂಟು
ಬರುವ ಕಾಲಕೆ ಬಹುದು"
ಅಂದವರು ಕನ್ನಡದ ಅನುಭಾವ ಕವಿ ಮಧುರ ಚೆನ್ನ. ಅವರೇ ಅದರ ಮುಂದಿನ ಸಾಲಿನಲ್ಲಿ ``ಬಯಕೆ ಬರುವುದರ ಕಣ್ಸನ್ನೆ ಕಾಣೋ" ಅಂದಿದ್ದಾರೆ. He is very correct. ಅದೇನು ಬರುತ್ತೋ ಬರೋ ಕಾಲಕ್ಕೆ ಬರುತ್ತೆ ಬಿಡು ಅನ್ನೋದು ಶುದ್ಧ ವೇದಾಂತ. ಸುಳ್ಳೇ ವೈರಾಗ್ಯದವರು ಈ ಮಾತು ಆಡಿದರೆ ಅದು ಶುಷ್ಕ ವೇದಾಂತವೂ ಆಗಬಹುದು. ಗೊಡ್ಡು ವೇದಾಂತವೂ ಆಗಬಹುದು. ಆದರೆ `ಬರೋ ಕಾಲಕ್ಕೆ ಬರೋದು ಬಂದೇ ಬರುತ್ತೆ` ಎಂಬುದು ಒಂದು positive ಜೀವನ ದೃಷ್ಟಿಯಂತೂ ಹೌದು.

``ಬಯಕೆ ಬರುವುದರ ಕಣ್ಸನ್ನೆ ಕಾಣೋ..." ಅನ್ನುತ್ತಾರಲ್ಲ ಮಧುರ ಚನ್ನ? ಅದು ತುಂಬ ಇಂಟರೆಸ್ಟಿಂಗ್ ಆದ ಸತ್ಯ. ``ನೋಡ್ತಿರು ಇಷ್ಟರಲ್ಲೇ ನಂಗದು ಸಿಕ್ಕೇ ಸಿಗುತ್ತೆ" ಅಂತ ನಾವು ಕೆಲಬಾರಿ ಮಾತಾಡುತ್ತಿರುತ್ತೇವೆ. ಅದು ನಮ್ಮ ಓವರ್ ಕಾನಿಡೆನ್ಸ್ ಅಲ್ಲ. ಅದು ನಮ್ಮೊಳಗೆ ಮೊಳೆತು ನಿಂತ ಬಯಕೆಯ ಪರಿಣಾಮ. ಹುಟ್ಟಿಕೊಳ್ಳುವ ಬಯಕೆ ಒಮ್ಮೊಮ್ಮೆ ಎಷ್ಟು strong ಆಗಿ ಬಿಡುತ್ತೆ ಅಂದರೆ ಉಳಿದದ್ದನ್ನೆಲ್ಲ ಬಿಟ್ಟು ನಮ್ಮ ಬಯಕೆಯ ಜಿಂಕೆಯನ್ನು chase ಮಾಡಲಾರಂಭಿಸುತ್ತೇವೆ. ಅದು ನೌಕರಿಯಿರಬಹುದು ಕೊಂಡ ಬೈಕ್ ಇರಬಹುದು ಕಟ್ಟಿಸಿದ ಮನೆಯಿರಬಹುದು ನೋಡಬೇಕೆನ್ನಿಸಿದ ಊರು ಇರಬಹುದು ದೇಶವಿರಬಹುದು ಎಲ್ಲೂ ಸಿಕ್ಕದ ಪುಸ್ತಕವಿರಬಹುದು ಒಂದು ಗೆಳೆತನವಿರಬಹುದು ಪ್ರೀತಿಯಿರಬಹುದು. Say about it.

ಬಯಕೆ ಅಥವಾ ಆಸೆ ಉದ್ಭವವಾದ ಘಳಿಗೆ ಯಾವುದು? ಯಾವುದರೆಡೆಗಿನ ಆಸೆ? ಎಂಥ ಕಾನಿಡೆನ್ಸ್ ಇತ್ತು ನಿಮ್ಮಲ್ಲಿ? ಯಾವ ನಂಬಿಕೆ? ಏನು ಉತ್ಸಾಹ? ನೀವು ಬಯಸಿದ್ದನ್ನು ಪಡೆಯಲಿಕ್ಕೆ ಮಾಡಿಕೊಂಡ ಸಿದ್ಧತೆ ಎಂತಹುದು? ಎಷ್ಟು ದಿನ ಬಯಕೆಯಾಗಿ ಕಾಡಿ ಆಮೇಲೆ ಅದು ನಿಮ್ಮದಾಯಿತು? ಮಧ್ಯೆ ಮಧ್ಯೆ ಕನಸಾಗಿ ಕಾಡಿದ ಬಯಕೆಯನ್ನು ಮನದಾಚೆಗೆ ನೂಕಿದುದುಂಟೆ? ಒಟ್ಟಿನಲ್ಲಿ ಬಯಕೆ ಮೂಡಿದ ಘಳಿಗೆಯಿಂದ ಕನಸು ಕೈಗೆಟಕುವವರೆಗಿನ ಮಧುರ-ಯಾತನೆಯನ್ನು ನೀವು ಅನುಭವಿಸಿದ್ದು ವಿವರಿಸಿ ಒಂದು ಪುಟ ದಾಟದಂತೆ ಬರೆದು ಪತ್ರಿಕೆಯ ಕೊನೆಯ ಪುಟದಲ್ಲಿರುವ ವಿಳಾಸಕ್ಕೆ ಕಳುಹಿಸುತ್ತೀರಾ? `ದಿಲ್ ನೆ ಫಿರ್ ಯಾದ್ ಕಿಯಾ` ಅಂಕಣದಲ್ಲಿ ಭಾಗಿಯಾಗಿ. ಪತ್ರಿಕೆಯ ಚೆಲುವು ವೃದ್ಧಿಸಲಿ.
ಇ-ಮೇಯ್ಲ್ ಮೂಲಕ ಕಳಿಸುವವರು [email protected] ಬರಹ ಅಥವಾ ಶ್ರೀಲಿಪಿ ಮೂಲಕ ಕಳುಹಿಸಬಹುದು.

-ಬೆಳಗೆರೆ

Read Archieves of 20 October, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books